ನನಸಾಗುತ್ತಿದೆ ಪ್ರಧಾನಿ ಮೋದಿ ಕಂಡಿದ್ದ ಕನಸು!

By Santosh NaikFirst Published Sep 4, 2022, 3:49 PM IST
Highlights

ವಿಶ್ವದ ಅತೀದೊಡ್ಡ ಆರ್ಥಿಕತೆಯ ಸಾಲಿನಲ್ಲಿ ಇಂದು ಭಾರತ ಬ್ರಿಟನ್‌ ದೇಶವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ. ಇದು ದೇಶದ ಪಾಲಿಗೆ ಅತೀದೊಡ್ಡ ಸುದ್ದಿ, ಆದರೆ, ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯ ಕಿರೀಟ ಭಾರತಕ್ಕೆ ಸಿಕ್ಕಿದ್ದು ಹೇಗೆ? ಮೋದಿ ಕಂಡಿದ್ದ ಕನಸು ನನಸಾಗಲು ಇನ್ನೆಷ್ಟು ದಿನ ಬಾಕಿ. ದೇಶದಲ್ಲಿ ಜಿಡಿಪಿ ಜಿಗಿದಿದೆ. ನಿರುದ್ಯೋಗ ಕುಸಿದಿದೆ. ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ. 5ನೇ ಅತಿದೊಡ್ಡ ಆರ್ಥಿಕೆ ಎನಿಸಿಕೊಳ್ಳಲು ಭಾರತಕ್ಕೆ ವರವಾಗಿದ್ದೇನು?

ಬೆಂಗಳೂರು (ಸೆ. 4):  2021ರ ಅಂತಿಮ ತ್ರೈಮಾಸಿಕ ವರದಿಯ ಪ್ರಕಾರ ಭಾರತ ಬ್ರಿಟನ್‌ ದೇಶವನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.. ಅದೂ ಅಲ್ಲದೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೊಟ್ಟಿರೋ ಜಿಡಿಪಿ ಅಂಕಿಅಂಶಗಳ ಪ್ರಕಾರ, ಭಾರತ ಮೊದಲ ತ್ರೈಮಾಸಿಕದಲ್ಲಿ  ಮುನ್ನಡೆ  ಸಾಧಿಸಿದೆ.. ಈ ಮೂಲಕ ಬ್ರಿಟನ್ ಆರ್ಥಿಕತೆಯನ್ನ ಹಿಂದಿಕ್ಕಿ 5ನೇ ಸ್ಥಾನ ದಕ್ಕಿಸಿಕೊಂಡಿದೆ. ಹಾಗಾದರೆ, ಈ ಪಟ್ಟಿಯಲ್ಲಿ ಇರುವ ಮೊದಲ ನಾಲ್ಕು ದೇಶಗಳು ಯಾವವು ಎಂದರೆ, ಅಮೆರಿಕ, ಚೀನಾ, ಜಪಾನ್‌ ಹಾಗೂ ಜರ್ಮನಿ. ಅತಿದೊಡ್ಡ ಆರ್ಥಿಕತೆ ಹೊಂದಿರೋ ದೇಶಗಳ ಪಟ್ಟಿಯಲ್ಲಿ  ಹಿರಿಯಣ್ಣ ಅಂತ ಕರೆದುಕೊಳ್ಳೋ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ..  ಚೀನಾ ಎರಡನೇ ಸ್ಥಾನದಲ್ಲಿ ಪಟ್ಟು ಬಿಡದೆ ಕೂತಿದೆ..  ಜಪಾನ್ 3ನೇ ಸ್ಥಾನದಲ್ಲಿದ್ರೆ, ಜರ್ಮನಿ 4ನೇ ಸ್ಥಾನ ಉಳಿಸಿಕೊಂಡಿದೆ.. ಆದ್ರೆ ಈ ಎಲ್ಲಾ ದೇಶಗಳು ಇದ್ದಲ್ಲೇ ಇದ್ರೆ, ಭಾರತ ಮಾತ್ರ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ.. ಆ 5ನೇ ಸ್ಥಾನದಲ್ಲಿದ್ದ ಬ್ರಿಟನ್ ಈಗ 6ನೇ ಸ್ಥಾನಕ್ಕೆ ಕುಸಿದಿದೆ.ಡಾಲರ್‌ ವಿನಿಮಯ ದರ ಲೆಕ್ಕ ಹಾಕಿ ನೋಡಿದ್ರೆ ಭಾರತದ ಆರ್ಥಿಕತೆ ಗಾತ್ರ 854.7 ಬಿಲಿಯನ್ ಡಾಲರ್‌ ಆಗಿದ್ರೆ ಯುನೈಟೆಡ್ ಕಿಂಗ್‌ಡಮ್‌ ಆರ್ಥಿಕತೆ 816 ಬಿಲಿಯನ್ ಡಾಲರ್‌ ಆಗಿದೆ ಅಂತ ವರದಿ ಹೇಳ್ತಾ ಇದೆ.

ಸುಮಾರು ಹತ್ತು ವರ್ಷಗಳ ಹಿಂದೆ,  ಇದೇ ಭಾರತ ಈ ಪಟ್ಟಿಯಲ್ಲಿ  11ನೇ ಸ್ಥಾನದಲ್ಲಿತ್ತು. ಬ್ರಿಟನ್ 5ನೇ ಸ್ಥಾನದಲ್ಲಿತ್ತು. ಈ ಟಾಪ್ 5 ದೇಶಗಳ ಲಿಸ್ಟ್ ಚೇಂಜ್ ಆಗಿದ್ದೇ ಇಲ್ಲ.. ಆದ್ರೆ, ಕಳೆದೊಂದು ದಶಕದಲ್ಲಿ ಭಾರತ, ಪ್ರಗತಿಪಥ ಹಿಡಿದಿತ್ತು. ಜಿದ್ದಿಗೆ ಬಿದ್ದಂತೆ ಅಭಿವೃದ್ಧಿ ಹೊಂದಿತ್ತು. ವರ್ಷದಿಂದ ವರ್ಷಕ್ಕೆ ತನ್ನ ಸ್ಥಾನ ಹೆಚ್ಚಿಸಿಕೊಳ್ತಲೇ ಬಂದ ಭಾರತ, ಕಡೆಗೂ 5ನೇ ಸ್ಥಾನದಲ್ಲಿ ಮಿಂಚುತ್ತಿದೆ.

ಏರಿಕೆಯಾಗಿತ್ತು ದೇಶದ ಜಿಡಿಪಿ, ಗುರಿ ಮುಟ್ಟದಿದ್ದರೂ ಸಾಧನೆ ಅಗಾಧ: ಕೆಲವೇ ದಿನಗಳ ಹಿಂದೆ, ಏಪ್ರಿಲ್‌ -ಜೂನ್‌ ಅವಧಿಯ ಜಿಡಿಪಿ (GDP) ವರದಿ ಬಂದಿತ್ತು. ಆ ವರದಿಯ ಪ್ರಕಾರ, ಒಟ್ಟಾರೆ ದೇಶೀಯ ಉತ್ಪನ್ನ ಬೆಳವಣಿಗೆ (gross domestic product) ಶೇಕಡ 13.5 ರಷ್ಟು ಏರಿಕೆಯಾಗಿತ್ತು. ಆದರೆ, ಮೊದಲ ಹಣಕಾಸು ವರ್ಷದಲ್ಲಿ ಆರ್‌ಬಿಐ (RBI) ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಅಂತ ಅಂದಾಜಿಸಿತ್ತು. ಆ ಅಂದಾಜನ್ನು ಮುಟ್ಟದೇ ಇದ್ದರೂ, ಭಾರತ ಭರ್ಜರಿಯಾಗೇ ಮುಂದುವರೆದಿತ್ತು. ಬೇರೆ ದೇಶಗಳೆಲ್ಲಾ ಆರ್ಥಿಕತೆ ಸುಧಾರಣೆ ಸರಿಯಾದ ಮಾರ್ಗ ಏನು ಅಂತ ಕಾಯುತ್ತಿದ್ದರೆ, ಭಾರತ ಮಾತ್ರ ಮಿಂಚಿನವೇಗದಲ್ಲಿ ಮುನ್ನುಗ್ಗಿತ್ತು. ಅಷ್ಟೇ ಅಲ್ಲ, ಈ ಹಿಂದೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಥವಾ ಐಎಮೆಫ್‌ ಮತ್ತು ವಿಶ್ವಬ್ಯಾಂಕ್ ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಭಾರತದ ಬೆಳವಣಿಗೆ ಅತ್ಯಂತ ವೇಗವಾಗಿರಲಿದೆ ಅಂತ ಅಂದಾಜು ಮಾಡಿ ಮಾಡಿವೆ. ಈಗಿನ ಭಾರತದ ವೇಗ ನೋಡುತ್ತಿದ್ದರೆ, ಈ ಮಾತು ನಿಜವಾಗೋ ಸಮಯ ಬಂದೇ ಬಿಟ್ಟಿದೆ ಎಂದನಿಸೋದು ಸಹಜ.

Indian Economy: ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಭಾರತ ಸಾಧಿಸಿದ್ದೇನು?

ಭಾರತದ ಸ್ಪೀಡ್ಗೆ ಚೀನಾಗೂ ನಡುಕ, ಭಾರತದ ಆರ್ಭಟಕ್ಕೆ ಡ್ರ್ಯಾಗನ್ ಗಡಗಡ: ಭಾರತದ ಆರ್ಥಿಕತೆಯ ಅಭಿವೃದ್ಧಿ ಹೋರಾಟಕ್ಕೆ ಯಾರಾದರೂ ಕಠಿಣ ಎದುರಾಳಿ ಅಂತಿದ್ದರೆ, ಅದು ಚೀನಾ. ಈಗ ಭಾರತದ ಅಭಿವೃದ್ಧಿ ಚೀನಾಗೇ ನಡುಕ ಹುಟ್ಟಿಸಿದೆ. ಯಾಕೆಂದರೆ, ಭಾರತದ ಆರ್ಥಿಕತೆ ನಾಗಾಲೋಟದಲ್ಲಿ ಸಾಗುತ್ತಿದ್ದರೆ,  ಚೀನಾ (China) ಆರ್ಥಿಕತೆ (Economy) ಮಂದಗತಿಯಲ್ಲಿ ತೆವಳುತ್ತಿದೆ. ಚೀನಾ ಆರ್ಥಿಕತೆ ಹಿಂದೆ ಬಿದ್ದಿದ್ದರೆ,  ಭಾರತ ಎಲ್ಲಾ ದೇಶಗಳನ್ನೂ ಬದಿಗೆ ಸರಿಸಿ, ಟಾಪ್ 5 ಪಟ್ಟಕ್ಕೆ ಬಂದು ಕುಳಿತಿದೆ.

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಕೇವಲ ಚೀನಾ ಅಂತಲ್ಲಾ, ಬಹುತೇಕ ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆ ಕೂಡ ಅಪಾಯದಲ್ಲಿವೆ. ಅಥವಾ, ಕೊರೊನಾ ಬಳಿಕ ಮತ್ತೆ ಸರಿದಾರಿಗೆ ಬರೋಕೆ ಪರದಾಡುತ್ತಿವೆ. ಆಗಿರೋ ಅನಾಹುತದಿಂದ ಆಚೆ ಬರೋಕೆ ಹೆಣಗಾಡುತ್ತಿವೆ. ಹೀಗಿರುವಾಗ  ಭಾರತದ ಈ ವರ್ಷದ ಆರ್ಥಿಕತೆ ಉತ್ತಮ ಗಳಿಕೆ ಕಂಡಿದೆ. ಇದನ್ನ ನೋಡಿನೇ ಎಷ್ಟೋ ದೇಶಗಳು ಅಚ್ಚರಿಯಲ್ಲಿವೆ. ಭಾರತದ ಜಿಡಿಪಿ ಬಗ್ಗೆ ತಿಳಿದುಕೊಂಡಿದ್ದೇವೆ. ಭಾರತ ಶೇ.13.5% ರಷ್ಟು ಪ್ರಗತಿ ದಾಖಲಿಸಿದ್ದರೆ,  ಚೀನಾ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ.. ಇಡೀ ಜಗತ್ತಿಗೆ ಕೊರೊನಾ ಅಂಟಿಸಿ, ತಾನು ಮಾತ್ರ ಸೇಫ್ ಅಂತ ಭ್ರಮಿಸಿದ್ದ ಚೀನಾ, ಇವತ್ತು ಆರ್ಥಿಕ ಮುನ್ನಡೆ ಸಾಧಿಸೋಕೆ ತಿಪ್ಪರಲಾಗ ಹಾಕುತ್ತಿದೆ. ಭಾರತ ಆ ಚಾಲೆಂಜ್‌ಅನ್ನು ಸಮರ್ಥವಾಗಿ ನಿಭಾಯಿಸಿ, ಹೊಸ ಭಾಷ್ಯ ಬರೆದಿದೆ.

click me!