ಪೆಟ್ರೋಲ್ ದರ ಏರಿಕೆ: ಕಾಂಗ್ರೆಸ್ ಮೇಲೆ ಮೋದಿ ಕಿಡಿ| ಹಿಂದಿನ ಸರ್ಕಾರಗಳ ನೀತಿಯೇ ಇದಕ್ಕೆ ಕಾರಣ| ಇದರಿಂದಲೇ ಮಧ್ಯಮ ವರ್ಗಕ್ಕೆ ಹೊರೆ ಆಗಿದೆ| ತೈಲ ಆಮದು ಕಡಿಮೆ ಮಾಡಲು ನಮ್ಮ ಶ್ರಮ: ಪ್ರಧಾನಿ
ನವದೆಹಲಿ(ಫೆ.18): ಪೆಟ್ರೋಲ್ ದರ ದಾಖಲೆಯ 100 ರು. ತಲುಪಿರುವಾಗಲೇ, ‘ಈಗಿನ ತೈಲ ದರ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ. ಒಂದು ವೇಳೆ ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆಗೆ ಕಡಿವಾಣ ಹಾಕಿದ್ದರೆ ಇಂದು ಮದ್ಯಮ ವರ್ಗದ ಕುಟುಂಬಗಳಿಗೆ ಹೊರೆ ಆಗುತ್ತಿರಲ್ಲ. ತಮ್ಮ ಸರ್ಕಾರ ತೈಲ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.
ಬೆಂಗ್ಳೂರಿಗೆ ಬಂದ ಕೈ ಉಸ್ತುವಾರಿ: ಬಿಎಸ್‌ವೈ, ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ...!
ತಮಿಳುನಾಡಿನಲ್ಲಿ ತೈಲ ಮತ್ತು ಅಡುಗೆ ಅನಿಲಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ಭಾರತ 2019-20ರಲ್ಲಿ ತೈಲದ ಅಗತ್ಯತೆಯ ಶೇ.85ರಷ್ಟುಹಾಗೂ ಅನಿಲದ ಅಗತ್ಯತೆಯ ಶೇ.53ರಷ್ಟನ್ನು ಆಮದು ಮಾಡಿಕೊಂಡಿದೆ. ನಾವು ತೈಲ ಆಮದಿನ ಮೇಲೆ ಯಾಕೆ ಇಷ್ಟೊಂದು ಅವಲಂಬಿತವಾಗಿದ್ದೇವೆ? ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆ ತಗ್ಗಿಸಿದ್ದರೆ ಇಂದು ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ’ ಎಂದರು.
‘ಇದೇ ವೇಳೆ ತಮ್ಮ ಸರ್ಕಾರ ಮಧ್ಯಮ ವರ್ಗದ ಕಳವಳದ ಬಗ್ಗೆ ಸಂವೇದನೆಯನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಕಬ್ಬಿನಿಂದ ಉತ್ಪಾದಿಸಿದ ಎಥನಾಲ್‌ನಿಂದ ತೈಲ ಆಮದನ್ನು ಕಡಿಮೆ ಮಾಡುವ ಜೊತೆಗೆ ರೈತರಿಗೆ ಪಾರ್ಯಯ ಆದಾಯ ಮೂಲವೂ ದೊರೆಯಲಿದೆ. ಅದೇ ರೀತಿ ಮರುಬಳಕೆ ಇಂಧನದ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದರು.
ಬೆಂಗ್ಳೂರಿಗೆ ಬಂದ ಕೈ ಉಸ್ತುವಾರಿ: ಬಿಎಸ್‌ವೈ, ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ...!
2030ರ ವೇಳೆಗೆ ಶೇ.40ರಷ್ಟುಇಂಧನ ದೇಶದಲ್ಲೇ ಉತ್ಪಾದನೆ ಆಗಲಿದೆ. ಅದೇ ರೀತಿ ತಮ್ಮ ಸರ್ಕಾರ ನೈಸರ್ಗಿಕ ಅನಿಲದ ಪ್ರಮಾಣವನ್ನು ಈಗಿರುವ ಶೇ.6.3ರಿಂದ ಶೇ.15ಕ್ಕೆ ಏರಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಇಂಧನವನ್ನು ಜಿಎಸ್‌ಟಿ ಅಡಿಯಲ್ಲಿ ತರುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.