ಫೋರ್ಬ್ಸ್ 2025 ರ ವರದಿಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ನಗರವು 123 ಶತಕೋಟ್ಯಾಧಿಪತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
2025 ರಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿರುವ ವಿಶ್ವದ ನಗರಗಳ ಪಟ್ಟಿಯನ್ನು ಅಮೇರಿಕನ್ ವ್ಯಾಪಾರ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿದೆ. ವಿಶ್ವದ ಶತಕೋಟ್ಯಧಿಪತಿಗಳು ಬಿಲಿಯನೇರ್‌ಗಳಾಗಿರುವ ಜನರ ವಾರ್ಷಿಕ ಶ್ರೇಯಾಂಕವಾಗಿದೆ, ಅಂದರೆ, ಅವರು 1 ಬಿಲಿಯನ್ ಯುಸ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ 800 ಕ್ಕೂ ಹೆಚ್ಚು ನಗರಗಳಲ್ಲಿ 3,028 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.
ಟಾಪ್ 10 ರಿಂದ ಇಳಿಮುಖವಾಗಿ ಯಾವ ನಗರ ನಂಬರ್ 1 ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
10. 56 ಶತ ಕೋಟಿ ಶ್ರೀಮಂತರನ್ನು ಹೊಂದಿರುವ 10 ನೇ ನಗರ ಲಾಸ್ ಏಂಜಲೀಸ್. 2024ರ ನಂತರ ಮೂರು ಶತಕೋಟ್ಯಧಿಪತಿಗಳು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ನಿವಾಸಿಗಳ ಒಟ್ಟು ನಿವ್ವಳ ಮೌಲ್ಯ 243 ಬಿಲಿಯನ್ ಡಾಲರ್ ಮತ್ತು ಲಾಸ್ ಏಂಜಲೀಸ್ ನಲ್ಲಿ ಅತ್ಯಂತ ಶ್ರೀಮಂತರು ಪೀಟರ್ ಥಿಯೆಲ್ ಅಂದಾಜು 16.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಈ ವರ್ಷದ ಜಗತ್ತಿನ ಟಾಪ್ 10 ಶ್ರೀಮಂತ ಮಹಿಳೆಯರ ಫೋರ್ಬ್ಸ್ ಪಟ್ಟಿ ರಿಲೀಸ್, ಭಾರತದ ಏಕೈಕ ಮಹಿಳೆಗೆ ಸ್ಥಾನ!
ಒಂಬತ್ತನೇ ಸ್ಥಾನಕ್ಕಾಗಿ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಶಾಂಘೈ ನಡುವೆ ಸಮಬಲದ ಪೈಪೋಟಿ ಇದೆ. ಯಾಕೆಂದರೆ ಶ್ರೀಮಂತರ ಸಂಖ್ಯೆ ಒಂದೇ ಆಗಿದೆ. ಆದರೆ ಒಟ್ಟು ನಿವ್ವಳ ಮೌಲ್ಯ ಕಡಿಮೆ ಇದೆ.
9. ಸ್ಯಾನ್ ಫ್ರಾನ್ಸಿಸ್ಕೋ 58 ಶತಕೋಟ್ಯಧಿಪತಿಗಳನ್ನು ಹೊಂದಿದೆ, 2024 ರಿಂದ ಎಂಟು ಜನ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನಗರದ ಒಟ್ಟು ನಿವ್ವಳ ಮೌಲ್ಯ 217 ಬಿಲಿಯನ್ ಡಾಲರ್ ಮತ್ತು ಶ್ರೀಮಂತ ನಿವಾಸಿ ಡಸ್ಟಿನ್ ಮೊಸ್ಕೊವಿಟ್ಜ್ ಅವರ ವೈಯಕ್ತಿಕ ನಿವ್ವಳ ಮೌಲ್ಯ 17 ಬಿಲಿಯನ್ ಡಾಲರ್ ಹೊಂದಿದ್ದಾರೆ.
8. 2024 ರಿಂದ ನಾಲ್ವರು ಶತಕೋಟ್ಯಧಿಪತಿಗಳನ್ನು ಸೇರಿಸಿಕೊಂಡ ನಂತರ ಶಾಂಘೈ ಕೂಡ 58 ಶತಕೋಟ್ಯಧಿಪತಿಗಳನ್ನು ಹೊಂದಿದೆ. ಅವರ ಒಟ್ಟು ನಿವ್ವಳ ಮೌಲ್ಯ 198 ಬಿಲಿಯನ್ ಡಾಲರ್ ಮತ್ತು ಶ್ರೀಮಂತ ನಿವಾಸಿ ಕಾಲಿನ್ ಹುವಾಂಗ್ 42.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
7. ಸಿಂಗಾಪುರದಲ್ಲಿ 60 ಶತಕೋಟ್ಯಧಿಪತಿಗಳಿದ್ದು, 2024 ರಿಂದ ಎಂಟು ಮಂದಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 259 ಬಿಲಿಯನ್ ಡಾಲರ್ ಮತ್ತು ಶ್ರೀಮಂತ ನಿವಾಸಿ ಜಾಂಗ್ ಯಿಮಿಂಗ್ ಆಗಿದ್ದು, ಒಟ್ಟು 65.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ.
ಮಹಿಳಾ ದಿನ ಸ್ಪೆಷಲ್: ಇವ್ರು ಜಗತ್ತಿನ ಟಾಪ್ 10 ಪವರ್‌ಫುಲ್ ಲೇಡೀಸ್, ಮೆಲೋನಿ ಟು ಜೇನ್ ಫ್ರೇಜರ್
6. 2024 ರಿಂದ ಇಬ್ಬರು ಶತಕೋಟ್ಯಧಿಪತಿಗಳನ್ನು ಕಳೆದುಕೊಂಡ ನಂತರ ಮುಂಬೈ 67 ಮಂದಿ ಶತಕೋಟ್ಯಧಿಪತಿಗಳನ್ನು ಹೊಂದಿದೆ. ಅವರ ಒಟ್ಟು ನಿವ್ವಳ ಮೌಲ್ಯ 349 ಬಿಲಿಯನ್ ಡಾಲರ್ ಮತ್ತು ಅತ್ಯಂತ ಶ್ರೀಮಂತ ನಿವಾಸಿ ಮುಖೇಶ್ ಅಂಬಾನಿ 92.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
5. ಬೀಜಿಂಗ್‌ನಲ್ಲಿ 68 ಶತಕೋಟ್ಯಧಿಪತಿಗಳು ವಾಸಿಸುತ್ತಿದ್ದಾರೆ, 2024 ರಿಂದ ಐದು ಮಂದಿ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 273 ಬಿಲಿಯನ್ ಡಾಲರ್ ಹಾಗೂ ಈ ನಗರದ ಶ್ರೀಮಂತ ನಿವಾಸಿ ಲೀ ಜುನ್ 43.5 ಬಿಲಿಯನ್ ಡಾಲರ್ ವೈಯಕ್ತಿಕ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
4. ಲಂಡನ್‌ನಲ್ಲಿ ಇಲ್ಲಿ 71 ಶತಕೋಟಿ ಆಸ್ತಿ ಇರುವ ಜನ ವಾಸಿಸುತ್ತಾರೆ. 2024 ರಿಂದ ಈ ಪಟ್ಟಿಗೆ ಒಂಬತ್ತು ಮಂದಿ ಸೇರಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 355 ಬಿಲಿಯನ್ ಡಾಲರ್ ಮತ್ತು ಈ ಪಟ್ಟಿಯಲ್ಲಿರುವ ಶ್ರೀಮಂತ ನಿವಾಸಿ ಲೆನ್ ಬ್ಲಾವಟ್ನಿಕ್ 29.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
3. 2024 ರಿಂದ ಇಬ್ಬರು ಶತಕೋಟ್ಯಧಿಪತಿಗಳನ್ನು ಕಳೆದುಕೊಂಡ ನಂತರ ಹಾಂಗ್ ಕಾಂಗ್ 72 ಶತಕೋಟ್ಯಧಿಪತಿಗಳನ್ನು ಹೊಂದಿದೆ. ಅವರ ಒಟ್ಟು ನಿವ್ವಳ ಮೌಲ್ಯ 309 ಬಿಲಿಯನ್ ಡಾಲರ್ ಮತ್ತು ಶ್ರೀಮಂತ ನಿವಾಸಿ ಲಿ ಕಾ-ಶಿಂಗ್ 38.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
2. ಮಾಸ್ಕೋದಲ್ಲಿ 90 ಮಂದಿ ಶತಕೋಟ್ಯಧಿಪತಿಗಳು ಇದ್ದಾರೆ.2024 ರಿಂದ 16 ಜನರು ಸೇರಿದ ಬಳಿಕ 90 ಜನವಾದರು. ಅವರ ಒಟ್ಟು ನಿವ್ವಳ ಮೌಲ್ಯ 409 ಬಿಲಿಯನ್ ಡಾಲರ್ ಇದೆ ಮತ್ತು ಶ್ರೀಮಂತ ನಿವಾಸಿ ವಾಗಿತ್ ಅಲೆಕ್ಪೆರೋವ್ 28.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ.
1. ನ್ಯೂಯಾರ್ಕ್ ನಗರದಲ್ಲಿ ಬರೋಬ್ಬರಿ 123 ಶತಕೋಟ್ಯಧಿಪತಿಗಳಿದ್ದು, ವಿಶ್ವದ ನಂಬರ್ 1 ಸ್ಥಾನದಲ್ಲಿದೆ. 2024 ರಿಂದ 13 ಮಂದಿ ಸೇರಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 759 ಬಿಲಿಯನ್ ಡಾಲರ್ ಆಗಿದ್ದು ಅತ್ಯಂತ ಶ್ರೀಮಂತ ನಿವಾಸಿ ಮೈಕೆಲ್ ಬ್ಲೂಮ್‌ಬರ್ಗ್ 105 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಹೀಗಾಗಿ, ನ್ಯೂಯಾರ್ಕ್ ಸತತ ನಾಲ್ಕನೇ ವರ್ಷವೂ ತನ್ನ ಮೊದಲ ಶ್ರೇಯಾಂಕವನ್ನು ಉಳಿಸಿಕೊಂಡಿದೆ.