ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಬಳಕೆದಾರರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿ ಪ್ರಮಾಣಪತ್ರವನ್ನು ಸ್ಯಾಮ್ ಸಂಗ್ ವ್ಯಾಲೆಟ್ ನಲ್ಲಿ ಬೇಕೆನಿಸಿದಾಗ ಸುಲಭವಾಗಿ ಪಡೆಯಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಬಳಕೆದಾರರು ಸ್ಯಾಮ್ ಸಂಗ್ ವ್ಯಾಲೆಟ್ ನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿ ಪ್ರಮಾಣಪತ್ರವನ್ನು ಪಡೆಯಬಹುದು ಎಂದು ಸ್ಯಾಮ್ ಸಂಗ್ ಘೋಷಿಸಿದೆ. ಸ್ಯಾಮ್ ಸಂಗ್ ವ್ಯಾಲೆಟ್ ಪ್ರವಾಸ ಹಾಗೂ ಮೊಬಿಲಿಟಿ ಫೀಚರ್ಸ್, ಸ್ಯಾಮ್ ಸಂಗ್ ಪೇ, ಸ್ಯಾಮ್ ಸಂಗ್ ಪಾಸ್ ಹಾಗೂ ಇನ್ನೂ ಅನೇಕ ಫೀಚರ್ಸ್ ಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಸ್ಯಾಮ್ ಸಂಗ್ ವ್ಯಾಲೆಟ್ ಮೂಲಕ ಕಾರ್ಡ್ ಗಳು, ಐಡಿಗಳು ಹಾಗೂ ದಾಖಲೆಗಳನ್ನು ಪಡೆಯಲು ನಾವು ಗ್ರಾಹಕರಿಗೆ ಸಂಪೂರ್ಣ ಸುರಕ್ಷಿತ ಹಾಗೂ ಸುಭದ್ರ ವಿಧಾನವನ್ನು ಒದಗಿಸುತ್ತಿದ್ದೇವೆ. ಆ ಮೂಲಕ ಮೊಬೈಲ್ ಸಾಧನಗಳಿಗೆ ಸಂಬಂಧಿಸಿ ಹೊಸ ಗುಣಮಟ್ಟವನ್ನು ತರಲಿದ್ದೇವೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಸೇವೆಗಳು ಹಾಗೂ ಕರಾರಿನ ನಿರ್ದೇಶಕ ರೇಶ್ಮಾ ವಿರ್ಮಾನಿ ತಿಳಿಸಿದ್ದಾರೆ. ಸ್ಯಾಮ್ ಸಂಗ್ ವ್ಯಾಲೆಟ್ ಈಗಾಗಲೇ ಸ್ಯಾಮ್ ಸಂಗ್ ಪೇ ಹಾಗೂ ಸ್ಯಾಮ್ ಸಂಗ್ ಪಾಸ್ ನಲ್ಲಿರುವ ಫೀಚರ್ಸ್ ಗಳ ಸಂಯೋಜನೆಯಾಗಿದೆ. ಆ ಮೂಲಕ ಗ್ರಾಹಕರಿಗೆ ನಿರ್ಬಂಧವಿಲ್ಲದಷ್ಟು ಕಾರ್ಡ್ ಟ್ಯಾಪ್ ಹಾಗೂ ಪೇ, ಯುಪಿಐ ಪೇಮೆಂಟ್ಸ್ ಹಾಗೂ ಬಿಲ್ ಪೇಮೆಂಟ್ಸ್ ಸೌಲಭ್ಯ ಒದಗಿಸುತ್ತದೆ.
ಬಳಕೆದಾರರು ತಮ್ಮ ಪ್ರಮುಖ ಸರ್ಕಾರಿ ಐಡಿಗಳನ್ನು 2000ಕ್ಕಿಂತಲೂ ಅಧಿಕ ದಾಖಲೆಗಳು ಹಾಗೂ ಐಡಿಗಳ ಮೂಲಕ ಪಡೆಯಬಹುದು. ಹಾಗೆಯೇ ಇದು ಯಾವುದೇ ಮಾಹಿತಿಗಳನ್ನು ಸಂಗ್ರಹಿಸೋದಿಲ್ಲ ಹಾಗೂ ಸ್ಯಾಮ್ ಸಂಗ್ ವ್ಯಾಲೆಟ್ ಅಪ್ಲಿಕೇಷನ್ ನಲ್ಲಿ ಮಾಹಿತಿಗಳು ಕಾಣಿಸುತ್ತವೆ. ಇದರ ಮೂಲಕ ಬಳಕೆದಾರರಿಗೆ ತಮ್ಮ ಫಾಸ್ಟ್ ಟ್ಯಾಗ್ ಖಾತೆಯನ್ನು ರೀಚಾರ್ಜ್ ಮಾಡಲು ಹಾಗೂ ಪರಿಶೀಲಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಿಮಾನಯಾನದ ಮಾಹಿತಿಗಳನ್ನು ಸೇವ್ ಮಾಡಲು ಸಾಧ್ಯವಾಗಲಿದೆ. ಇನ್ನು ಟ್ರೈನ್ ಟಿಕೆಟ್ ಬುಕ್ ಮಾಡಲು ಕೂಡ ಇದು ಅವಕಾಶ ಕಲ್ಪಿಸುತ್ತದೆ.
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸ್ಬೇಕಾ? ಹೀಗೆ ಮಾಡಿ..
ಬಳಕೆದಾರರು ಕ್ಯುಆರ್ ಅಥವಾ ಬಾರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಟ್ರೈನ್ ಟಿಕೆಟ್ ಗಳು ಅಥವಾ ಬೋರ್ಡಿಂಗ್ ಪಾಸ್ ಗಳನ್ನು ಸೇರ್ಪಡೆಗೊಳಿಸಬಹುದು. ಅಥವಾ ಚಿತ್ರ ಅಥವಾ ಪಿಡಿಎಫ್ ಅನ್ನು ಸ್ಯಾಮ್ ಸಂಗ್ ವ್ಯಾಲೆಟ್ ಗೆ ಕಳುಹಿಸಬಹುದು. ಸ್ಯಾಮ್ ಸಂಗ್ ಪೇ ಈಗ ಸ್ಯಾಮ್ ಸಂಗ್ ವ್ಯಾಲೆಟ್ ಜೊತೆಗೆ ವಿಲೀನಗೊಂಡಿದ್ದು, ಸುರಕ್ಷಿತ ವಿಧಾನದಲ್ಲಿ ನೇರವಾಗಿ ಯುಪಿಐ ಪಾವತಿಗಳು ಹಾಗೂ ಬ್ಯಾಂಕ್ ವರ್ಗಾವಣೆಗಳನ್ನು ಮಾಡಲು ಬಳಕೆದಾರರಿಗೆ ನೆರವು ನೀಡಲಿದೆ.
ಸ್ಯಾಮ್ ಸಂಗ್ ವ್ಯಾಲೆಟ್ ಸ್ಯಾಮ್ ಸಂಗ್ ಪಾಸ್ ಜೊತೆಗೆ ವಿಲೀನಗೊಂಡಿದ್ದು, ಸೇವ್ಡ್ ಪಾಸ್ ವರ್ಡ್ಸ್ ಮೂಲಕ ಅಪ್ಲಿಕೇಷನ್ ಗಳು ಹಾಗೂ ಸೇವೆಗಳಿಗೆ ಅವಕಾಶ ಕಲ್ಪಿಸಿವೆ. ಹಾಗೆಯೇ ಬಳಕೆದಾರರಿಗೆ ಸುರಕ್ಷಿತ ಬಯೋಮೆಟ್ರಿಕ್ ಲಾಗಿನ್ ದೃಢೀಕರಣಕ್ಕೆ ಭರವಸೆ ನೀಡುತ್ತದೆ.
ಬಂಪರ್ ಆಫರ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ ಬಿಡುಗಡೆ, ಹೊಸ ಬಣ್ಣದಲ್ಲಿ ಲಭ್ಯ!
ಇನ್ನು ಸ್ಯಾಮ್ ಸಂಗ್ ನಾಕ್ಸ್ ಎಂಬ ಸುರಕ್ಷಿತ ಪ್ಲ್ಯಾಟ್ ಫಾರ್ಮ್ ಮೂಲಕ ಸ್ಯಾಮ್ ಸಂಗ್ ವ್ಯಾಲೆಟ್ ಸಂರಕ್ಷಿಸಲ್ಪಟ್ಟಿದೆ. ಇನ್ನು ಬಳಕೆದಾರರ ಮಾಹಿತಿಗಳನ್ನು ಫಿಂಗರ್ ಪ್ರಿಂಟ್ ಗುರುತಿಸುವಿಕೆ ಹಾಗೂ ಲಿಪಿಕರಣದ ಮೂಲಕ ಉತ್ತಮವಾಗಿ ಸಂರಕ್ಷಿಸಲಾಗಿದೆ. ಸ್ಯಾಮ್ ಸಂಗ್ ವ್ಯಾಲೆಟ್ ಪ್ರಯೋಜನಗಳನ್ನು ಪಡೆಯಲು ಗ್ಯಾಲಕ್ಸಿ ಬಳಕೆದಾರರು ಗ್ಯಾಲಕ್ಸಿ ಸ್ಟೋರ್ ಮೂಲಕ ತಮ್ಮ ಸ್ಯಾಮ್ ಸಂಗ್ ಪೇ ಅನ್ನು ಅಪ್ಡೇಟ್ ಮಾಡಬೇಕು. ಇನ್ನು ಈ ಅಪ್ಡೇಟ್ ಅಟೋ ಮೋಡ್ ಹಾಗೂ ಮ್ಯಾನುಯಲ್ ಮೋಡ್ ಮೂಲಕ ಕೂಡ ಲಭ್ಯವಿದೆ. ಹೀಗಾಗಿ ಈಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಬಳಕೆದಾರರು ಸ್ಯಾಮ್ ಸಂಗ್ ವ್ಯಾಲೆಟ್ ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದು.