ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್, ಸ್ಮಾರ್ಟ್‌ಫೋನ್ ಮೇಲೆ ಶೇ.50 ರಷ್ಟು ಡಿಸ್ಕೌಂಟ್!

By Chethan Kumar  |  First Published Sep 24, 2024, 8:08 PM IST

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಇದೀಗ ಭರ್ಜರಿ ಆಫರ್ ನೀಡಲಾಗಿದೆ. ನಥಿಂಗ್, CMF ಪ್ರಾಡಕ್ಟ್ ಮೇಲೆ ಶೇಕಡಾ 50 ರಷ್ಟು ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ.


ಬೆಂಗಳೂರು(ಸೆ.24) ಭಾರತದಲ್ಲಿ ಹಲವು ಸ್ಮಾರ್ಟ್‌ಫೋನ್ ಲಭ್ಯವಿದೆ. ಈ ಪೈಕಿ ಲಂಡನ್ ಮೂಲದ ನಥಿಂಗ್ ಇದೀಗ ಫ್ಲಿಪ್‌ಕಾರ್ಟ್ ಜೊತೆ ಕೈಜೋಡಿಸಿ ಭರ್ಜರಿ ಡಿಸ್ಕೌಂಟ್ ನೀಡಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನಥಿಂಗ್ ಫೋನ್, CMF ಉತ್ಪನ್ನ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ನಥಿಂಗ್ ಫೋನ್ ಹಾಗೂ CMF ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಡಿಸ್ಕೌಂಟ್ ಹಾಗೂ ಕನಿಷ್ಠ ಬೆಲೆ ಆಫರ್ ಘೋಷಿಸಿದೆ.  

ನಥಿಂಗ್ ಫೋನ್ (2ಎ):
ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್ ಮತ್ತು 5,000 mAh ಬ್ಯಾಟರಿ 45w ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಈ ಫೋನ್ (2a) ಹೊಂದಿದೆ. ಇದು 50 MP + 50 MP ಹಿಂಭಾಗದ ಕ್ಯಾಮೆರಾಗಳು, 32 MP ಮುಂಭಾಗದ ಕ್ಯಾಮೆರಾ ಮತ್ತು 1,300 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ 6.7" ಅಮೋಲೆಡ್ ಡಿಸ್‌ಪ್ಲೇ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಆಂಡ್ರಾಯ್ಡ್ (Android)14 ಜೊತೆಗೆ ನಥಿಂಗ್ OS 2.6 ರಲ್ಲಿ ಕಾರ್ಯ ನಿರ್ವಹಿಸುವ ಇದು, ವರ್ಧಿತ ವಿಜೆಟ್‌ಗಳು ಮತ್ತು AI ವೈಶಿಷ್ಟ್ಯಗಳನ್ನು ನೀಡುತ್ತದೆ. ಬಿಡುಗಡೆಯ ದಿನದಂದು ಈ ಫೋನ್ (2ಎ) ಬೆಸ್ಟ್ ಸೆಲ್ಲರ್ ಆಗಿತ್ತು ಮತ್ತು ಕೇವಲ 60 ನಿಮಿಷಗಳಲ್ಲಿ 60 ಸಾವಿರ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಬಿಗ್ ಬಿಲಿಯನ್ ಡೇಸ್ 2024 ಸೇಲ್‌ಗೆ, ಫೋನ್ (2ಎ) ಕೇವಲ ₹18,999 ಬೆಲೆಗೆ ಲಭ್ಯವಿರುತ್ತದೆ.

Tap to resize

Latest Videos

undefined

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

ನಥಿಂಗ್ ಫೋನ್ (2ಎ) ಪ್ಲಸ್:
ಮೀಡಿಯಾಟೆಕ್ (MediaTek) ಡೈಮೆನ್ಸಿಟಿ 7350 ಪ್ರೊ 5G ಪ್ರೊಸೆಸರ್ ಚಾಲಿತ ನಥಿಂಗ್ (2ಎ) ಪ್ಲಸ್ ಫೋನ್, ಟ್ರಿಪಲ್ 50 MP ಕ್ಯಾಮೆರಾ ಸಿಸ್ಟಮ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಮುಂಭಾಗದ ಕ್ಯಾಮರಾ ಈ ಹಿಂದಿನ ಮಾದರಿಗಳಿಗಿಂತ ಅಪ್‌ಗ್ರೇಡ್ ಆಗಿದ್ದು, ಈಗ 4k ವೀಡಿಯೊವನ್ನು 30 FPS ನಲ್ಲಿ ಸೆರೆಹಿಡಿಯುತ್ತದೆ. ಎಲ್ಲ ಮೂರು ಸೆನ್ಸಾರ್‌ಗಳು ನೇರ 50 MP ಫೋಟೋ ಔಟ್ಪುಟ್, HDR ಫೋಟೋ ಕ್ಯಾಪ್ಚರ್ ಮತ್ತು 4K ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲವು. ಫೋನ್ (2ಎ) ಪ್ಲಸ್ 6.7" FHD+ 1300 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ AMOLED ಡಿಸ್‌ಪ್ಲೇ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಇದು 50w ಫಾಸ್ಟ್ ಚಾರ್ಜಿಂಗ್ ಜೊತೆಗೆ 5,000 mAh ಬ್ಯಾಟರಿ ಹೊಂದಿದ್ದು. ಗರಿಷ್ಠ ಎರಡು ದಿನಗಳ ಕಾಲ ಬಳಸಬಹುದು. ಆಂಡ್ರಾಯ್ಡ್ 14 ಚಾಲಿತ ಈ ಫೋನ್ ಮೂರು ವರ್ಷಗಳ ಕಾಲ ಸಾಫ್ಟ್‌ವೇರ್ ಅಪ್ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಕಾಲ ಭದ್ರತಾ ನವೀಕರಣಗಳ ಭರವಸೆ ನೀಡುತ್ತದೆ. ಎರಡು ಲೋಹೀಯ ಬಣ್ಣಗಳಲ್ಲಿ ಲಭ್ಯವಿರುವ ಫೋನ್ (2ಎ) ಪ್ಲಸ್ ಅನ್ನು ಬಿಗ್ ಬಿಲಿಯನ್ ಡೇಸ್‌ನಲ್ಲಿ ₹23,999 ಬೆಲೆಗೆ ಮಾರಾಟ ಮಾಡಲಾಗುತ್ತದೆ.

CMF ಫೋನ್ 1:
CMF ಫೋನ್ 1 ಅನ್ನು ನಥಿಂಗ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದ್ದು, ವೇಗದ, ಪರಿಣಾಮಕಾರಿ ಶಕ್ತಿಯನ್ನು ಒದಗಿಸಲು ಮೀಡಿಯಾಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ ಹೊಂದಿರುದೆ. ಇದು ಎರಡು ದಿನಗಳ ಬಳಸಬಹುದಾದ 5,000 mAh ಬ್ಯಾಟರಿ ಹೊಂದಿದೆ. RAM ಬೂಸ್ಟರ್‌ ಜೊತೆಗೆ 16 GB RAM ಸೌಕರ್ಯವಿದೆ. 50 MP ಸೋನಿ ಹಿಂಭಾಗದ ಕ್ಯಾಮೆರಾ ಮತ್ತು 16 MP ಮುಂಭಾಗದ ಕ್ಯಾಮೆರಾಗಳು ಗರಿಷ್ಠ ಕಾರ್ಯಕ್ಷಮತೆಯ ಕ್ಯಾಮೆರಾ ಸಿಸ್ಟಂ ಅನ್ನು ನೀಡುತ್ತವೆ. 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿರುವ 6.67-ಇಂಚಿನ ಸೂಪರ್ AMOLED ಡಿಸ್‌ಪ್ಲೇ ಸ್ಮೂತ್ ಆಗಿರುವ, ರೋಮಾಂಚಕ ದೃಶ್ಯಗಳ ಮೂಲಕ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. CMF ಫೋನ್ 1 ಹೊಂದಿಕೊಳ್ಳಬಲ್ಲ ವಿನ್ಯಾಸವನ್ನು ಹೊಂದಿದ್ದು, ವಿವಿಧ ಬಣ್ಣಗಳು, ವಸ್ತುಗಳು ಮತ್ತು ಫಿನಿಶ್‌ಗಳ ಪರಸ್ಪರ ಬದಲಾಯಿಸಬಹುದಾದ ಕವರ್‌ಗಳ ಮೂಲಕ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ 14 ಮತ್ತು ನಥಿಂಗ್ OS 2.6 ಚಾಲಿತ CMF ಫೋನ್ 1 ಅನ್ನು ಗ್ರಾಹಕರು ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಕೇವಲ ₹12,999 ಗೆ ಖರೀದಿಸಬಹುದು.

CMF ವಾಚ್ ಪ್ರೊ:
CMF ವಾಚ್ ಪ್ರೊ ಸ್ಲೀಕ್ ಅಲ್ಯೂಮಿನಿಯಂ ಅಲಾಯ್ ಚೌಕಟ್ಟು ಮತ್ತು 1.96-ಇಂಚಿನ AMOLED ಡಿಸ್‌ಪ್ಲೇ ಹಾಗೂ ಅಲ್ಯೂಮಿನಿಯಂ ಅಲಾಯ್ ಚೌಕಟ್ಟು ಮತ್ತು ಸುಗಮ ಕಾರ್ಯಕ್ಷಮತೆಗಾಗಿ 58 fps ದರವನ್ನು ಹೊಂದಿದೆ.  GPS, 110 ಸ್ಪೋರ್ಟ್ ಮೋಡ್‌ಗಳು ಮತ್ತು ಹೃದಯ ಬಡಿತ (ಹಾರ್ಟ್ ರೇಟ್) ಮತ್ತು ರಕ್ತದ ಆಮ್ಲಜನಕದ (ಬ್ಲಡ್ ಆಕ್ಸಿಡನ್) ಮಟ್ಟ ಸೇರಿದಂತೆ ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಬೆಂಬಲಿಸುತ್ತದೆ. ವಾಚ್ 13 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಅದರ IP68 ರೇಟಿಂಗ್ ನೀರಿನ ಪ್ರತಿರೋಧವನ್ನು ಖಾತ್ರಿಗೊಳಿಸುತ್ತದೆ. AI ತಂತ್ರಜ್ಞಾನವು ಅದರ ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್ ಮೂಲಕ ನಾಯ್ಸ್ ರಿಡಕ್ಷನ್ ಜೊತೆಗೆ ಕರೆ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. CMF ವಾಚ್ ಪ್ರೊ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಅತ್ಯಂತ ಕನಿಷ್ಠ ₹2,499, ಬೆಲೆಗೆ ಲಭ್ಯವಿದೆ. 
ಮೊಟ್ಟ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ನಥಿಂಗ್ ಇಯರ್ ಬಡ್ಸ್ ಬಿಡುಗಡೆ!

click me!