ಸ್ವಿಗ್ಗಿ, ಝೊಮ್ಯಾಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ: ಕಾರಣ ಹೀಗಿದೆ

Published : May 12, 2022, 09:53 AM IST
ಸ್ವಿಗ್ಗಿ, ಝೊಮ್ಯಾಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ: ಕಾರಣ ಹೀಗಿದೆ

ಸಾರಾಂಶ

* ಆಹಾರ, ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಒದಗಿಸುವ ಸೇವೆ ನೀಡುವ ಸ್ವಿಗ್ಗಿ ಮತ್ತು ಝೊಮ್ಯಾಟೋ * ಸ್ವಿಗ್ಗಿ, ಝೊಮ್ಯಾಟೋ ಸೇವೆಗಳಲ್ಲಿ ವಿಳಂಬ * ನಾನಾ ಕಾರಣದಿಂದ ಹುದ್ದೆ ಬಿಡುತ್ತಿರುವ ಡೆಲಿವರಿ ಬಾಯ್‌

ನವದೆಹಲಿ: ಆಹಾರ, ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಒದಗಿಸುವ ಸೇವೆ ನೀಡುವ ಸ್ವಿಗ್ಗಿ ಮತ್ತು ಝೊಮ್ಯಾಟೋ ಕಂಪನಿಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ ಎಂದು ವರದಿಯೊಂದು ತಿಳಿಸಿದೆ.

ಭಾರೀ ಬಿಸಿಲು, ದಿಢೀರ್‌ ಮಳೆಯ ಕಾರಣ ಡೆಲಿವರಿ ಬಾಯ್‌ಗಳ ಹಾಜರಾತಿ ಭಾರೀ ಇಳಿಕೆಯಾಗಿದೆ. ಮತ್ತೊಂದೆಡೆ ಹೊಸ ಹೊಸ ಇ ಕಾಮರ್ಸ್‌ ಕಂಪನಿಗಳ ಆರಂಭದ ಪರಿಣಾಮ ಒಂದಿಷ್ಟುಜನರು ಬೇರೆ ಕಂಪನಿಗಳತ್ತ ವಾಲಿದ್ದಾರೆ. ಹೀಗಾಗಿ ಎರಡೂ ಕಂಪನಿಗಳಿಗೆ ಡೆಲಿವರಿ ಬಾಯ್‌ಗಳ ತೀವ್ರ ಕೊರತೆ ಕಾಣಿಸಿಕೊಂಡಿದ್ದು, ಆಹಾರ ಮತ್ತು ದಿನಬಳಕೆಯ ವಸ್ತುಗಳ ಸೇವೆಯನ್ನು ಕಾಲಮಿತಿಯಲ್ಲಿ ನೀಡುವಲ್ಲಿ ಭಾರೀ ತೊಂದರೆಗಳಾಗಿವೆ. ಐಪಿಎಲ್‌ ಮತ್ತು ಭಾರೀ ಬಿಸಿಲಿನ ಅವಧಿಯಲ್ಲಿ ಆಹಾರ ವಸ್ತುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಸಮಯದಲ್ಲೇ ಸಿಬ್ಬಂದಿ ಕೊರತೆ, ಕಂಪನಿಗಳ ಲಾಭಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿವೆ.

ಇದೇ ಕಾರಣಕ್ಕೆ ಸ್ವಿಗ್ಗಿ, ಬೆಂಗಳೂರು ಹೊರತುಪಡಿಸಿ ಇತರೆ ಹಲವು ನಗರಗಳಲ್ಲಿ, ದಿನಬಳಕೆ ವಸ್ತುಗಳ ಪೂರೈಕೆ ಮಾಡುವ ಸೂಪರ್‌ ಡೈಲಿ ಸೇವೆಯನ್ನು ಸ್ಥಗಿತ ಮಾಡಿದೆ. ಜೊತೆಗೆ ಜೀನಿ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತ ಮಾಡಿರುವುದಾಗಿ ಘೋಷಿಸಿದೆ.

ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ  ಶಿಕ್ಷಣಕ್ಕೆ 700 ಕೋಟಿ ದಾನ

ಝೊಮ್ಯಾಟೋ ಕಂಪನಿಯ ಸಿಇಒ ದೀಪಿಂದರ್‌ ಗೋಯಲ್‌, ಸಂಸ್ಥೆಯ ಡೆಲಿವರಿ ಬಾಯ್‌ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 700 ಕೋಟಿ ರು. ದಾನ ಮಾಡಲು ನಿರ್ಧರಿಸಿದ್ದಾರೆ. ಸ್ಟಾಕ್‌ ಓನರ್‌ಶಿಪ್‌ ಯೋಜನೆಯ ಅಂಗವಾಗಿ ತಮಗೆ ಲಭ್ಯವಾಗುವ ಸುಮಾರು 700 ಕೋಟಿ ರು.ಗಳನ್ನು ಗೋಯಲ್‌ ಅವರು ಝೊಮ್ಯಾಟೋ ಫä್ಯಚರ್‌ ಸಂಸ್ಥೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

‘ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಗರಿಷ್ಠ ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚವನ್ನು ಝೊಮ್ಯಾಟೋ ಫä್ಯಚರ್‌ ಸಂಸ್ಥೆ ಪೂರೈಸಲಿದೆ. ಪ್ರತಿ ಮಗುವಿನ ಉನ್ನತ ಶಿಕ್ಷಣಕ್ಕಾಗಿ 5 ವರ್ಷಗಳವರೆಗೆ 50000 ರು ಒದಗಿಸಲಾಗುವುದು.

ಝೊಮ್ಯಾಟೋದಲ್ಲೇ 10 ವರ್ಷಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಡೆಲಿವರಿ ಬಾಯ್‌ ಅವರ ಮಕ್ಕಳಿಗೆ ತಲಾ 1 ಲಕ್ಷ ರು. ಶಿಕ್ಷಣಕ್ಕಾಗಿ ಒದಗಿಸಲಾಗುವುದು. ಈ ಸಂಸ್ಥೆಯು ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆ ಹೊಂದಿದ್ದು, 12 ನೇ ತರಗತಿ ಹಾಗೂ ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ನೀಡಲಾಗುವುದು. ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು’ ಎಂದು ಗೋಯಲ್‌ ಹೇಳಿದ್ದಾರೆ. ‘ಅಲ್ಲದೇ ಕೆಲಸದ ನಡುವೆ ಡೆಲಿವರಿ

ಫುಡ್‌ ಡೆಲಿವರಿ ಬಾಯ್‌ಗಳ ವೇತನ ಹೆಚ್ಚಿಸಿ

ವಿವಿಧ ಕಂಪನಿಯ ಆಹಾರ ಪದಾರ್ಥಗಳನ್ನು ಮನೆಮನೆಗೆ ವಿತರಿಸುವವರ ವೇತನ ಹೆಚ್ಚಿಸಲು ಆಗ್ರಹಿಸಿ ನಗರದ ಶ್ರೀಗಂಧದ ಕೋಠಿ ಎದುರಿನ ಸ್ವಿಗ್ಗಿ ಇಂಡಿಯಾ ಅಫೀಷಿಯಲ್‌ ಮುಂದೆ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು. ಕಂಪನಿಯ ಆಹಾರ ವಿತರಕರ ವೇತನ ಹೆಚ್ಚಿಸಬೇಕಾಗಿದ್ದು, ಕಳೆದ ಮೂರು ದಿನಗಳಿಂದಲೂ ನಿಮ್ಮ ವಿತರಕರು ಮನವಿ ಮಾಡುತ್ತಿದ್ದರೂ ಸ್ಪಂದಿಸಿರುವುದಿಲ್ಲ. ನಮ್ಮ ಹೋರಾಟಕ್ಕೆ ಪ್ರತಿಕ್ರಿಯೆ ದೊರಕದಿದ್ದರೆ ನ್ಯಾಯ ಸಿಗದಿದ್ದರೇ ಕರುನಾಡ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡುವ ಜೊತೆಗೆ ನಿಮ್ಮ ವ್ಯವಹಾರವನ್ನು ತಡೆ ಮಾಡಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಈ ವೇಳೆ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಚಂದನ್‌ ಗೌಡ, ಯುವ ಘಟಕದ ಅಧ್ಯಕ್ಷ ಪುನೀತ್‌, ಪ್ರಧಾನ ಕಾರ್ಯದರ್ಶಿ ದರ್ಶನ್‌, ಉಪಾಧ್ಯಕ್ಷ ಹೇಮಂತ್‌, ನೇಮನ್‌ ಇತರರು ಉಪಸ್ಥಿತರಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?