ರತನ್ ಟಾಟಾ ಸಾಧನೆ ಪರಿಗಣಿಸಿ ಇಂಗ್ಲೆಂಡ್ ರಾಜಮನೆತನ ಹಾಗೂ ಟ್ರಸ್ಟ್ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಸಲು ನಿರ್ಧರಿಸಿತ್ತು. ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್ ಪ್ಯಾಲೆಸ್ ಅರಮನೆಯಲ್ಲಿ ರತನ್ ಟಾಟಾಗೆ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರತನ್ ಟಾಟಾ ತಮ್ಮ ಮುದ್ದಿನ ಸಾಕು ನಾಯಿ ಕಾರಣದಿಂದ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಕಾರಣ ಕೇಳಿದರೆ ನಿಮ್ಮ ಕಣ್ಮಾಲಿ ತೇವಗೊಳ್ಳಲಿದೆ.
ಮುಂಬೈ(ಅ.10) ವಿಶ್ವವೇ ಅತ್ಯಂತ ಗೌರವಿಸುವ , ಭಾರತದ ಆದರಿಸುವ ವಿಶೇಷ ವ್ಯಕ್ತಿತ್ವ ರತನ್ ಟಾಟಾ. ಭಾರತದ ಉದ್ಯಮಿ ಸಾಮಾಜಿಕ ಕಾರ್ಯ, ಭಾರತವನ್ನು ಕಟ್ಟಿ ಬೆಳೆಸುವ ಕಾರ್ಯದಲ್ಲೂ ರತನ್ ಟಾಟಾ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ರತನ್ ಟಾಟಾ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ರತನ್ ಟಾಟಾ ಹೃದಯ ಶ್ರೀಮಂತಿಕೆ, ಮಾನವೀಯತೆಯ ವ್ಯಕ್ತಿತ್ವ ಬೇರೆ ಯಾರಲ್ಲೂ ಕಾಣಸಿಗದು. ರತನ್ ಟಾಟಾಗೆ ನಾಯಿಗಳ ಮೇಲೆ ವಿಶೇಷ ಪ್ರೀತಿ. ನಾಯಿಗಳಾಗಿಗ ಆಸ್ಪತ್ರೆ ಕಟ್ಟಿದ್ದಾರೆ. ನಾಯಿಗಳಿಗೆ ರಾಜಾತಿಥ್ಯ ನೀಡುವ ಅಪರೂಪದ ವ್ಯಕ್ತಿತ್ವ. ವಿಶೇಷ ಅಂದರೆ 2018ರಲ್ಲಿ ಇಂಗ್ಲೆಂಡ್‌ನ ಪ್ರಿನ್ಸ್ ಚಾರ್ಲ್ಸ್, ರತನ್ ಟಾಟಾ ಜೀವಮಾನದ ಶ್ರೇಷ್ಠ ಸಾಧನೆಗೆ, ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಲು ಇಂಗ್ಲೆಂಡ್‌ನ ಅರಮನೆ ಬಕಿಂಗ್‌ಹ್ಯಾಮ್ ಪ್ಯಾಲೆಸ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಇಂಗ್ಲೆಂಡ್ ರಾಜಮನೆತನ ಹಾಗೂ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ರತನ್ ಟಾಟಾ ಸೇರಿದಂತೆ ಭಾರತೀಯ ವಿಶೇಷ ಗಣ್ಯರನ್ನು ಆಹ್ವಾನಿಸಲಾಗಿತ್ತು. ಆದರೆ ರತನ್ ಟಾಟಾ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದಕ್ಕೆ ಕಾರಣ ತಮ್ಮ ಮುದ್ದಿನ ಸಾಕು ನಾಯಿ.
ಇದು 2018ರಲ್ಲಿ ನಡೆದ ಘಟನೆ. ಇಂಗ್ಲೆಂಡ್ ರಾಜ ಕಿಂಗ್ ಚಾರ್ಲ್ಸ್ III( ಕಿಂಗ್ ಚಾರ್ಲ್ಸ್), ಇಂಗ್ಲೆಂಡ್ ರಾಜಮನೆತನ, ಹಾಗೂ ಬ್ರಿಟಿಷ್ ಏಷ್ಯನ್ ಟ್ರಸ್ಟ್ ರತನ್ ಟಾಟಾ ಅವರ ಕೈಗಾರಿಕೆಯಲ್ಲಿನ ಕ್ರಾಂತಿ, ಸಾಮಾಜಿಕ ಕಾರ್ಯ, ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ ಘೋಷಿಸಿತ್ತು. ಫೆಬ್ರವರಿ 6, 2018ರಂದು ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ ಹಾಗೂ ಐಷಾರಾಮಿ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!
ಬ್ರಿಟಿಷ್ ಏಷ್ಯನ್ ಟ್ರಸ್ಟ್ ರತನ್ ಟಾಟಾ ಸಂಪರ್ಕಿಸಿ, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಗಮಿಸಬೇಕು ಎಂದು ವಿನಂತಿಸಿಕೊಂಡಿತ್ತು. ಇತ್ತ ರತನ್ ಟಾಟಾ ಕೂಡ ಒಪ್ಪಿಕೊಂಡಿದ್ದರು. ಫೆಬ್ರವರಿ 5 ರಂದು ರತನ್ ಟಾಟಾ ಕರೆ ಮಾಡಿ ತನಗೆ ನಾಳೆಯ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ರತನ್ ಟಾಟಾಗೆ ಆಯೋಜಿಸಿದ್ದ ಕಾರ್ಯಕ್ರಮ, ರತನ್ ಟಾಟಾಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರತನ್ ಟಾಟಾ ಇಲ್ಲ ಎಂದರೆ ಹೇಗೆ? ಆಯೋಜಕರು ಒಂದು ಕ್ಷಣ ದಂಗಾಗಿದ್ದಾರೆ.
ಇದಕ್ಕೆ ಕಾರಣ, ರತನ್ ಟಾಟಾ ಮುದ್ದಿನ ಸಾಕು ನಾಯಿ ಟ್ಯಾಂಗೋ ಹಾಗೂ ಟಿಟೂ ಅನಾರೋಗ್ಯಕ್ಕೆ ತುತ್ತಾಗಿತ್ತು. ಎರಡು ನಾಯಿಗಳ ಪೈಕಿ ಒಂದು ನಾಯಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ನಾಯಿಯ ಆರೋಗ್ಯ ಕೆಟ್ಟಿರುವ ಕಾರಣ ಆರೈಕೆಯಲ್ಲಿದ್ದೇನೆ. ಹೀಗಾಗಿ ತನಗೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ರತನ್ ಟಾಟಾ ಹೇಳಿದ್ದಾರೆ. ಈ ಮಾತು ಕೇಳಿದ ಕಿಂಗ್ ಚಾರ್ಲ್ಸ್, ದ್ಯಾಟ್ಸ್ ದಿ ಮ್ಯಾನ್ ರತನ್ ಟಾಟಾ ಈಸ್ ಎಂದಿದ್ದಾರೆ. ಇದೇ ಕಾರಣಕ್ಕೆ ರತನ್ ಟಾಟಾ ಸಂಸ್ಥೆಗಳು ಅತ್ಯಂತ ಮೌಲ್ಯಯುತ ದಾರಿಯಲ್ಲಿ ಸಾಗುತ್ತಿದೆ ಎಂದು ಚಾರ್ಲ್ಸ್ ಹೇಳಿದ್ದಾರೆ. ಇಷ್ಟೇ ಅಲ್ಲ ರತನ್ ಟಾಟಾ ನಿರ್ಧಾರವನ್ನು ಗೌರವಿಸಿದ್ದಾರೆ.
ರತನ್ ಟಾಟಾ ಅವರನ್ನು ಹಲವರು ಮನವಿ ಮಾಡಿದ್ದಾರೆ. ಕಿಂಗ್ ಚಾರ್ಲ್ಸ್ ನಿಮಗಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾಯಿ ಆರೈಕೆ ಮಾಡಲು ವೈದ್ಯರನ್ನು ನೇಮಿಸಿ, ಕಾರ್ಯಕ್ರಮಕ್ಕೆ ಆಗಮಿಸಲ ಮನವಿ ಮಾಡಿದ್ದಾರೆ. ಆದರೆ ರತನ್ ಟಾಟಾ ನಿರಾಕರಿಸಿದ್ದಾರೆ. ನಾಯಿಯ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ನಾನು ನಾಯಿ ಜೊತೆಗಿರಬೇಕು, ಇದರಿಂದ ನಾಯಿಯ ಆರೋಗ್ಯ ಬೇಗನೆ ಸುಧಾರಿಸಲಿದೆ. ಇಷ್ಟೇ ಅಲ್ಲ ಈ ಪರಿಸ್ಥಿತಿಯಲ್ಲಿ ನಾನು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಘಟನೆಯನ್ನು ಭಾರತೀಯ ಉದ್ಯಮಿ, ಅಂಕಣಕಾರ ಸುಹೇಲ್ ಸೇಥ್ ವಿವರಿಸಿ ಭಾವುಕರಾಗಿದ್ದಾರೆ.
ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!