ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!

Published : Sep 10, 2022, 07:24 PM IST
ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!

ಸಾರಾಂಶ

*ನಾಲ್ಕು ಪ್ರಾದೇಶಿಕ ಮುಖ್ಯ ಕಚೇರಿಗಳನ್ನು ಹೊಂದಿರುವ ಏರ್ ಇಂಡಿಯಾ *2023ರ ಮಾರ್ಚ್ ಗೆ ಒಂದೇ ಸಾಮಾನ್ಯ ಕಚೇರಿಗೆ ಮೂರು ಏರ್ ಲೈನ್ಸ್ ಗಳು ಶಿಫ್ಟ್ *ಟಾಟಾ ಸನ್ಸ್ ಒಡೆತನಕ್ಕೆ ಸಿಕ್ಕ ಬಳಿಕ ಸರ್ಕಾರಿ ಸ್ಥಳಗಳಲ್ಲಿರುವ ಕಚೇರಿಗಳನ್ನು ಖಾಲಿ ಮಾಡುತ್ತಿರುವ ಏರ್ ಇಂಡಿಯಾ  

ಗುರುಗ್ರಾಮ್ (ಸೆ.10): ಟಾಟಾ ಮಾಲೀಕತ್ವದ ಏರ್ ಇಂಡಿಯಾ ತನ್ನ ಎಲ್ಲ ಏರ್ ಲೈನ್ಸ್ ಗಳಿಗೆ ಗುರುಗ್ರಾಮ್ ನಲ್ಲಿ ಒಂದು ಕೇಂದ್ರ ಕಚೇರಿ ತೆರೆಯಲು ಯೋಚಿಸುತ್ತಿದೆ. ಇದ್ರಿಂದ ಅದರ ನಾಲ್ಕು ಏರ್ ಲೈನ್ಸ್ ಗಳಲ್ಲಿ ಮೂರು ಒಂದೇ ಸಾಮಾನ್ಯ ಕಚೇರಿಗೆ 2023ರ ಮಾರ್ಚ್ ಗೆ ಶಿಫ್ಟ್ ಆಗಲಿವೆ. ಈ ಕ್ರಮವು ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಏರ್ ಏಷ್ಯಾ ಇಂಡಿಯಾದ ಪ್ರಾದೇಶಿಕ ಹಿಡಿತ ವ್ಯವಸ್ಥೆಯನ್ನು ತೊಡೆದು ಹಾಕಿ ಕೇಂದ್ರೀಯ ಮುಖ್ಯ ಕಚೇರಿಗೆ ವರ್ಗಾಯಿಸುವ ಉದ್ದೇಶವಾಗಿದೆ. ಏರ್ ಇಂಡಿಯಾದ ನೂತನ ಮಾಲೀಕರಾದ ಟಾಟಾ ಸನ್ಸ್ ತನ್ನ ಏರ್ ಲೈನ್ಸ್ ಉದ್ಯಮವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಈ ಏರ್ ಲೈನ್ಸ್ ಪ್ರಸ್ತುತ ನಾಲ್ಕು ಪ್ರಾದೇಶಿಕ ನಿರ್ದೇಶಕರ ನೇತೃತ್ವದಲ್ಲಿ ನಾಲ್ಕು ಪ್ರಾದೇಶಿಕ ಮುಖ್ಯ ಕಚೇರಿಗಳನ್ನು ಹೊಂದಿದೆ. ಎರಡು ಏರ್ ಲೈನ್ಸ್ ಗಳು ವಿಲೀನಗೊಂಡ ಬಳಿಕ  ಇಂಡಿಯನ್ ಏರ್ ಲೈನ್ಸ್ ನಿಂದ ಏರ್ ಇಂಡಿಯಾಗೆ ಉತ್ತರಾಧಿಕಾರವಾಗಿ ಪ್ರಾದೇಶಿಕ ಸಂರಚನೆ ಬಂದಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಏರ್ ಏಷ್ಯಾ ಇಂಡಿಯಾ ಗುರುಗ್ರಾಮದ ವಟಿಕಾದಲ್ಲಿ ಒಂದು ಸಾಮಾನ್ಯ ಕಚೇರಿ ಹೊಂದಲಿವೆ. 

ಸೆಪ್ಟೆಂಬರ್ ಪ್ರಾರಂಭದಲ್ಲೇ ಏರ್ ಇಂಡಿಯಾ (Ar India) ದೇಶಾದ್ಯಂತ ಪ್ರಸ್ತುತ ಸರ್ಕಾರಿ ಸ್ಥಳಗಳಲ್ಲಿರುವ ಅನೇಕ ಕಚೇರಿಗಳನ್ನು ಈಗಾಗಲೇ ಖಾಲಿ ಮಾಡಲು ಪ್ರಾರಂಭಿಸಿದೆ. ಏರ್ ಇಂಡಿಯಾದ ಅತೀದೊಡ್ಡ ಸಿಬ್ಭಂದಿಗಳಿರುವ ಕಚೇರಿ ಏರ್ ಲೈನ್ಸ್ ಹೌಸ್, ಸಫ್ದಾರ್ ಜಂಗ್ ಕಾಂಪ್ಲೆಕ್ಸ್, ಜಿಎಸ್ ಡಿ ಕಾಂಪ್ಲೆಕ್ಸ್ ಹಾಗೂ ಐಜಿಐ ಟರ್ಮಿನಲ್ಲಿದೆ. ಇವೆಲ್ಲವೂ ವಟಿಕಾ ಒನ್ ಗೆ (Vatika One) ಶಿಫ್ಟ್ ಆಗುವ ಮುನ್ನ ಗುರುಗ್ರಾಮದಲ್ಲಿನ ಕಚೇರಿಗೆ ಶಿಫ್ಟ್ ಆಗಲಿವೆ. ಟಾಟಾದ ನಾಲ್ಕನೇ ಏರ್ ಲೈನ್ ವಿಸ್ತಾರ (Vistara). ಇದು ಕೂಡ ಗುರುಗ್ರಾಮದಲ್ಲಿ (Gurugram) ಮುಖ್ಯಕಚೇರಿ ಹೊಂದಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ (Air India Exress) ಹಾಗೂ ಏರ್ ಏಷ್ಯಾ ಇಂಡಿಯಾದ (Air Asia India) ಕಚೇರಿಗಳು ಕೂಡ ಕೊಚ್ಚಿ (Kochi) ಹಾಗೂ ಬೆಂಗಳೂರಿಂದ (Bangalore) ಗುರುಗ್ರಾಮ್ ಕ್ಕೆ ಶಿಫ್ಟ್ ಆಗಲಿವೆ.

ಐಟಿ ಸರ್ವೇ ಸಂದರ್ಭದಲ್ಲಿ ಸರ್ವರ್, ಹಿರಿಯ ಅಧಿಕಾರಿಗಳ ಮೊಬೈಲ್ ಕ್ಲೋನಿಂಗ್ : ಆಕ್ಸ್‌ಫಾಮ್‌ ಇಂಡಿಯಾ ಆರೋಪ

ಸರ್ಕಾರಿ ಮಾಲೀಕತ್ವದಿಂದ ಹೊಸ ಮಾಲೀಕರಾದ ಟಾಟಾ (Tata Group) ತೆಕ್ಕೆಗೆ ಸೇರಿದ ಬಳಿಕ ಏರ್‌ಇಂಡಿಯಾವನ್ನು (Air India) ಸಂಪೂರ್ಣವಾಗಿ ನವೀಕರಣ ಮಾಡುವ ಪ್ರಯತ್ನ ಸಾಗಿದೆ.ಏರ್ ಇಂಡಿಯಾ ಸಂಸ್ಥೆಯನ್ನು 18,000 ಕೋಟಿ ರೂಪಾಯಿಗೆ ಟಾಟಾ ಗ್ರೂಪ್ (Tata Group) ಖರೀದಿಸಿತ್ತು.  90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿತ್ತು.

ಏರುತ್ತಿರುವ ಅಕ್ಕಿ ಬೆಲೆಗೆ ಕಡಿವಾಣ; ನುಚ್ಚಕ್ಕಿ ರಫ್ತು ನಿಷೇಧ, ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20 ಸುಂಕ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಪೈಲಟ್‌ಗಳ ನಿವೃತ್ತಿಯ ನಂತರ ಐದು ವರ್ಷಗಳವರೆಗೆ ಮರು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕಾರ್ಯಾಚರಣೆಯಲ್ಲಿ ಸ್ಥಿರತೆಯನ್ನು ತರುವ ಉದ್ದೇಶದಿಂದ ವಿಮಾನಯಾನ ಸಂಸ್ಥೆ ಈ ಉಪಕ್ರಮವನ್ನು ಕೈಗೊಂಡಿದೆ. ಕಂಪನಿಯು 300 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಪೈಲಟ್‌ಗಳನ್ನು ಕಮಾಂಡರ್‌ಗಳಾಗಿ ಮರು ನೇಮಕ ಮಾಡಲು ಏರ್ ಇಂಡಿಯಾ ಪರಿಗಣಿಸುತ್ತಿದೆ. ಕಂಪನಿಯು ಸಿಬ್ಬಂದಿ ಸೇರಿದಂತೆ ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಸೇವೆಯನ್ನು ಪ್ರಾರಂಭಿಸಿದೆ. ಇದರೊಂದಿಗೆ ಕಂಪನಿಯು ಹೊಸ ಯುವಕರನ್ನು ನೇಮಿಸಿಕೊಳ್ಳುತ್ತಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!