ಉದ್ಯಮ ಲೋಕದ ಅಮೂಲ್ಯ ರತ್ನ ರತನ್ ಟಾಟಾರಿ​ಗೆ 11 ಸಾವಿರ ವಜ್ರಗಳ ನಮನ: ವಿಡಿಯೋಗೆ ಆನಂದಬಾಷ್ಪ

By Suchethana D  |  First Published Oct 12, 2024, 4:50 PM IST

 ಉದ್ಯಮ ಲೋಕದ ಕೊಹಿನೂರು ಡೈಮಂಡ್ ಎಂದೇ ವಿಶ್ವಖ್ಯಾತಿ ಪಡೆದಿರುವ ರತನ್​ ಟಾಟಾ ಅವರಿಗೆ ಸೂರತ್​ನ ಉದ್ಯಮಿಯೊಬ್ಬರು  11 ಸಾವಿರ ವಜ್ರಗಳ ನಮನ ಸಲ್ಲಿಸಿದ್ದು ವಿಡಿಯೋ ವೈರಲ್​ ಆಗಿದೆ.
 


ಉದ್ಯಮ ಲೋಕದ ಧ್ರುವತಾರೆ ರತನ್​ ಟಾಟಾ ವಿಧಿವಶರಾಗಿದ್ದು, ಅವರ ಬಗ್ಗೆ ಒಂದೊಂದೇ ಕುತೂಹಲದ ಕಥೆಗಳು ಹೊರ ಬೀಳುತ್ತಲೇ ಇವೆ. ಸ್ವಾರ್ಥಕ್ಕಾಗಿ ಏನನ್ನೂ ಮಾಡದೇ ಸಮಾಜ ಕಲ್ಯಾಣದ ಧ್ಯೇಯವನ್ನೇ ಗುರಿಯಾಗಿಟ್ಟುಕೊಂಡು ಅವರು ಮಾಡಿರುವ ಸಹಸ್ರಾರು ಕೈಂಕರ್ಯಗಳ ಕುರಿತು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಲೇ ಇದ್ದಾರೆ. ಇದೀಗ ಸೂರತ್ ವ್ಯಾಪಾರಿಯೊಬ್ಬರು ರತನ್ ಟಾಟಾ  ಅವರ ವಜ್ರದ ಭಾವಚಿತ್ರವನ್ನು ಮಾಡಿದ್ದಾರೆ. 11 ಸಾವಿರ ವಜ್ರದ ಹರಳಿನಲ್ಲಿ ವ್ಯಾಪಾರ ಪ್ರಪಂಚದ ಕೊಹಿನೂರು ವಜ್ರ ಎಂದೇ ಬಿಂಬಿತರಾಗಿರುವ ರತನ್​ ಟಾಟಾ ಅವರ ಭಾವಚಿತ್ರವನ್ನು ತಯಾರಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಇವರು ನಿಜಕ್ಕೂ ಕೊಹಿನೂರು ವಜ್ರಕ್ಕಿಂತಲೂ ಅಮೂಲ್ಯವಾದ ರತ್ನ ಎಂದೇ ಎಲ್ಲರೂ ಬಣ್ಣಿಸುತ್ತಿದ್ದಾರೆ. 

ಅಷ್ಟಕ್ಕೂ ರತನ್​ ಟಾಟಾ ಅವರು, ನಾನು ಆರೋಗ್ಯವಾಗಿದ್ದೇನೆ, ಯಾರೂ ಭಯಪಡಬೇಡಿ ಎನ್ನುತ್ತಲೇ ಇಹಲೋಕ ತ್ಯಜಿಸಿದರು.  ಪ್ರೀತಿಸಿದ ಯುವತಿಯ ಕೈಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಬದುಕಿನುದ್ದಕ್ಕೂ ಅವಿವಾಹಿತರಾಗಿಯೇ ಉಳಿದ ರತನ್​ ಟಾಟಾ ಅವರ ಬಾಲ್ಯವೂ ನೋವಿನಿಂದ ಕೂಡಿದ್ದೇ.  ಅಪ್ಪ - ಅಮ್ಮ ಬದುಕಿದ್ದರೂ, ದೊಡ್ಡ ಆಸ್ತಿವಂತರಾಗಿದ್ದರೂ ಅನಾಥಾಶ್ರಮದಲ್ಲೇ ಬೆಳೆದಿದ್ದ ರತನ್ ಟಾಟಾ. ರತನ್​ ಟಾಟಾ ಅವರು ಓರ್ವ ದತ್ತು ಪುತ್ರನಾಗಿ ಬೆಳೆದು ಬಂದವರು. ಹಾಗೆಂದು ಇವರಿಗೆ ಅಪ್ಪ-ಅಮ್ಮ ಇರಲಿಲ್ಲವೇ ಎಂದು ಪ್ರಶ್ನಿಸಿದರೆ, ಅದು ಕೂಡ ತಪ್ಪಾಗುತ್ತದೆ. ಏಕೆಂದ್ರೆ ಇವರಿಗೆ ಅಪ್ಪ-ಅಮ್ಮ ಇಬ್ಬರೂ ಇದ್ದರು. ಆದರೂ ಅನಾಥಾಶ್ರಮ ಸೇರಿದರು. ಕೊನೆಗೆ ಅಜ್ಜಿ ಇವರನ್ನು ಅನಾಥಾಶ್ರಮದಿಂದ ದತ್ತು ಪಡೆದು ಸಾಕಿದರು!

Tap to resize

Latest Videos

undefined

ಅಪ್ಪ-ಅಮ್ಮ ಡಿವೋರ್ಸ್​ ಬಳಿಕ ಅನಾಥಾಶ್ರಮ ಸೇರಿದ್ದ ರತನ್​ ಟಾಟಾ ದತ್ತು ಪುತ್ರನಾಗಿ ಬೆಳೆದದ್ದೇ ಕುತೂಹಲ!

ಇಂಥ ದೊಡ್ಡ ಉದ್ಯಮ ಸ್ಥಾಪಿಸಿ ಇಡೀ ವಿಶ್ವದಲ್ಲಿಯೇ ಖ್ಯಾತಿ ಪಡೆದಿರುವ ರತನ್​ ಟಾಟಾ ಅವರ ಬಾಲ್ಯದ್ದು ನೋವಿನ ಕಥೆ. 1937ರ ಡಿಸೆಂಬರ್ 28ರಂದು ಜನಿಸಿದ ರತನ್​ ಅವರು, ಹುಟ್ಟಿದ್ದು  ನಾವಲ್ ಟಾಟಾ ಹಾಗೂ ಸೂನಿ ಟಾಟಾ ಅವರ ಪುತ್ರನಾಗಿ. ಆದರೆ ರತನ್​ ಅವರು ಕೇವಲ ಹತ್ತು ವರ್ಷದವರಿರುವಾಗಿ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡರು. ಮಗನನ್ನು ಯಾರು ನೋಡಿಕೊಳ್ಳುವುದು ಎಂಬ ಬಗ್ಗೆ ಪತಿ-ಪತ್ನಿಯರಲ್ಲಿ ಕಚ್ಚಾಟ ಶುರುವಾಯಿತು. ಬಹುಶಃ ಇಬ್ಬರಿಗೂ ಮಗನನ್ನು ಇಟ್ಟುಕೊಳ್ಳುವ ಇಚ್ಛೆ ಇರಲಿಲ್ಲವೋ, ಇನ್ನೇನು ಕಾರಣವೋ ಅಥವಾ ದೈವಲೀಲೆಯೋ ಗೊತ್ತಿಲ್ಲ. ಪಾಲಕರು ರತನ್​ ಅವರನ್ನು ತಮ್ಮದೇ ಕುಟುಂಬದ  ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟುಬಿಟ್ಟರು. ಇದನ್ನು ನೋಡಲಾಗದ ಅವರ ಅಜ್ಜಿ  ನವಾಜ್​ ಬಾಯಿ ಟಾಟಾ ಅವರು ರತನ್​ ಟಾಟಾ ಅವರುನ್ನು ಔಪಚಾರಿಕವಾಗಿ ದತ್ತು ಪಡೆದರು. ರತನ್ ಟಾಟಾ ಅವರ ತಾತ, ಭಾರತ ರತ್ನ ಜೆಆರ್ ಡಿ ಟಾಟಾ ಅವರ ಪತ್ನಿ ನವಾಜ್ ಬಾಯಿ. ಹೀಗೆ ರತನ್​ ಟಾಟಾ ಬೆಳೆದರು.

ಆದರೆ, ಅಷ್ಟೊತ್ತಿಗಾಗಲೇ  ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಮತ್ತೊಂದು ಮದುವೆಯಾಗಿ  ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಕೊನೆಗೆ ಅಜ್ಜಿ, ಮನೆಗೆ ಹಿಂದುರಿಗದರು. ಅಜ್ಜಿಯ ದತ್ತು ಪುತ್ರನಾಗಿಯೇ ಕಾನೂನಾತ್ಮಕವಾಗಿ ಇದ್ದರೂ ತನ್ನ ಮಲತಾಯಿಯ ಮಗನ ಜೊತೆ ಬೆಳೆದರು. ಹೀಗೆ ಇವರ ಕಥೆ ವಿಚಿತ್ರವಾಗಿದೆ. 

ರತನ್​ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!

click me!