ಅಂಬಾನಿಯ 15 ಸಾವಿರ ಕೋಟಿಯ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಎಷ್ಟಿತ್ತು?

ಮುಕೇಶ್ ಅಂಬಾನಿ ನೀತಾ ಅಂಬಾನಿಯ ವಿಶ್ವದ ಅತೀ ದುಬಾರಿ ಮನೆ ಆ್ಯಂಟಿಲಿಯಾ ಹಲವು ಕೌತುಗಳ ಆಗರ. ಇದೀಗ ಇದೇ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಮಾಹಿತಿ ಬಹಿರಂಗವಾಗಿದೆ. ಇದು 2010ರ ಎಲೆಕ್ಟ್ರಿಸಿಟಿ ಬಿಲ್. ಈ ಮೊತ್ತ ಒಬ್ಬ ಸರಾಸರಿ ವ್ಯಕ್ತಿ 30 ವರ್ಷದ ದುಡಿಗೆ ಸಮ.


ಮುಂಬೈ(ಏ.01) ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಪ್ರತಿ ದಿನ ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ್ದಾರೆ. ಮುಕೇಶ್ ಅಂಬಾನಿ ಕುಟುಂಬ 2010ರಿಂದ ವಿಶ್ವದ 2ನೇ ಅತೀ ದುಬಾರಿ ಮನೆಯಾಗಿರುವ ಆ್ಯಂಟಿಲಿಯಾದಲ್ಲಿ ವಾಸವಿದೆ. ಬರೋಬ್ಬರಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮನ ನಿರ್ಮಾಣ ಮಾಡಲಾಗಿದೆ. ಎಲ್ಲಾ ಸೌಲಭ್ಯ, ಐಷಾರಾಮಿತನ, ಭದ್ರತೆ ಸೇರಿದಂತೆ ಹಲವು ವಿಶೇಷತೆಗಳು ಈ ಮನೆಯಲ್ಲಿದೆ. ಇದೀಗ ಕುತೂಹಲ ಮಾಹಿತಿಯೊಂದು ಬಹಿರಂಗವಾಗಿದೆ. ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಈ ಮನೆಯ ಮೊದಲ ತಿಂಗಳ ಕರೆಂಟ್ ಬಿಲ್ ಎಷ್ಟಾಗಿತ್ತು.  ಅಂದರೆ 2010ರಲ್ಲಿ ಗೃಹ ಪ್ರವೇಶದ ಬಳಿಕ ಮೊದಲ ತಿಂಗಳು ಮುಕೇಶ್ ಅಂಬಾನಿಗೆ ಬಂದ ಎಲೆಕ್ಟ್ರಿಸಿಟಿ ಬಿಲ್ ಎಷ್ಟು? ಈ ಬಿಲ್ ಮೊತ್ತ, ಒಬ್ಬ ಸರಾಸರಿ ವ್ಯಕ್ತಿ 30 ವರ್ಷದ ಒಟ್ಟು ದುಡಿಮೆಗೆ ಸಮವಾಗಿದೆ.

ಮೊದಲ ತಿಂಗಳು ಅಂಬಾನಿ ಕಟ್ಟಿದ ಕರೆಂಟ್ ಬಿಲ್ ಎಷ್ಟು?
ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆ ಇಂಗ್ಲೆಂಡ್‌ ಬಕಿಂಗ್‌ಹ್ಯಾಮ್ ಪ್ಯಾಲೆಸ್ ಬಳಿಕ ಸ್ಥಾನ ಪಡೆದ ದುಬಾರಿ ಮನೆ. 2010ರಲ್ಲಿ ಗೃಹ ಪ್ರವೇಶದ ಬಳಿಕ ಮೊದಲ ತಿಂಗಳು ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಬಳಸಿದ ವಿದ್ಯುತ್ ಯೂನಿಟ್ 6,37,240. 2010ರಲ್ಲಿ ಯೂನಿಟ್‌ ದರ ಕಡಿಮೆ ಇತ್ತು. ಈ ವೇಳೆ ಮುಕೇಶ್ ಅಂಬಾನಿಗೆ ಬಂದ ಬಿಲ್ ಮೊತ್ತ 70,69,488 ( ಅಂದರೆ 70.69 ಲಕ್ಷ ರೂಪಾಯಿ).

Latest Videos

ಮುಕೇಶ್ ಅಂಬಾನಿಗೆ ಜಾಕ್‌ಪಾಟ್, ಒಂದೂವರೆ ತಿಂಗಳಲ್ಲಿ 100 ಮಿಲಿಯನ್ ಬಂಪರ್

ಮೊದಲ ತಿಂಗಳು ಮುಕೇಶ್ ಅಂಬಾನಿ ಬರೋಬ್ಬರಿ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸಿದ್ದಾರೆ. ಬಳಿಕ ಪ್ರತಿ ತಿಂಗಳು ಏರಿಕೆಯಾಗಿದೆ. ಇದೀಗ ವರದಿಗಳ ಪ್ರಕಾರ 5 ಕೋಟಿಗೂ ಅಧಿಕ ಮೊತ್ತವನ್ನು ಮುಕೇಶ್ ಅಂಬಾನಿ ವಿದ್ಯುತ್ ಬಿಲ್ ಪಾವತಿಸುತ್ತಾರೆ ಎಂದು ಹೇಳಲಾಗುತ್ತಿದೆ. 

27 ಮಹಡಿಯ ಮನೆ
ಆ್ಯಂಟಿಲಿಯಾ ಮನೆ ಒಟ್ಟು 27 ಮಹಡಿ ಹೊಂದಿದೆ. ಮುಕೇಶ್ ಅಂಬಾನಿ ಕುಟುಂಬ 27ನೇ ಮಹಡಿಯಲ್ಲಿದೆ. 27 ಅಡಿ ಕಟ್ಟಡ ಕೂಡ ಸೆಂಟ್ರಲ್ ಎಸಿ ಹೊಂದಿದೆ. ವಿದ್ಯುತ್ ದೀಪ, ಅಲಂಕಾರಿಕ ದೀಪ, ವಿಐಪಿ ಲಿಫ್ಟ್, ಪ್ರತ್ಯೇಕ ಲಿಫ್ಟ್ ಸೇರಿ 9 ಎಲಿವೇಟರ್ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿ ಕೊಠಡಿ, ಸಿಬ್ಬಂದಿಗಳ ಕೊಠಡಿ ಸೇರಿದಂತೆ ಹಲವು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. 

3 ಹೆಲಿಪ್ಯಾಡ್ ಸೇರಿ ಹಲವು ಸೌಲಭ್ಯ
ಆ್ಯಂಟಿಲಿಯಾದಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಹಾಗೂ ಲ್ಯಾಂಡ್ ಆಗಲು 3 ಹೆಲಿಪ್ಯಾಡ್‌ಗಳಿದೆ.ಇನ್ನು 168 ಕಾರು ಪಾರ್ಕ್ ಮಾಡಬಲ್ಲ ಸಾಮರ್ಥ್ಯ ಬಹುಮಹಡಿಗಳ ಪಾರ್ಕಿಂಗ್ ಸ್ಲಾಟ್ ಇದೆ. ಲಕ್ಷುರಿ ಸ್ಪಾ ಹಾಗೂ ಆರೋಗ್ಯ ಕೇಂದ್ರವಿದೆ. ವೈದ್ಯರ ತಂಡವೂ ಇಲ್ಲಿದೆ. ಟೆಂಪರೇಚರ್ ಕಂಟ್ರೋಲ್ ಸ್ವಿಮ್ಮಿಂಗ್ ಪೂಲ್, ಸುಂದರವಾದ ದೇವಾಲಯ, ಟರೇಸ್ ಗಾರ್ಡನ್ ಸೇರಿದಂತೆ ಹಲವು ವ್ಯವಸ್ಥಗಳು ಇಲ್ಲಿದೆ.

ವಿಶ್ವದ ಶ್ರೀಮಂತರ ಪೈಕಿ ಅದಾನಿ-ರೋಶ್ನಿ ನಾಡರ್ ದಾಖಲೆ , ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್
 

click me!