ಫೆಸ್ಟಿವಲ್ ಸೇಲ್ ಮಿಸ್ ಮಾಡಿಕೊಂಡ್ರಾ? ಇದೀಗ 27,000 ರೂ ಡಿಸ್ಕೌಂಟ್‌ನಲ್ಲಿ ಐಫೋನ್ 15 ಲಭ್ಯ!

Published : Oct 12, 2024, 07:06 PM IST
ಫೆಸ್ಟಿವಲ್ ಸೇಲ್ ಮಿಸ್ ಮಾಡಿಕೊಂಡ್ರಾ? ಇದೀಗ 27,000 ರೂ ಡಿಸ್ಕೌಂಟ್‌ನಲ್ಲಿ ಐಫೋನ್ 15 ಲಭ್ಯ!

ಸಾರಾಂಶ

ಆನ್‌ಲೈನ್ ಘೋಷಿಸಿದ ಫೆಸ್ಟಿವಲ್ ಸೇಲ್ ಆಫರ್ ಮಿಸ್ ಮಾಡಿಕೊಂಡಿದ್ದೀರಾ? ಇದೀಗ ಹೊಸ ಆಫರ್ ಘೋಷಣೆಯಾಗಿದೆ. 27,000 ರೂಪಾಯಿ ಡಿಸ್ಕೌಂಟ್ ಬೆಲೆಯಲ್ಲಿ ಐಫೋನ್ 15 ಲಭ್ಯವಿದೆ. ಇದು ಸೀಮಿತ ಅವಧಿಯ ಆಫರ್.

ಬೆಂಗಳೂರು(ಅ.12)  ಬಿಗ್ ಬಿಲಿಯನ್ ಡೇಸ್ ಆಫರ್ ಮುಗಿದ ಬಳಿಕ ಇದೀಗ ಹೊಸ ಐಫೋನ್ ಖರೀದಿಸಲು ಬಯಸುತ್ತಿದ್ದೀರಾ? ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಇದೀಗ ಐಫೋನ್ 15 ಮೇಲೆ ಬರೋಬ್ಬರಿ 27,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಈ ಮೂಲಕ ಐಫೋನ್ 15 ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಪ್ಲಿಪ್‌ಕಾರ್ಟ್ ಇದೀಗ ಮತ್ತೊಂದು ಮೆಘಾ ಸೇಲ್ ಆರಂಭಿಸಿದೆ. ಬಿಗ್ ಶಾಪಿಂಗ್ ಉತ್ಸವ ಮೂಲಕ ಐಪೋನ್ 15 ಖರೀದಿಸಲು ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಫರ್ ಲಭ್ಯವಿದೆ. ಈ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿ ಸಾಧ್ಯವಿದೆ. ಇದು ಸೀಮಿತ ಅವಧಿಯ ಆಫರ್.

ಇತ್ತೀಚೆಗೆ ಆ್ಯಪಲ್ ಭಾರತದಲ್ಲಿ ಐಫೋನ್ 16 ಸೀರಿಸ್ ಬಿಡುಗಡೆ ಮಾಡಿತ್ತು. ಈ ಪೋನ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.  ಇನ್ನು 2023ರಲ್ಲಿ ಐಫೋನ್ 15 ಬಿಡುಗಡೆಯಾಗಿದೆ. 79,900 ರೂಪಾಯಿಗೆ 2023ರಲ್ಲಿ ಐಫೋನ್ 15 ಬಿಡುಗಡೆಯಾಗಿತ್ತು. ಆದರೆ ಐಫೋನ್ 16 ಸೀರಿಸ್ ಬಿಡುಗಡೆಯಿಂದ ಐಫೋನ್ 15 ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿತ್ತು. ಇದೀಗ ಫ್ಲಿಪ್‌ಕಾರ್ಟ್ ಉತ್ಸವ್ ಸೇಲ್ ಅಡಿಯಲ್ಲಿ 27,000 ರೂಪಾಯಿ ಕಡಿತ ಮಾಡುತ್ತಿದೆ. ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಫೋನ್‌ನಲ್ಲಿ ಆಫರ್ ಲಭ್ಯವಿದೆ.

ಸ್ವಿಸ್ ಜನಕ್ಕೆ ನಾಲ್ಕೇ ದಿನ, ಐಫೋನ್ 16 ಖರೀದಿಗೆ ಭಾರತೀಯರು ಸರಾಸರಿ ಎಷ್ಟು ದಿನ ಕೆಲಸ ಮಾಡಬೇಕು?

ಐಫೋನ್ 15 ಬೆಲೆ ಸದ್ಯ ಭಾರತದಲ್ಲಿ 69,900 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಆದರೆ ಫ್ಲಿಪ್‌ಕಾರ್ಟ್ ಉತ್ಸವ್ ಸೇಲ್ ಅಡಿಯಲ್ಲಿ ಕೇವಲ 52,499 ರೂಪಾಯಿಗೆ ಖರೀದಿಸಲು ಸಾಧ್ಯ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಬೆಲೆಯನ್ನು 57,999 ರೂಪಾಯಿಗೆ ಕಡಿತ ಮಾಡಲಾಗಿದೆ. ಇದರ ಜೊತೆಗೆ ಬ್ಯಾಂಕ್ ಕಾರ್ಡ್ ಆಫರ್ ಲಭ್ಯವಿದೆ. 3,000 ರೂಪಾಯಿ ಬ್ಯಾಂಕ್ ಕಾರ್ಡ್ ಆಫರ್ ಲಭ್ಯವಿದ್ದರೆ, ಹಳೇ ಫೋನ್ ಎಕ್ಸ್‌ಜೇಂಜ್ ಮೂಲಕ ಫ್ಲಿಪ್‌ಕಾರ್ಟ್‌ನಿಂದ 2,000 ರೂಪಾಯಿ ಡಿಸ್ಕೌಂಟ್ ಆಫರ್ ಪಡೆಯಲು ಸಾಧ್ಯವಿದೆ. ಈ ಮೂಲಕ ಐಫೋನ್ 15 ಬೆಲೆ 52,499 ರೂಪಾಯಿಗೆ ಲಭ್ಯವಿದೆ.

ಐಫೋನ್ 15 ಪ್ಲಸ್ ಫೋನ್ ಬೆಲೆ 65,999 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್ ಮೂಲಕ 55,999 ರೂಪಾಯಿಗೆ ಖರೀದಿಸಲು ಸಾಧ್ಯ. ಇಷ್ಟೇ ಅಲ್ಲ ನಿರ್ದಿಷ್ಟ ಬ್ಯಾಂಕ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಗರಿಷ್ಠ 4,750 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಬೋನಸ್ 1,000 ರೂಪಾಯಿ ನೀಡುತ್ತಿದೆ. 

ಕೇವಲ 27,000 ರೂಗೆ ಐಫೋನ್ 16 ಖರೀದಿ, ನಿಮಗೂ ಸಾಧ್ಯ ಎಂದ ಬಳಕೆದಾರ!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!