3 ಚಿತ್ರ 120 ಕೋಟಿ ಬಾಚಿದೆ: ದೇಶದ ಎಕಾನಮಿ ತುಂಬ ಚೆನ್ನಾಗಿದೆ’!

Published : Oct 12, 2019, 08:51 PM IST
3 ಚಿತ್ರ 120 ಕೋಟಿ ಬಾಚಿದೆ: ದೇಶದ ಎಕಾನಮಿ ತುಂಬ ಚೆನ್ನಾಗಿದೆ’!

ಸಾರಾಂಶ

ಅರ್ಥ ವ್ಯವಸ್ಥೆಯನ್ನು ಬಾಲಿವುಡ್ ಗಳಿಕೆಗೆ ಹೋಲಿಸಿದ ಕೇಂದ್ರ ಸಚಿವ| ದೇಶದ ಆರ್ಥಿಕ ಸ್ಥಿತಿಗತಿ ತುಂಬ ಚೆನ್ನಾಗಿದೆ ಎಂದ ರವಿಶಂಕರ್ ಪ್ರಸಾದ್| ‘ಒಂದೇ ದಿನದಲ್ಲಿ 3 ಬಾಲಿವುಡ್ ಚಿತ್ರಗಳು 120 ಕೋಟಿ ರೂ. ಗಳಿಸಿವೆ’|‘ಅ.02ರ ರಾಷ್ಟ್ರೀಯ ರಜಾ ದಿನದಂದು 120 ಕೋಟಿ ಬಾಚಿದ ಮೂರು ಬಾಲಿವುಡ್ ಚಿತ್ರಗಳು’| ಅರ್ಥ ವ್ಯವಸ್ಥೆ ಚೆನ್ನಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದ ಸಚಿವ| ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆಗೆ ಭುಗಿಲೆದ್ದ ಆಕ್ರೋಶ| 

ಮುಂಬೈ(ಅ.12): ಒಂದು ಕಡೆ ಆರ್ಥಿಕ ಕುಸಿತ ಇಡೀ ದೇಶವನ್ನು ಚಿಂತೆಗೀಡು ಮಾಡಿದ್ದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರದ ಕೆಲ ಸಚಿವರು ಆರ್ಥಿಕ ಸ್ಥಿತಿಗತಿ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಾ ಪ್ರಧಾನಿ ಮೋದಿಗೆ ಮುಜುಗರ ತಂದಿಡುತ್ತಿದ್ದಾರೆ.

ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ ಎಂದು ಕೆಲವರು ಗುಲ್ಲೆಬ್ಬಿಸುತ್ತಿದ್ದು, ಆರ್ಥಿಕ ಸ್ಥಿತಿಗತಿ ಚೆನ್ನಾಗಿದೆ ಎಂಬುದಕ್ಕೆ ಬಾಲಿವುಡ್ ಗಳಿಸುತ್ತಿರುವ ಗಳಿಕೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಕಳೆದ ಅಕ್ಟೋಬರ್ 2ರಂದು ಗಾಂಧಿ ಜಯಂತಿ ನಿಮಿತ್ತ ರಾಷ್ಟ್ರೀಯ ರಜಾದಿನದಂದು, ಬಾಲಿವುಡ್’ನ 3 ಚಿತ್ರಗಳು 120 ಕೋಟಿ ರೂ. ಬಾಚಿವೆ. ದೇಶದ ಅರ್ಥ ವ್ಯವಸ್ಥೆ ಸರಿ ದಾರಿಯಲ್ಲಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ರವಿಶಂಕರ್ ಪ್ರಸಾದ್ ನುಡಿದಿದ್ದಾರೆ.

ಮುಂಬೈನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರವಿಶಂಕರ್ ಪ್ರಸಾದ್, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ದೇಶದ ಅರ್ಥ ವ್ಯವಸ್ಥೆಯನ್ನು ಬಾಲಿವುಡ್ ಚಿತ್ರ ಗಳಿಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.

ಇನ್ನು ರವಿಶಂಕರ್ ಪ್ರಸಾದ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಆರ್ಥಿಕ ಸ್ಥಿತಿ ಹಳಿ ತಪ್ಪಿರುವ ನಡುವೆ ಕೇಂದ್ರ ಸಚಿವರು ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಅವರ ಸೊಕ್ಕನ್ನು ತೋರಿಸುತ್ತದೆ ಎಂದು ಪ್ರತಿಪಕ್ಷಗಳು ಹರಿಹಾಯ್ದಿವೆ.

ಜನ ಓಲಾ, ಉಬರ್’ಗಳಲ್ಲಿ ಹೆಚ್ಚಾಗಿ ಓಡಾಡುವುದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಚಿನ್ನದ ಮೇಲೆ ಸಾಲ ಪಡೆಯುವುದರಲ್ಲಿ ಈ 5 ರಾಜ್ಯಗಳೇ ಟಾಪ್! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Army Canteen: ಹೊರಗಡೆ ₹1500 ಇರೋ ಬಾಟಲಿ ಆರ್ಮಿ ಕ್ಯಾಂಟೀನ್‌ನಲ್ಲಿ ₹600ಕ್ಕೆ ಸಿಗೋದು ಯಾಕೆ ಗೊತ್ತಾ?