Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?

By Suvarna News  |  First Published Mar 4, 2022, 7:19 PM IST

* ಚೊಚ್ಚಲ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ
* ಸುಮಾರು ಎರಡು ಗಂಟೆಗಳ ಕಾಲ ಬಜೆಟ್ ಮಂಡಿಸಿದ ಸಿಎಂ
* ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?


ಬೆಂಗಳೂರು, (ಮಾ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು (ಮಾ.04)   ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.

2022-23ನೇ ಸಾಲಿನ ಕರ್ನಾಟಕ ಬಜೆಟ್‌ (Karnataka Budget 2022-23) ಅನ್ನು ಬೊಮ್ಮಾಯಿ ಅವರು ಸುಮಾರು ಎರಡು ಗಂಟೆಗಳ ಕಾಲ ಮಂಡಿಸಿದ್ದು, ಹಲವು ಕ್ಷೇತ್ರಗಳಿಗೆ ಅನುದಾನ ಘೋಷಣೆ ಮಾಡಿದ್ದಾರೆ.

Tap to resize

Latest Videos

Karnataka Budget 2022 Live: ಮೇಕೆದಾಟು ಯೋಜನೆಗೆ ಅನುದಾನ, ಕಾಂಗ್ರೆಸ್‌ಗೆ ಬೊಮ್ಮಾಯಿ ಏಟು?

ಇನ್ನು ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಾದ (Coastal Districts) ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರಾಜ್ಯ ಅಯವ್ಯಯ ಪತ್ರದಲ್ಲಿ ಏನು ಸಿಕ್ಕಿದೆ ಎನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ ನೋಡಿ

* 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ ಮತ್ಯ್ಸ ಸಿರಿ ಎಂಬ ಯೋಜನೆಯನ್ನು ಮೊದಲ ಬಾರಿಗೆ ರೂಪಿಸಲಾಗುವುದು.

* ಪ್ರಸಕ್ತ ಸಾಲಿನಲ್ಲಿ 5000 ವಸತಿರಹಿತ ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು.

* ರಾಜ್ಯದ 8 ಮೀನುಗಾರಿಕೆ ಬಂದರುಗಳಲ್ಲಿ ಮೀನುಗಾರಿಕಾ ದೋಣಿಗಳು ಸುಗಮವಾಗಿ ಮತ್ತು ವೇಗವಾಗಿ ಚಲಿಸಲು ಅನುಕೂಲವಾಗಿಸಲು ನ್ಯಾವಿಗೇಶನ್ ಚಾನಲ್ ಗಳಲ್ಲಿ ಹಂತ ಹಂತವಾಗಿ ಹೂಳೆತ್ತಲಾಗುವುದು.

* ಸದ್ಯ ಪ್ರಗತಿಯಲ್ಲಿರುವ ಸೌಕೂರು, ಎಣ್ಣೆಹೊಳೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಬಾಕಿಯಿರುವ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

* ಕರಾವಳಿ ಪ್ರದೇಶಗಳಲ್ಲಿ ನದಿಗಳ ಪ್ರವಾಹ ಉಂಟಾದಾಗ ಮತ್ತು ಭಾರೀ ಅಲೆಗಳಿಂದ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರನ್ನು ತಡೆಗಟ್ಟಲು ಉದ್ದೇಶಿಸಿರುವ ಖಾರ್ ಲ್ಯಾಂಡ್ ಯೋಜನೆಯಡಿ 1500 ಕೋಟಿ ರೂ ಅಂದಾಜು ಮೊತ್ತದ ಮಾಸ್ಟರ್ ಪ್ಲಾನ್ ಗೆ ಒಪ್ಪಿಗೆ, ಪ್ರಸ್ತುತ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಮಗಾರಿ ಅನುಷ್ಠಾನ. ಪ್ರಸಕ್ತ ಸಾಲಿನಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನುಷ್ಠಾನ.

* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಮಧ್ಯಪ್ರದೇಶ ಮಾದರಿಯಲ್ಲಿ ಮೆನ್ಸ್ಟ್ರಯಲ್ ಕಪ್ (ಮುಟ್ಟಿನ ಕಪ್) ವಿತರಿಸಲಾಗುವುದು.

* ನಾರಾಯಣ ಗುರು ಸ್ಮರಣಾರ್ಥ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸಲಾಗುವುದು.

ಕರಾವಳಿ ಪ್ರದೇಶದಲ್ಲಿ 1,880 ಕೋಟಿ ರೂ ವೆಚ್ಚದ 24 ಯೋಜನೆಗಳನ್ನು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲು ಉದ್ದೆಶಿಸಿದೆ. ಇದರಡಿಯಲ್ಲಿ ಕಾರವಾರ ಬಂದರಿನ ವಿಸ್ತರಣೆಯನ್ನು ಪ್ರಸ್ತಾಪಿಸಲಾಗಿದೆ. ಬೈಂದೂರು ಮತ್ತು ಮಲ್ಪೆ ಪ್ರದೇಶಗಳಲ್ಲಿ ವಿವಿದೋದ್ದೇಶ ಬಂದರುಗಳ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

* ಕೇಂದ್ರ ಸರ್ಕಾರದ ನೆರವಿನೊಂದಿಗೆ 350 ಕೋಟಿ ರೂ ಅಂದಾಜು ವೆಚ್ಚದಲ್ಲಿ ಮಂಗಳೂರು ಬಂದರನ್ನು ವಿಸ್ತರಿಸಲಾಗುವುದು. ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ ಮತ್ತು ಇತರ ಮೂಲಸೌಕರ್ಯ ಸೌಲಭ್ಯ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

* ಉತ್ತರ ಕನ್ನಡ ಜಿಲ್ಲೆಯ ಕೇಣಿ ಬೆಳಕೇರಿಯಲ್ಲಿ ಗ್ರೀನ್ ಫೀಲ್ಡ್ ಬಂದರನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.

* ಕೇಂದ್ರದ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಕಾರವರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪ.

* ಕಡಲು ಕೊರೆತ ತಡೆಯಲು ಹೊಸ ತಂತ್ರಜ್ಞಾನ ಬಳಸಲು ಕ್ರಮ.

* ಪ್ರವಾಸೋದ್ಯಮ ಮತ್ತು ಸಾರಿಗೆ ಅಗತ್ಯ ಪೂರೈಸಲು ತದಡಿ-ಅಘನಾಶಿನಿ ಮಧ್ಯೆ ಕಡವು ದೋಣಿ ಮಾರ್ಗ ಈ ವರ್ಷದಿಂದ ಆರಂಭ

* ಯಕ್ಷಗಾನ ಕಲೆಯ ಸಮಗ್ರ ಆಯಾಮಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜನೆ.

* ಕರಾವಳಿ ಭಾಗದ ಜಲ️ಮೂಲ️ಗಳನ್ನು ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ ವಿನೂತನವಾದ “ಬ್ಲೂ-ಪ್ಲಾಸ್ಟಿಕ್ ನಿರ್ವಹಣೆ ಯೋಜನೆ” ಯನ್ನು ಮುಂದಿನ 5 ವರ್ಷಗಳ ಅವಧಿಗೆ ಒಟ್ಟು 840 ಕೋಟಿ ರೂ.ಗಳ ವೆಚ್ಚದಲ್ಲಿ ದೇಶದಲ್ಲೇ ಮೊಟ್ಟ ಮೊದಲಿಗೆ ಜಾರಿಗೆ ತರಲಾಗುವುದು.

* ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

* ನೆರೆ ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸು ಕಾಸರಗೋಡಿನಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು.

* ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ರೋಪ್ ವೇ ನಿರ್ಮಿಸಲು ಯೋಜನೆ.

click me!