ಸರ್ಕಾರವು ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆಟೋ-ಸೆಟಲ್ಮೆಂಟ್ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದ ಇಪಿಎಫ್‌ಒದ 7.5 ಕೋಟಿಗೂ ಹೆಚ್ಚು ಸದಸ್ಯರಿಗೆ ಅನುಕೂಲವಾಗಲಿದೆ. ಈ ನಿರ್ಧಾರವನ್ನು ಕೇಂದ್ರ ಟ್ರಸ್ಟಿಗಳ ಮಂಡಳಿಗೆ ಸಲ್ಲಿಕೆ ಮಾಡಲಾಗುತ್ತದೆ.
ಸರ್ಕಾರವು ಭವಿಷ್ಯ ನಿಧಿ (ಪಿಎಫ್) ಹಿಂಪಡೆಯುವ ಪ್ರಕ್ರಿಯೆಯನ್ನು ಸರಾಗಗೊಳಿಸಲು ಮುಂದಾಗಿದ್ದು, ಆಟೋ-ಸೆಟಲ್ಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಮೂಲಕ ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) 7.5 ಕೋಟಿಗೂ ಹೆಚ್ಚು ಸದಸ್ಯರಿಗೆ "ಜೀವನದ ಸುಲಭತೆ"ಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಶ್ರೀನಗರದಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಮಿತಿಯನ್ನು ಏರಿಕೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.
ಈ ಶಿಫಾರಸನ್ನು ಈಗ ಕೇಂದ್ರ ಟ್ರಸ್ಟಿಗಳ ಮಂಡಳಿಗೆ (CBT) ಅನುಮೋದನೆಗಾಗಿ ಸಲ್ಲಿಕೆ ಮಾಡಲಾಗುತ್ತದೆ. ಕೇಂದ್ರ ಟ್ರಸ್ಟಿ ಮಂಡಳಿಯಿಂದ ಇದರ ಸಮ್ಮತಿ ಸಿಕ್ಕ ನಂತರ ಸರ್ಕಾರಿ ಘೋಷಣೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಒಮ್ಮೆ ಮಂಜೂರಾದ ಬಳಿಕ EPFO ಸದಸ್ಯರು ಆಟೋ-ಸೆಟಲ್ಮೆಂಟ್ ವ್ಯವಸ್ಥೆಯ ಮೂಲಕ 5 ಲಕ್ಷ ರೂ.ಗಳವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ EPFO ನ ಕ್ಲೈಮ್ ಪ್ರಕ್ರಿಯೆಗಾಗಿ ಆಟೋ ಅಪ್ರೋವಲ್ ವಿಧಾನವನ್ನು ಏಪ್ರಿಲ್ 2020 ರಲ್ಲಿ ಪರಿಚಯಿಸಲಾಯಿತು. ಅಂದಿನಿಂದ, ಶಿಕ್ಷಣ, ಮದುವೆ ಮತ್ತು ವಸತಿ ಸೇರಿದಂತೆ ಇತರ ಅಗತ್ಯ ಅಗತ್ಯಗಳನ್ನು ಪೂರೈಸಲು ಇದು ವಿಸ್ತರಿಸಿದೆ. ಮೇ 2024 ರಲ್ಲಿ, ಸ್ವಯಂ-ಅನುಮೋದಿತ ಕ್ಲೈಮ್‌ಗಳ ಮಿತಿಯನ್ನು 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು.
ವಿತ್‌ಡ್ರಾ ರಿಕ್ವೆಸ್ಟ್ ನೀಡಿದ ಮೂರೇ ದಿನಕ್ಕೆ ಪಿಎಫ್ ಹಣ ನಿಮ್ಮ ಖಾತೆಗೆ: EPFO ಹೊಸ ರೂಲ್ಸ್!
ಅಡ್ವಾನ್ಸ್ ಕ್ಲೈಮ್ ಮಿತಿ:
ಕಳೆದ ಮೇ 2024 ರಲ್ಲಿ, ಮೊದಲೇ ಉದ್ಯೋಗಿಗಳ ಭವಿಷ್ಯ ನಿಧಿ ಹಣ ಪಡೆಯಲು ಅಡ್ವಾನ್ಸ್ ಕ್ಲೈಮ್‌ನ ಆಟೋ ಸೆಟಲ್ಮೆಂಟ್ ಮಿತಿಯನ್ನು 50,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ವೈದ್ಯಕೀಯ, ಶಿಕ್ಷಣ, ವಿವಾಹ ಮತ್ತು ಮನೆ ಖರೀದಿ/ನಿರ್ಮಾಣ ಈ ನಾಲ್ಕು ವಿಶೇಷ ಸಂದರ್ಭಗಳಲ್ಲಿ ಕಾರ್ಮಿಕ ಭವಿಷ್ಯ ನಿಧಿಯಿಂದ ಹಣ ಪಡೆಯಲು ಆಟೋ ಸೆಟಲ್‌ಮೆಂಟ್ ಅನುಮತಿ ನೀಡಲಾಗಿದೆ.
ಸುಲಭ ಪ್ರಕ್ರಿಯೆ:
ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗೆ ಆಟೋ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದರಿಂದ ಹೆಚ್ಚಿನ ಕ್ಲೈಮ್‌ಗಳು ಮೂರು ದಿನಗಳಲ್ಲಿ ಮುಗಿಯುತ್ತದೆ. ಈ ಮೊದಲು ಇದರ ಪ್ರಕ್ರಿಯೆಗೆ ಕೆಲವು ವಾರಗಳು ಬೇಕಾಗುತ್ತಿದ್ದವು.
ಆಟೋ ಸೆಟಲ್‌ಮೆಂಟ್ ಮಿತಿ:
ಪ್ರಸ್ತುತ, ಇಪಿಎಫ್‌ಒ ಆಟೋ ಸೆಟಲ್ಮೆಂಟ್ ಮಿತಿಯನ್ನು ಹೆಚ್ಚಿಸಿರುವುದರಿಂದ, ಕ್ಲೈಮ್ ಇತ್ಯರ್ಥದ ಸಂಖ್ಯೆ ಮೊದಲ ಬಾರಿಗೆ 6 ಕೋಟಿ ದಾಟುವ ನಿರೀಕ್ಷೆಯಿದೆ. ಆಟೋ ಸೆಟಲ್‌ಮೆಂಟ್ ಸದಸ್ಯರ ಸಂಖ್ಯೆ ಕಳೆದ ಹಣಕಾಸು ವರ್ಷದಲ್ಲಿ 90 ಲಕ್ಷಕ್ಕಿಂತ ಕಡಿಮೆ ಇತ್ತು. ಈ ವರ್ಷ ಸುಮಾರು 2 ಕೋಟಿಗೆ ಏರಿಕೆಯಾಗಿದೆ. ಅಂದರೆ ಎರಡರಷ್ಟು ಹೆಚ್ಚಳವಾಗಿದೆ.
ಇಪಿಎಫ್‌ಓ ಅಲ್ಲಿ ಬ್ಯಾಂಕ್ ಅಕೌಂಟ್‌ಗಳನ್ನು ಸೇರಿಸೋದು, ಬದಲಾಯಿಸೋದು ಹೇಗೆ?
ಮಾರ್ಚ್‌ವರೆಗಿನ ಕ್ಲೈಮ್ ಎಷ್ಟಿದೆ?
ಪಿಎಫ್‌ಒದ ಆಟೋ-ಸೆಟಲ್‌ಮೆಂಟ್ ವ್ಯವಸ್ಥೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2023-24 ರಲ್ಲಿ 89.52 ಲಕ್ಷ ಕ್ಲೇಮ್‌ಗಳಿಗೆ ಹೋಲಿಸಿದರೆ ಮಾರ್ಚ್ 6, 2025ರವೆರೆಗೆ ದಾಖಲೆಯ 2.16 ಕೋಟಿ ಆಟೋ-ಕ್ಲೇಮ್ ಮಾಡಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ ಆಟೋ-ಮೋಡ್ ಕ್ಲೇಮ್‌ಗಳಲ್ಲಿ 95% ಕೇವಲ ಮೂರು ದಿನಗಳಲ್ಲಿ ಇತ್ಯರ್ಥಪಡಿಸಲಾಗಿದೆ. ಇದು ಹಿಂದಿನ 10 ದಿನಗಳ ಸೆಟಲ್‌ಮೆಂಟ್ ಅವಧಿಗಿಂತ ಭಾರಿ ಇಳಿಕೆಯಾಗಿದೆ. ರಿಜೆಕ್ಷನ್ ದರವು ಕೂಡ ಸುಧಾರಿಸಿದೆ, 2024 ರಲ್ಲಿ 50% ಇದ್ದಿದ್ದು ಈಗ 30% ಕ್ಕೆ ಇಳಿದಿದೆ.
ಪಿಎಫ್ ಕ್ಲೈಮ್‌ಗಳ ಸಂಖ್ಯೆ:
ಈಗ, ಕ್ಲೈಮ್‌ಗಳಲ್ಲಿ ಕೇವಲ 8% ಸದಸ್ಯರು ಮತ್ತು ಕೆಲಸ ಮಾಡುವ ಸಂಸ್ಥೆಗಳ ಪ್ರಮಾಣಪತ್ರದ ಅಗತ್ಯವಿದೆ. 48% ಕ್ಲೈಮ್‌ಗಳನ್ನು ನೇರವಾಗಿ ಸದಸ್ಯರು ಸಲ್ಲಿಸುತ್ತಾರೆ. 44% ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. ಇಪಿಎಫ್‌ಒ ಈಗಾಗಲೇ ಪ್ರಕ್ರಿಯೆಗಳ ಸಂಖ್ಯೆಯನ್ನು 27 ರಿಂದ 18 ಕ್ಕೆ ಇಳಿಸಿದೆ. ಇದನ್ನು 6 ಕ್ಕೆ ಇಳಿಸುವ ಯೋಜನೆ ಇದೆ.