ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ

By Suvarna NewsFirst Published Nov 11, 2022, 3:25 PM IST
Highlights

ವ್ಯಾಪಾರ ಯಶಸ್ವಿಯಾಗದೆ ಹೋದ್ರೆ ಎಂಬ ಭಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅದಕ್ಕಾಗಿಯೇ ಕಡಿಮೆ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಲು ಬಯಸ್ತಾರೆ. ನೀವು ಅವ್ರಲ್ಲಿ ಒಬ್ಬರಾಗಿದ್ದರೆ ಈ ವಿಧಾನ ಫಾಲೋ ಮಾಡ್ಬಹುದು.
 

ಆರೋಗ್ಯವಾಗಿರಲು ಹಣ್ಣು ಮತ್ತು ತರಕಾರಿಗಳನ್ನು ಪ್ರತಿಯೊಬ್ಬರೂ ಸೇವನೆ ಮಾಡ್ತಾರೆ. ಹಣ್ಣು ಮತ್ತು ತರಕಾರಿಗೆ ಎಲ್ಲ ಸಮಯದಲ್ಲೂ ಬೇಡಿಕೆ ಇದ್ದೇ ಇದೆ. ಸ್ವಂತ ಉದ್ಯೋಗ ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ನೀವು ಕೂಡ ಹಣ್ಣು, ತರಕಾರಿಗೆ ಸಂಬಂಧಿಸಿದ ವ್ಯಾಪಾರ ಶುರು ಮಾಡಬಹುದು. 

ಸಾಮಾನ್ಯವಾಗಿ ಹಣ್ಣು (Fruit), ತರಕಾರಿ (Vegetable) ವಿಷ್ಯಕ್ಕೆ ಬಂದಾಗ ಜನರು ಎರಡು ರೀತಿಯಲ್ಲಿ ಆಲೋಚನೆ ಮಾಡ್ತಾರೆ. ಒಂದು ತರಕಾರಿ ಬೆಳೆದು ಮಾರಾಟ ಮಾಡೋದು. ಇನ್ನೊಂದು ತರಕಾರಿ ಹಾಗೂ ಹಣ್ಣಿನ ಅಂಗಡಿ (Shop) ಇಟ್ಟುಕೊಳ್ಳೋದು. ನಿಮಗೆ ಇದೆರಡೂ ಸಾಧ್ಯವಿಲ್ಲವೆಂದ್ರೂ ಚಿಂತೆಯಿಲ್ಲ. ನೀವು ಬೇರೆ ವಿಧಾನದಲ್ಲಿ ಈ ಹಣ್ಣು ಹಾಗೂ ತರಕಾರಿ ಮೂಲಕ ಗಳಿಕೆ ಮಾಡಬಹುದು. ನಾವಿಂದು ಹಣ್ಣು ಮತ್ತು ತರಕಾರಿ ವ್ಯಾಪಾರ (Business) ಗಳು ಯಾವುವು ಎಂಬುದನ್ನು ಹೇಳ್ತೇವೆ.

ಡೋರ್ ಟು ಡೋರ್ ಡಿಲೆವರಿ : ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ನೀವು ಅಂಗಡಿ ಇಡಬೇಕೆಂದೇನೂ ಇಲ್ಲ. ಈಗಿನ ಕಾಲದಲ್ಲಿ ಆನ್ಲೈನ್ (Online) ಮಾರಾಟ ಹೆಚ್ಚಾಗಿದೆ. ನೀವು ಆರಂಭದಲ್ಲಿ ವೆಬ್ಸೈಟ್ ತೆಗೆದು ಅದ್ರ ಮೂಲಕ ತರಕಾರಿ, ಹಣ್ಣು ಮಾರಾಟ ಮಾಡಬೇಕಾಗಿಲ್ಲ. ಮನೆಯ ಸುತ್ತಮುತ್ತಲಿನ ಜನರಿಗೆ ನೀವು ಡೋರ್ ಟು ಡೋರ್ ಡಿಲೆವರಿ ನೀಡಬಹುದು. ನಿಮ್ಮ ಮನೆಯಲ್ಲಿಯೇ ತರಕಾರಿ, ಹಣ್ಣುಗಳನ್ನು ತಂದಿಟ್ಟುಕೊಳ್ಳಿ. ಅದನ್ನು ಆರಂಭದಲ್ಲಿ ಅಕ್ಕಪಕ್ಕದ ಮನೆಯವರಿಗೆ ಮಾರಾಟ ಮಾಡಿ. ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣ್ತಿದ್ದಂತೆ ನೀವು ತರಕಾರಿ ಮತ್ತು ಹಣ್ಣುಗಳನ್ನು ಕ್ಯಾಟರಿನ್, ಹೋಟೆಲ್‌ ಮತ್ತು ಇತರ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ನೀಡಬಹುದು.

Work from Home Ideas: ಕೌಶಲ್ಯ ಬಳಸಿ ಮನೆಯಲ್ಲೇ ಗಳಿಸಿ

ಬಾಳೆಕಾಯಿ (Banana) ಚಿಪ್ಸ್ : ಯಸ್, ನೀವು ಹಣ್ಣು ಮತ್ತು ತರಕಾರಿಗಳ ಸಹಾಯದಿಂದ ಉತ್ತಮ ಹಣವನ್ನು ಗಳಿಸಲು ಬಯಸಿದರೆ, ಆಲೂಗಡ್ಡೆ ಮತ್ತು ಬಾಳೆ ಕಾಯಿಯಂತ ಅನೇಕ ರೀತಿಯ ಹಣ್ಣುಗಳು ಮತ್ತು ತರಕಾರಿಗಳ ಚಿಪ್ಸ್ ತಯಾರಿಸಬಹುದು. ಆರಂಭದಲ್ಲಿ ಒಂದೇ ಚಿಪ್ಸ್ ತಯಾರಿಸಿ ಮಾರಾಟ ಮಾಡಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯವಿಲ್ಲ. ಒಂದ್ವೇನೆ ನೀವು ಇದ್ರಲ್ಲಿ ಯಶಸ್ವಿಯಾಗದಿದ್ದರೂ ಹೆಚ್ಚು ನಷ್ಟವಾಗುವುದಿಲ್ಲ. ನಿಮ್ಮ ಚಿಪ್ಸ್ ಗೆ ಹೆಚ್ಚು ಬೇಡಿಕೆಯಿದ್ರೆ ನೀವು ಅದನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬಹುದು. ನಂತ್ರ ಸ್ವಂತ ಬ್ರ್ಯಾಂಡ್ ನಲ್ಲಿ ಮಾರಾಟ ಮಾಡಬಹುದು.

ಉಪ್ಪಿನಕಾಯಿ ವ್ಯಾಪಾರದಲ್ಲಿದೆ ಲಾಭ : ಚಿಪ್ಸ್ ನಂತೆ ಉಪ್ಪಿನಕಾಯಿ ವ್ಯಾಪಾರವೂ ಹಣ್ಣು ಮತ್ತು ತರಕಾರಿಗಳ ಸಹಾಯದಿಂದ ಪ್ರಾರಂಭಿಸಬಹುದಾದ ವ್ಯಾಪಾರವಾಗಿದೆ. ಮಾವಿನ ಕಾಯಿಯಿಂದ ಹಿಡಿದು ನಿಂಬೆ ಹಣ್ಣು, ಮೂಲಂಗಿ, ಕ್ಯಾರೆಟ್, ಮೆಣಸಿನಕಾಯಿ ಇತ್ಯಾದಿಗಳಿಂದ ನೀವು ಉಪ್ಪಿನಕಾಯಿಗಳನ್ನು ತಯಾರಿಸಿ ಮಾರಾಟ ಮಾಡಬಹುದು. ನೀವು ರುಚಿಯಾದ ಉಪ್ಪಿನ ಕಾಯಿ ತಯಾರಿಲು ಯಶಸ್ವಿಯಾದ್ರೆ ನಿಮ್ಮ ಉದ್ಯಮ ಬೆಳೆದಂತೆ. ದೊಡ್ಡ ದೊಡ್ಡ ಆರ್ಡರ್ ಗಳು ನಿಮ್ಮ ಕೈ ಸೇರುತ್ತವೆ. 

ಮಹಿಳೆಯರು ಹೆಚ್ಚು ರಿಸ್ಕ್ ಇಲ್ಲದೇ ಮಾಡೋ ಬ್ಯುಸಿನೆಸ್ ಇದು!

ಕತ್ತರಿಸಿ ಪ್ಯಾಕ್ ಮಾಡಿದ ತರಕಾರಿ – ಹಣ್ಣು : ಜನರಿಗೆ ಸಮಯದ ಅಭಾವವಿರುವ ಕಾರಣ, ಕತ್ತರಿಸಿದ ಹಣ್ಣು, ತರಕಾರಿಗಳನ್ನು ಖರೀದಿ ಮಾಡ್ತಾರೆ. ನೀವು ಮಾರುಕಟ್ಟೆಯಿಂದ ಹಣ್ಣು ಮತ್ತು ತರಕಾರಿ ತಂದು, ಅದನ್ನು ಕತ್ತರಿಸಿ, ಪ್ಯಾಕ್ ಮಾಡಿ ಮಾರಾಟ ಮಾಡಬಹುದು. ಗುಣಮಟ್ಟದ ತರಕಾರಿಗೆ ಬೇಡಿಕೆ ಹೆಚ್ಚಿದೆ. ಪಪ್ಪಾಯ ಹಣ್ಣು, ಕ್ಯಾರೆಟ್, ಈರುಳ್ಳಿ, ಬೆಳ್ಳುಳ್ಳಿ ಹೀಗೆ ಅನೇಕ ತರಕಾರಿಗಳನ್ನು ನೀವು ಕತ್ತರಿಸಿ ಪ್ಯಾಕ್ ಮಾಡಬಹುದು. 

ಸಾವಯವ ಕೃಷಿ : ಮನೆಯಲ್ಲಿ ಜಾಗವಿದೆ, ಕೃಷಿಯಲ್ಲಿ ಆಸಕ್ತಿಯಿದೆ ಎಂದ್ರೆ ನೀವು ಸಾವಯವ ಕೃಷಿ ಕೂಡ ಮಾಡಬಹುದು. ಈಗಿನ ದಿನಗಳಲ್ಲಿ ಸಾವಯವ ತರಕಾರಿಗೆ ಬೇಡಿಕೆ ಹೆಚ್ಚಿದೆ. ಮನೆಯ ಟೆರೆಸ್ ನಲ್ಲಿ ಕೂಡ ನೀವಿದನ್ನು ಶುರು ಮಾಡಬಹುದು.
 

click me!