ಉದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟ ರಾಮಶ್ವೇರಂ ಕೆಫೆ- ರುಚಿ ರುಚಿಯಾದ ಆಹಾರ ಸವಿಯಲು ರೆಡಿಯಾಗಿ

By Mahmad Rafik  |  First Published Oct 13, 2024, 9:07 AM IST

ದಕ್ಷಿಣ ಭಾರತದ ಪ್ರಸಿದ್ಧ ರಾಮೇಶ್ವರಂ ಕೆಫೆ ಹೊಸ ಹೆಜ್ಜೆಯನ್ನು ಇರಿಸಿದೆ. ನೀವು ಇದ್ದ ಸ್ಥಳಕ್ಕೆ ರಾಮೇಶ್ವರಂ ಕೆಫೆಯೇ ಬರಲಿದೆ.


ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆ ಹೊಸ ಹೆಜ್ಜೆ ಇರಿಸಿದೆ. ಹೌದು, ಇನ್ಮುಂದೆ ರಾಮೇಶ್ವರಂ ಕೆಫೆಯ ಆಹಾರ ನಿಮ್ಮ ಬಳಿಯೇ ಬರಲಿದೆ. ಹಾಗಾಗಿ ರಾಮೇಶ್ವರಂ ಕೆಫೆ ಹುಡುಕಿಕೊಂಡು ಸನ್ನಿವೇಶ ಎದುರಾಗಲ್ಲ. ರಾಮೇಶ್ವರಂ ಕೆಫೆ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದು, ನಿಮ್ಮ ಬಳಿ ಬರಲು ಸಿದ್ಧವಾಗಿದೆ. ರೆಸಿಡೆನ್ಸಿಯಲ್ ಸೊಸೈಟಿ, ಟೆಕ್ ಪಾರ್ಕ್, ಖಾಸಗಿ ಕಾರ್ಯಕ್ರಮ ಸೇರಿದಂತೆ ಹಲವೆಡೆ ರಾಮೇಶ್ವರಂ ಕೆಫೆಯ ಫುಡ್ ಟ್ರಕ್ ಬರುತ್ತದೆ. ಇದಕ್ಕಾಗಿ ನೀವು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು ಎಂದು ರಾಮೇಶ್ವರಂ ಕೆಫೆ ಮಾಹಿತಿ ನೀಡಿದೆ. 

ಆಯುಧ ಪೂಜೆಯಂದು ಫುಡ್‌ ಟ್ರಕ್‌ಗೆ ಪೂಜೆ ಸಲ್ಲಿಸಿರುವ ವಿಡಿಯೋವನ್ನು ರಾಮೇಶ್ವರಂ ಕೆಫೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ರಾಮೇಶ್ವರಂ ಕೆಫೆ ಬೆಂಗಳೂರಿನಲ್ಲಿ ಮೂರು ಬ್ರ್ಯಾಂಚ್‌ಗಳನ್ನು ಹೊಂದಿದೆ. ಬೆಂಗಳೂರಿನ ಇಂದಿರಾನಗರ, ಜೆಪಿ ನಗರ ಮತ್ತು ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯ ಹೋಟೆಲ್‌ಗಳಿವೆ. ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಮದುವೆಯಲ್ಲಿ ರಾಮೇಶ್ವರಂ ಕೆಫೆಯ ಪರಿಮಳ ಬಹುತೇಕ ಅತಿಥಿಗಳ ಗಮನವನ್ನು ಸೆಳೆದಿತ್ತು. 

Latest Videos

undefined

ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಉಗ್ರರು ಸ್ಪೋಟ ನಡೆಸಿದ್ದರು. ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಸಂಚುಕೋರ ಅಬ್ದುಲ್ ಮತೀನ್ ತಾಹಾನನ್ನು ಏಪ್ರಿಲ್ 19 ರಂದು ಕೋಲ್ಕತಾದಲ್ಲಿ ಎನ್‌ಐಎ ಬಂಧಿಸಿತ್ತು. 

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!

ಮಾ.1 ರಂದು ರಾಮೇಶ್ವರಂ ಕೆಫೆಗೆ ತಮಿಳುನಾಡು ಕಡೆಯಿಂದಲೇ ಮುಸಾವೀರ್ ಹುಸೇನ್ ಶಾಜಿಬ್‌ ಬಂದಿದ್ದ. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿಳಿದು ಅಲ್ಲಿಂದ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಆತ ಪ್ರಯಣಿಸಿದ್ದ. ಈ ಸಂಗತಿ ಬಿಬಿಎಂಟಿಸಿ ಬಸ್ಸಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಬೆಳಕಿಗೆ ಬಂದಿತ್ತು ಎಂದು ಮೂಲಗಳು ಹೇಳಿವೆ. ನಂತರ ಮುಸಾವೀರ್ ನನ್ನು ರಾಮೇಶ್ವರಂ ಕೆಫೆಗೆ ಕರೆದುಕೊಂಡು ಬಂದು ಪರಿಶೀಲನೆ ಸಹ ನಡೆಸಲಾಗಿತ್ತು.

ಕಳೆದ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದ ದಿನ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಬಾಂಬ್‌ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಸಂಚು ರೂಪಿಸಿ ಮಾ.1ರಂದು ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಟಾರ್ಗೆಟ್ ಬಿಜೆಪಿ ಕಚೇರಿ.. ಬ್ಲಾಸ್ಟ್ ಆಗಿದ್ದು ರಾಮೇಶ್ವರಂ ಕೆಫೆ..! NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಯಲು..!

 
 
 
 
 
 
 
 
 
 
 
 
 
 
 

A post shared by Rajas Jain (@rjrajas)

click me!