3800 ಕೋಟಿ ಆಸ್ತಿ, 2 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ಜೀವನ, ಮೊಬೈಲ್‌, ಟಿವಿ ಇಲ್ಲ, ಇವರು ರತನ್‌ ಟಾಟಾ ಸಹೋದರ!

By Santosh Naik  |  First Published Sep 24, 2024, 8:18 PM IST

ಬಹಳ ಜನರಿಗೆ ರತನ್‌ ಟಾಟಾ ಅವರ ಬಗ್ಗೆ ಗೊತ್ತು. ಆದರೆ, ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಇಂದಿಗೂ ಮುಂಬೈನಲ್ಲಿ ಸರಳ ಜೀವನ ನಡೆಸುತ್ತಿರುವ ಅವರರು 2 ಬಿಎಚ್‌ಕೆ ನಿವಾಸದಲ್ಲಿ ವಾಸ ಮಾಡುತ್ತಿದ್ದಾರೆ.


ತನ್‌ ಟಾಟಾ ಕುಟುಂಬದ ಬಗ್ಗೆ ತಿಳಿಯದವರು ಯಾರು? ಟಾಟಾ ಗ್ರೂಪ್‌ ಎಂದರೆ, ಇಂದಿಗೂ ಜನಸಾಮಾನ್ಯರ ಅಚ್ಚುಮೆಚ್ಚು. ಅಡುಗೆ ಮನೆಯ  ಉಪ್ಪಿನಿಂದ ಹಿಡಿದು, ಸೈನಿಕನ ಹೆಗಲ ಮೇಲಿನ ಆಯುಧಗಳವರೆಗೂ ಟಾಟಾ ಗ್ರೂಪ್‌ನ ಹೆಸರಿದೆ. ಟಾಟಾ ಗ್ರೂಪ್‌ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರು ಅದರ ಅಧ್ಯಕ್ಷ ರತನ್‌ ಟಾಟಾ. ಇಂದಿಗೂ ರತನ್‌ ಟಾಟಾ ವಿವಾಹವಾಗಿಲ್ಲ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದೆರಡು ಸಮಯದಲ್ಲಿ ರತನ್‌ ಟಾಟಾ ಹೇಳಿದ್ದು ಬಿಟ್ಟರೆ, ಅಷ್ಟಾಗಿ ಅವರ ವೈಯಕ್ತಿಕ ಜೀವನ ಯಾರಿಗೂ ತಿಳಿದಿಲ್ಲ. ಆದರೆ, ರತನ್‌ ಟಾಟಾ ಅವರಿಗೆ ಸಹೋದರನೊಬ್ಬನಿದ್ದಾನೆ. ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಅನಾಮಧೇಯ ಜೀವನವನ್ನು ನಡೆಸುತ್ತಿರುವ ಅವರ ಬಗ್ಗೆ ಮಾಹಿತಿಗಳು ಇಲ್ಲಿವೆ.

ರತನ್ ಟಾಟಾ ಅವರ ಕಿರಿಯ ಸಹೋದರನ ಹೆಸರು ಜಿಮ್ಮಿ ನವಲ್‌ ಟಾಟಾ. ಮುಂಬೈನ ಎರಡು ಬೆಡ್‌ರೂಮ್‌ಗಳ ಸಣ್ಣ ಫ್ಲಾಟ್‌ನಲ್ಲಿ ಅವರು ವಾಸ ಮಾಡುತ್ತಿದ್ದಾರೆ. ಸಾಮಾನ್ಯ ಜೀವನದ ವೈಭವದಿಂದ ಅವರು ದೂರವೇ ಉಳಿದುಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನ ತೀರಾ ಹತ್ತಿರದ ನಿವಾಸಿಗಳಿಗೂ ಕೂಡ ಇವರು ರತನ್‌ ಟಾಟಾ ಅವರ ಕಿರಿಯ ಸಹೋದರ ಎನ್ನುವ ವಿಚಾರ ತಿಳಿದಿಲ್ಲ. ಯಾವುದೇ ಹೈಪ್ರೊಫೈಲ್‌ ಭದ್ರತೆ ಕೂಡ ಹೊಂದಿಲ್ಲ. ತಾವು ಟಾಟಾ ಕುಟುಂಬಕ್ಕೆ ಸಂಬಂಧಿಸಿದವರು ಎಂದು ತೋರಿಸಿಕೊಳ್ಳುವ ಯಾವ ಸಣ್ಣ ಪ್ರಯತ್ನವನ್ನೂ ಅವರು ಮಾಡೋದಿಲ್ಲ. ಮನೆಯಲ್ಲಿ ಟಿವಿಯಾಗಲಿ, ಮೊಬೈಲ್‌ ಆಗಲಿ ಇರಿಸಿಕೊಂಡಿಲ್ಲ. ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಅವರು ನೆಚ್ಚಿಕೊಂಡಿರುವುದು ಪತ್ರಿಕೆಗಳನ್ನು ಮಾತ್ರ.

ಕೆಲವು ತಿಂಗಳ ಹಿಂದೆ, ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮಂತೆಯೇ ಕಾಣುವ ಹುಡುಗನೊಂದಿಗೆ ಹಳೆಯ ಫೋಟೋವನ್ನು ಹಂಚಿಕೊಂಡಿದ್ದರು. ಅವರೇ ಅವರ ಕಿರಿಯ ಸಹೋದರ ಜಿಮ್ಮಿ ನವಲ್‌ ಟಾಟಾ. ವಿಶೇಷವೇನೆಂದರೆ, ಜಿಮ್ಮಿ ಟಾಟಾ, ಟಾಟಾ ಸಮೂಹದ ವ್ಯವಹಾರದಲ್ಲಿ ಪಾಲನ್ನೂ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಅಪಾರ ಸಂಪತ್ತೂ ಕೂಡ ಇದೆ ಎಂದು ಆಶ್ಚರ್ಯವಾಗಬಹುದು. ಆದರೆ ಆರಂಭಿಕ ದಿನಗಳಿಂದಲೂ ಅವರಿಗೆ ವ್ಯವಹಾರದ ಮೇಲೆ ಆಸಕ್ತಿ ಇದ್ದಿರಲಿಲ್ಲ. ತಮ್ಮ ಹವ್ಯಾಸದ ಕಡೆಗೆ ಅವರ ಅಸಕ್ತಿ ಇತ್ತು. ಜಿಮ್ಮಿ ನವಲ್‌ ಟಾಟಾ ಅತ್ಯುತ್ತಮ ಸ್ಕ್ಚಾಷ್‌ ಆಟಗಾರ.

ರತನ್‌ ಟಾಟಾ ಮುಡಿಗೆ ಇನ್ನೊಂದು ಗರಿ, ಟಾಟಾ ಮೋಟಾರ್ಸ್‌ ಈಗ ದೇಶದ ನಂ.1 ಆಟೋಮೇಕರ್‌ ಬ್ರ್ಯಾಂಡ್‌!

38000 ಕೋಟಿ ರೂ. ಆಸ್ತಿಯ ಮಾಲೀಕರು, ಟಾಟಾ ಟ್ರಸ್ಟ್‌ನ ಟ್ರಸ್ಟಿ: ಜಿಮ್ಮಿ ಟಾಟಾ ಕೂಡ ಟಾಟಾ ಟ್ರಸ್ಟ್‌ನ ಟ್ರಸ್ಟಿ. ಈ ಹುದ್ದೆಯನ್ನು ಅವರ ತಂದೆ ನವಲ್ ಟಾಟಾ ಅವರ ವಿಲ್‌ನಲ್ಲಿ ನೀಡಿದ್ದರು. ಅವರನ್ನು ನವಲ್ ಟಾಟಾ ದತ್ತು ಪಡೆದಿದ್ದರು. ಅವರು ಸರ್ ರತಂಜಿ ಟಾಟಾ ಮತ್ತು ನವಾಜ್‌ಬಾಯಿ ಅವರ ಪುತ್ರರು. ಕಂಪನಿಯ ಷೇರುಗಳಲ್ಲಿ ಅವರಿಗೂ ಪಾಲು ಇದೆ. ಷೇರುಗಳ ಆಧಾರದ ಮೇಲೆ ಅವರ ಸಂಪತ್ತನ್ನು ಅಂದಾಜಿಸಿದರೆ, ಸದ್ಯ ಜಿಮ್‌ಮಿ ಟಾಟಾ 3800 ಕೋಟಿ ರೂಪಾಯಿಯ ಆಸ್ತಿಯನ್ನು ಹೊಂದಿದ್ದಾರೆ. ಆದರೆ, ಇವೂ ಕೂಡ ಸಹೋದರ ರತನ್‌ ಟಾಟಾ ಅವರಂತೆಯೇ ಸರಳ ಜೀವನ ನಡೆಸುತ್ತಾರೆ. ಇನ್ನು ಜಿಮ್ಮಿ ಟಾಟಾ ಕೂಡ ಮದುವೆಯಾಗಿಲ್ಲ. ಅವರು ಟಾಟಾ ಗ್ರೂಪ್‌ನ ಪ್ರಮುಖ ಷೇರುದಾರರ ಪೈಕಿ ಒಬ್ಬರು.  ಅದು ಟಾಟಾ ಸನ್ಸ್ ಆಗಿರಲಿ ಅಥವಾ ಟಾಟಾ ಸ್ಟೀಲ್, ಟಾಟಾ ಪವರ್‌ನಿಂದ TCS, ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಕೆಮಿಕಲ್ಸ್ ಈ ಎಲ್ಲಾ ಕಂಪನಿಗಳಲ್ಲೂ ಜಿಮ್ಮಿ ಟಾಟಾ ಅವರ ಪಾಲು ಇದೆ.

Latest Videos

ರತನ್‌ ಟಾಟಾ ಮಾಲೀಕತ್ವದ ಕಂಪನಿಯ 6.70 ಕೋಟಿ ಷೇರು ಮಾರಾಟ ಮಾಡಿದ ಎಲ್‌ಐಸಿ!

click me!