Reliance Retail ಕ್ಯಾಂಪಾ ಕೋಲಾ ಸ್ವಾಧೀನಪಡಿಸಿಕೊಂಡಿದ್ದೇಕೆ..? ಪೆಪ್ಸಿ, ಕೋಕ್‌ಗೆ ಆತಂಕ ಶುರು..!

By BK Ashwin  |  First Published Sep 4, 2022, 4:16 PM IST

ಎಫ್‌ಎಂಸಿಜಿ ಕ್ಷೇತ್ರಕ್ಕೆ ಪ್ರವೇಶವನ್ನು ಘೋಷಿಸಿದ ರಿಲಯನ್ಸ್ ಇಂಡಸ್ಟ್ರೀಸ್, ದೆಹಲಿ ಮೂಲದ ಪ್ಯೂರ್ ಡ್ರಿಂಕ್ಸ್ ಗ್ರೂಪ್‌ನಿಂದ ಸ್ವದೇಶಿ ತಂಪು ಪಾನೀಯ ಬ್ರ್ಯಾಂಡ್ ಕ್ಯಾಂಪಾವನ್ನು ಸ್ವಾಧೀನಪಡಿಸಿಕೊಂಡಿದೆ.


ಈ ವಾರದ ಆರಂಭದಲ್ಲಿ ಎಫ್‌ಎಂಸಿಜಿ (FMCG) ಕ್ಷೇತ್ರಕ್ಕೆ ಪ್ರವೇಶವನ್ನು ಘೋಷಿಸಿದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries), ದೆಹಲಿ ಮೂಲದ ಪ್ಯೂರ್ ಡ್ರಿಂಕ್ಸ್ ಗ್ರೂಪ್‌ನಿಂದ (Pure Drinks Group) ಸ್ವದೇಶಿ ತಂಪು ಪಾನೀಯ ಬ್ರ್ಯಾಂಡ್ ಕ್ಯಾಂಪಾವನ್ನು (Campa) ಸ್ವಾಧೀನಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 22 ಕೋಟಿ ರೂಪಾಯಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ ಮತ್ತು ರಿಲಯನ್ಸ್ ರೀಟೇಲ್ (Reliance Retail) ವೆಂಚರ್ಸ್ ಇದನ್ನು ದೀಪಾವಳಿಯ (Diwali) ಆಸುಪಾಸಿನಲ್ಲಿ ಸಾಮಾನ್ಯ ವ್ಯಾಪಾರ ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ ಎಂದು ಮೂಲಗಳು ತಿಳಿಸಿವೆ. ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಸಮೂಹದ ರಿಟೇಲ್ ಅಂಗವಾದ ರಿಲಯನ್ಸ್ ರಿಟೇಲ್ ವೆಂಚರ್ಸ್, ಕೋಲಾ ಫ್ಲೇವರ್, ಕಿತ್ತಳೆ ಮತ್ತು ನಿಂಬೆ ಸೇರಿದಂತೆ ತನ್ನ ಆಯ್ದ ಮಳಿಗೆಗಳಲ್ಲಿ ಈಗಾಗಲೇ 3 ರೂಪಾಂತರಗಳನ್ನು ಪರಿಚಯಿಸಿದೆ.
 
ಭಾರತೀಯ ತಂಪು ಪಾನೀಯ ಮಾರುಕಟ್ಟೆಯು  ಕೋಕಾ-ಕೋಲಾ ಇಂಡಿಯಾ ಮತ್ತು ಪೆಪ್ಸಿಕೋ - ಹೀಗೆ ಅಮೆರಿಕದ ಕೋಲಾ ಕಂಪನಿಗಳ ಪ್ರಾಬಲ್ಯ ಹೊಂದಿದೆ. ಈ ಸ್ವಾಧೀನವು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (Fast Moving Consumer Goods) ವಲಯಕ್ಕೆ ಪ್ರವೇಶಿಸುವ ರಿಲಯನ್ಸ್ ಯೋಜನೆಯ ಭಾಗವಾಗಿದೆ. ಈ ವಾರದ ಆರಂಭದಲ್ಲಿ, ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (Reliance Retail Ventures lImited) (RRVL) ನಿರ್ದೇಶಕಿ ಇಶಾ ಅಂಬಾನಿ, ಕಂಪನಿಯು ತನ್ನ FMCG ಸರಕುಗಳ ವ್ಯವಹಾರವನ್ನು ಪ್ರಾರಂಭಿಸುತ್ತದೆ ಎಂದು ಹೇಳಿದರು.

ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ
 
FMCG ವಿಭಾಗದಲ್ಲಿ ತನ್ನ ವಿಸ್ತರಣಾ ಡ್ರೈವ್‌ನ ಭಾಗವಾಗಿ, ರಿಲಯನ್ಸ್ ಈಗಾಗಲೇ ಹಲವಾರು ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದೂ ತಿಳಿದುಬಂದಿದೆ. ಭಾರತೀಯ FMCG ಮಾರುಕಟ್ಟೆಯು 100 ಬಿಲಿಯನ್‌ ಅಮೆರಿಕ ಡಾಲರ್‌ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ ಮತ್ತು HUL, Reckitt, P&G, Nestle ಯಂತಹ ದೊಡ್ಡ ಸಂಸ್ಥೆಗಳು ಮತ್ತು Dabur, Emami ಹಾಗೂ Marico ನಂತಹ ಸ್ವದೇಶಿ ಕಂಪನಿಗಳು ಹೆಚ್ಚಾಗಿ ಪ್ರಾಬಲ್ಯ ಹೊಂದಿವೆ. ರಿಲಯನ್ಸ್ ಈಗ ಈ ವಿಭಾಗದಲ್ಲಿ ಪ್ರಮುಖ ಕಂಪನಿ ಅದಾನಿ ವಿಲ್ಮರ್ ಮತ್ತು ಇತರ ಎಫ್‌ಎಂಸಿಜಿ ಕಂಪನಿಗಳೊಂದಿಗೆ ಸ್ಪರ್ಧಿಸಲಿದೆ.
 
ಕ್ಯಾಂಪಾ ಕೋಲಾ ಎಂಬುದು 1970 ರ ದಶಕದಲ್ಲಿ ಪ್ಯೂರ್ ಡ್ರಿಂಕ್ಸ್ ಗ್ರೂಪ್ ರಚಿಸಿದ ಪಾನೀಯವಾಗಿದೆ. ಪ್ಯೂರ್ ಡ್ರಿಂಕ್ಸ್ ಗ್ರೂಪ್ 1949 ರಲ್ಲಿ ಕೋಕಾ-ಕೋಲಾವನ್ನು ಭಾರತಕ್ಕೆ ಪರಿಚಯಿಸಿತು ಮತ್ತು 1977 ರವರೆಗೆ ಕೋಕಾ-ಕೋಲಾದ ಏಕೈಕ ತಯಾರಕ ಮತ್ತು ವಿತರಕರಾಗಿತ್ತು.. ಅದರ ನಂತರವೂ, ವಿದೇಶಿ ಸ್ಪರ್ಧೆಯ ಅನುಪಸ್ಥಿತಿಯಲ್ಲಿ ಈ ಬ್ರ್ಯಾಂಡ್ ಮುಂದಿನ 15 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿತು.

Tap to resize

Latest Videos

ಜಿಯೋ ಘೋಷಣೆಗೆ ಭಾರತದಲ್ಲಿ ಸಂಚಲನ, ದೀಪಾವಳಿ ಹಬ್ಬಕ್ಕೆ 5ಜಿ ಸೇವೆ ಆರಂಭ!
 
ಈ ಬ್ರ್ಯಾಂಡ್‌ನ ಘೋಷಣೆಯು "ದಿ ಗ್ರೇಟ್ ಇಂಡಿಯನ್ ಟೇಸ್ಟ್" (The Great Indian Taste) ಎಂದಾಗಿದ್ದು, ಇದು ರಾಷ್ಟ್ರೀಯತೆಯ ಸ್ವರೂಪವಾಗಿದೆ. ಆದರೆ, 1990 ರ ದಶಕದಲ್ಲಿ ತಂಪು ಪಾನೀಯ ಮಾರುಕಟ್ಟೆಗೆ ವಿದೇಶಿ ಬ್ರ್ಯಾಂಡ್‌ಗಳು ಮರಳಿದ ನಂತರ, ಕ್ಯಾಂಪಾ ಕೋಲಾದ ಜನಪ್ರಿಯತೆಯು ಕುಸಿಯಿತು ಮತ್ತು ಸ್ಪರ್ಧೆ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಅದರ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲಾಯಿತು. ಪ್ರಸ್ತುತ, ಇದನ್ನು ಸೀಮಿತ ಸಂಖ್ಯೆಯಲ್ಲಿ ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೀಸರ್ಚ್ ಅಂಡ್ ಮಾರ್ಕೆಟ್ಸ್‌ನ (Research and Markets) ವರದಿಯ ಪ್ರಕಾರ, ಭಾರತೀಯ ಕಾರ್ಬೊನೇಟೆಡ್ ಪಾನೀಯಗಳ ಮಾರುಕಟ್ಟೆ ವಿಭಾಗವು ಆರ್ಥಿಕ ವರ್ಷ 2020 ರಲ್ಲಿ 13,460 ಕೋಟಿ ರೂಪಾಯಿಗಳಷ್ಟಿತ್ತು ಮತ್ತು ಆರ್ಥಿಕ ವರ್ಷ 27 ರ ವೇಳೆಗೆ 34,964 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.

click me!