ದಾಂಪತ್ಯದ ಬಗ್ಗೆ ಏನೇ ಕಲ್ಪನೆಗಳಿರಲಿ, ಭಾರತದಲ್ಲಿ ಈ ಬಾಂಧವ್ಯಕ್ಕೆ ತನ್ನದೇ ಆದ ಚೌಕಟ್ಟಿದೆ. ದಾಂಪತ್ಯಕ್ಕೆ ಕಾಲಿಟ್ಟ ಜೋಡಿ ಮುಂದಿನ ಭವಿಷ್ಯಕ್ಕಾಗಿ ಹಲವು ಕೆಲಸ ಮಾಡೋದು ಅನಿವಾರ್ಯ. ಯಾವವು?
ಹೆಣ್ಣು-ಗಂಡು ಹಸೆಮಣೆ ಏರಿ ಜೋಡಿಯಾಗುವಾಗ ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಒಂದಾಗಲು ಸಾಮಾಜಿಕ ಲೈಸೆನ್ಸ್ ನೀಡಲಾಗುತ್ತದೆ. ಮೊದ ಮೊದಲು ಎಲ್ಲವೂ ದಾಂಪತ್ಯದಲ್ಲಿ ಚೆಂದವೇ ಇರುತ್ತೆ. ಆದರೆ, ಬರು ಬರುತ್ತಾ ಒಬ್ಬರಿಗೊಬ್ಬರ ವೀಕ್‌ನೆಸ್, ಸ್ಟ್ರೆಂಥ್ ಪರಿಚಯವಾದಂತೆ ಹಲವು ವಿಷಯಗಳು ಅನಾವರಣಗೊಳ್ಳುತ್ತವೆ. ಇಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮುಂದೆ ಸಾಗಬೇಕಾದ ಅನಿವಾರ್ಯತೆಯೂ ಇರುತ್ತೆ. ಅದರಲ್ಲಿಯೂ ಹಣಕಾಸಿನ ವಿಚಾರದಲ್ಲಿ ಮದುವೆಯಾದ ಕೂಡಲೇ ಕೆಲವು ಕೆಲಸಗಳನ್ನು ತಪ್ಪದೇ ಮಾಡಬೇಕು.
ಒಂಟಿ ಜೀವನದಲ್ಲಿ ಬೇಕ್ ಬೇಕಾದ ಹಾಗೆ ಶಾಪಿಂಗ್ (Shopping) ಮಾಡಿ, ಬೇಕ್ ಬೇಕಾದ್ದನ್ನು ಕೊಂಡು, ತಿಂದು ಮಜಾ ಮಾಡಿಯಾಗಿರುತ್ತೆ. ಮದುವೆಯಾದರೂ ನಾನ್ ಬದಲಾಗೋಲಪ್ಪ. ಹೀಗೇ ಇರೋದು ಅಂದ್ರೆ ಆಗೋಲ್ಲ. ನಿತ್ಯ ಜೀವನದ ಶಿಸ್ತಿನಿಂದ ಹಿಡಿದು ಆರ್ಥಿಕ ಶಿಸ್ತಿನವರೆಗೂ (Economic Discipline) ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಜೊತೆಗೆ ತಮ್ಮದೇ ಕಂಫರ್ಟ್ ಝೋನ್ (Comfort Zone) ಸೃಷ್ಟಿಸಿಕೊಳ್ಳಬೇಕು. ಅದಕ್ಕೆ ಕಾರು, ಮನೆ ಅಂತ ಕೊಳ್ಳಬೇಕು. ಫ್ಯೂಚರ್ ದೃಷ್ಟಿಯಿಂದ ಅಗತ್ಯ ವಿಮೆ (Insurance), ಹೂಡಿಕೆ (Investment), ಉಳಿತಾಯ (Savings), ಮಕ್ಕಳ ಶಿಕ್ಷಣ (Education) ಅಂತ ವ್ಯಯಿಸಲು ಪ್ಲ್ಯಾನ್ ಮಾಡಬೇಕು. ಸಾಲು, ಸಾಲು ಹೊಣೆಗಳು ಹೆಗಲಿಗೇರುತ್ತವೆ. ಇದು ಸಹಜವಾಗಿ ಬೇಕಾಬಿಟ್ಟು ಖರ್ಚು ಮಾಡೋದನ್ನು ನಿಯಂತ್ರಿಸುತ್ತದೆ. ಹೊರ ತಿನ್ನೋದು ಕಡಿಮೆಯಾಗುತ್ತೆ. ಮನೆಯಲ್ಲಿಯೇ ತಿನ್ನೋದು ರೂಢಿಯಾಗುತ್ತೆ. ಒಟ್ಟಿನಲ್ಲಿ ಜೀವನಶೈಲಿಯಲ್ಲಿ (Lifestyle) ಹಲವು ಬದಲಾವಣೆಗಳಾಗುತ್ತವೆ. ಬೇಕಾ ಬಿಟ್ಟಿ ಖರ್ಚು ಮಾಡಲು ಕಡಿವಾಣ ಹಾಕಿ ಕೊಳ್ಳಬೇಕು. ವ್ಯವಸ್ಥಿತ, ಯೋಜನಾಬದ್ಧ ಆರ್ಥಿಕ ಪ್ಲ್ಯಾನ್ ಮಾಡುವ ನವ ವಿವಾಹಿತ ಜೋಡಿಗೆ ಇಲ್ಲಿವೆ ಕೆಲವು ಟಿಪ್ಸ್.
ನಮ್ ದುಡ್ಡು, ನಮ್ ಮದುವೆ; ಭಾರತದಲ್ಲಿ ಹೆಚ್ತಿದೆ ಸ್ವಂತ ಹಣದಲ್ಲೇ ನಡೆಯೋ ವೆಡ್ಡಿಂಗ್
ಆರ್ಥಿಕ ನಿಲುವು ಫರ್ಮ್ ಆಗಿರಲಿ
ನಿಮ್ಮ ಆದಾಯಕ್ಕೆ (Income) ತಕ್ಕಂತೆ ಕೆಲವು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಂಥ ನಿಮ್ಮ ಕಂಫರ್ಟ್ ಝೋನ್ ಹಾಗೂ ಖುಷಿಯೊಂದಿಗೆ ಕಾಂಪ್ರೋಮೈಸ್ ಆಗಬೇಕೆಂದೇನೂ ಇಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಜೀವನ ಬಿಂದಾಸ್ ಆಗಿರುತ್ತೆ. ಸಂಗಾತಿಯೊಂದಿಗೆ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರಬೇಕು. ಈ ವಿಷಯದಲ್ಲಿ ಗಂಡ ಹೆಂಡತಿಯರಲ್ಲಿ ಯಾರು ಏನಾದರೂ ಮುಚ್ಚಿಡಲು ಯತ್ನಿಸಿದರೂ, ಮುಂದೆ ಕಷ್ಟವಾಗುತ್ತೆ. ಹೆಣ್ಣು ಮಕ್ಕಳು ಮದುವೆ ಬಳಿಕವೂ ತವರಿಗೆ ಸಹಕರಿಸುವುದು ಅನಿವಾರ್ಯವಾದಲ್ಲಿ, ಅದಕ್ಕೆ ಡಿಸ್ಟರ್ಬ್ ಆಗದಂತೆ ನಿಮ್ಮ ಆರ್ಥಿಕ ಯೋಜನೆ ರೂಪುಗೊಳ್ಳಲಿ. ಇದೇ ದಾಂಪತ್ಯದ (Married Life) ಮಿಸ್ ಅಂಡರ್‌ಸ್ಟ್ಯಾಂಡಿಗ್‌ಗೆ ಕಾರಣವಾಗಬಾರದು. ಎಲ್ಲವುದರಲ್ಲಿಯೂ ಮುಚ್ಚು ಮರೆ ಇಲ್ಲದೇ ಹೋದಲ್ಲಿ ಜೀವನ ಸುಸೂತ್ರವಾಗಿ ಸಾಗುತ್ತೆ. ಇಬ್ಬರ ನಡುವೆ ನಡೆಯೋ ಜಗಳ ತಪ್ಪಿಸಲು ಇದು ಈಸಿಯಾಗುತ್ತೆ. ಎಲ್ಲವುಕ್ಕಿಂತ ಮುಖ್ಯವಾಗಿ ಇಬ್ಬರಲ್ಲಿ ಯಾರು ದುಂದುವೆಚ್ಚ ಮಾಡುತ್ತಿದ್ದರೂ, ಮದುವೆಯಾದ ಕೂಡಲೇ ಕಡಿವಾಣ ಹಾಕಿ ಕೊಳ್ಳಬೇಕು. ಇಲ್ಲದಿದ್ದರೆ ಆರ್ಥಿಕ ಸಂಕಟ ಎದುರಾಗಬಹುದು.
ಆರ್ಥಿಕ ಗುರಿ ಇರಲಿ
ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿ ಜೊತೆ ಕೂತು ಚರ್ಚಿಸಿ ಮುಂದುವರಿಯಬೇಕು. ಒಬ್ಬರಿಗೊಬ್ಬರಲ್ಲಿ ಯಾವುದೇ ಮುಚ್ಚುಮರೆ ಇರಬಾರದು. ಖರ್ಚು ಹಾಗೂ ಸೇವಿಂಗ್ಸ್ (Savings) ಬಗ್ಗೆ ಒಮ್ಮತದ ನಿರ್ಧಾರ ನಿಮ್ಮದಾಗಬೇಕು. ಆದಾಯಕ್ಕೆ ತಕ್ಕಂತೆ ಬಜೆಟ್ (Budget) ರೂಪಿಸಿ. ಅಷ್ಟೇ ಅಲ್ಲ ಆರೋಗ್ಯ (Health) ಸೇರಿ ಇತರೆ ತುರ್ತು ಸಂದರ್ಭಗಳು ಎದುರಾದಲ್ಲಿ ವೆಚ್ಚ ಭರಿಸಲು ಅಗತ್ಯ ಠೇವಣಿ (Deposit) ಇರುವಂತೆ ನೋಡಿಕೊಳ್ಳಿ. ಲೈಫ್ ಹೇಗೋ ಏನೋ ಗೆಸ್ ಮಾಡೋದು ಹೇಗೆ? ಎಲ್ಲವಕ್ಕೂ ಸಿದ್ಧರಾಗಿರೋದು ಅನಿವಾರ್ಯ.
ಆಸ್ತಿ, ಸಾಲದ ಮಾಹಿತಿ ಹಂಚಿಕೊಳ್ಳಿ
ಉಳಿತಾಯಕ್ಕಿಂತಲೂ ಮಾಡಿರುವ ಸಾಲದ ಬಗ್ಗೆಯಂತೂ ದಾಂಪತ್ಯದಲ್ಲಿ ಮುಚ್ಚು ಮರೆ ಇರಲೇಬಾರದು. ಕೈಯಲ್ಲಿ ಉಳಿತಾಯ ಮಾಡಿರುವ ಹಣದ ಗಂಟು ಇಲ್ಲದೇ ಹೋದರೂ, ಸಾಲ ಇಲ್ಲದ ಜೀವನ ನೆಮ್ಮದಿಯಾಗಿರುತ್ತದೆ. ಅಕಸ್ಮಾತ್ ಯಾವುದೋ ಕಾರಣಕ್ಕೆ ಮದುವೆಗೂ ಮೊದಲು ಅಥವಾ ಮದುವೆಗೆಂದೇ ಸಾಲ ಮಾಡಿದರೆ ಇಬ್ಬರೂ ಸೇರಿಯೇ ತೀರಿಸಿಕೊಳ್ಳಿ. ಅದು ತೀರುವ ತನಕ ಮುಂದಿನ ಯೋಜನೆ ಬಗ್ಗೆ ಯೋಚಿಸುವುದು ಬೇಡ. ಒಟ್ಟಿನಲ್ಲಿ ಒಂದು ಗೋಲ್ (Goal) ಇಟ್ಟಿ ಕೊಳ್ಳಿ. ನಿಧಾನವಾಗಿಯಾದರೂ ಪರ್ವಾಗಿಲ್ಲ. ಸಿಕ್ಕಾಪಟ್ಟೆ ಬರ್ಡನ್ ಆಗದಂತೆ ಗುರಿ ತಲುಪಲು ಯತ್ನಿಸಿ.
Relationship Tips: ದಾಂಪತ್ಯ ಮುಪ್ಪಾಗ್ಬಾರದೆಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಜಂಟಿ ನಿರ್ವಹಣೆ
ನಮ್ಮಿಷ್ಟ ಬಂದಂತೆ ಬದುಕಲು ಕಡಿವಾಣ ಹಾಕಲೆಂದೇ ಜೋಡಿಯೊಂದು ದಾಂಪತ್ಯಕ್ಕೆ ಕಾಲಿಡುವುದು. ಆಗ ಒಬ್ಬರಿಗೊಬ್ಬರು ಸಹಕರಿಸಿ ಮುನ್ನಡಿ ಇಡೋದು ಅನಿವಾರ್ಯ. ಓಕೆ ಅಂತಾದರೆ ಇಬ್ಬರ ಹೆಸರಲ್ಲಿಯೂ ಒಂದು ಜಂಟಿ ಖಾತೆ (Joint Account) ಇದ್ದರೆ ಒಳಿತು. ಕೆಲವ ನಿರ್ಧಾರಗಳನ್ನು ಒಟ್ಟಾಗಿ, ಜೊತೆ ಜೊತೆಯಾಗಿ ತೆಗೆದುಕೊಳ್ಳಲು, ಸೇವಿಂಗ್ಸ್ ಮಾಡಲು ಇದು ನೆರವಾಗುತ್ತದೆ. ಇದು ಇಬ್ಬರಿಗೂ ಬೇರೆ ಬೇರೆ ರೀತಿಯಲ್ಲಿ ನೆರವಾಗಬಹುದು. ಆದರೆ, ಆ ಖಾತೆಗೆ ಸಂಬಂಧಿಸಿದಂತೆ ಹಣ ಸಂದಾಯ ಮಾಡಲು ಇಬ್ಬರೂ ಕಮಿಟ್ ಆಗಬೇಕು. ಅದರಂತೆಯೇ ನಡೆದುಕೊಳ್ಳುವುದು ತಪ್ಪ ಬಾರದು. ಗಂಡ ಹೆಂಡತಿಯಾದರೂ ಕೆಲವು ವಿಷಯಗಳಲ್ಲಿ ಬದ್ಧತೆ ತೋರುವುದು ಅನಿವಾರ್ಯ. ಇದರಿಂದ ಒಬ್ಬರ ಮೇಲೆಯೇ ಆರ್ಥಿಕ ಹೊರೆ ಬೀಳುವುದಿಲ್ಲ. ಇಟ್ಟುಕೊಂಡ ಗೋಲ್ ತಲುಪಲು ನೆರವಾಗುತ್ತದೆ.
ವಿಮೆಯೊಂದು ಕಷ್ಟಕ್ಕಿರಲಿ
ಆದಾಯ ಎಷ್ಟೇ ಕಡಿಮೆ ಇರಲಿ. ಅದರಲ್ಲೊಂದಿಷ್ಟು ಶೇರ್ ಮನೋರಂಜನೆ ಉದ್ದೇಶಕ್ಕೆಂದೇ ಮೀಸಲಿಡಿ. ಅಪರೂಪಕ್ಕೊಮ್ಮೆಯಾದರೂ ಎಲ್ಲಿಗಾದರೂ ಹೋಗಿ ಬನ್ನಿ. ಸಿನಿಮಾ, ಮನೋರಂಜನೆಗೆಂದು ಸ್ವಲ್ಪ ಹಣ ವಿನಿಯೋಗವಾಗಲಿ. ಅಷ್ಟೇ ಅಲ್ಲ ಆರೋಗ್ಯ ಯಾವಾಗ ಕೈ ಕೊಡುತ್ತೋ ಹೇಳಲಾಗೋಲ್ಲ. ಎಷ್ಟೇ ಆರೋಗ್ಯವಂತನಿಗೂ ಈಗ ಹಾರ್ಟ್ ಅಟ್ಯಾಕ್ (Heart Attack) ಆಗಿ ಬಿಡಬಹುದು. ಅದಕ್ಕಾಗಿಯೇ ಹೆಲ್ತ್ ಇನ್ಸುರೆನ್ಸ್ (Health Insurance) ನಿಮ್ಮದಾಗಲಿ. ಎಷ್ಟು ಕಡಿಮೆ ಪ್ರೀಮಿಯಂ ಕಟ್ಟಲು ಸಾಧ್ಯವೋ ಕಟ್ಟಿ. ಹೆಚ್ಚು ಬೆನಫಿಟ್ ಸಿಗುವಂತೆ ನೋಡಿಕೊಳ್ಳಿ. ಪ್ರೈವೇಟ್ ಇನ್ಸುರೆನ್ಸ್ ಮಾಡಿಸಲು ಆಗೋಲ್ಲ ಅಂದ್ರೆ, ಸರಕಾರಿ ವಿಮೆಯನ್ನಾದರೂ ಮಾಡಿಸಿಕೊಳ್ಳಿ. ಇದು ಕಷ್ಟ ಕಾಲದಲ್ಲಿ ಖಂಡಿತಾ ಎಲ್ಲರ ಕೈ ಹಿಡಿಯಲು ನೆರವಾಗುತ್ತದೆ.
ಒಟ್ಟಿನಲ್ಲಿ ಹಾಣಕಾಸು ವಿಚಾರದಲ್ಲಿ ಪತಿ-ಪತ್ನಿಗೆ ಬದ್ಧತೆ ಇರಬೇಕು. ಇಬ್ಬರೂ ಜೊತೆಯಾಗಿಯೇ ಸಂಸಾರದ (Family) ನೊಗ ಹೊರಲು ಸನ್ನದ್ಧರಾಗಬೇಕು. ಅದಕ್ಕೆ ತಕ್ಕಂತೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳುವುದು ಮಾತ್ರ ಅನಿವಾರ್ಯ .