
ನವದೆಹಲಿ (ಜುಲೈ 31, 2023): ಪ್ರಸ್ತುತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರತೀಯ ರೈಲ್ವೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಅದ್ರಲ್ಲೂ, ಮೋದಿ ಸರ್ಕಾರದ ನೆಚ್ಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಸಾಕಷ್ಟು ಸದ್ದು ಮಾಡುತ್ತಿದೆ. ಇಲ್ಲಿಯವರೆಗಿನ ಎಲ್ಲಾ 25 ವಂದೇ ಭಾರತ್ ರೈಲು ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಭಾರತೀಯ ರೈಲ್ವೆ ನಿರ್ವಹಿಸುತ್ತದೆ.
ಭಾರತದಾದ್ಯಂತ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ರೈಲಿನ ಹೊಸ ಆವೃತ್ತಿಯನ್ನು ಪರಿಶೀಲಿಸಲು ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ (ಐಸಿಎಫ್) ಚೆನ್ನೈಗೆ ಭೇಟಿ ನೀಡಿದ್ದರು. ಹೊಚ್ಚ ಹೊಸ ರೈಲು "ರಾಷ್ಟ್ರಧ್ವಜದಿಂದ ಪ್ರೇರಿತವಾದ" ಕೇಸರಿ-ಬೂದು ಥೀಮ್ ಅನ್ನು ಹೊಂದಿರುತ್ತದೆ ಎಂದು ರೈಲ್ವೆ ಸಚಿವರು ಬಹಿರಂಗಪಡಿಸಿದ್ದರು.
ಇದನ್ನು ಓದಿ: ಬರಲಿದೆ ಪ್ರಯಾಣಿಕರು, ಸರಕು ಒಟ್ಟಿಗೆ ಹೊತ್ತೊಯ್ಯುವ ಟ್ರೈನ್: ಡಬ್ಬಲ್ ಡೆಕ್ಕರ್ ರೈಲು ಸೇವೆ ಶೀಘ್ರದಲ್ಲೇ ಆರಂಭ
ಸದ್ಯ ವಂದೇ ಭಾರತ್ ರೈಲುಗಳು ಬಿಳಿ / ನೀಲಿ ಥೀಮ್ ಅನ್ನು ಹೊಂದಿದ್ದು, ಇದನ್ನು ಕೇಸರಿ ವಂದೇ ಭಾರತ್ ರೈಲುಗಳು ಬದಲಾಯಿಸುತ್ತದೆ ಮತ್ತು 28 ನೇ ವಂದೇ ಭಾರತ್ ರೈಲಿನೊಂದಿಗೆ ಈ ಕೇಸರಿ ಬಣ್ಣದ ರೈಲಿನ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೂ, ಆಗಸ್ಟ್ 15, 2023 ಅಂದರೆ ಮುಂಬರುವ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಅವರು ಕೇಸರಿ ಬಣ್ಣದ ರೈಲನ್ನು ಉದ್ಘಾಟಿಸಲಿದ್ದಾರೆ ಅನ್ನೋ ನಿರೀಕ್ಷೆಯಿದೆ.
ಈ ಮಧ್ಯೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಣ್ಣ ಬದಲಾವಣೆ ಮಾತ್ರವಲ್ಲ, ಇನ್ನೂ ಹಲವು ಬದಲಾವಣೆಗಳಾಗಲಿದೆ ಎಂದು ತಿಳಿದುಬಂದಿದೆ. ರೈಲು ಪ್ರಯಾಣಿಕರ ಪ್ರತಿಕ್ರಿಯೆಯ ಆಧಾರದ ಮೇಲೆ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಲು ಕೆಲವು ಬದಲಾವಣೆಗಳನ್ನು ಮಾಡಲಿದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಣಲಿರುವ 10 ಪ್ರಮುಖ ಬದಲಾವಣೆಗಳು ಇಲ್ಲಿವೆ ನೋಡಿ..
ಇದನ್ನೂ ಓದಿ: IRCTC ವೆಬ್‌ಸೈಟ್ ಡೌನ್: ರೈಲ್ವೆ ಟಿಕೆಟ್ ಬುಕ್ ಮಾಡಲು ಜನಸಾಮಾನ್ಯರ ಪರದಾಟ; ನೆಟ್ಟಿಗರ ಆಕ್ರೋಶ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಧಾರಣೆಗಳು
1) ಡ್ರೈವರ್ ಡೆಸ್ಕ್ ಉತ್ತಮ ಗೋಚರತೆ ಮತ್ತು ಸೌಂದರ್ಯಕ್ಕಾಗಿ ಡ್ರೈವಿಂಗ್ ಟ್ರೈಲರ್ ಕೋಚ್‌ಗಳಲ್ಲಿ ಏಕರೂಪದ ಬಣ್ಣದ ಥೀಮ್ ಪಡೆಯಲಿದೆ
2) ಲೋಕೋ ಪೈಲಟ್‌ಗೆ ಸುಲಭ ಪ್ರವೇಶಕ್ಕಾಗಿ ಚಾಲಕ ನಿಯಂತ್ರಣ ಫಲಕದಲ್ಲಿ ತುರ್ತು ನಿಲುಗಡೆ ಪುಶ್ ಬಟನ್‌ನ ವಿನಿಮಯವಾಗಲಿದೆ
ಇದನ್ನೂ ಓದಿ: ಸಾವನ್ ಮಾಸದಲ್ಲಿ ಹಲಾಲ್ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್ ಟೀ’’ ವಿವಾದ?
3) ರೈಲು ಬೋಗಿಗಳಲ್ಲಿ ಪ್ಯಾನಲ್‌ನ ಉತ್ತಮ ಸೌಂದರ್ಯ ಮತ್ತು ದೃಢತೆಗಾಗಿ ಸುಧಾರಿತ ಮೇಲಿನ ಟ್ರಿಮ್ ಫಲಕ
4) ಬೋಗಿಗಳೊಳಗೆ ಸೌಂದರ್ಯವನ್ನು ಸುಧಾರಿಸಲು FRP ಪ್ಯಾನೆಲ್‌ಗಳ ಸಿಂಗಲ್ ಪೀಸ್ ನಿರ್ಮಾಣದ ಮಾರ್ಪಡಿಸಿದ ಪ್ಯಾನೆಲ್‌ಗಳು
ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ
5) ಉತ್ತಮ ಹವಾನಿಯಂತ್ರಣಕ್ಕಾಗಿ ಸುಧಾರಿತ ಏರ್ ಟೈಟ್‌ನೆಸ್
6) ಕೋಚ್‌ಗಳ ಒಳಗೆ ಸುಧಾರಿತ ಏರೋಸಾಲ್ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ
ಇದನ್ನೂ ಓದಿ: ಇನ್ಮುಂದೆ ಎಲ್ಲ ಟ್ರೈನ್‌ಗೂ ಸ್ವಯಂಚಾಲಿತ ಬಾಗಿಲು, 2 ಎಂಜಿನ್‌ಗಳು: ಪ್ರಯಾಣ ಸಮಯ ಕಡಿಮೆ ಮಾಡಲು ರೈಲ್ವೆ ಪ್ಲ್ಯಾನ್ ಹೀಗಿದೆ...
7) ಒಂದೇ ರೀತಿಯ ಬಣ್ಣಗಳೊಂದಿಗೆ ಟಾಯ್ಲೆಟ್ ಪ್ಯಾನಲ್‌ಗಳಿಗೆ ಪ್ರಮಾಣಿತ ಬಣ್ಣಗಳು
8) ಎಕ್ಸಿಕ್ಯುಟಿವ್ ಚೇರ್ ಬೋಗಿಗಳಿಗೆ ಕೆಂಪು ಥೀಮ್ ಬದಲಿಗೆ ಹೊಸ 'ಆಹ್ಲಾದಕರ ನೀಲಿ' ಬಣ್ಣದ ಸೀಟುಗಳು
ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಬ್ಬಂದಿ ಕಾರಣ: ರೈಲ್ವೆ ತನಿಖಾ ವರದಿ; ವಿಧ್ವಂಸಕ ಕೃತ್ಯದ ಅನುಮಾನದ ಬಗ್ಗೆ ಸಿಬಿಐ ತನಿಖೆ ಮುಂದುವರಿಕೆ
9) ಶೌಚಾಲಯಗಳಲ್ಲಿ ನೀರು ಚಿಮ್ಮುವುದನ್ನು ತಪ್ಪಿಸಲು ವಾಶ್ ಬೇಸಿನ್ ಆಳ ಹೆಚ್ಚಿಸುವುದು
10) ಎಲ್ಲಾ ವರ್ಗದ ಸೀಟ್ ರೆಕ್ಲೈನಿಂಗ್ ಕೋನದಲ್ಲಿ ಹೆಚ್ಚಳ
ಇದನ್ನೂ ಓದಿ: ಒಡಿಶಾ ರೈಲು ಅಪಘಾತವಾಗಿ 27 ದಿನ: ಇನ್ನೂ ಪತ್ತೆ ಆಗದ 81 ಶವಗಳ ಗುರುತು; ಶವಗಳಿಗಾಗಿ ಕಾಯುತ್ತಿರುವ 35 ಕುಟುಂಬಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.