ದೀಪಾವಳಿ ಮುಹೂರ್ತ ಟ್ರೇಡಿಂಗ್; ಅ.24ರಂದು ರಜೆಯಿದ್ರೂ ಒಂದು ಗಂಟೆ ತೆರೆದಿರಲಿವೆ ಷೇರು ಮಾರುಕಟ್ಟೆಗಳು

Published : Oct 13, 2022, 04:55 PM IST
ದೀಪಾವಳಿ ಮುಹೂರ್ತ ಟ್ರೇಡಿಂಗ್; ಅ.24ರಂದು ರಜೆಯಿದ್ರೂ ಒಂದು ಗಂಟೆ ತೆರೆದಿರಲಿವೆ ಷೇರು ಮಾರುಕಟ್ಟೆಗಳು

ಸಾರಾಂಶ

*ಅ.24ರಂದು ಮುಹೂರ್ತ ಟ್ರೇಡಿಂಗ್ ಪ್ರಯುಕ್ತ ಒಂದು ಗಂಟೆ ತೆರೆದಿರುವ  ಎನ್ ಎಸ್ ಇ ಹಾಗೂ ಬಿಎಸ್ ಇ  *ಸಂಜೆ 6:15ರಿಂದ  7:15ರ ತನಕ ನಡೆಯಲಿದೆ ಟ್ರೇಡಿಂಗ್ *ಅನುಭವಿ ಹೂಡಿಕೆದಾರರು ಈ ದಿನ ಹೂಡಿಕೆ ಮಾಡೋದು ಪಕ್ಕಾ

ಮುಂಬೈ (ಅ.13): ದೀಪಾವಳಿ ಹಬ್ಬದಂದು ಅಂದರೆ ಅ.24ರಂದು  ಷೇರು ಮಾರುಕಟ್ಟೆಗಳಾದ ಎನ್ ಎಸ್ ಇ ಹಾಗೂ ಬಿಎಸ್ ಇ 50 ವರ್ಷಗಳ ಹಳೆಯ 'ಮುಹೂರ್ತ ಟ್ರೇಡಿಂಗ್' ಸಂಪ್ರದಾಯದ ಭಾಗವಾಗಿ ಒಂದು ಗಂಟೆ ತೆರೆದಿರುತ್ತದೆ. ಮುಹೂರ್ತ ಟ್ರೇಡಿಂಗ್ ಅನ್ನು ಹೊಸ ಸಂವತ್ಸರ 2079ರ ಪ್ರಾರಂಭದ ದ್ಯೋತಕವಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ದಿನ ಷೇರು ಮಾರುಕಟ್ಟೆ ಟ್ರೇಡಿಂಗ್ ಗೆ ಶುಭ ದಿನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಾಂಪ್ರದಾಯಿಕ ಉದ್ಯಮ ಸಮುದಾಯವು ಈ ದಿನ ಟ್ರೇಡಿಂಗ್ ಮಾಡುತ್ತಾರೆ. ಬಿಎಸ್ ಇ ಹಾಗೂ ಎನ್ ಎಸ್ ಇಯಲ್ಲಿ ಲಭ್ಯವಿರುವ ನೋಟಿಸ್ ಪ್ರಕಾರ ಈಕ್ವಿಟೀಸ್, ಈಕ್ವಿಟಿ ಎಫ್ ಆಂಡ್ ಒ, ಕರೆನ್ಸಿ ಎಫ್ ಆಂಡ್ ಒ ಸಂಜೆ 6:15ಕ್ಕೆ ಪ್ರಾರಂಭವಾಗಲಿದ್ದು, ಒಂದು ಗಂಟೆ ಬಳಿಕ ಅಂದರೆ 7:15ಕ್ಕೆ ಅಂತ್ಯವಾಗಲಿದೆ. ಪ್ರೀ ಒಪನ್ ಸೆಷನ್ ಸಂಜೆ 6ಕ್ಕೆ ಪ್ರಾರಂಭವಾಗಿ 6.08ಕ್ಕೆ ಮುಕ್ತಾಯವಾಗಲಿದೆ. ಕಾಮಡಿಟಿ ಡಿರೈವೇಟಿವ್ ವಲಯದಲ್ಲಿ ಕೂಡ ಟ್ರೇಡಿಂಗ್ ಸಂಜೆ  6:15ಕ್ಕೆ ಪ್ರಾರಂಭವಾಗಿ 7:15ಕ್ಕೆ ಮುಕ್ತಾಯವಾಗಲಿದೆ. ಆದರೆ, ಟ್ರೇಡ್ ಮಾರ್ಪಾಡಿಗೆ ಸಂಜೆ 7:25ರ ತನಕ ಸಮಯಾವಕಾಶವಿದೆ. ಇನ್ನು ಕರೆನ್ಸಿ ಡೆರೈವೇಟಿವ್ ಸೆಗ್ಮೆಂಟ್ ನಲ್ಲಿ ಸಂಜೆ 6:15ರಿಂದ 7:15ರ ತನಕ ಸಮಯಾವಕಾಶವಿದೆ. ಸಂಜೆ 7:25ರ ತನಕ ಕ್ರಾಸ್ ಕರೆನ್ಸಿ ಡಿರೈವೇಟಿವ್ಸ್ ಟ್ರೇಡ್ ಮಾರ್ಪಾಡಿಗೆ ಸಂಜೆ  7:25ರ ತನಕ ಅವಕಾಶವಿದೆ. ಇನ್ನು ಟ್ರೇಡ್ ಆನುಲ್ಮೆಂಟ್ ಮನವಿಗಳನ್ನು ಸಂಜೆ 7:30ರ ತನಕ ಸಲ್ಲಿಸಲು ಅವಕಾಶವಿದೆ.

ಈ ಕುರಿತ ಯಾವುದೇ ಪ್ರಶ್ನೆಗಳು ಅಥವಾ ಅನುಮಾನಗಳಿಗೆ ಬಿಎಸ್ ಇ ಸಹಾಯವಾಣಿ ಸಂಖ್ಯೆ 022-45720400/600 ಸಂಪರ್ಕಿಸಬಹುದು. ಅಥವಾ bsehelp@bseindia.com ಇ-ಮೇಲ್ ಮಾಡಬಹುದು. 

Railway ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್‌: 78 ದಿನಗಳ ಬೋನಸ್‌ ಭಾಗ್ಯ

ಏನಿದು ಮುಹೂರ್ತ ಟ್ರೇಡಿಂಗ್?
ಮುಹೂರ್ತ ಟ್ರೇಡಿಂಗ್ ಅನ್ನು ಮೊದಲಿಗೆ ಪರಿಚಯಿಸಿದ್ದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (BSE).1957ರಲ್ಲಿ ದೀಪಾವಳಿಯಂದು ಷೇರುಗಳ ಟ್ರೇಡಿಂಗ್ ಗೆ ಒಂದು ಗಂಟೆ ಮೀಸಲಿಡುವ ಮೂಲಕ ಈ ಪರಂಪರೆಗೆ ಬಿಎಸ್ ಇ ನಾಂದಿ ಹಾಡಿತು. ದೀಪಾವಳಿ ದಿನ ಇತರ ಸಮಯದಲ್ಲಿ ಷೇರು ಮಾರುಕಟ್ಟೆ ಕ್ಲೋಸ್ ಆಗಿರುತ್ತದೆ. ಆದರೆ, ಈ ಶುಭ ಮುಹೂರ್ತದ ಸಮಯದಲ್ಲಿ ಕೇವಲ ಒಂದು ಗಂಟೆ ತೆರೆದಿರುತ್ತದೆ. ಈ ಸಮಯದಲ್ಲಿ ಟ್ರೇಡಿಂಗ್ ನಡೆಸುವುದು ಶುಭದಾಯಕ ಎಂಬ ನಂಬಿಕೆ ಕೂಡ ಇದೆ. ಅಲ್ಲದೆ, ಈ ಸಂಪ್ರದಾಯದಲ್ಲಿ ಧರ್ಮ ಹಾಗೂ ಸಂಸ್ಕೃತಿ ಸಮ್ಮಿಲನವಾಗಿರುವ ಕಾರಣ ಇದನ್ನು ಆಸಕ್ತಿದಾಯಕ ಆಚರಣೆಯನ್ನಾಗಿ ಪರಿಗಣಿಸಲಾಗುತ್ತದೆ. ಹಿಂದು ಸಂಪ್ರದಾಯದ ಪ್ರಕಾರ ಈ ವರ್ಷದ ದೀಪಾವಳಿ 2079ನೇ ಸಂವತ್ಸರದ ಪ್ರಾರಂಭವಾಗಿದ್ದು, ಹೊಸ ಆರ್ಥಿಕ ಸಾಲಿನ ಪ್ರಾರಂಭವಾಗಿದೆ. ಟ್ರೇಡರ್ಸ್ ಕೇವಲ ಒಂದು ಗಂಟೆಯಲ್ಲಿ ಷೇರ್ ಟ್ರೇಡಿಂಗ್ ನಡೆಸುತ್ತಾರೆ. ಹೀಗಾಗಿ ಇದನ್ನು ಮುಹೂರ್ತ ಟ್ರೇಡಿಂಗ್ ಎನ್ನುತ್ತಾರೆ. ಮುಹೂರ್ತ ಟ್ರೇಡಿಂಗ್ 2022 ಸಂಜೆ  6:15 ಹಾಗೂ 7:15ರ ನಡುವೆ ನಡೆಯಲಿದೆ. 

ಮತ್ತೆ ಏರಿಕೆ ಕಂಡ ಚಿಲ್ಲರೆ ಹಣದುಬ್ಬರ, ಸೆಪ್ಟೆಂಬರ್ ನಲ್ಲಿ ಶೇ.7.41ಕ್ಕೆ ಹೆಚ್ಚಳ

ಮುಹೂರ್ತ ಟ್ರೇಡಿಂಗ್ ಮಹತ್ವ
1957ರಲ್ಲಿ ಬಿಎಸ್ ಇ ಪ್ರಾರಂಭಿಸಿದ ಈ ಒಂದು ಗಂಟೆ ಅವಧಿಯ ದೀಪಾವಳಿ ಷೇರು ಟ್ರೇಡಿಂಗ್ ಸಂಪ್ರದಾಯವನ್ನು1992ರಲ್ಲಿ ಎನ್ ಎಸ್ ಇ ಕೂಡ ಆರಂಭಿಸಿತು. ಅಲ್ಲಿಂದ ಮುಂದೆ ಮುಹೂರ್ತ ಟ್ರೇಡಿಂಗ್ ಸಮಯದಲ್ಲಿ ಯಾವುದೇ ಒಪ್ಪಂದ ನಡೆಸಿದರೂ ಅದನ್ನು ಶುಭಕಾರಕ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಅನುಭವಿ ಹೂಡಿಕೆದಾರರು ಈ ದಿನದಂದು ಖಂಡಿತವಾಗಿಯೂ ಷೇರುಗಳ ಮೇಲೆ ಹೂಡಿಕೆ ಮಾಡಿಯೇ ಮಾಡುತ್ತಾರೆ. ಆ ಮೂಲಕ ಹೂಡಿಕೆದಾರರು ಹೊಸ ಆರ್ಥಿಕ ವರ್ಷವನ್ನು ದೀಪಾವಳಿ ಶುಭ ಮುಹೂರ್ತದ ದಿನ ಟ್ರೇಡಿಂಗ್ ನಡೆಸುವ ಮೂಲಕ ಸ್ವಾಗತಿಸುತ್ತಾರೆ. ಮುಹೂರ್ತ ಟ್ರೇಡಿಂಗ್ ಸಂಪೂರ್ಣವಾಗಿ ಸಂಪ್ರದಾಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಜ್ಞರು ಹೇಳುತ್ತಾರೆ. ಬಹುತೇಕ ಜನರು ಈ ದಿನದಂದು ಷೇರುಗಳನ್ನು ಖರೀದಿಸುತ್ತಾರೆ. ಈ ಹೂಡಿಕೆ ಅತ್ಯಂತ ಚಿಕ್ಕ ಪ್ರಮಾಣದಾಗಿದ್ದು, ಸಾಂಕೇತಿಕವಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?