ಭಾರತಕ್ಕೆ ಗಡಿಪಾರು ಮಾಡಿದರೆ ಆತ್ಮಹತ್ಯೆ: ನೀರವ್ ಮೋದಿ ಕ್ಯಾತೆ!

By Web DeskFirst Published Nov 7, 2019, 5:18 PM IST
Highlights

'ಭಾರತಕ್ಕೆ ನನ್ನನ್ನು ಗಡಿಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'| ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿ ಹೊಸ ವರಸೆ| ಜೈಲಿನಲ್ಲಿ ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆದಿದೆ ಎಂದ ನೀರವ್ ಮೋದಿ| ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿ ಬೆದರಿಕೆ| ಹಲ್ಲೆ ನಡೆದಾಗ ಜೈಲಿನ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದ ನೀರವ್ ಪರ ವಕೀಲ|

ಲಂಡನ್(ನ.07): ಭಾರತಕ್ಕೆ ನನ್ನನ್ನು ಗಡಿಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಸಾವಿರಾರು ಕೋಟಟಿ ರೂ. ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಬೆದರಿಕೆಯೊಡ್ಡಿದ್ದಾರೆ.

ನೀರವ್‌ ಸೋದರನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌!

ಜೈಲಿನಲ್ಲಿರುವಾಗ ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆದಿದ್ದು, ನಾನು ಭಾರತಕ್ಕೆ ಹೋಗಲು ತಯಾರಿಲ್ಲ ಎಂದು ನೀರವ್ ಮೋದಿ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅಲವತ್ತುಕೊಂಡಿದ್ದಾರೆ.

ನೀರವ್ ಮೋದಿ ಸ್ವಿಸ್ ಖಾತೆ ಮುಟ್ಟುಗೋಲು: ಹೋಯ್ತು 6 ಮಿಲಿಯನ್ ಡಾಲರ್!

ಒಂದು ವೇಳೆ ನ್ಯಾಯಾಲಯ ತಮಗೆ ಜಾಮೀನು ಮಂಜೂರು ಮಾಡದಿದ್ದರೆ, ಭಾರತಕ್ಕೆ ಗಡಿಪಾರು ಮಾಡಲು ಮುಂಧಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ನೀರವ್ ಮೋದಿ ನ್ಯಾಯಾಲಯಕ್ಕೆ ಬೆದರಿಕೆಯೊಡ್ಡಿದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 9,100 ಕೋಟಿ ರೂ. ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ನೀರವ್ ಮೋದಿಯನ್ನು, ಭಾರತಕ್ಕೆ ಗಡೀಪಾರು ಮಾಡುವ ಕುರಿತ ವಿಚಾರಣೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ನೀರವ್‌ ಮೋದಿಗೆ ಬ್ರಿಟನ್‌ ಕೋರ್ಟ್‌ 4ನೇ ಬಾರಿಗೆ ಜಾಮೀನು ನಿರಾಕರಣೆ

ವಂಡ್ಸ್ ವರ್ತ್ ಜೈಲಿನಲ್ಲಿ ನೀರವ್ ಮೋದಿ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಜೈಲಿನ ಸಿಬ್ಬಂದಿ ಕೂಡ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದು ನೀರವ್ ಮೋದಿ ಪರ ವಕೀಲರು ಆರೋಪಿಸಿದ್ದಾರೆ. ಆದರೆ ಭಾರತದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯುವ ನಂಬಿಕೆ ಇಲ್ಲವಾದ್ದರಿಂದ ಗಡಿಪಾರಿಗೆ ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೀರವ್ ಮೋದಿ ಬೆದರಿಕೆ ಹಾಕಿದ್ದಾರೆ.

ನೀರವ್‌ ಮೋದಿ ಗಡೀಪಾರು?

click me!