Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..

By BK AshwinFirst Published Sep 10, 2022, 7:33 PM IST
Highlights

ವಂದೇ ಭಾರತ್‌ ರೈಲಿಗಿಂತ ಪ್ರಯಾಣಿಕರಿಗೆ ಅತ್ಯುನ್ನತ ಪ್ರಯಾಣದ ಅನುಭವವನ್ನು ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ವಂದೇ ಭಾರತ್‌ 2 ರೈಲಿನಲ್ಲಿ ಅನೇಕ ಉನ್ನತ ಸೌಲಭ್ಯಗಳು ದೊರೆಯಲಿದೆ ಎಂದು ಮಾಹಿತಿ ನೀಡಿದೆ. 

 ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ನಿರಂತರ ಪ್ರಯತ್ನದಲ್ಲಿ ಭಾರತೀಯ ರೈಲ್ವೆಯು (Indian Railways) ಹೈ ಸ್ಪೀಡ್ ರೈಲಿನ ವಂದೇ ಭಾರತ್ ಅಂದರೆ ವಂದೇ ಭಾರತ್ 2 (Vande Bharat 2) ಹೊಸ ಅವತಾರವನ್ನು ಪರಿಚಯಿಸುತ್ತಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ವಂದೇ ಭಾರತ್ 2 ಕೇವಲ 52 ಸೆಕೆಂಡ್‌ಗಳಲ್ಲಿ 0 ರಿಂದ 100 Kmpl ವೇಗ, 180 Kmph ವರೆಗೆ ಗರಿಷ್ಠ ವೇಗ, 392 ಟನ್‌ನಿಂದ ಕಡಿಮೆ ತೂಕ ಮತ್ತು ಬೇಡಿಕೆಯ ಮೇರೆಗೆ ವೈಫೈ (WI-FI) ಕಂಟೆಂಟ್‌ನಂತಹ ಹೆಚ್ಚಿನ ಪ್ರಗತಿ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. "ಹೊಸ ವಂದೇ ಭಾರತ್ 32-ಇಂಚಿನ LCD ಟಿವಿಗಳನ್ನು ಹೊಂದಿರುತ್ತದೆ, ಇದು ಹಿಂದಿನ ಆವೃತ್ತಿಯಲ್ಲಿ 24 ಇಂಚಿನದ್ದಾಗಿತ್ತು.  ಇನ್ನು, 15 ಪ್ರತಿಶತ ಹೆಚ್ಚು ಇಂಧನ ದಕ್ ಎಸಿ ಧೂಳು ಮುಕ್ತ ಕ್ಲೀನ್ ಏರ್ ಕೂಲಿಂಗ್ ಟ್ರಾಕ್ಷನ್ ಮೋಟರ್ ಅನ್ನು ಒಳಗೊಂಡಿದ್ದು, ಇದು ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ" ಎಂದೂ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. 

ಇದರ ಜತೆಗೆ "ಎಕ್ಸಿಕ್ಯುಟಿವ್‌ ವರ್ಗದ ಪ್ರಯಾಣಿಕರಿಗೆ (Executive Class Passengers) ಮಾತ್ರ ಒದಗಿಸಲಾಗುತ್ತಿರುವ ಸೈಡ್ ರೀಕ್ಲೈನರ್ ಸೀಟ್ (Recliner Seat) ಸೌಲಭ್ಯವನ್ನು ಈಗ ಎಲ್ಲಾ ವರ್ಗಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು" ಎಂದೂ ರೈಲ್ವೆ ಸಚಿವಾಲಯ ತಿಳಿಸಿದೆ. ಅಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸದಲ್ಲಿ, ಗಾಳಿಯ ಶುದ್ಧೀಕರಣಕ್ಕಾಗಿ ರೂಫ್ ಮೌಂಟೆಡ್ ಪ್ಯಾಕೇಜ್ ಘಟಕದಲ್ಲಿ (Roof Mounted Package Unit) (RMPU) ಫೋಟೋ-ಕ್ಯಾಟಲಿಟಿಕ್ ಅಲ್ಟ್ರಾ ವೈಲೆಟ್ ಏರ್ ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದೂ ರೈಲ್ವೆ ಸಚಿವಾಲಯ ಹೇಳಿದೆ.

180 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ ವಂದೇ ಭಾರತ್ ರೈಲು..!

ಚಂಡೀಗಢದ ಸೆಂಟ್ರಲ್ ಸೈಂಟಿಫಿಕ್ ಇನ್‌ಸ್ಟ್ರುಮೆಂಟ್ಸ್ ಆರ್ಗನೈಸೇಶನ್ (Central Scientific Instruments Organization) (CSIO), ಚಂಡೀಗಢದಿಂದ ಶಿಫಾರಸು ಮಾಡಲ್ಪಟ್ಟಂತೆ, ತಾಜಾ ಗಾಳಿ ಮತ್ತು ಹಿಂತಿರುಗುವ ಗಾಳಿಯ ಮೂಲಕ ಬರುವ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿಗಳಿಂದ ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛಗೊಳಿಸಲು ಈ ವ್ಯವಸ್ಥೆಯನ್ನು RMPU ನ ಎರಡೂ ಕಡೆಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಸ್ಥಾಪಿಸಲಾಗಿದೆ ಎಂದೂ ತಿಳಿದುಬಂದಿದೆ.

ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು 15 ಫೆಬ್ರವರಿ 2019 ರಂದು ಹಸಿರು ನಿಶಾನೆ ತೋರಿದ್ದರು. ಮೇಡ್-ಇನ್-ಇಂಡಿಯಾ ಕೋಚ್‌ಗಳನ್ನು ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (Integral Coach Factory) ಪ್ರಾರಂಭಿಸಿದ ತಿಂಗಳುಗಳ ನಂತರ ವಂದೇ ಭಾರತ್ ರೈಲು ಆರಂಭವಾಗಿತ್ತು. ಈ ರೈಲುಗಳು ಸ್ವಯಂ ಚಾಲಿತ ಎಂಜಿನ್ ಹೊಂದಿದ್ದು, ಡೀಸೆಲ್ ಅನ್ನು ಉಳಿಸಬಹುದಾಗಿದೆ. ಜತೆಗೆ  30% ರಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು ಎಂದೂ ತಿಳಿದುಬಂದಿದೆ. ವಂದೇ ಭಾರತ್ ಸ್ವಯಂ ಚಾಲಿತ EMU ರೈಲಾಗಿದ್ದು, ಇದನ್ನು ಭಾರತೀಯ ರೈಲ್ವೆ ನಿರ್ವಹಿಸುತ್ತದೆ. ಇದನ್ನು 18 ತಿಂಗಳ ಅವಧಿಯಲ್ಲಿ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಚೆನ್ನೈನ ಪೆರಂಬೂರ್‌ನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ.

ಬೆಂಗಳೂರಲ್ಲಿ ವಂದೇ ಭಾರತ್‌ ರೈಲು ಗಾಲಿ ಉತ್ಪಾದನೆ

ಟ್ರೈನ್ 18 ಎಂದೂ ಕರೆಯಲ್ಪಡುವ ವಂದೇ ಭಾರತ್ ಅನ್ನು 4 ವರ್ಷಗಳ ಯೋಜನೆ, ಉತ್ಪಾದನೆ ಮತ್ತು ಟ್ರಯಲ್‌ ರನ್‌ಗಳ ನಂತರ ಫೆಬ್ರವರಿ 15, 2019 ರಂದು ಅನಾವರಣಗೊಳಿಸಲಾಗಿತ್ತು.

click me!