ಬಿಎಸ್‌ಎನ್ಎಲ್ ಇದೀಗ ಕೈಗೆಟುವ ದರದ ಆಫರ್ ನೀಡಿದೆ. ಗ್ರಾಹಕರಿಗೆ ಪ್ರತಿ ದಿನ 2 ಜಿಬಿ ಡೇಟಾ, ಬರೋಬ್ಬರಿ 105 ದಿನ ವ್ಯಾಲಿಟಿಡಿ ನೀಡುತ್ತಿದೆ. ಹೊಸ ಆಫರ್ ರೀಚಾರ್ಜ್ ಮಾಡಲು ಇದೀಗ ಗ್ರಾಹಕರು ಮುಗಿಬಿದ್ದಿದ್ದಾರೆ.
ನವದೆಹಲಿ(ಅ.12) ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕೆಲ ಬದಲಾವಣೆಗಳಾಗುತ್ತಿದೆ. ಪ್ರಮುಖವಾಗಿ ಜಿಯೋ, ಏರ್‌ಟೆಲ್, ವಿಐ ಸರ್ವೀಸ್ ಆಪರೇಟರ್ ರೀಚಾರ್ಜ್ ಪ್ಲಾನ್‌ನಲ್ಲಿ ಮಾಡಿದ ಬದಲಾವಣೆಯಿಂದ ಹಲವರು ಬಿಎಸ್‌ಎನ್ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇತರ ನೆಟ್‌ವರ್ಕ್‌ಗಳಿಂದ ಬಿಎಸ್‌ಎನ್ಎಲ್‌ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ಬಿಎಸ್‌ಎನ್ಎಲ್ ಇದೀಗ ತನ್ನ ನೆಟ್‌ವರ್ಕ್ ವಿಸ್ತರಿಸುತ್ತಿದೆ. ಇದರ ಜೊತೆಗೆ ಹಬ್ಬದ ಆಫರ್, ಕಡಿಮೆ ಬೆಲೆಯ ಪ್ಲಾನ್ ಪರಿಚಯಿಸಿದೆ. ಇದೀಗ ಬಿಎಸ್‌ಎನ್ಎಲ್ ಕೈಗೆಟುಕುವ ದರದ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಪ್ರತಿ ದಿನ 2 ಜಿಬಿ ಡೇಟಾ, ಬರೋಬ್ಬರಿ 105 ದಿನ ವ್ಯಾಲಿಟಿಡಿ ಅಂದರೆ ಮೂರೂವರೆ ತಿಂಗಳು ರೀಚಾರ್ಜ್ ತಲೆಬಿಸಿ ಇಲ್ಲ.
ಬಿಎಸ್‌ಎನ್ಎಲ್ ಹೊಸ ಪ್ಲಾನ್ ಬೆಲೆ ಪ್ರತಿ ದಿನ ಕೇವಲ 7 ರೂಪಾಯಿ ಮಾತ್ರ. ಅಂದರೆ ಒಮ್ಮೆ 666 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು ಮೂರುವರೆ ತಿಂಗಳು ರೀಚಾರ್ಜ್, ಡೇಟಾ, ಕಾಲ್ ಸೇರಿದಂತೆ ಯಾವುದೇ ಚಿಂತೆ ಇಲ್ಲ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ ಹೈಸ್ಪೀಡ್ 2 ಜಿಬಿ ಡೇಟಾ ಸಿಗಲಿದೆ. ಇನ್ನು ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. ಇತರ ಯಾವುದೇ ನೆಟ್‌ವರ್ಕ್‌ಗೆ ಹೋಲಿಸಿದರೆ ಮೂರೂವರೆ ತಿಂಗಳಿಗೆ ಈ ಬೆಲೆಯಲ್ಲಿ ಯಾವುದೇ ರೀಚಾರ್ಜ್ ಪ್ಲಾನ್‌ಗಳಿಲ್ಲ.
undefined
ಆಯುಧ ಪೂಜೆಗೆ ಜಿಯೋ ಧಮಾಕ, ಪ್ರತಿ ದಿನ 2.5 ಜಿಬಿ, ಅನ್‌ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!
ಬಿಎಸ್‌ಎನ್ಎಲ್ ಗ್ರಾಹಕರಿಗೆ ಉತ್ತಮ ಸರ್ವೀಸ್ ನೀಡಲು ಮಹತ್ತರ ಬದಲಾವಣೆ ಮಾಡಿಕೊಂಡಿದೆ. ಬಿಎಸ್‌ಎನ್ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೆಲವರು ಸರ್ವೀಸ್ ಕುಂದು ಕೊರತೆಗಳನ್ನು ಪಟ್ಟಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಿಎಸ್‌ಎನ್ಎಲ್ ಕೆಲ ಸುಧಾರಣೆಗಳನ್ನು ಮಾಡಿಕೊಂಡಿದೆ. ಇಷ್ಟೇ ಅಲ್ಲ, ಮಹತ್ವದ ಆಫರ್ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಪ್ಲಾನ್ ನೀಡುತ್ತಿದೆ.
ಬಿಎಸ್‌ಎನ್ಎಲ್ ಈಗಾಗಲೇ ದೇಶದಲ್ಲಿ 4ಜಿ ಸೇವೆ ನೀಡುತ್ತಿದೆ. ಮುಂದಿನ ವರ್ಷದ ಆರಂಭದಲ್ಲೇ ಬಿಎಸ್‌ಎನ್ಎಲ್ 5ಜಿ ನೆಟ್‌ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಬಿಎಸ್‌ಎನ್ಎಲ್ 4ಜಿ ಸೇವೆಯಿಂದ ಹಲವರು ಇದೀಗ ಬಿಎಸ್‌ಎನ್ಎಲ್ ಸಿಮ್‌ಗೆ ಪೋರ್ಟ್ ಮಾಡಿಕೊಂಡಿದ್ದಾರೆ. ಇನ್ನು 5ಜಿ ಸೇವೆ ಜೊತೆಗೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಘೋಷಿಸುವ ಸಾಧ್ಯತೆ ಇದೆ. ಇದರಿಂದ ಬಿಎಸ್‌ಎನ್ಎಲ್ ಮತ್ತಷ್ಟು ಗ್ರಾಹಕರು ಮಾತ್ರವಲ್ಲ, ದೇಶದಲ್ಲಿ ಅತೀ ದೊಡ್ಡ ನೆಟ್‌ವರ್ಕ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ.
BSNL ಮಾಸ್ಟರ್‌ಸ್ಟ್ರೋಕ್‌ಗೆ ಬೆಚ್ಚಿದ ಜಿಯೋ,ಏರ್‌ಟೆಲ್, ಗೇಮ್ ಚೇಂಜರ್ ಪ್ಲಾನ್ ಘೋಷಣೆ!
ಬಿಎಸ್‌ಎನ್ಎಲ್ ಅಕ್ಟೋಬರ್ ಅಂತ್ಯದೊಳಗೆ 24,000 ಟವರ್ ಅಳವಡಿಸುತ್ತಿದೆ. ಈ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಬಿಎಸ್‌ಎನ್ಎಲ್ ನೆಟ್‌ವರ್ಕ್ ಲಭ್ಯವಾಗುವಂತೆ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ.