ಅಂಬಾನಿ ಜಿಯೋಗೆ ಆಘಾತ ಕೊಟ್ಟ ಹೊಸ ರಿಪೋರ್ಟ್; ಏನಿದು  OpenSignal ವರದಿ? ಬಚ್ಚಿಟ್ಟ ಸತ್ಯ ಬಯಲು

By Mahmad Rafik  |  First Published Dec 12, 2024, 4:31 PM IST

ರಿಲಯನ್ಸ್ ಜಿಯೋ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಹೊಸ OpenSignal ವರದಿಯು ಜಿಯೋಗೆ ಆಘಾತ ನೀಡಿದೆ. ವರದಿಯ ಪ್ರಕಾರ, ವೊಡಾಫೋನ್ ಐಡಿಯಾ, ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸುವಲ್ಲಿ ದಾಪುಗಾಲು ಇರಿಸುತ್ತಿದೆ.


ನವದೆಹಲಿ: ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಟ್ಯಾರಿಫ್ ಏರಿಕೆ ಬೆನ್ನಲ್ಲೇ ರಿಲಯನ್ಸ್ ಜಿಯೋ ಹಂತ ಹಂತವಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು ಕೈಗಟುಕುವ ದರದಲ್ಲಿ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ. ಈಗಾಗಲೇ ಹೊಸ ವರ್ಷಕ್ಕೂ ಹೊಸ ಪ್ಲಾನ್ ಘೋಷಿಸಿ, ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಹೊರ ಬಂದಿರುವ ಹೊಸ ರಿಪೋರ್ಟ್ ರಿಲಯನ್ಸ್ ಜಿಯೋಗೆ ಶಾಕ್ ನೀಡಿದೆ. 

ರಿಲಯನ್ಸ್ ಜಿಯೋ 5G ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದ್ದು, ಟೆಲಿಕಾಂ ಅಂಗಳದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. Ookla ವರದಿಯ ಪ್ರಕಾರ, ಜಿಯೋದ 5ಜಿ ನೆಟ್‌ವರ್ಕ್ ಯುರೋಪಿಯನ್ ರಾಷ್ಟ್ರಗಳಿಂದ ಹೆಚ್ಚು ಸ್ಪೀಡ್ ಆಗಿದ್ದು, ವಿಸ್ತಾರದಲ್ಲಿಯೂ ದೊಡ್ಡದಾಗಿದೆ. ಈ ಮೂಲಕ ಭಾರತ ಟೆಲಿಕಾಂ ಉದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 

Tap to resize

Latest Videos

ಯುರೋಪಿಯನ್ ರಾಷ್ಟ್ರಗಳಿಗಿಂತ ಭಾರತದ ಜನಸಂಖ್ಯೆ ಅಧಿಕವಾಗಿರುವ ಕಾರಣ ರಿಲಯನ್ಸ್ ಜಿಯೋ ಅತ್ಯಧಿಕ ಬಳಕೆದಾರರನ್ನು ಹೊಂದಿದೆ. ಸದ್ಯ ಭಾರತದಲ್ಲಿ 40.9 ಕೋಟಿ ಜನರು ಜಿಯೋ ನೆಟ್‌ವರ್ಕ್ ಬಳಕೆ ಮಾಡುತ್ತಿದ್ದಾರೆ. ಇದರ ಜೊತೆ ತಡೆ ರಹಿತ ಸೇವೆಯನ್ನು ನೀಡುವ ದೃಷ್ಟಿಯಿಂದ ಭಾರತದ ಪ್ರಮುಖ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದೆ. 5G ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಹೊಂದಿದ್ದು, ಎದುರಾಳಿ ನೆಟ್‌ವರ್ಕ್‌ಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿದೆ.  

ಭಾರತದಲ್ಲಿ 90.3 ಕೋಟಿ ಜನರು ಬಳಕೆ ಮಾಡುತ್ತಿದ್ದು, ಅದರಲ್ಲಿ ಶೇ.78 ಮಂದಿ ಜಿಯೋ ಬಳಕೆದಾರರಾಗಿದ್ದಾರೆ. ಹಾಗಾಗಿ ಭಾರತ  ಮೊಬೈಲ್ ಬಳಕೆದಾರರಲ್ಲಿ ಇಂಗ್ಲೆಂಡ್, ಕೆನಡಾ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳನ್ನು ಹಿಂದಿಕ್ಕಿದೆ. ಮೊದಲ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಇದ್ರೆ, ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಬಿಎಸ್‌ಎನ್ಎಲ್ ಇವೆ. 

undefined

ನೆಟ್‌ವರ್ಕ್ ಸಾಮರ್ಥ್ಯ ವಿಸ್ತರಿಸಿಕೊಳ್ಳುತ್ತಿರೋ ವೊಡಾಫೋನ್ ಐಡಿಯಾ
ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ, ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸುವಲ್ಲಿ ದಾಪುಗಾಲು ಇರಿಸುತ್ತಿದೆ. ಕೆಲವು ವಲಯಗಳಲ್ಲಿ ಜಿಯೋ ಮತ್ತು ಏರ್‌ಟೆಲ್‌ನ್ನು ಸಹ ಮೀರಿಸುತ್ತಿದೆ ಎಂದು ವರದಿಯಾಗಿದೆ. ವೊಡಾಫೋನ್ ಐಡಿಯಾ ಬಳಕೆದಾರರಿಗೆ ಉತ್ತಮ ಮತ್ತು ಗುಣಮಟ್ಟದ ಸೇವೆ ನೀಡುವ ಗುರಿಯನ್ನು ಹೊಂದಿದ್ದು, ಗಂಟೆಗೆ 100 ಮೊಬೈಲ್ ಟವರ್‌ಗಳನ್ನು ನವೀಕರಿಸುವುದಾಗಿ ಹೇಳಿಕೊಂಡಿದೆ.

OpenSignal ವರದಿ
ಇತ್ತೀಚೆಗೆ ಹೊರಬಂದ OpenSignal ವರದಿ, ವೀಡಿಯೊ ಸ್ಟ್ರೀಮಿಂಗ್, ಆನ್‌ಲೈನ್ ಗೇಮಿಂಗ್, ವಾಯ್ಸ್ ಕಾಲ್, ಡೌನ್‌ಲೋಡ್ ಮತ್ತು ಅಪ್‌ಲೋಡ್ ಸ್ಪೀಡ್ ಆರು ವಿಷಯಗಳಲ್ಲಿ ಏರ್‌ಟೆಲ್ ಮತ್ತು ಜಿಯೋಗಿಂತ  ವೊಡಾಫೋನ್ ಐಡಿಯಾ ಮೊದಲ ಸ್ಥಾನದಲ್ಲಿದೆ.  2024ರ ಜೂನ್‌ನಿಂದ ನವೆಂಬರ್ ರವರೆಗೆ ನಡೆಸಿದ ಸಮೀಕ್ಷೆಗಳ ಆಧಾರದ ಮೇಲೆ ವರದಿಯು ವೊಡಾಫೋನ್ ಐಡಿಯಾದ ಸರಾಸರಿ 4G ಡೌನ್‌ಲೋಡ್ ವೇಗವು 17.4 Mbps ಆಗಿದೆ. 

ಇದನ್ನೂ ಓದಿ: ವೊಡಾಫೋನ್‌ನಿಂದ ಅತಿ ಕಡಿಮೆ ಬೆಲೆಯ ₹26 ಪ್ಲಾನ್ ರಿಲೀಸ್; ಸಿಗಲಿದೆ 1.5GB extra ಡೇಟಾ

ಈ ಸ್ಪೀಡ್‌ ನಂಬರ್ 1 ಸ್ಥಾನದಲ್ಲಿರುವ ಜಿಯೋಗಿಂತ 22% ಮತ್ತು ಎರಡನೇ ಸ್ಥಾನದಲ್ಲಿರುವ ಏರ್‌ಟೆಲ್‌ಗಿಂತ 8% ಸ್ಪೀಡ್ ಆಗಿದೆ ಎಂದು OpenSignal ವರದಿ ಹೇಳಿದೆ. ವೊಡಾಫೋನ್ ಐಡಿಯಾ ಬಳಕೆದಾರರು ಆನ್‌ಲೈನ್ ವೀಡಿಯೊ ಸ್ಟ್ರೀಮಿಂಗ್ ಮತ್ತು ಲೈವ್ ವಿಷಯಕ್ಕಾಗಿ ಉತ್ತಮ ಅನುಭವಗಳನ್ನು ಆನಂದಿಸುತ್ತಾರೆ ಎಂದು OpenSignal ವರದಿ ತಿಳಿಸಿದೆ. 5G ಮತ್ತು ವೊಡಾಫೋನ್ ಐಡಿಯಾದ ನೆಟ್‌ವರ್ಕ್ ಬೆಳವಣಿಗೆಯೊಂದಿಗೆ  ಜಿಯೋದ ಅಪ್ರತಿಮ ಬೆಳವಣಿಗೆಯೊಂದಿಗೆ ವಿಶ್ವದ ಟೆಲಿಕಾಂ ಅಂಗಳಲ್ಲಿ ಭಾರತ ಪ್ರಬಲವಾಗುತ್ತಿದೆ.

ಇದನ್ನೂ ಓದಿ: ಅಂಬಾನಿಗೆ ನಡುಕ ಹುಟ್ಟಿಸಿದ ವೊಡಾಫೋನ್ ಐಡಿಯಾ; ಫ್ರೀ ಇಂಟರ್‌ನೆಟ್‌ನ ಸೂಪರ್ ಹೀರೋ ಪ್ಲಾನ್ ತಂದ Vi

click me!