ಅಯ್ಯೋ… ಏನ್ರೀ.. ಬಂಗಾರದ ಬೆಲೆ ಇಷ್ಟೆಲ್ಲ ಹೆಚ್ಚಾಗೋಯ್ತು, ಬಂಗಾರ ತಗೋಳೋದು ಗಗನಕುಸುಮ ಆಗೋಯ್ತಲ್ರೀ ಎಂದು ಮಧ್ಯಮ ವರ್ಗದವರು ಗೋಳಿಡುತ್ತಿದ್ದರೆ, ಅತ್ತ ಹೂಡಿಕೆದಾರರು ಮಾತ್ರ ಚಿನ್ನದ ಮೇಲೆ ಹೂಡಿಕೆ ಮಾಡಿ ದುಪ್ಪಟ್ಟು ಹಣ ಮಾಡಬಹುದು ಅಂತ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ಭವಿಷ್ಯವಾಣಿಯೊಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಆಗಲಿದೆ ಎಂದು ಹೇಳಿರೋದು ಸಂಚಲನ ಮೂಡಿಸಿದೆ.
ಬಂಗಾರದ ಬೆಲೆ ಇನ್ನೇನು 10 ಗ್ರಾಂಗೆ 1 ಲಕ್ಷ ರೂಪಾಯಿ ಮುಟ್ಟುವ ಸಮಯ ಬಹಳ ದೂರ ಏನಿಲ್ಲ. ಈಗ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 90 ಸಾವಿರ ದಾಟಿದೆ. ಬಂಗಾರ ತಗೋಳೋಣ ಅಂತಿದ್ವಿ. ಈ ಥರ ರೇಟ್ ಇದ್ರೆ ಏನ್ ಮಾಡೋದು ಅಂತ ಬಂಗಾರ ಪ್ರಿಯರು ಗೋಳಿಡುತ್ತಿದ್ದಾರೆ. ಮದುವೆ ಸಮಾರಂಭಗಳ ಸುಗ್ಗಿ ಸಮಯವಿರುವಾಗಲೇ ಈ ರೀತಿ ಆಗಿರೋದು ಅವರ ದುಃಖವನ್ನು ದುಪ್ಪಟ್ಟು ಮಾಡಿದೆ.
ಚಿನ್ನದ ಬೆಲೆ 56000 ರೂಪಾಯಿ ಆಗತ್ತಾ?
ಹೂಡಿಕೆದಾರರು ಚಿನ್ನ ಖರೀದಿಸಿ ಹಣ ಮಾಡುತ್ತಿದ್ದಾರೆ. ಈ ಮಧ್ಯೆ ಬಂಗಾರದ ಬೆಲೆ ಇಳಿಯತ್ತಾ ಎಂಬ ಆಸೆಯೂ ಇದೆ. ಬಂಗಾರ ಯಾವತ್ತಿದ್ರೂ ಏರತ್ತೇ ವಿನಃ ಅಬ್ಬಬ್ಬಾ ಅಂದರೆ ಒಂದು ಸಾವಿರವೋ ಎರಡು ಸಾವಿರವೋ ಇಳಿಯಬಹುದು ಎನ್ನಲಾಗುತ್ತಿದೆ. ಆದರೆ ಶೇ.38ರಷ್ಟು ಚಿನ್ನದ ಬೆಲೆ ಕುಸಿಯಲಿದೆ ಎನ್ನಲಾಗುತ್ತಿದೆ. ಅಂದರೆ ಬಂಗಾರದ ಬೆಲೆ 56 ಸಾವಿರ ರೂಪಾಯಿಗಿಂತ ಕಡಿಮೆಯಾಗಲಿದೆ ಎಂಭ ಭವಿಷ್ಯ ಹೊರಬಿದ್ದಿದೆ.
ಶುಭ ಶುಕ್ರವಾರ ಚಿನ್ನ ಖರೀದಿಸೋ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ ಇಂದಿನ ಬೆಲೆ
ಎಷ್ಟು ಕಡಿಮೆ ಆಗತ್ತಾ?
ಅಮೆರಿಕದ ಮಾರ್ನಿಂಗ್‌ಸ್ಟಾರ್‌ನ ವಿಶ್ಲೇಷಕ ಜಾನ್ ಮಿಲ್ಸ್ ಅವರು “ಮುಂಬರುವ ಕೆಲ ವರ್ಷಗಳಲ್ಲಿ ಬಂಗಾರದ ಬೆಲೆ ಶೇ.38ರಷ್ಟು ಕುಸಿಯಲಿದೆ ಎಂದಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3,100 ಡಾಲರ್‌ಗಳಿಗಿಂತ ಹೆಚ್ಚಾಗಿದೆ. ಈ ಬೆಲೆಯಲ್ಲಿ ಶೇ.38 ರಿಂದ ಶೇ.40ರಷ್ಟು ಇಳಿಕೆ ಕಂಡರೆ ಭಾರತದಲ್ಲಿ 10 ಗ್ರಾಂ ಬಂಗಾರವು 55 ಸಾವಿರ ರೂಪಾಯಿನಿಂದ 60 ಸಾವಿರ ರೂಪಾಯಿಗೆ ಇಳಿಯಬಹುದು. ಜಾನ್ ಮಿಲ್ಸ್ ಅವರು ಚಿನ್ನದ ಬೆಲೆ ಪ್ರಸ್ತುತ ಔನ್ಸ್‌ಗೆ 3,080 ಡಾಲರ್‌ನಿಂದ 1,820 ಡಾಲರ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಿರೋದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಯಾಕೆ ಚಿನ್ನದ ದರ ಕಡಿಮೆ ಆಗತ್ತೆ?
ಆರ್ಥಿಕ ಅನಿಶ್ಚಿತತೆ, ಹಣದುಬ್ಬರ, ಭೌಗೋಳಿಕ, ರಾಜಕೀಯ ಸಮಸ್ಯೆಗಳು ಚಿನ್ನದ ರೇಟ್ ಕಡಿಮೆ ಆಗಲೂ ಕಾರಣ ಆಗಬಹುದು ಎನ್ನಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಹೂಡಿಕೆದಾರರು ಚಿನ್ನ ಬಳಸಿಕೊಂಡರು. ಈಗ ಕೆಲವು ವಿಷಯಗಳಿಂದ ಚಿನ್ನದ ಬೆಲೆ ಇಳಿಯಬಹುದು ಎನ್ನಲಾಗುತ್ತಿದೆ. ಜಾಗತಿಕವಾಗಿ ಚಿನ್ನದ ಉತ್ಪಾದನೆ ಹೆಚ್ಚಾಗಿದೆ. 2024ರಲ್ಲಿ ಚಿನ್ನದ ಗಣಿಗಾರಿಕೆ ಲಾಭವು ಔನ್ಸ್‌ಗೆ 950 ಡಾಲರ್ ಆಗಿದ್ರೆ, ಜಾಗತಿಕವಾಗಿ 2 ಲಕ್ಷದ 16 ಸಾವಿರದ 265 ಟನ್ ಆಗಿದೆ. ಆಸ್ಟ್ರೇಲಿಯಾ ಚಿನ್ನದ ಉತ್ಪಾದನೆ ಹೆಚ್ಚಿಸಿದೆ. ಕಳೆದ ವರ್ಷ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು 1,045 ಟನ್ ಚಿನ್ನ ಖರೀದಿಸಿವೆ. ಈಗ ಚಿನ್ನದ ಖರೀದಿ ಕಡಿಮೆ ಮಾಡಬಹುದು. ಇದರಿಂದ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಈಗಾಗಲೇ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಷೇರು ಮಾರುಕಟ್ಟೆ ಕುಸಿತ ಈಗ ಸರಿ ಹೋಗಿದೆ. ಅಂತೆಯೇ ಚಿನ್ನದ ಮಾರುಕಟ್ಟೆಯೂ ಸರಿ ಆಗಲಿದೆ ಎನ್ನಲಾಗಿದೆ. ಈ ಕಾರಣಗಳಿಂದ ಚಿನ್ನದ ಬೆಲೆ ಭಾರೀ ಇಳಿಯಲಿದೆ ಎಂದು ಜಾನ್ ಮಿಲ್ಸ್ ಹೇಳಿದ್ದಾರೆ.
ಯುಗಾದಿ ಬಂಪರ್: ಚಿನ್ನ-ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್- ಬೆಲೆಯಲ್ಲಿ ಕುಸಿತ; ಎಲ್ಲೆಲ್ಲಿ ಎಷ್ಟಿದೆ ರೇಟ್?
ನಿಜಕ್ಕೂ ಏನಾಗಬಹುದು?
ಮಾರ್ನಿಂಗ್‌ಸ್ಟಾರ್‌ನ ವಿಶ್ಲೇಷಕ ಜಾನ್ ಮಿಲ್ಸ್ ಅವರ ಭವಿಷ್ಯವನ್ನು ಕೆಲ ಪ್ರಮುಖ ಹಣಕಾಸು ಸಂಸ್ಥೆಗಳು ವಿರೋಧ ಮಾಡಿವೆ. ಬ್ಯಾಂಕ್ ಆಫ್ ಅಮೇರಿಕಾ, ಗೋಲ್ಡ್‌ಮನ್ ಸ್ಯಾಚ್ಸ್ ಹೇಳುವಂತೆ ಚಿನ್ನದ ಬೆಲೆಯು ಏರಿಕೆಯಾಗುತ್ತಾ? ಅಥವಾ ಬೆಲೆ ಇಳಿಯುತ್ತಾ ಎಂದು ಕಾದು ನೋಡಬೇಕಿದೆ.