ಮನೆ ಬಾಗಿ​ಲಿಗೇ ಬಂದು 2000 ರು. ನೋಟು ಸ್ವೀಕರಿಸಲಿದೆ ಅಮೆ​ಜಾನ್‌

Published : Jun 22, 2023, 11:21 AM IST
 ಮನೆ ಬಾಗಿ​ಲಿಗೇ ಬಂದು 2000 ರು. ನೋಟು ಸ್ವೀಕರಿಸಲಿದೆ ಅಮೆ​ಜಾನ್‌

ಸಾರಾಂಶ

ಜನರು ತಾವು ಆರ್ಡರ್‌ ಮಾಡುವಾಗ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಂಡು ಡೆಲಿವರಿ ಬಾಯ್‌ ಬಳಿ ಆರ್ಡರ್‌ ಹಣದ ಜೊತೆ ಗರಿಷ್ಠ 50,000 ರು. ಮೌಲ್ಯದ 2000 ರು. ಮುಖಬೆಲೆಯ ನೋಟುಗಳನ್ನು ನೀಡಬಹುದು.

ನವದೆಹಲಿ: ಆನ್‌ಲೈನ್‌ ಮಾರುಕಟ್ಟೆ ದೈತ್ಯ ಅಮೆಜಾನ್‌ ತನ್ನ ಗ್ರಾಹಕರಿಂದ ಸದ್ಯ​ದಲ್ಲೇ ರದ್ದಾ​ಗ​ಲಿ​ರುವ 2000 ರು. ನೋಟುಗಳನ್ನು ಸ್ವೀಕರಿಸಲು ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಅಮೆಜಾನ್‌,‘ಜನರು ತಾವು ಆರ್ಡರ್‌ ಮಾಡುವಾಗ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಂಡು ಡೆಲಿವರಿ ಬಾಯ್‌ ಬಳಿ ಆರ್ಡರ್‌ ಹಣದ ಜೊತೆ ಗರಿಷ್ಠ 50,000 ರು. ಮೌಲ್ಯದ 2000 ರು. ಮುಖಬೆಲೆಯ ನೋಟುಗಳನ್ನು ನೀಡಬಹುದು. ಅವರು ಹಣವನ್ನು ತಮ್ಮ ಅಮೆಜಾನ್‌ ಪೇ ಖಾತೆಗೆ ಜಮೆ ಮಾಡುತ್ತಾರೆ. ಇದರಿಂದಾಗಿ ಭವಿಷ್ಯದ ಆರ್ಡರ್‌ಗಳಿಗೆ ಆ ಹಣ ಬಳಕೆ ಮಾಡಬಹುದು ಎಂದು ತಿಳಿಸಿದೆ.

2000 ರು. ನೋಟು ರದ್ದಿನಿಂದ ಚಿನ್ನಕ್ಕೆ ಭಾರೀ ಡಿಮ್ಯಾಂಡ್‌

2000 ರು. ನೋಟು ರದ್ದತಿ (Note Ban)ಬೆನ್ನಲ್ಲೇ ಚಿನ್ನಕ್ಕೆ ಈ ಹಿಂದಿಗಿಂತ ಹೆಚ್ಚು ಬೇಡಿಕೆ ಬಂದಿದೆ. ಅಂದರೆ 2000 ರು. ನೋಟುಗಳನ್ನು ಇಟ್ಟುಕೊಂಡವರು ಚಿನ್ನದ ಅಂಗಡಿಗಳಿಗೆ ಹೋಗಿ ಆ ನೋಟನ್ನು ನೀಡಿ ಚಿನ್ನ ಖರೀದಿಸುತ್ತಿದ್ದು, ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಸಾಕಷ್ಟು ಚಿನ್ನಾಭರಣ ಅಂಗಡಿಗಳಿಗೆ ಚಿನ್ನ ಖರೀದಿ ಸಂಬಂಧ ದೂರವಾಣಿ ಕರೆಗಳು ಬರುತ್ತಿವೆ ಎಂದು ಚಿನ್ನದ ವ್ಯಾಪಾರಿಗಳೇ  ತಿಳಿಸಿದ್ದಾರೆ.  2000 ರು. ನೋಟು ವಿನಿಮಯಕ್ಕೆ ಷರತ್ತುಗಳು ಇದ್ದು, ಒಂದು ಸಲಕ್ಕೆ 20 ಸಾವಿರ ರು.ಗಿಂತ ಹೆಚ್ಚು ಹಣ ವಿನಿಮಯ ಮಾಡಿಕೊಳ್ಳಲು ಆಗದು. ಖಾತೆದಾರರು 50 ಸಾವಿರ ರು.ಗಿಂತ ಹೆಚ್ಚಿನ ಮೌಲ್ಯದ 2000 ರು. ನೋಟು ನೀಡಿದರೆ ಅದಕ್ಕೆ ಪಾನ್‌ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕು. ಹೀಗಾಗಿ ಭಾರಿ ಪ್ರಮಾಣದಲ್ಲಿ 2000 ರು. ನೋಟು ‘ದಾಸ್ತಾನು’ ಮಾಡಿ ಇಟ್ಟುಕೊಂಡವರು ಈ ತಲೆನೋವೇ ಬೇಡ ಎಂದು ಚಿನ್ನದ ಅಂಗಡಿಗಳಲ್ಲಿ 2000 ರು. ನೋಟುಗಳನ್ನು ನೀಡಿ ತಮ್ಮಲ್ಲಿ ಇರುವ ನೋಟುಗಳ ಮೌಲ್ಯದಷ್ಟು ಚಿನ್ನ ಖರೀದಿ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಬೂದಿ ಎಂದು ಲೇವಡಿ ಮಾಡ್ತೀರಲ್ಲ, ಅಮೆಜಾನ್‌ನಲ್ಲಿ 1 ಕೆಜಿಗೆ 1800ರೂಪಾಯಿ ಎಂದ ಬಾಬಾ ರಾಮ್‌ದೇವ್‌!

2 ಲಕ್ಷ ರು.ಗಿಂತ ಕಡಿಮೆ ಮೌಲ್ಯದ ಚಿನ್ನ (Gold), ಬೆಳ್ಳಿ (silver), ಆಭರಣ ಅಥವಾ ಮುತ್ತು-ರತ್ನಗಳನ್ನು ಖರೀದಿಸಿದರೆ ಅದಕ್ಕೆ ಪಾನ್‌ (Pan card)ಅಥವಾ ಆಧಾರ್‌ ಸಂಖ್ಯೆ ನೀಡಿ ಕೆವೈಸಿ (KYC) ವಿವರ ಭರ್ತಿ ಮಾಡಬೇಕಿಲ್ಲ. ಈ ಅವಕಾಶ ಬಳಸಿಕೊಳ್ಳುತ್ತಿರುವ ಜನರು 2000 ರು. ನೋಟು ನೀಡಿ ಚಿನ್ನ ಖರೀದಿಸುತ್ತಿದ್ದಾರೆ ಎಂದು ಗೊತ್ತಾಗಿದೆ.  ಆದರೆ, 2000 ರು. ನೋಟುಗಳು ಸಾಕಷ್ಟು ಜನರ ಬಳಿ ಇಲ್ಲ. ಹೀಗಾಗಿ ಈ ಹಿಂದೆ 500 ರು., 1000 ರು. ನೋಟು ರದ್ದಾದಾಗ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದಷ್ಟು ಜನ ಈ ಬಾರಿ ಇಲ್ಲ ಎಂದು ಚಿನ್ನದ ವ್ಯಾಪಾರಿಯೊಬ್ಬರು ಹೇಳಿದರು.

ಮೋದಿಗೂ ಇಷ್ಟವಿರಲಿಲ್ಲ 2000 ರು. ನೋಟು

 2016ರಲ್ಲಿ ನೋಟು ಅಪನಗದೀಕರಣದ ಬಳಿಕ 2000 ರು. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಹೊಂದಿದ್ದರು ಎಂದು ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಅಧಿಕಾರಿಗಳ ತಂಡ ಅಪನಗದೀಕರಣದ ಪ್ರಸ್ತಾಪದ ಬಳಿಕ ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರು.ಮುಖಬೆಲೆಯ ನೋಟು ಬಿಡುಗಡೆ ಪ್ರಸ್ತಾಪ ಮುಂದಿಟ್ಟಿರು. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರು. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರು. ಮತ್ತು 500 ರು.ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು. ಈ ವೇಳೆ ಆಪ್ತರ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ, ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ.

ಅಮೆಜಾನ್‌ನಿಂದ ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?