ವ್ಯಾಪಾರದಲ್ಲಿ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಪ್ಲಾನ್ ಬಿ ಹೊಂದಿರುವುದು ಮುಖ್ಯ. ಒಂದೇ ಸೂರಿನಡಿ ಐದು ಲಾಭದಾಯಕ ವ್ಯವಹಾರಗಳನ್ನು ಆರಂಭಿಸಬಹುದು.
ಯಾವುದೇ ವ್ಯವಹಾರ ಆರಂಭಿಸಿದ್ರೆ ಪ್ಲಾನ್ ಬಿ ಹೊಂದಿರಬೇಕು. ಇಂತಹ ಪ್ಲಾನ್‌ಗಳು ವ್ಯಾಪಾರಿಗಳನ್ನು ನಷ್ಟದ ಅಪಾಯವನ್ನು ದೂರ ಮಾಡುತ್ತವೆ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಾರೆ. ವ್ಯಾಪಾರ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ಸರಿಸಮಾನವಾದ ಪೂರಕ ಪ್ಲಾನ್ ಹೊಂದಿರಬೇಕು. ನಿಮ್ಮೂರು ಅಥವಾ ಸಮೀಪದ ಪಟ್ಟಣ ಪ್ರದೇಶದಲ್ಲಿ ವ್ಯವಹಾರ ಆರಂಭ ಮಾಡುತ್ತಿದ್ದರೆ ಈ ಐಡಿಯಾಗಳು ನಿಮಗೆ ಸೂಕ್ತವಾಗಿವೆ. ಈ ಐದು ಐಡಿಯಾಗಳು ನಿಮ್ಮ ಹಣದ ಪೆಟ್ಟಿಗೆಯನ್ನು ಅತಿ ಕಡಿಮೆ ಅವಧಿಯಲ್ಲಿ ತುಂಬಿಸುತ್ತದೆ. ಒಂದೇ ಸೂರಿನಡಿ ಆರಂಭಿಸಬಹುದಾದ ಆ ಐದು ವ್ಯವಹಾರಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
1.ಝೆರಾಕ್ಸ್ ಸೆಂಟರ್
ನಿಮ್ಮ ವ್ಯಾಪಾರದ ಸ್ಥಳದಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿದ್ದರೆ ನಿಮ್ಮ ಅಂಗಡಿಯುಲ್ಲೊಂದು ಝೆರಾಕ್ಷ್ ಮಷೀನ್ ಇರಿಸಿಕೊಳ್ಳುವುದು ಲಾಭದಾಯಕ. 10 ರಿಂದ 15 ಸಾವಿರ ರೂಪಾಯಿಯಲ್ಲಿ ಒಂದು ಚಿಕ್ಕ ಝೆರಾಕ್ಷ ಮಷೀನ್ ಸಿಗುತ್ತದೆ. ಇದರಿಂದ ನಿರಂತರ ಆದಾಯ ನಿಮ್ಮದಾಗುತ್ತದೆ. ಶಾಲಾ-ಕಾಲೇಜುಗಳು ಓಪನ್ ಇದ್ದಾಗ ಝೆರಾಕ್ಷ ಮಷೀನ್ ನಿರಂತರವಾದ ಆದಾಯ ನೀಡುತ್ತದೆ.
2.ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟ
ಝೆರಾಕ್ಷ ಮಷೀನ್ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಹ ಮಾರಾಟ ಮಾಡಬಹುದು. ಪೆನ್, ಪುಸ್ತಕ, ಕಾಲೇಜು ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಶಿಕ್ಷಣ ಸಂಸ್ಥೆಗಳಿಂದಲೇ ನಿಮಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆಗಳಿರುತ್ತವೆ. ಈ ರೀತಿ ಆರ್ಡರ್ ಗಳು ಸಿಕ್ಕಾಗ ಲಾಭದ ಪ್ರಮಾಣವೂ ಹೆಚ್ಚಳವಾಗುತ್ತದೆ.
3.ತಂಪು ಪಾನೀಯ ಮಾರಾಟ
ಇದೇ ಅಂಗಡಿಯಲ್ಲಿ ಸಣ್ಣದಾದ ಫ್ರಿಡ್ಜ್ ಇರಿಸಿಕೊಂಡು ತಂಪು ಪಾನೀಯಗಳನ್ನು ಮಾರಾಟ ಮಾಡಬಹುದು. ತಂಪು ಪಾನೀಯ ಮಾರಾಟದಲ್ಲಿ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ. ಬೇಸಿಗೆ ಮತ್ತು ಇನ್ನಿತರ ದಿನಗಳಲ್ಲಿ ಶಾಲಾ-ಕಾಲೇಜುಗಳು ರಜೆ ಇದ್ದರೆ ತಂಪು ಪಾನೀಯ ಮಾರಾಟದಿಂದ ನೀವು ಆದಾಯ ಗಳಿಸಬಹುದು. ತಂಪು ಪಾನೀಯಗಳ ಜೊತೆಯಲ್ಲಿ ಐಸ್ ಕ್ರೀಂಗಳನ್ನು ಸಹ ಮಾರಾಟ ಮಾಡಿ ಹಣ ಗಳಿಸಬಹುದು.
4.ಸೈಬರ್ ಸೆಂಟರ್
ಇದೇ ಸೂರಿನಡಿ ಒಂದು ಕಂಪ್ಯೂಟರ್, ಪ್ರಿಂಟರ್ ಮತ್ತು ಸ್ಕ್ಯಾನಿಂಗ್ ಮಷೀನ್ ಇರಿಸಿಕೊಂಡು ಸೈಬರ್ ಸೆಂಟರ್ ಆರಂಭಿಸಬಹುದು. ಇದರ ಮೂಲಕ ಜಾಬ್ ಅಪ್ಲಿಕೇಷನ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಕೆಲಸವನ್ನು ಮಾಡಬಹುದು.
5.ಬ್ಯೂಟಿ ಪ್ರೊಡಕ್ಟ್
ಇದೇ ಅಂಗಡಿಯಲ್ಲಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಬಹುದು. ಉದಾಹರಣೆಗೆ ಮುಖಕ್ಕೆ ಹಚ್ಚುವ ವಿವಿಧ ಕಂಪನಿಗಳ ಕ್ರೀಮ್‌ಗಳು, ಸ್ಕಿನ್ ಕೇರ್ ಪ್ರೊಡೆಕ್ಟ್, ಹೇರ್ ಕೇರ್ ಪ್ರೊಡೆಕ್ಟ್ ಗಳನ್ನು ಮಾರಾಟ ಮಾಡಬಹುದಾಗಿದೆ. ಇಂತಹ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆಯನ್ನು ಹೊಂದಿರುತ್ತವೆ.
ತುಂಬಾ ಓದಿದ್ದೇನೆ ಅಂತ ಹಮ್ಮು ಗಿಮ್ಮು ಬೇಡ; ನಿಮ್ಮೂರಿನಲ್ಲಿಯೇ ಈ 3 ಬ್ಯುಸಿನೆಸ್ ಆರಂಭಿಸಿ, ಕೈ ತುಂಬಾ ಹಣ ಎಣಿಸಿ