ನಾಲ್ಕು ಪಟ್ಟು ಆದಾಯದಲ್ಲಿರುವ ಕಾರ್ಪೋರೇಟ್‌ ಕಂಪನಿಗಳು, ಉದ್ಯೋಗಿಗಳ ಸಂಬಳದಲ್ಲಿ ಏರಿಕೆಯಿಲ್ಲ: FICCI ವರದಿ

By Santosh Naik  |  First Published Dec 12, 2024, 7:26 PM IST

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಕಾರ್ಪೊರೇಟ್ ಲಾಭವು ನಾಲ್ಕು ಪಟ್ಟು ಹೆಚ್ಚಾಗಿದೆ, ಆದರೆ ಉದ್ಯೋಗಿಗಳ ವೇತನವು ಅದಕ್ಕೆ ತಕ್ಕಂತೆ ಏರಿಕೆಯಾಗಿಲ್ಲ. ವರದಿಯೊಂದರ ಪ್ರಕಾರ, 2019 ಮತ್ತು 2023 ರ ನಡುವೆ ವೇತನದ ಸಂಯೋಜಿತ ವಾರ್ಷಿಕ ಬೆಳವಣಿಗೆ ದರವು ಕೇವಲ 0.8% ಮತ್ತು 5.4% ರ ನಡುವೆ ಇದೆ.


ಬೆಂಗಳೂರು (ಡಿ.12): ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಕಾರ್ಪೊರೇಟ್‌ ಕಂಪನಿಗಳ ಲಾಘ ನಾಲ್ಕು ಪಟ್‌ಟು ಏರಿಕೆಯಾಗಿದೆ. ಆದರೆ, ಈ ಲಾಭಕ್ಕೆ ತಕ್ಕಂತೆ ಉದ್ಯೋಗಿಗಳಿಗೆ ವೇತನ ನೀಡಿಲ್ಲ ಎಂದು ವರದಿ ತಿಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನ ಲೆಕ್ಕಹಾಕುವ ಜಿಡಿಪಿ ದರ 5.4%ಗೆ ಇಳಿದಿರುವ ನಡುವೆ ಈ ವರದಿ ಬಂದಿದೆ. ಖಾಸಗಿ ಕಂಪನಿಗಳ ಲಾಭ-ನಷ್ಟಗಳು ಭಾರತದ ಆರ್ಥಿಕತೆಯ ಅತಿದೊಡ್ಡ ಭಾಗವಾಗಿದೆ. ಇದು ದೇಶದ ಜಿಡಿಪಿಯ ಶೇ. 60ರಷ್ಟಿದೆ. ಜನರ ಬಳಿ ಹಣವಿದ್ದಾಗ ಮಾತ್ರವೇ ಅವರು ಅದನ್ನು ಬಳಕೆ ಮಾಡುತ್ತಾರೆ. ಹಾಗೇನಾದರೂ ಈ ಉದ್ಯೋಗಿಗಳ ನಿಜವಾದ ವೇತನ ಹಣದುಬ್ಬರ ಏರಿಕೆ ಪ್ರಮಾಣಕ್ಕಿಂತ ಹೆಚ್ಚಿದ್ದರೆ, ಆರ್ಥಿಕತೆ ಏರಿಕೆ ಕಾಣೋದಿಲ್ಲ. ಆಗ ಜಿಡಿಪಿ ಮೇಲೆ ಹೊಡೆತ ಬೀಳುತ್ತದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 6.7% ರಿಂದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಏಳು ತ್ರೈಮಾಸಿಕ ಕನಿಷ್ಠ 5.4% ಕ್ಕೆ ಇಳಿದಿದೆ.

ಗುರುವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯೊಂದು ಭಾರತದ ಖಾಸಗಿ ಕಂಪನಿಗಳ ಲಾಭಗಳು ಹೆಚ್ಚಾದಾಗಲೂ ಉದ್ಯೋಗಿಗಳಿಗೆ ನೀಡುತ್ತಿರುವ ವೇತನ ಎಷ್ಟು ಕಡಿಮೆ ಎನ್ನುವುದನ್ನು ಎತ್ತಿ ತೋರಿಸಿದೆ. 2019 ಮತ್ತು 2023 ರ ನಡುವಿನ ವೇತನದ ಸಂಯೋಜಿತ ವಾರ್ಷಿಕ ವೇತನ ಬೆಳವಣಿಗೆ ದರ (ಸಿಎಜಿಆರ್) 0.8% ಮತ್ತು 5.4% ರ ನಡುವೆ ಇದೆ ಎಂದು ಉದ್ಯಮ ಸಂಸ್ಥೆ FICCI ಮತ್ತು ಕ್ವೆಸ್ ಕಾರ್ಪ್ ಸರ್ಕಾರಕ್ಕೆ ಸಿದ್ಧಪಡಿಸಿದ ವರದಿಯು ತೋರಿಸಿದೆ ಎಂದು ಪತ್ರಿಕೆ ಹೇಳಿದೆ.  ಅಧ್ಯಯನ ಮಾಡಿದ ಆರು ವಲಯಗಳ ಪೈಕಿ ಎಫ್‌ಎಂಸಿಜಿಯಲ್ಲಿ ಮಾತ್ರವೇ ಹೆಚ್ಚಿನ ವೇತನ ಬೆಳವಣಿಗೆ ಕಂಡುಬಂದಿದೆ. ಅದು 5.4% ಆಗಿದೆ ಎಂದು ತಿಳಿಸಿದೆ.

Tap to resize

Latest Videos

ಇದು, ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಹಣದುಬ್ಬರವು ವಾರ್ಷಿಕ ಸರಾಸರಿ ದರದಲ್ಲಿ 5.7% ರಷ್ಟು ಬೆಳವಣಿಗೆಯಾಗಿದೆ. ಖಾಸಗಿ ವಲಯದ ವೇತನಗಳು ಋಣಾತ್ಮಕ ಬೆಳವಣಿಗೆಯನ್ನು ಕಂಡಿರುವುದನ್ನು ಇದು ತೋರಿಸುತ್ತದೆ. ವೇತನದಲ್ಲಿನ ಋಣಾತ್ಮಕ ಬೆಳವಣಿಗೆಯು ಗ್ರಾಹಕರ ಖರೀದಿಸುವ ಶಕ್ತಿಯನ್ನು ನಿಧಾನಗೊಳಿಸುತ್ತಿದೆ, ಇದು ಪ್ರತಿಯಾಗಿ, ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಕಾರ್ಪೋರೇಟ್‌ ಸಂಸ್ಥೆಗಳ ಲಾಭದ ಮಟ್ಟ ಹೆಚ್ಚಾಗಿದ್ದರೂ, ವೇತನಕ್ಕಾಗಿ ಮಾಡುವ ಖರ್ಚಿನಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ ಅನ್ನೋದನ್ನ ತೋರಿಸಿದೆ.

ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಈ ತಿಂಗಳ ಆರಂಭದಲ್ಲಿ ಖಾಸಗಿ ವಲಯದ ಕಂಪನಿಗಳು ಗಳಿಸಿದ ಲಾಭವು 15 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ್ದರು. "ನಿಫ್ಟಿ 500 ಕಂಪನಿಗಳ ಲಾಭದಾಯಕತೆ (ತೆರಿಗೆ ನಂತರದ ಲಾಭ) GDP ಯ ಶೇಕಡಾವಾರು FY24 ರಲ್ಲಿ 4.8% ನಲ್ಲಿ 15 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಎಂದು ದಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ ನಾಗೇಶ್ವರನ್ ಹೈಲೈಟ್ ಮಾಡಿದ್ದಾರೆ. ನಾಗೇಶ್ವರನ್ ಅವರು ದಾಖಲೆಯ ಲಾಭದ ಹೊರತಾಗಿಯೂ ಖಾಸಗಿಯಾಗಿ ಪಟ್ಟಿ ಮಾಡಲಾದ ಕಂಪನಿಗಳ ಸಿಬ್ಬಂದಿ ವೆಚ್ಚಗಳು ಕಡಿಮೆ ಆಗುತ್ತಿದೆ ಅನ್ನೋದನ್ನ ತೋರಿಸಿದ್ದಾರೆ.

undefined

Breaking: ಭಾರತದ ಡಿ. ಗುಕೇಶ್‌ ಚೆಸ್‌ ಇತಿಹಾಸದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್‌!

ನಾಗೇಶ್ವರನ್ ಅವರು ಡಿಸೆಂಬರ್ ತ್ರೈಮಾಸಿಕದಲ್ಲಿ ಕೆಲವು ವಲಯಗಳು ವೇಗವನ್ನು ಪಡೆದುಕೊಂಡಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 6.5-7% ರಷ್ಟು ಉತ್ತಮ GDP ಬೆಳವಣಿಗೆಯ ದರವನ್ನು ನಿರೀಕ್ಷಿಸಿದ್ದಾರೆ.

ಬಿಗ್ ಬಾಸ್‌ಗೆ ಬರ್ತಿಲ್ಲ ಟಿಆರ್‌ಪಿ: ಬೇಕಂತಲೇ ಸ್ಪರ್ಧಿಗಳ ಹಳೇ ಫೋಟೋ, ವೀಡಿಯೋ ಟ್ರೆಂಡ್ ಆಗ್ತಿದ್ಯಾ?

click me!