
ನವದೆಹಲಿ (ಜು.24): ಕಳೆದ ಹಣಕಾಸು ವರ್ಷ ಅಂದರೆ 2022-23ರಲ್ಲಿ ದೇಶದಲ್ಲಿ ಬರೋಬ್ಬರಿ 2.09 ಲಕ್ಷ ಕೋಟಿ ರೂಪಾಯಿಯ ಬ್ಯಾಡ್ ಲೋನ್‌ಅನ್ನು ಭಾರತದ ಬ್ಯಾಂಕ್‌ಗಳು ರೈಟ್ ಆಫ್ ಮಾಡಿವೆ. ಇದರಿಂದಾಗಿ ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ಗಳು ಮಾಡಿರುವ ರೈಟ್‌ಆಫ್ ಮಾಡಿರುವ ಲೋನ್‌ಗಳ ಮೊತ್ತ 10.57 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಗೆ ಆರ್‌ಬಿಐ ಈ ಉತ್ತರವನ್ನು ನೀಡಿದೆ. ಲೋನ್‌ಗಳನ್ನು ರೈಟ್‌ಆಫ್ ಮಾಡಿದ್ದರಿಂದ, ಬ್ಯಾಂಕ್‌ಗಳಲ್ಲಿನ ಒಟ್ಟು ಎನ್‌ಪಿಎಗಳ ಸಂಖ್ಯೆಯಲ್ಲಿ (ಗ್ರಾಸ್ ನಾನ್ ಫರ್ಫಾಮಿಂಗ್ ಅಸೆಟ್ಸ್) ಭಾರೀ ಇಳಿಕೆಯಾಗಿದೆ. ಎನ್‌ಪಿಎ ಅಥವಾ ಸಾಲಗಾರರು ಸಾಲವನ್ನು ಡಿಫಾಸ್ಟ್ ಮಾಡಿದ ಪ್ರಮಾಣ 2023ರ ಮಾರ್ಚ್ ವೇಳೆಗೆ 10 ವರ್ಷದ ಕನಿಷ್ಠ ಶೇ. 3.9ಕ್ಕೆ ಇಳಿದಿದ್ದು, ಅದಕ್ಕೆ ಪ್ರಮುಖವಾಗಿ ರೈಟ್‌ಆಫ್ ಕಾರಣ ಎನ್ನಲಾಗಿದೆ. 2018ರ ಹಣಕಾಸು ವರ್ಷದ ವೇಳೆಗೆ ದೇಶದ ಬ್ಯಾಂಕ್‌ಗಳಲ್ಲಿನ ಎನ್‌ಪಿಎಗಳ ಪ್ರಮಾಣ 10.21 ಲಕ್ಷ ಕೋಟಿ ರೂಪಾಯಿಗಳಿದ್ದವು. ಆದರೆ, 2023ರ ಮಾರ್ಚ್ ವೇಳೆಗೆ ಇದರ ಪ್ರಮಾಣ 5.55 ಲಕ್ಷ ಕೋಟಿಗೆ ಇಳಿದಿದೆ. ಬ್ಯಾಂಕ್‌ಗಳು ಎನ್‌ಪಿಎಯನ್ನು ತಗ್ಗಿಸಲು ರೈಟ್ ಆಫ್ ಮಾರ್ಗಗಳನ್ನು ಬಳಸಿಕೊಂಡಿದ್ದೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ವರದಿಯಲ್ಲಿ ಸ್ವತಃ ಆರ್‌ಬಿಐ ನೀಡಿರುವ ಮಾಹಿತಿಗಳ ಪ್ರಕಾರ, 2012-13ರ ಹಣಕಾಸು ವರ್ಷದಿಂದ ಇಲ್ಲಿಯವರೆಗೂ ದೇಶದ ಬ್ಯಾಂಕುಗಳು 15,31,453 ಕೋಟಿ ರೂಪಾಯಿಯ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ 586,891 ಕೋಟಿ ರೂಪಾಯಿ ಸಾಲದಿಂದ ಕೇವಲ 109,186 ಕೋಟಿ ರೂಪಾಯಿಗಳನ್ನು ಮಾತ್ರವೇ ಬ್ಯಾಂಕ್ ವಸೂಲಿ ಮಾಡಿದೆ ಎಂದು ಕೇಂದ್ರೀಯ ಬ್ಯಾಂಕಿನ ಆರ್‌ಟಿಐ ಉತ್ತರ ತಿಳಿಸಿದೆ. ಈ ಅವಧಿಯಲ್ಲಿ ಕೇವಲ 18.60 ಪ್ರತಿಶತದಷ್ಟು ವಸೂಲಿಯನ್ನು ಮಾತ್ರ ಮರುಪಡೆಯಲು ಸಾಧ್ಉವಾಗಿದೆ. ಬ್ಯಾಕ್ ಆಫ್ ದಿ ಎನ್ವಲಪ್ ಲೆಕ್ಕಾಚಾರದ ಪ್ರಕಾರ ರೈಟ್ ಆಫ್‌ಗಳನ್ನು ಒಳಗೊಂಡಿರುವ ಆದರೆ ಮೂರು ವರ್ಷಗಳಲ್ಲಿ ವಸೂಲಾತಿಯಿಂದ ವಸೂಲಿಯಾದ ಸಾಲಗಳನ್ನು ಹೊರತುಪಡಿಸಿದ ಒಟ್ಟು ಡಿಫಾಲ್ಟ್ ಸಾಲಗಳು 10.32 ಲಕ್ಷ ಕೋಟಿ ರೂಪಾಯಿ ಆಗಿದೆ. ರೈಟ್-ಆಫ್‌ಗಳನ್ನು ಒಳಗೊಂಡಂತೆ, ಒಟ್ಟು ಎನ್‌ಪಿಎ ಅನುಪಾತವು ಬ್ಯಾಂಕ್‌ಗಳು ವರದಿ ಮಾಡಿದ ಶೇಕಡಾ 3.9 ಕ್ಕಿಂತ 7.47 ರಷ್ಟು ಮುಂಗಡಗಳಾಗಬಹುದು ಎಂದು ವರದಿ ಹೇಳಿದೆ.
ಆರ್‌ಬಿಐ ನೀಡಿರುವ ಉತ್ತರದಲ್ಲಿ ಬ್ಯಾಂಕ್‌ಗಳ ರೈಟ್‌ಆಫ್‌ಗಳು ಮಾರ್ಚ್ 2023 ರ ಹಣಕಾಸು ವರ್ಷದಲ್ಲಿ 209,144 ಕೋಟಿ ರೂ.ಗೆ ಏರಿಕೆಯಾಗಿದೆ. ಇದರ ಪ್ರಮಾಣ ಮಾರ್ಚ್ 2022 ರಲ್ಲಿ 174,966 ಕೋಟಿ ರೂ ಮತ್ತು ಮಾರ್ಚ್ 2021 ರಲ್ಲಿ 202,781 ಕೋಟಿ ರೂಪಾಯಿ ಇತ್ತು.
ಏಪ್ರಿಲ್ 21 ರಂದು ನೀಡಿದ ಆರ್‌ಬಿಐ ಬುಲೆಟಿನ್ ಪ್ರಕಾರ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ (SCBs) ಜಿಎನ್‌ಪಿಎಗಳು ಡಿಸೆಂಬರ್ 2022 ರಲ್ಲಿ 4.5 ಪರ್ಸೆಂಟ್‌ಗೆ ಕುಸಿದಿದೆ. ಒಂದು ವರ್ಷದ ಹಿಂದೆ ಅದರ ಪ್ರಮಾಣ ಶೇ. 6.5ರಷ್ಟಿತ್ತು ಎಂದು ಹೇಳಿದೆ.
ಸಾಲ ವಜಾ ಎಂದರೇನು? ರೈಟ್ ಆಫ್ ಮಾಡಿದಾಗ ಏನಾಗುತ್ತದೆ?
ಸಾಲವನ್ನು ಇನ್ನು ಮುಂದೆ ಬ್ಯಾಂಕ್‌ನಿಂದ ಆಸ್ತಿಯಾಗಿ ಪರಿಗಣಿಸದಿದ್ದಾಗ ಸಾಲ ವಜಾ ಅಥವಾ ರೈಟ್ ಆಫ್ ಎನ್ನಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಇದು ಬ್ಯಾಂಕ್‌ಗಳಿಂದ ವಜಾಗೊಳಿಸಲಾದ ಸಾಲದ ಮೊತ್ತವಾಗಿದೆ, ಹೀಗಾಗಿ ಬ್ಯಾಂಕ್‌ನ ಲೆಕ್ಕಾಚಾರದಲ್ಲಿನ ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಮಟ್ಟವನ್ನು ಇದು ಕಡಿಮೆ ಮಾಡುತ್ತದೆ. ಡೀಫಾಲ್ಟ್ ಮಾಡಿದ ಸಾಲವನ್ನು ಎನ್‌ಪಿಎ ಎಂದೂ ಕರೆಯುತ್ತಾರೆ. ಎನ್‌ಪಿಎ ಎಂದು ಘೋಷಣೆ ಆದ ಬಳಿಕ ಈ ಸಾಲವನ್ನು ಆಸ್ತಿಯ ಕಡೆಯಿಂದ ನಷ್ಟದ ಕಡೆಗೆ ವರ್ಗಾಯಿಸಲಾಗುತ್ತದೆ.
ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?
ಸಾಲ ಮನ್ನಾ ಹಾಗೂ ಸಾಲ ವಜಾ ನಡುವೆ ಭಾರಿ ವ್ಯತ್ಯಾಸಗಳಿವೆ. ಸಾಲ ಮನ್ನಾ ಮಾಡಿದರೆ, ಅದು ಸಾಲಗಾರನ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಆತನ ಕಡೆಯಿಂದ ಬ್ಯಾಂಕ್‌ಗೆ ಇನ್ನು ಯಾವುದೇ ಹಣ ಬರುವುದಿಲ್ಲ ಎನ್ನುವ ಅರ್ಥ ಇದಾಗಿದೆ. ಆದರೆ, ರೈಟ್ ಆಫ್ ಎಂದರೆ, ಅದು ಸಾಲಗಾರನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಬಾಕಿ ಇರುವ ಮೊತ್ತವನ್ನು ಆತನ ಹೆಸರಿನಲ್ಲಿ ಸಾಲ ಎಂದೇ ಬ್ಯಾಂಕ್‌ಗಳ ದಾಖಲೆಯಲ್ಲಿ ತೋರಿಸುತ್ತದೆ. ಇದನ್ನು ಬ್ಯಾಂಕ್‌ಗಳು ಮುಂದೆ ಕಲೆಕ್ಟ್ ಕೂಡ ಮಾಡುವ ಅವಕಾಶ ಇರುತ್ತದೆ.
Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.