ಜನಪ್ರಿಯ ವಿದೇಶಿ ಬ್ರ್ಯಾಂಡ್ಸ್ ಭಾರತಕ್ಕೆ ತರಲು ರಿಲಯನ್ಸ್ ಯೋಜನೆ; ಈ ಪಟ್ಟಿಯಲ್ಲಿರುವ ಕಂಪನಿಗಳು ಯಾವುವು?

By Suvarna News  |  First Published Jun 21, 2023, 5:20 PM IST

ಅನೇಕ ಜನಪ್ರಿಯ ವಿದೇಶಿ ಬ್ರ್ಯಾಂಡ್ ಗಳನ್ನು ಭಾರತಕ್ಕೆ ತರಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಯೋಜನೆ ರೂಪಿಸಿದೆ. ಕೆಲವು ಸಂಸ್ಥೆಗಳೊಂದಿಗೆ ಒಪ್ಪಂದ ಕೂಡ ಮಾಡಿಕೊಂಡು, ಭಾರತದಲ್ಲಿ ಪರಿಚಯಿಸಿದೆ ಕೂಡ.  ಅವುಗಳಲ್ಲಿ ಶೀನ್, ಕ್ಯಾಂಪ ಕೋಲಾ, ಪ್ರೆಟ್ ಎ ಮ್ಯಾಂಗೆರ್ ಮುಂತಾದ ಜನಪ್ರಿಯ ಬ್ರ್ಯಾಂಡ್ ಗಳು ಸೇರಿವೆ. 
 


Business Desk: ಇತ್ತೀಚಿನ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೊಸ ಕ್ಷೇತ್ರಗಳನ್ನು ಪ್ರವೇಶಿಸುತ್ತಿರುವ ಜೊತೆಗೆ ಅನೇಕ ಜನಪ್ರಿಯ ಬ್ರ್ಯಾಂಡ್ ಗಳನ್ನು ಭಾರತಕ್ಕೆ ತರಲು ಯೋಜನೆ ರೂಪಿಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನಿರ್ದೇಶಕಿ ಇಶಾ ಅಂಬಾನಿ ಇಬ್ಬರೂ ಜೊತೆಯಾಗಿ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಪಣ ತೊಟ್ಟಿದ್ದಾರೆ. ಇದರ ಭಾಗವಾಗಿಯೇ ಅನೇಕ ಜನಪ್ರಿಯ ವಿದೇಶಿ ಬ್ರ್ಯಾಂಡ್ ಗಳನ್ನು ಭಾರತಕ್ಕೆ ತರಲು ಬಹು ಬಿಲಿಯನ್ ಡಾಲರ್ ಒಪ್ಪಂದಗಳಿಗೆ ರಿಲಯನ್ಸ್ ಮುಂದಾಗಿದೆ. ಈ ಮೂಲಕ ರತನ್ ಟಾಟಾ ಹಾಗೂ ಕೆ.ಎಂ. ಬಿರ್ಲಾ ಅವರಂತಹ ದೇಶದ ಇತರ ಪ್ರಮುಖ ಉದ್ಯಮಿಗಳಿಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರು ಹಾಗೂ ಎಂಡಿ ಆಗಿದ್ದರೆ, ಇಶಾ ಅಂಬಾನಿ ನಿರ್ದೇಶಕರಾಗಿದ್ದಾರೆ. ಇವರಿಬ್ಬರೂ ಸೇರಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿಷೇಧಿಸಿದ್ದ ಚೀನಾದ ಆನ್ ಲೈನ್ ಜವಳಿ ಮಳಿಗೆ ಶೀನ್ ಸೇರಿದಂತೆ ಕೆಲವು ಬ್ರ್ಯಾಂಡ್ ಗಳನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದ್ದಾರೆ. ಹಾಗಾದ್ರೆ ಭಾರತದಲ್ಲಿ ಪರಿಚಯಿಸಲು ರಿಲಯನ್ಸ್ ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಬ್ರ್ಯಾಂಡ್ ಗಳು ಯಾವುವು? ಇಲ್ಲಿದೆ ಮಾಹಿತಿ. 

ಶೀನ್ 
ವಿಶ್ವದ ಅತೀದೊಡ್ಡ ಫ್ಯಾಷನ್ ಸಂಸ್ಥೆಗಳಲ್ಲೊಂದಾದ ಚೀನಾದ ಶೀನಾ ರಿಲಯನ್ಸ್ ರಿಟೇಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಶೀನ್ ಮತ್ತೊಮ್ಮೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಚೀನಾ ಮೂಲದ ವಿವಿಧ ಆ್ಯಪ್​ಗಳಲ್ಲಿ ಶೀನ್ ಕೂಡ ಸೇರಿದೆ. ಈ ಸಂಸ್ಥೆ ಪ್ರಸ್ತುತ ಅಮೆರಿಕದಲ್ಲಿ ಕೂಡ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ರಿಲಯನ್ಸ್ ಮೂಲಕ ಭಾರತದಲ್ಲಿ ಮತ್ತೆ ಮಾರುಕಟ್ಟೆ ಕಂಡುಕೊಳ್ಳುವ ಜೊತೆಗೆ ತನ್ನ ಉತ್ಪನ್ನಗಳನ್ನು ರಿಲಯನ್ಸ್ ರಿಟೇಲ್ ಮುಖಾಂತರ ಭಾರತದಿಂದ ಇತರ ರಾಷ್ಟ್ರಗಳಿಗೆ ಪೂರೈಕೆ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಶೀನ್ ಟ್ರೆಂಡಿ ಉಡುಪುಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿದೆ. ಇನ್ನು ರಿಲಯನ್ಸ್ ರಿಟೇಲ್ ಹಾಗೂ ಶೀನ್ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ.

Tap to resize

Latest Videos

ದೇಶದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ

ಕ್ಯಾಂಪ ಕೋಲಾ
ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜನಪ್ರಿಯ ಸಾಫ್ಟ್ ಡ್ರಿಂಕ್ಸ್ ಕಂಪನಿ ಕ್ಯಾಂಪ ಅನ್ನು 2022ರಲ್ಲಿ ಖರೀದಿಸಿತ್ತು. ಈ ಮೂಲಕ ಈಗ ಭಾರತದಲ್ಲಿ ಮತ್ತೊಮ್ಮೆ ಕ್ಯಾಂಪ ಕೋಲಾ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಸಂಬಂಧ ಚೆನ್ನೈ ಮೂಲದ ಬೊವೊಂಟೊ ಸಾಫ್ಟ್ ಡ್ರಿಂಕ್ಸ್ ತಯಾರಿಕಾ ಸಂಸ್ಥೆ ಕಲಿ ಏರೇಟೆಡ್ ವಾಟರ್ ವರ್ಕ್ಸ್ ಜೊತೆಗೆ ಉತ್ಪಾದನೆ ಹಾಗೂ ವಿತರಣೆಗೆ ಸಂಬಂಧಿಸಿ ಮಾತುಕತೆ ನಡೆಸುತ್ತಿದೆ. 

ಪ್ರೆಟ್ ಎ ಮ್ಯಾಂಗೆರ್
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇತ್ತೀಚೆಗೆ  ಇಂಗ್ಲೆಂಡ್ ಮೂಲದ ಜನಪ್ರಿಯ ಕಾಫಿ ಚೈನ್ ಪ್ರೆಟ್ ಎ ಮ್ಯಾಂಗರ್ ಶಾಪ್ ಅನ್ನು ಮುಂಬೈನಲ್ಲಿ ಪ್ರಾರಂಭಿಸಿದೆ. ಈ ಮೂಲಕ ಕಾಫಿ ಮಾರುಕಟ್ಟೆಗೂ ರಿಲಯನ್ಸ್ ಪ್ರವೇಶಿಸಿದ್ದು, ಟಾಟಾ ಗ್ರೂಪ್ ನ ಸ್ಟಾರ್ ಬಕ್ಸ್ ಗೆ ಟಕ್ಕರ್ ನೀಡಲು ಸಜ್ಜಾಗಿದೆ.  ಇಂಗ್ಲೆಂಡ್ ಮೂಲದ ಪ್ರೆಟ್ ಎ ಮ್ಯಾಂಗರ್ ಇಂಗ್ಲೆಂಡ್, ಅಮೆರಿಕ, ಹಾಂಗ್ ಕಾಂಗ್, ಫ್ರಾನ್ಸ್, ದುಬೈ, ಸ್ವಿರ್ಜಲೆಂಡ್, ಬ್ರೂಸೆಲ್ಸ್ , ಸಿಂಗಾಪುರ ಹಾಗೂ ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 550 ಶಾಪ್ ಗಳನ್ನು ಹೊಂದಿದೆ. ಈ ಕಾಫಿ ಚೈನ್ ಸ್ಟೋರ್ ಗಳಲ್ಲಿ ವಿವಿಧ ಸ್ವಾದದ ಕಾಫಿ ಜೊತೆಗೆ ಸ್ಯಾಂಡ್ ವಿಚ್ , ಸಲಾಡ್ಸ್ ಹಾಗೂ ವಾರ್ಪಸ್ ಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಭಾರತದಲ್ಲಿ 10 ಮಳಿಗೆಗಳನ್ನು ತೆರೆಯಲು ಅದು ರಿಲಯನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಭಾರತ ಕಂಡ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಅಲ್ಲವೇ ಅಲ್ಲ; ಮತ್ತ್ಯಾರು?

ಬಾಲೆನ್ಸಿಯಗ 
ಐಷಾರಾಮಿ ಫ್ಯಾಶನ್ ಬ್ರ್ಯಾಂಡ್, ಅಮೆರಿಕಾದ ಆನ್‌ಲೈನ್‌ ಮಾರುಕಟ್ಟೆ Balenciaga ಅನ್ನು ಭಾರತಕ್ಕೆ ತರಲು ಮುಖೇಶ್ ಅಂಬಾನಿ ಯೋಜನೆ ರೂಪಿಸುತ್ತಿದ್ದಾರೆ. ಒಂದು ಆನ್ ಲೈನ್ ರಿಟೇಲ್ ಮಳಿಗೆ ಜೊತೆಗೆ ಅನೇಕ ಐಷಾರಾಮಿ ಮಳಿಗೆಗಳನ್ನು ದೇಶಾದ್ಯಂತ ತೆರೆಯಲು ಯೋಜನೆ ರೂಪಿಸಿದ್ದಾರೆ.

click me!