ಹುಟ್ಟಿದ ಐದೇ ತಿಂಗಳಿಗೆ 4.2 ಕೋಟಿ ರೂಪಾಯಿ ಸಂಪಾದಿಸಿದ ನಾರಾಯಣಮೂರ್ತಿ ಮೊಮ್ಮಗ!

By Santosh Naik  |  First Published Apr 19, 2024, 6:46 PM IST

ಇತ್ತೀಚೆಗೆ ಇನ್ಫೋಸಿಸ್‌ ಕಂಪನಿಯ ಸಹ ಸಂಸ್ಥಾಪಕರಾಗಿದ್ದ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ ಇನ್ಫೋಸಿಸ್‌ನ 15 ಲಕ್ಷ ಷೇರುಗಳು (0.04% ಪಾಲು) ಉಡುಗೊರೆಯಾಗಿ ನೀಡಿದ್ದರು. ಇದರ ಮೌಲ್ಯ 240 ಕೋಟಿ ರೂಪಾಯಿ ಆಗಿತ್ತು.


ಬೆಂಗಳೂರು (ಏ.19): ದೇಶದ ಪ್ರಮುಖ ಐಟಿ ಸೇವಾ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮೊಮ್ಮಗ ಏಕಗ್ರಾಹ್‌ ರೋಹನ್‌ ಹುಟ್ಟಿದ ಐದೇ ತಿಂಗಳಿಗೆ 4.2 ಕೋಟಿ ರೂಪಾಯಿ ಶ್ರೀಮಂತನಾಗಿದ್ದಾನೆ. ಇತ್ತೀಚೆಗೆ ಇನ್ಫೋಸಿಸ್‌ ಕಂಪನಿ ಡಿವಿಡೆಂಡ್‌ ಘೋಷಣೆ ಮಾಡಿದೆ. 15 ಲಕ್ಷ ಇನ್ಫೋಸಿಸ್‌ ಷೇರುಗಳನ್ನು ಹೊಂದಿರುವ ಏಕಗ್ರಾಹ್‌ ರೋಹನ್‌, 4.2 ಕೋಟಿ ರೂಪಾಯಿ ಮೊತ್ತದ ಡಿವಿಡೆಂಡ್‌ ಹಣವನ್ನು ತಮ್ಮ ಖಾತೆಯಲ್ಲಿ ಪಡೆಯಲಿದ್ದಾರೆ. ಕೆಲವು ತಿಂಗಳ ಹಿಂದೆ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ ಕಂಪನಿಯಲ್ಲಿ ಶೇ. 0.04 ಪಾಲು ಎನ್ನುವಂತೆ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಮೌಲ್ಯವೇ 240 ಕೋಟಿ ರೂಪಾಯಿ ಆಗಿತ್ತು. ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಏಕಗ್ರಾಹ್ ಇನ್ಫೋಸಿಸ್‌ನ 15,00,000 ಷೇರುಗಳನ್ನು ಹೊಂದಿದ್ದಾರೆ. ವಹಿವಾಟನ್ನು "ಆಫ್-ಮಾರ್ಕೆಟ್" ನಡೆಸಲಾಗಿದೆ ಎಂದು ಫೈಲಿಂಗ್ ಬಹಿರಂಗಪಡಿಸಿದೆ.

ಕಳೆದ ವರ್ಷ ನವೆಂಬರ್ 10 ರಂದು ಬೆಂಗಳೂರಿನಲ್ಲಿ ಜನಿಸಿದ ಏಕಗ್ರಾಪ್‌ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಕ್ಕಳಾಗಿದ್ದಾರೆ. ಏಕಗ್ರಾಹ್‌ ಮೂರ್ತಿ, ರೋಹನ್‌ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್‌ ಅವರ ಪುತ್ರನಾಗಿದ್ದರೆ, ಮಗಳು ಅಕ್ಷತಾ ಮೂರ್ತಿ ಹಾಗೂ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ದಂಪತಿಗೆ ಕೃಷ್ಣ ಹಾಗೂ ಅನೌಷ್ಕಾ ಹೆಸರಿನ ಇಬ್ಬರು ಪುತ್ರಿಯರಿದ್ದಾರೆ.

Tap to resize

Latest Videos

ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕ ಲಾಭದಲ್ಲಿ 30% ಏರಿಕೆ ಆಗಿದೆ ಎಂದು ಘೋಷಣೆ ಮಾಡಿದ.ೆ ಕಳೆದ ವರ್ಷದ ₹ 6,128 ಕೋಟಿಗೆ ಹೋಲಿಸಿದರೆ ₹ 7,969 ಕೋಟಿಗೆ ತಲುಪಿದೆ. ಆದಾಯವೂ ಅಲ್ಪ ಏರಿಕೆ ಕಂಡು ₹ 37,923 ಕೋಟಿಗೆ ತಲುಪಿದೆ. ಮಾರ್ಚ್ 2024 ರ ಆರ್ಥಿಕ ವರ್ಷದಲ್ಲಿ, ನಿವ್ವಳ ಲಾಭವು 8.9% ರಷ್ಟು ಏರಿಕೆಯಾಗಿ ₹ 26,233 ಕೋಟಿಗಳಿಗೆ ತಲುಪಿದೆ ಮತ್ತು ವಾರ್ಷಿಕ ಆದಾಯವು 4.7% ರಷ್ಟು ಏರಿಕೆಯಾಗಿ ₹ 1,53,670 ಕೋಟಿಗಳಿಗೆ ತಲುಪಿದೆ. ಇನ್ಫೋಸಿಸ್ ಮಂಡಳಿಯು ಪ್ರತಿ ಷೇರಿಗೆ ₹ 8 ರ ವಿಶೇಷ ಲಾಭಾಂಶದೊಂದಿಗೆ FY24 ಗಾಗಿ ಪ್ರತಿ ಷೇರಿಗೆ ₹ 20 ರ ಅಂತಿಮ ಲಾಭಾಂಶವನ್ನು ಶಿಫಾರಸು ಮಾಡಿದೆ. ಹೆಚ್ಚುವರಿಯಾಗಿ, ಇನ್ಫೋಸಿಸ್ 450 ಮಿಲಿಯನ್ ಯುರೋಗಳ ಮೌಲ್ಯದ ಎಲ್ಲಾ ನಗದು ವ್ಯವಹಾರದಲ್ಲಿ ಜರ್ಮನ್ ಸಂಸ್ಥೆ, ಇನ್-ಟೆಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಮೊಮ್ಮಗನಿಗೆ 243 ಕೋಟಿ ಮೌಲ್ಯದ ಇನ್ಫಿ ಷೇರು ಉಡುಗೊರೆ ಕೊಟ್ಟ ನಾರಾಯಣಮೂರ್ತಿ, 4ತಿಂಗಳ ಮಗುವೀಗ ಮಿಲಿಯನೇರ್!

ಮುಂದಿನ ಹಣಕಾಸು ವರ್ಷದಲ್ಲಿ, ಇನ್ಫೋಸಿಸ್ 1-3% ಆದಾಯದ ಬೆಳವಣಿಗೆಯನ್ನು ನಿರೀಕ್ಷೆ ಮಾಡಿದ್ದಾಗಿ ತಿಳಿಸಿದೆ. ಅದರೆ, ಟಿಸಿಎಸ್‌ಗೆ ಹೋಲಿಸಿದರೆ, ಇನ್ಫೋಸಿಸ್‌ ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ನಿರೀಕ್ಷಿತ ವೇಗವಾಗಿ ಬೆಳೆದಿಲ್ಲ ಎಂದು ಬ್ಯುಸಿನೆಸ್‌ ಟುಡೇ ವರದಿ ಮಾಡಿದೆ.

ದೀಪಾವಳಿ ಮುನ್ನವೇ ಮತ್ತೊಮ್ಮೆ ಅಜ್ಜ-ಅಜ್ಜಿ ಆದ ನಾರಾಯಣ ಮೂರ್ತಿ, ಸುಧಾ ಮೂರ್ತಿ!

click me!