ಮುಖೇಶ್ ಅಂಬಾನಿ ಅವರು ಇಶಾ ಅಂಬಾನಿ ತಮ್ಮ ಕಚೇರಿಯಲ್ಲಿ ಬಾಸ್ ಎಂದು ಹೇಳಿದ್ದಾರೆ. ಸಭೆಗಳಲ್ಲಿ ಇಶಾ ತಮ್ಮ ಕಾರ್ಯಕ್ಷಮತೆಗೆ ಫೀಡ್‌ಬ್ಯಾಕ್ ನೀಡುತ್ತಾರೆ ಮತ್ತು ಶ್ರೇಯಾಂಕಗಳನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ವ್ಯವಹಾರದಲ್ಲಿ ಮಹಿಳೆಯರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಮುಖೇಶ್ ಅಂಬಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಯುವ ಉದ್ಯಮಿಯಾಗಿ ತನ್ನದೇ ಆದ ಚಾಲು ಮೂಡಿಸಿದ್ದಾರೆ. ನಿಧಾನವಾಗಿ ತಮ್ಮ ಪ್ರಸಿದ್ಧ ಉದ್ಯಮಿ ತಂದೆಯ ದೈತ್ಯ ನೆರಳಿನಿಂದ ಹೊರಬರುತ್ತಿದ್ದಾರೆ. ಇಶಾ ಅಂಬಾನಿ ಅವರ ಇ-ಕಾಮರ್ಸ್ ವ್ಯವಹಾರ ಅಜಿಯೊ ಮತ್ತು ಬ್ಯೂಟಿ ಪ್ರೊಡಕ್ಟ್ ತಿರಾ ಸೇರಿದಂತೆ ರಿಲಯನ್ಸ್ ರಿಟೇಲ್‌ನ ತ್ವರಿತ ವಿಸ್ತರಣೆ ಇದಕ್ಕೆ ಸಾಕ್ಷಿಯಾಗಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಇಶಾ ಅವರ ಪಾತ್ರ ಮತ್ತು ಪ್ರಭಾವದ ಬಗ್ಗೆ ಅವರ ತಂದೆ ಮುಖೇಶ್ ಅಂಬಾನಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶನಿವಾರ ಮುಂಬೈನಲ್ಲಿ ನಡೆದ ಮಹಿಳಾ ಉದ್ಯಮಿಗಳ ಎಕ್ಸ್‌ಪ್ರೆಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ, ಇಶಾ ಅಂಬಾನಿ ತಮ್ಮ "ಕಚೇರಿಯಲ್ಲಿ ಬಾಸ್" ಎಂದಿದ್ದಾರೆ. ನನಗೆ ಈಗಾಗಲೇ ಕಚೇರಿಯಲ್ಲಿ ಬಾಸ್ ಇದ್ದಾರೆ. ಸಭೆಗಳಲ್ಲಿ ಇಶಾ ನನ್ನ ಕಾರ್ಯಕ್ಷಮತೆಗೆ ಫೀಡ್‌ಬ್ಯಾಕ್ ಕೊಡುತ್ತಾಳೆ. ಕೆಲವೊಮ್ಮೆ ನನಗೆ ಡಿ ಶ್ರೇಯಾಂಕವನ್ನು ನೀಡುತ್ತಾಳೆ. ವಾಸ್ತವವಾಗಿ ಆಕೆ ನಿರಂತರವಾಗಿ ನನಗೆ ಶ್ರೇಣೀಗಳನ್ನು ನೀಡುತ್ತಿರುತ್ತಾಳೆ ಎಂದು ಮಗಳ ಬಗ್ಗೆ ಮಾತನಾಡಿದ್ದಾರೆ.
ಹಾಲಿವುಡ್ ಅಂಗಳದಲ್ಲಿ ರಾತ್ರೋ ರಾತ್ರಿ ಫೇಮಸ್ ಆದ ಡಿಸೈನರ್, ಅಂಬಾನಿ ಕುಟುಂಬದ ರಹಸ್ಯ ರತ್ನ ಈಕೆ!
ಇಶಾ ಅವರ ಕರುಣಾಮಯಿ ಗುಣದ ಬಗ್ಗೆ ಮಾತನಾಡಿದ ಮುಖೇಶ್ ಅಂಬಾನಿ, ಇನ್ನು ಮುಂದೆ ಬಲಿಷ್ಠರು ಉಳಿಯುತ್ತಾರೆ ಎಂಬುದಲ್ಲ ಬದಲಾಗಿ ಕರುಣಾಮಯಿಗಳ ಉಳಿಯುತ್ತಾರೆ ಎಂದು ಜನ ನಂಬುತ್ತಾರೆ ಎಂದು ಹೇಳಿದರು.
ವ್ಯವಹಾರದಲ್ಲಿ ಮಹಿಳೆಯರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ತಮ್ಮ ಕಣ್ಣು ತೆರೆಸಿದ ಪತ್ನಿ ನೀತಾ ಅಂಬಾನಿ ಮತ್ತು ಅವರ ಮಗಳು ಇಶಾ ಅಂಬಾನಿ ಅವರಿಗೆ ಧನ್ಯವಾದ ಹೇಳಿದರು. ವ್ಯವಹಾರದಲ್ಲಿ ಮಹಿಳೆಯರ ಪಾತ್ರವನ್ನು ಶ್ಲಾಘಿಸುವ ವಿಷಯದಲ್ಲಿ ತಾವು "ತಡವಾಗಿ ಎಚ್ಚೆತ್ತುಕೊಂಡಿದ್ದೇ" ಆದರೆ ಕಳೆದ ದಶಕದಲ್ಲಿ ಇಶಾ ಮತ್ತು ನೀತಾ ನನ್ನ ಮನಸ್ಸನ್ನು ತೆರೆದಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹೇಳಿದರು.
ರಿಲಯನ್ಸ್‌ನಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಮಾತನಾಡಿದ ಅಂಬಾನಿ ತೈಲದಿಂದ ದೂರಸಂಪರ್ಕಕ್ಕೆ ಸಂಬಂಧಿಸಿದ ಸಂಘಟನೆಯು "ಮಹಿಳೆಯರನ್ನು ಮುಂಚೂಣಿಗೆ ತರುತ್ತಿದೆ" ಎಂದು ಹೇಳಿದರು. ರಿಲಯನ್ಸ್ ಇಂಡಸ್ಟ್ರೀಸ್‌ನ ಹೆಚ್ಚಿನ ಕಂಪನಿಗಳು, ಆಸ್ಪತ್ರೆಗಳು, ರಿಲಯನ್ಸ್ ಫೌಂಡೇಶನ್ ಮತ್ತು ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್‌ಎಂಎಸಿಸಿ) ಮಹಿಳಾ ನಾಯಕಿಯರನ್ನು ಹೊಂದಿವೆ. ರಿಲಯನ್ಸ್ ಫೌಂಡೇಶನ್ ಮತ್ತು ಎನ್‌ಎಂಎಸಿಸಿಗಳು ನೀತಾ ಅಂಬಾನಿ ಅವರ ನೇತೃತ್ವದಲ್ಲಿವೆ ಎಂದು ಹೇಳಿದರು.
ಐಐಟಿ-ಜೆಇಇಯಲ್ಲಿ ಟಾಪರ್ ಆದ ವೇದ್ ಲಹೋಟಿ ಮತ್ತು ಅಂಬಾನಿ ನಂಟಿನ ಕಥೆ!
ಮಹಿಳಾ ಉದ್ಯಮಿಗಳಿಗೆ ಸಲಹೆಯ ಬಗ್ಗೆ ಕೇಳಿದಾಗ, ಮುಖೇಶ್ ಅಂಬಾನಿ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ನೀವು ಯಾರೇ ಆಗಿರಲಿ, ಮನಸ್ಸಿನಲ್ಲಿ ಮೊದಲು ಗೆಲ್ಲುವ ಬಗ್ಗೆ ದೃಢ ನಿಶ್ಚಯ ಮಾಡಿ. ನೀವು ಯಾರು ಎಂಬುದನ್ನು ಮರೆತು ಗುರಿ ಇಟ್ಟುಕೊಳ್ಳಿ ಅಂತಿಮವಾಗಿ ಅಲ್ಲಿಯೇ ಇರುತ್ತೀರಿ" ಎಂದು ಹೇಳಿದರು.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಭಾರತದ ಅತ್ಯಂತ ಮೌಲ್ಯಯುತ ದೇಶೀಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಏಪ್ರಿಲ್ 6, 2025 ರ ಹೊತ್ತಿಗೆ ಅವರ ನಿವ್ವಳ ಮೌಲ್ಯ 91.3 ಬಿಲಿಯನ್ ಡಾಲರ್ ಎಂದಿದೆ.
ಅವರ ಏಕೈಕ ಪುತ್ರಿ ಇಶಾ ಅಂಬಾನಿ, ಆರ್‌ಐಎಲ್‌ನ ಚಿಲ್ಲರೆ ವ್ಯಾಪಾರ ವಿಭಾಗವಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮುಖ್ಯಸ್ಥರಾಗಿದ್ದಾರೆ. 33 ವರ್ಷದ ಉದ್ಯಮಿ ಅಂಬಾನಿ ರಿಲಯನ್ಸ್ ರಿಟೇಲ್ ವೆಂಚರ್ಸ್, ರಿಲಯನ್ಸ್ ಜಿಯೋ ಇಂಟರ್‌ಕಾಮ್ ಮತ್ತು ರಿಲಯನ್ಸ್ ಫೌಂಡೇಶನ್ ಸೇರಿದಂತೆ ಹಲವಾರು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಗಳ ಮಂಡಳಿಯಲ್ಲೂ ಇದ್ದಾರೆ.