ಲಂಡನ್‌ನಲ್ಲಿ ಬರೋಬ್ಬರಿ 595 ಕೋಟಿಯ ಐಷಾರಾಮಿ ಬಂಗಲೆ ಹೊಂದಿರುವ ಮುಕೇಶ್ ಅಂಬಾನಿ!

By Vinutha PerlaFirst Published Apr 20, 2024, 6:18 PM IST
Highlights

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಫ್ಯಾಮಿಲಿ ಸದಸ್ಯರು ಬರೋಬ್ಬರಿ 15,000 ಕೋಟಿ ಮೌಲ್ಯದ ಬಹುಮಹಡಿ ಬಂಗಲೆ ಆಂಟಿಲಿಯಾದಲ್ಲಿ ವಾಸಿಸುತ್ತಾರೆ. ಆದರೆ ಇದಲ್ಲದೆಯೂ ಲಂಡನ್‌ನಲ್ಲಿಯೂ ಅಂಬಾನಿಗೆ ಕೋಟಿ ಮೌಲ್ಯದ ಬಂಗಲೆಯಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ 1983000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ದೇಶದ ಅತಿ ದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿದ್ದಾರೆ. ವಿಶ್ವದ ಶ್ರೀಮಂತ ಶತಕೋಟ್ಯಾಧಿಪತಿಗಳ ಫೋರ್ಬ್ಸ್ ಪಟ್ಟಿಯಲ್ಲಿ, ಅಂಬಾನಿ ಪ್ರಸ್ತುತ 12ನೇ ಸ್ಥಾನದಲ್ಲಿದ್ದಾರೆ . ಅಂದಾಜು 7,93,826 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಕೈಗಾರಿಕೆಗಳಲ್ಲಿ ಅಂಗಸಂಸ್ಥೆಗಳನ್ನು ಹೊಂದಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 2023 ರಲ್ಲಿ ಭಾರತ ಮತ್ತು ಯುಕೆಯಲ್ಲಿ ಮೂರು ಆಸ್ತಿಗಳನ್ನು ಒಟ್ಟಿಗೆ ನಿರ್ವಹಿಸಲು ಒಬೆರಾಯ್ ಹೊಟೇಲ್ ಮತ್ತು ರೆಸಾರ್ಟ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಘೋಷಿಸಿತು. ಮಾತ್ರವಲ್ಲ ಮುಕೇಶ್ ಅಂಬಾನಿ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ 592 ಕೋಟಿ ರೂಪಾಯಿಗಳ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ. 900 ವರ್ಷಗಳಷ್ಟು ಹಳೆಯದಾದ ಆಸ್ತಿಯಾಗಿರುವ ಈ ಕಟ್ಟಡ ಎರಡು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ, ಗೋಲ್ಡ್ ಫಿಂಗರ್ (1964) ಮತ್ತು ಟುಮಾರೊ ನೆವರ್ ಡೈಸ್ (1997)ನಲ್ಲಿ ಈ ಬಂಗಲೆಯನ್ನು ನೋಡಬಹುದು.

7.65 ಲಕ್ಷ ಕೋಟಿ ರೂ. ಒಡೆಯ ಮುಖೇಶ್ ಅಂಬಾನಿ ಹೇಳಿದ ವ್ಯಾಪಾರೀ ಪಾಠಗಳಿವು..

ಮುಕೇಶ್ ಅಂಬಾನಿ ನೇತೃತ್ವದ RIL 2021 ರಲ್ಲಿ ಐಷಾರಾಮಿ ಸ್ಟೋಕ್ ಪಾರ್ಕ್ ಅನ್ನು ಖರೀದಿಸಲು ಸುಮಾರು 592 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. 2019 ರಲ್ಲಿ ಎಲ್ಲಾ ನಗದು ವ್ಯವಹಾರದಲ್ಲಿ 620 ಕೋಟಿ ರೂಪಾಯಿಗಳಿಗೆ ಪ್ರಸಿದ್ಧ ಬ್ರಿಟಿಷ್ ಆಟಿಕೆ ಅಂಗಡಿ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಜಾನ್ ಪೆನ್ ಐಷಾರಾಮಿ ಆಸ್ತಿಯನ್ನು 1066 ರಲ್ಲಿ ನಿರ್ಮಿಸಿದ ನಂತರ 1760ರಲ್ಲಿ ನವೀಕರಿಸಿದರು. 49 ಭವ್ಯವಾದ ಕೊಠಡಿಗಳು, ಮೂರು ಊಟದ ರೆಸ್ಟೋರೆಂಟ್‌ಗಳು, 4,000 ಚದರ ಅಡಿಗಳಷ್ಟು ವ್ಯಾಪಿಸಿರುವ ಅತ್ಯಾಧುನಿಕ ಜಿಮ್, ಆರೋಗ್ಯ ಕೇಂದ್ರ, ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳು , 13 ಟೆನಿಸ್ ಕೋರ್ಟ್‌ಗಳು ಮತ್ತು ದೊಡ್ಡ ಗಾಲ್ಫ್ ಕೋರ್ಸ್‌ನ್ನು ಹೊಂದಿದೆ.

ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ ಪ್ರಯಾಣಿಸೋ ಅಲ್ಟ್ರಾ ಲಕ್ಸುರಿಯಸ್‌ ಬಾಂಬ್ ಪ್ರೂಫ್‌ ಕಾರಿನ ಬೆಲೆ ಇಷ್ಟೊಂದಾ?

ಅಂಬಾನಿ ಕುಟುಂಬವು ಪ್ರಸ್ತುತ ಆಂಟಿಲಿಯಾದಲ್ಲಿ ನೆಲೆಸಿದೆ. ಇದು ಬಕಿಂಗ್‌ಹ್ಯಾಮ್‌ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ನಿವಾಸವಾಗಿದೆ. ಬರೋಬ್ಬರಿ 15,000 ಕೋಟಿ ಮೌಲ್ಯದ ಬಹುಮಹಡಿ ಬಂಗಲೆಯಲ್ಲಿ ಅಂಬಾನಿ ಕುಟುಂಬ ಸದಸ್ಯರು ವಾಸಿಸುತ್ತಿದ್ದಾರೆ. ಇದಲ್ಲದೆ ಅಂಬಾನಿಗಳು ದುಬೈ ಮತ್ತು ನ್ಯೂಯಾರ್ಕ್‌ನಲ್ಲಿರುವ ಇತರ ಐಷಾರಾಮಿ ಮನೆಗಳ ಮಾಲೀಕರೂ ಹೌದು.

click me!