Petrol Price ಚುನಾವಣೆ ಬಳಿಕ ತೈಲ ದರ 12 ರು. ಏರಿಕೆ ಸಾಧ್ಯತೆ?

By Kannadaprabha NewsFirst Published Mar 5, 2022, 5:15 AM IST
Highlights

* ಚುನಾವಣೆ ಬಳಿಕ ತೈಲ ದರ 12 ರು. ಏರಿಕೆ ಸಾಧ್ಯತೆ?

- ಉತ್ಪಾದನಾ ವೆಚ್ಚ ಬಂಕ್‌ ದರಕ್ಕೂ ವ್ಯತ್ಯಾಸ ಸರಿದೂಗಿಸಲು ಬೆಲೆ ಏರಿಕೆ

- ಕಳೆದ 4 ತಿಂಗಳಿಂದ ತಟಸ್ಥವಾಗಿರುವ ತೈಲ ದರ

ನವದೆಹಲಿ (ಮಾ. 5): ಕಳೆದ ನಾಲ್ಕು ತಿಂಗಳಿಂದ ತಟಸ್ಥವಾಗಿರುವ ಪೆಟ್ರೋಲ್‌ (Petrol), ಡೀಸೆಲ್‌ (Diesel) ದರ ಪಂಚ ರಾಜ್ಯ ಚುನಾವಣೆ ಬಳಿಕ ಅಂದರೆ ಮಾ.16ರ ವೇಳೆ ಬರೋಬ್ಬರಿ 12 ರು. ಏರಿಕೆಯಾಗುವ ಸಾಧ್ಯತೆ ಇದೆ. ತೈಲ ಉತ್ಪಾದನಾ ವೆಚ್ಚ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ (Petrol bunk) ಮಾರಾಟ ಮಾಡುತ್ತಿರುವ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರದ ನಡುವೆ ವ್ಯತ್ಯಾಸ ಹೆಚ್ಚಿದೆ. ಈ ವ್ಯತ್ಯಾಸವನ್ನು ಸರಿಗಟ್ಟುವ ಉದ್ದೇಶದಿಂದ ಸರ್ಕಾರ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ (ICICI Securities) ವರದಿ ಮಾಡಿದೆ.

ರಷ್ಯಾ-ಉಕ್ರೇನ್‌ (Russia and Ukraine) ಯುದ್ಧ (War) ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಟ್ಟೆಯಲ್ಲಿ (International Crude Oil) ಗುರುವಾರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ಗಡಿ ದಾಟಿತ್ತು. ಈ ಮೂಲಕ ಕಳೆದ 9 ವರ್ಷದಲ್ಲೇ ಅತ್ಯಂತ ಗರಿಷ್ಠಕ್ಕೆ ತಲುಪಿತ್ತು. ಬಳಿಕ ಶುಕ್ರವಾರ ಮತ್ತೆ 111 ಡಾಲರ್‌ಗೆ ಇಳಿಕೆಯಾಗಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ 100.56 ರು ಮತ್ತು 85 ರು. ಇದೆ. ಆದರೆ ಪಂಚರಾಜ್ಯ ಚುನಾವಣೆ (Five State Elections) ಹಿನ್ನೆಲೆಯಲ್ಲಿ ದೈನಂದಿನ ತೈಲ ದರ ಪರಿಷ್ಕರಣೆಯನ್ನು ನಿಲ್ಲಿಸಿದ ಕಾರಣ ಉತ್ಪಾದನಾ ವೆಚ್ಚ ಮತ್ತು ಮಾರಾಟ ದರದ ನಡುವಣ ವ್ಯತ್ಯಾಸ ಏರಿಕೆಯಾಗಿದೆ. ಹೀಗಾಗಿ ತೈಲ ಉತ್ಪಾದನಾ ಕಂಪನಿಗಳು ನಷ್ಟಅನುಭವಿಸುತ್ತಿವೆ. ಆದ್ದರಿಂದ 12.1 ರಿಂದ 15.1 ರು. ವರೆಗೆ ತೈಲ ದರ ಏರಿಕೆ ಮಾಡುವ ಅಗತ್ಯವಿದೆ. ಹೀಗಾಗಿ ಫೆ.16ರ ವೇಳೆಗೆ 12 ರು. ಏರಿಕೆಯಾಗಬಹುದು ಎಂದು ಅದು ಹೇಳಿದೆ.

ಮಾ.7ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮಾ.10ರಂದು ಫಲಿತಾಂಶ ಪ್ರಕಟವಾಗಲಿದೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 95.41 ರು. ಮತ್ತು ಡೀಸೆಲ್‌ ದರ 86.67 ರು. ಇದೆ. ಬೆಂಗಳೂರಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ 100.56 ರು ಮತ್ತು 85 ರು. ಇದೆ.

ಷೇರುಪೇಟೆ ಪತನ: 3 ದಿನದಲ್ಲಿ 5.5 ಲಕ್ಷ ಕೋಟಿ ರು. ನಷ್ಟ
ಮುಂಬೈ:
ರಷ್ಯಾ ಉಕ್ರೇನಿನ ಸಂಘರ್ಷ ತೀವ್ರವಾಗುತ್ತಿದ್ದಂತೆ ದೇಶದ ಷೇರುಪೇಟೆಯಲ್ಲಿ(Share Market) ಕುಸಿತ ಮುಂದುವರೆದಿದೆ. ಶುಕ್ರವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ (BSE Sensex)769 ಅಂಕ ಕುಸಿತ ಕಾಣುವ ಮೂಲಕ ದಿನದಂತ್ಯಕ್ಕೆ 54,333.81 ರಲ್ಲಿ ಕೊನೆಗೊಂಡಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ(NSE Nifty) 252.70 ಅಂಕ ಕುಸಿದಿದ್ದು, 16,245.35ರಲ್ಲಿ ವ್ಯವಹಾರವನ್ನು ಅಂತ್ಯಗೊಳಿಸಿದೆ. ಕಳೆದ 3 ದಿನಗಳಿಂದ ಪೇಟೆ ಕುಸಿಯುತ್ತಿದ್ದು, ಹೂಡಿಕೆದಾರರ ಸಂಪತ್ತು 5.59 ಲಕ್ಷ ಕೋಟಿ ರು. ಕರಗಿದೆ. ಡಾಲರ್‌ ಎದುರು ರುಪಾಯಿ ಮೌಲ್ಯ 22 ಪೈಸೆ ಕುಸಿದಿದ್ದು, 76.16 ರು. ನಲ್ಲಿ ವಹಿವಾಟು ಕೊನೆಗೊಂಡಿದೆ.

Latest Videos

Petrol Price Hike : ಚುನಾವಣೆ ಬಳಿಕ ಪೆಟ್ರೋಲ್‌ ದರ 9 ರು. ಏರಿಕೆ?
ಕೋವಿಡ್‌ ಮತ್ತಷ್ಟುಇಳಿಕೆ: ಕೇವಲ 6396 ಹೊಸ ಕೇಸು
ನವದೆಹಲಿ:
ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 6396 ಪ್ರಕರಣಗಳು ದಾಖಲಾಗಿವೆ. ಇದು ಎರಡೂವರೆ ತಿಂಗಳ ಕನಿಷ್ಠ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ 201 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 26 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕೂ ಕಡಿಮೆ ದೈನಂದಿನ ಕೋವಿಡ್‌ ಕೇಸುಗಳು ದಾಖಲಾಗುತ್ತಿದ್ದು, ಸಕ್ರಿಯ ಕೇಸುಗಳ ಸಂಖ್ಯೆ 69897 ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.69 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ 0.90 ರಷ್ಟಿದೆ. ದೇಶದಲ್ಲಿ ಈವರೆಗೆ 178.29 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ
12+ವರ್ಷದವರಿಗೆ ಕೋವೋವ್ಯಾಕ್ಸ್‌ ಲಸಿಕೆ: ಶಿಫಾರಸು
ನವದೆಹಲಿ:
ಸೀರಂ ಸಂಸ್ಥೆಯ ಕೋವೋವ್ಯಾಕ್ಸ್‌ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ. 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆಗೆ ಕೋವೋವ್ಯಾಕ್ಸ್‌ಗೆ ಡಿಸಿಜಿಐ ಡಿ.28ರಂದು ಅನುಮತಿ ನೀಡಿತ್ತು. 12ರಿಂದ 17 ವರ್ಷದವರಿಗೂ ಈ ಲಸಿಕೆ ಬಳಕೆ ಮಾಡಲು ಅನುಮತಿ ಕೋರಿ ಸೀರಂ ಸಂಸ್ಥೆಯ ನಿರ್ದೇಶಕ ಪ್ರಕಾಶ್‌ ಕುಮಾರ್‌ ಸಿಂಗ್‌ ದಾಖಲೆಗಳನ್ನು ಸಲ್ಲಿಸಿದ್ದರು. ಇದರ ಪರಿಶೀಲನೆ ನಡೆಸಿದ ತಜ್ಷರ ಸಮಿತಿ ಅನುಮತಿ ನೀಡುವಂತೆ ಡಿಸಿಜಿಐಗೆ ಶಿಫಾರಸು ಮಾಡಿದೆ. ಈ ವಯೋಮಿತಿಯ ಸುಮಾರು 2,700 ಮಕ್ಕಳ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಸಕಾರಾತ್ಮಕ ಫಲಿತಾಂಶ ದೊರಕಿದೆ. ಹಾಗಾಗಿ ಅನುಮತಿ ಕೋರಿ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದಾರೆ.

click me!