ಅಕ್ಬೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆ ನಿರೀಕ್ಷೆ; ಮುಂದಿನ ತಿಂಗಳು ರೆಪೋ ದರ ಹೆಚ್ಚಳವಾಗೋದಿಲ್ವ?

Published : Nov 11, 2022, 03:42 PM IST
ಅಕ್ಬೋಬರ್ ತಿಂಗಳ ಚಿಲ್ಲರೆ ಹಣದುಬ್ಬರ  ಶೇ.6.7ಕ್ಕೆ ಇಳಿಕೆ ನಿರೀಕ್ಷೆ; ಮುಂದಿನ ತಿಂಗಳು ರೆಪೋ ದರ ಹೆಚ್ಚಳವಾಗೋದಿಲ್ವ?

ಸಾರಾಂಶ

ಸೆಪ್ಟೆಂಬರ್ ತಿಂಗಳಲ್ಲಿ ಶೇ.7.41ಕ್ಕೆ ಜಿಗಿದಿದ್ದ ಚಿಲ್ಲರೆ ಹಣದುಬ್ಬರ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಿತ್ತು. ಚಿಲ್ಲರೆ ಹಣದುಬ್ಬರ ಕಳೆದ 10 ತಿಂಗಳಿಂದ ಆರ್ ಬಿಐ ಸಹನ ಮಿತಿಯನ್ನು ಮೀರಿದೆ. ಹೀಗಿರುವಾಗ ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿ ಶೇ..6.7ರಷ್ಟಿರಬಹುದು ಎಂದು ಆರ್ಥಿಕ ತಜ್ಷರು ಅಂದಾಜಿಸಿದ್ದಾರೆ. ಆದರೆ, ಈ ಕುರಿತ ನಿಖರ ಮಾಹಿತಿ ನ.14ರಂದು ಕೇಂದ್ರ ಸರ್ಕಾರ ಚಿಲ್ಲರೆ ಹಣದುಬ್ಬರ ಮಾಹಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಬಳಿಕವೇ ತಿಳಿಯಲಿದೆ.   

ನವದೆಹಲಿ (ನ.11): ಹಣದುಬ್ಬರ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ತುಸು ಸಮಾಧಾನಕರ ಸಂಗತಿಯೊಂದು ದೊರಕಿದೆ. ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಸ್ವಲ್ಪ ಮಟ್ಟಿಗೆ ತಗ್ಗುತ್ತಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ.7.41ರಷ್ಟಿದ್ದ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.6.7ಕ್ಕೆಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಆರ್ ಬಿಐ ಸಹನ ಮಟ್ಟಕ್ಕಿಂತ ಹೆಚ್ಚಿದ್ದರೂ ಕಳೆದ ಆರು ತಿಂಗಳಲ್ಲೇ ಇದು ಕನಿಷ್ಠ ಹಣದುಬ್ಬರ ಎಂದು ಹೇಳಬಹುದು. ಮನಿ ಕಂಟ್ರೋಲ್ ನಡೆಸಿದ 16  ಆರ್ಥಿಕ ತಜ್ಞರ ಅಭಿಪ್ರಾಯಗಳ ಸಂಗ್ರಹಣೆಯಲ್ಲಿ ಸೆಪ್ಟೆಂಬರ್ ನಲ್ಲಿ ಶೇ.7.41ರಷ್ಟಿದ್ದ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಅಕ್ಟೋಬರ್ ನಲ್ಲಿ ಶೇ.6.7 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂಬ ಅಭಿಮತ ವ್ಯಕ್ತವಾಗಿದೆ. ಐಡಿಎಫ್ ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್ ಡಿಎಫ್ ಸಿ, ಬಾರ್ ಕ್ಲೇಸ್  ಮುಂತಾದ 16 ಸಂಸ್ಥೆಗಳ ಅಭಿಮತವನ್ನು ಪಡೆದು ಹಣದುಬ್ಬರ ಅಂದಾಜಿಸಲಾಗಿದೆ. ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯ ಅಕ್ಟೊಬರ್ ತಿಂಗಳ ಚಿಲ್ಲರೆ ಹಣದುಬ್ಬರ ಮಾಹಿತಿಯನ್ನು ನ.14ರಂದು ಅಧಿಕೃತವಾಗಿ ಪ್ರಕಟಿಸಲಿದೆ. 

ಆಹಾರ ಪದಾರ್ಥಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆಗಸ್ಟ್  ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7ರಷ್ಟಿತ್ತು.ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿದ್ದರೆ, ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿತ್ತು.  ಜುಲೈನಲ್ಲಿ ಕೂಡ ಇಳಿಕೆಯಾಗಿ ಶೇ.6.71ರಷ್ಟಿತ್ತು. ಆದರೆ, ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ ಕಂಡಿತ್ತು. ಆಹಾರ ಪದಾರ್ಥಗಳ ಬೆಲೆಯೇರಿಕೆ ತಡೆಯಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸೆಪ್ಟೆಂಬರ್ ನಲ್ಲಿ ಧಾನ್ಯಗಳು ಹಾಗೂ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. 

10 ವರ್ಷಗಳಿಗೊಮ್ಮೆಆಧಾರ್ ಕಾರ್ಡ್ ಅಪ್ಡೇಟ್ ಮಾಡಿದ್ರೆ ಒಳ್ಳೆಯದು,ಕಡ್ಡಾಯವೇನಲ್ಲ: ಸರ್ಕಾರದ ಸ್ಪಷ್ಟನೆ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಲೆಕ್ಕಾಚಾರಕ್ಕೆ 2021ರ ಅಕ್ಟೋಬರ್ ತಿಂಗಳ ದರವನ್ನು ಮೂಲವಾಗಿಟ್ಟುಕೊಳ್ಳಲಾಗಿದೆ. ಈ ಆಧಾರದಲ್ಲಿ ಲೆಕ್ಕಾಚಾರ ಮಾಡಿದಾಗ ಆಹಾರ ಹಣದುಬ್ಬರ ಇಳಿಕೆಯಾದರೂ ವಾಸ್ತವದಲ್ಲಿ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಂತೂ ತಗ್ಗಿಲ್ಲ. ಗ್ರಾಹಕ ವ್ಯವಹಾರಗಳ ಇಲಾಖೆ ಪಟ್ಟಿ ಮಾಡಿರುವ 22 ಆಹಾರ ವಸ್ತುಗಳಲ್ಲಿ 15ರ ಬೆಲೆಯಲ್ಲಿ ಈಗಾಗಲೇ ಏರಿಕೆಯಾಗಿದೆ. ಹೀಗಾಗಿ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ತೋರಿಸಿದರೂ ಸಮಾಧಾನಪಡುವಂತಿಲ್ಲ. ಏಕೆಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಮುಂದೆಯೂ ಇದೇ ಪರಿಸ್ಥಿತಿ ಇರಲಿದೆ ಎಂದು ಹೇಳಲಾಗದು. ಜುಲೈನಲ್ಲಿ ಇಳಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರ ಆ ಬಳಿಕ ಆಗಸ್ಟ್ ನಲ್ಲಿ ಏರಿಕೆ ದಾಖಲಿಸಿತ್ತು. ಆದರೆ, ಸಮಾಧಾನಪಡುವ ಸಂಗತಿ ಏನೆಂದ್ರೆ ಅಕ್ಟೋಬರ್ ನಲ್ಲಿ ಹಣದುಬ್ಬರ ಇಳಿಕೆಯಾದ್ರೆ ಅದು ಫೆಬ್ರವರಿ ತಿಂಗಳ ನಂತರದ ಅತಿ ಕಡಿಮೆ ಹಣದುಬ್ಬರ ಎಂದು ಹೇಳಬಹುದು. 2019ರ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.3.99ರಷ್ಟಿತ್ತು. ಆದರೆ, ಆ ಬಳಿಕ ಏರಿಕೆಯ ಹಾದಿ ಹಿಡಿದ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮತಿ ಶೇ.4ರ ಗಡಿ ದಾಟಿ ಮತ್ತೆ ಕೆಳಗಿಳಿಯಲೇ ಇಲ್ಲ. ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನ ಮಿತಿಯನ್ನು ಚಿಲ್ಲರೆ ಹಣದುಬ್ಬರ ಮೀರುತ್ತಿರೋದು ಇದು ಸತತ 10ನೇ ಬಾರಿ. 

ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ಅಂಕಿತ; ಏನಿದರ ವಿಶೇಷತೆ?

ಇನ್ನು ಆರ್ ಬಿಐ ಇತ್ತೀಚೆಗೆ ಅಂದಾಜಿಸಿರುವ ಪ್ರಕಾರ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ನಿಂದ ಡಿಸೆಂಬರ್ ತನಕದ ತ್ರೈಮಾಸಿಕದಲ್ಲಿ ಶೇ.6.5ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ನಂತರದ ಕ್ವಾರ್ಟರ್ ನಲ್ಲಿ ಶೇ.5.8ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ 2023-24ನೇ ಹಣಕಾಸು ಸಾಲಿನಲ್ಲಿ ಸರಾಸರಿ ಹಣದುಬ್ಬರ ಶೇ.5.2ಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಆರ್ ಬಿಐ ಅಂದಾಜಿಸಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ