ತನ್ನೆಲ್ಲಾ ಉದ್ಯೋಗಿಗಳಿಗೆ 9 ದಿನಗಳ ವೇತನ ಸಹಿತ ದೀಪಾವಳಿ ರಜೆ ನೀಡಿದ ಮೀಶೋ

By Anusha KbFirst Published Oct 12, 2024, 2:45 PM IST
Highlights

ಮಿಶೋ ತನ್ನ ಉದ್ಯೋಗಿಗಳಿಗೆ ದಸರಾ ಹಾಗೂ ದೀಪಾವಳಿ ಪ್ರಯುಕ್ತ 9 ದಿನಗಳ ಸ್ಯಾಲರಿ ಸಹಿತ ರಜೆ ನೀಡಿದೆ. 

ಆನ್‌ಲೈನ್‌ನಲ್ಲಿ ಜನರ ಕೈಗೆಟುವ ದರದಲ್ಲಿ ಬಟ್ಟೆ, ಇಲೆಕ್ಟ್ರಿಕ್ ಐಟಂಗಳು ಮನೆ ಸಾಮಾನುಗಳು ಸೇರಿದಂತೆ ಅಗತ್ಯ ವಸ್ತುಗಳ ಸೇವೆ ಒದಗಿಸುವ ಆನ್‌ಲೈನ್ ಮಾರುಕಟ್ಟೆ ದೈತ್ಯ ಮಿಶೋ ತನ್ನ ಉದ್ಯೋಗಿಗಳಿಗೆ ದಸರಾ ಹಾಗೂ ದೀಪಾವಳಿ ಪ್ರಯುಕ್ತ 9 ದಿನಗಳ ಸ್ಯಾಲರಿ ಸಹಿತ ರಜೆ ನೀಡಿದೆ. ಈ ವಿಚಾರವನ್ನು ಸಂಸ್ಥೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಮಿಶೋ ಸಂಸ್ಥೆಯ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.  

ಒಂದು ವಾಣಿಜ್ಯ ಸಂಸ್ಥೆ ಒಂದು ದಿನ ರಜೆ ಪೂರ್ತಿಯಾಗಿ ರಜೆ ಹಾಕಿದರೆ ಅದರಿಂದ ಆಗುವ ನಷ್ಟ ಒಂದೆರಡು ಕೋಟಿಗಳಲ್ಲ, ಹೀಗಿರುವಾಗ ಮಿಶೋ ಸಂಸ್ಥೆ ಬರೋಬ್ಬರಿ 9 ದಿನಗಳ ರಜೆಯನ್ನು ತನ್ನ ಉದ್ಯೋಗಿಗಳಿಗೆ ನೀಡಿದ್ದು, ಇದಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ರಿಸೆಟ್ & ರಿಚಾರ್ಜ್ ಆಗಿ ಎಂದು ಸಂಸ್ಥೆಯೂ ಆಕ್ಟೋಬರ್ 26ರಿಂದ ನವಂಬರ್ 3ರವರೆಗೆ ರಜೆ ನೀಡಿದೆ. ಹೀಗೆ ಉದ್ಯೋಗಿಗಳಿಗೆ ಸಾಮೂಹಿಕ ರಜೆ ನೀಡುವ ಮೂಲಕ ಸಂಸ್ಥೆ, ಉದಾಹರಣೆ ನೀಡಬಹುದಾದಂತಹ ಹೊಸ ಇತಿಹಾಸ ನಿರ್ಮಿಸಿದೆ ಎಂದು ಅನೇಕು ಕೊಂಡಾಡಿದ್ದಾರೆ. 

Latest Videos

ಭಾರತೀಯ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕನಸಿಗೆ ವೇದಿಕೆ ಕಲ್ಪಿಸಿದ ಈತ ಈಗ ಬಿಲಿಯನೇರ್ ಉದ್ಯಮಿ

ಲಿಂಕ್ಡಿನ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಿಶೋ ಬರೆದುಕೊಂಡಿದ್ದು, ಲ್ಯಾಪ್‌ಟಾಪ್‌ಗಳಿಲ್ಲ, ಸಂದೇಶಗಳಿಲ್ಲ, ಇಮೇಲ್‌ಗಳಿಲ್ಲ,ಮೀಟಿಂಗ್‌ಗಳಿಲ್ಲ, ಸಡನ್ ಕಾಲ್‌ಗಳಿಲ್ಲ, ಒಂಭತ್ತು ದಿನಗಳವರೆಗೆ ಯಾವುದೇ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಿಲ್ಲ,   ನಾವು ನಮ್ಮ ಕಂಪನಿ ಅಕ್ಟೋಬರ್ 26 ರಿಂದ ನವೆಂಬರ್ 3 ರವರೆಗೆ ಸತತ 4 ನೇ ವರ್ಷ 'ರೀಸೆಟ್ ಮತ್ತು ರೀಚಾರ್ಜ್' ವಿರಾಮಕ್ಕೆ ಹೋಗುತ್ತಿದ್ದೇವೆ. 2024 ರಲ್ಲಿ ಭಾರಿ ಸೇಲ್ಸ್‌ನಿಂದಾಗಿ ದೊಡ್ಡ ಮೈಲುಗಲ್ಲು ಸೃಷ್ಟಿಸಿರುವ ನಮ್ಮ ಸಂಸ್ಥೆ ತನ್ನ ತಂಡದ ಸದಸ್ಯರಿಗೆ ವಿಶ್ರಾಂತಿ ನೀಡಿ ಅವರು ರಿಫ್ರೆಶ್ ಆಗಿ ವಾಪಸ್ ಸ್ಟ್ರಾಂಗ್ ಆಗಿ ಕೆಲಸಕ್ಕೆ ಮರಳಬೇಕು ಎಂದು ಬಯಸುತ್ತದೆ. 

ಇದು ನಮ್ಮ ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿ ನೀಡಿ ಮತ್ತೆ ಶಕ್ತಿ ತುಂಬಿಕೊಳ್ಳಲು ನೀಡಿದ ಬ್ರೇಕ್ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಕಂಪನಿಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. 

Dasara: ಇ ಕಾಮರ್ಸ್‌ ಕಂಪನಿಗಳಿಗೆ ಭರ್ಜರಿ 40,000 ಕೋಟಿ ರೂ. ವಹಿವಾಟು

ಅನೇಕರು ಕಾಮೆಂಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಇಡೀ ನೌಕರರಿಗೆ ಹೀಗೆ 9 ದಿನಗಳ ಸಾಮೂಹಿಕ ರಜೆ ನೀಡಿದ ಸಂಸ್ಥೆಯ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿ ನಾನು ಕೆಲವು ಕ್ಷಣಗಳನ್ನು ಈ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಲು ತೆಗೆದುಕೊಳ್ಳುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದಿನ ಬ್ಯುಸಿಯಾದ ಜೀವ ಶೈಲಿಯಲ್ಲಿ ಸಂಸ್ಥೆಯೊಂದು ಈ ರೀತಿ ತನ್ನ ಎಲ್ಲಾ ಉದ್ಯೋಗಿಗಳಿಗೆ ಇಷ್ಟೊಂದು ಸುಧೀರ್ಘ ರಜೆ ನೀಡಿರುವುದು ಶ್ಲಾಘನೀಯ, ಈ ಮೂಲಕ ನೀವು ಒಂದು ಉದಾಹರಣೆಯಾಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
 

click me!