
ಅಹಮ್ಮದಾಬಾದ್ (ಜು.24) ಮೆಕ್‌ಡೋನಾಲ್ಡ್ ಖಾದ್ಯಗಳನ್ನು ಬಹುತೇಕರು ಸವಿದಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮೆಕ್‌ಡೋನಾಲ್ಡ್ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಭಾರತದಲ್ಲಿ ಮೆಕ್‌ಡೋನಾಲ್ಡ್‌ಗೆ ತೀವ್ರ ಪ್ರತಿಸ್ಪರ್ಧಿಯೊಂದು ತಲೆನೋವು ಹೆಚ್ಚಿಸಿದೆ. ಫ್ರೆಂಚ್ ಫ್ರೈಸ್ ಸೇರಿದಂತ ಇತರ ಖಾದ್ಯಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮಾದಾಬಾದ್ ಮೂಲದ ಮೆಕ್‌ಪಟೇಲ್ ವಿರುದ್ಧ ಮೆಕ್‌ಡೋನಾಲ್ಡ್ ಗರಂ ಆಗಿದೆ.ಹೆಸರಿಗೆ ಹಲವು ಬಾರಿ ಅಕ್ಷೇಪ ವ್ಯಕ್ತಪಡಿಸಿರುವ ಮೆಕ್‌ಡೋನಾಲ್ಡ್ ವಿರುದ್ಧ ಮೆಕ್‌ಪಟೇಲ್ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್‌ನಲ್ಲಿ ಮೆಕ್ ಪಟೇಲ್ ವಕೀಲ ವಾದ ಇದೀಗ ಭಾರಿ ಚರ್ಚೆಯಾಗುತ್ತಿದೆ. ನಾವು ಬಳಸಿರುವ ಮೆಕ್ ಅಂದರೆ ಮಗ ಎಂದರ್ಥ. ಇದು ಪಟೇಲರ ಮಗ ಅನ್ನೋ ಬ್ರ್ಯಾಂಡ್ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿದೆ.
ಮೆಕ್ ಪಟೇಲ್ ಅರ್ಥ ವಿವರಿಸಿದ ಕಂಪನಿ
ಅಹಮದಾಬಾದ್ ಮೂಲದ ಸ್ಟಾರ್ಟ್‌ಅಪ್ ಮೆಕ್‌ಪಟೇಲ್ ಹಾಗೂ ಫಾಸ್ಟ್‌ಫುಡ್ ದೈತ್ಯ ಮೆಕ್‌ಡೊನಾಲ್ಡ್ಸ್ ಕಾನೂನು ಹೋರಾಟ ತೀವ್ರಗೊಂಡಿದೆ. ಬ್ರ್ಯಾಂಡ್ ನೇಮ್ ಕನೂನು ಹೋರಾಟದ ವಾದ ಪ್ರತಿವಾದಗಳು ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ವೇಳೆ 'ಮೆಕ್' ಎಂದರೆ 'ಮಗ'. ಮೆಕ್‌ಪಟೇಲ್ ಎಂದರೆ ಪಟೇಲ್ ಮಗ ಎಂದು ಹಿರಿಯ ವಕೀಲ ಎಚ್.ಎಸ್. ತೋಲಿಯಾ ಹೇಳಿದ್ದಾರೆ. ಪಟೇಲ್ ಸಮುದಾಯಕ್ಕೆ ಗೌರವ ಸಲ್ಲಿಸಲು ನಾವು ಈ ಹೆಸರನ್ನು ಬಳಸಿದ್ದೇವೆ. ಇದು ಕೇವಲ ಬ್ರ್ಯಾಂಡ್ ಅಲ್ಲ, ಇದು ಸಾಂಸ್ಕೃತಿಕ ಹಿನ್ನಲೆಯಳಳ್ಳ ಪಟೇಲ್ ಸಮುದಾದ ಗೌರವದ ಬ್ರ್ಯಾಂಡ್ ಎಂದು ಕೋರ್ಟ್‌ನಲ್ಲಿ ಹೇಳಿದೆ. ಭಾರತೀಯ ಇತಿಹಾಸದಲ್ಲಿ ಪಟೇಲ್ ಸಮುದಾಯ ಎಲ್ಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿದೆ. ಇದರ ಭಾಗವಾಗಿ ಪಟೇಲ್ ಸಮುದಾಯದ ಹೆಮ್ಮೆಯ ಪ್ರತೀಕವಾಗಿ ಈ ಹೆಸರು ಬಳಸಲಾಗಿದೆ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿದೆ.
ಮೆಕ್ ಬ್ರ್ಯಾಂಡ್ ಬಳಕೆ ಕಾನೂನು ವಿರುದ್ಧ ಎಂದ ಮೆಕ್ ಡೋನಾಲ್ಡ್
ಮೆಕ್‌ಡೋನಾಲ್ಡ್ ಹೆಸರನ್ನು ಬಳಸಿಕೊಂಡು ವಹಿವಾಟ ನಡೆಸಲಾಗುತ್ತಿದೆ. ಇದು ಬ್ರ್ಯಾಂಡ್ ನೇಮ್ ಕಾನೂನಿಗೆ ವಿರುದ್ದವಾಗಿದೆ. ಮೆಕ್‌ಪಟೇಲ್ ಎಲ್ಲಾ ರೀತಿಯಲ್ಲೂ ಮೆಕ್‌ಡೋನಾಲ್ಡ್ ಹೋಲುವಂತೆ ಬ್ರ್ಯಾಂಡ್ ನೇಮ್ ಬಳಸಿಕೊಂಡಿದೆ. ಈಗಾಗಲೇ ಮೆಕ್ ಪಟೇಲ್‌ಗೆ ಹಲವು ಬಾರಿ ಸೂಚನೆ, ಎಚ್ಚರಿಕೆ ನೀಡಿದರೂ ಬ್ರ್ಯಾಂಡ್ ನೇಮ್ ಬಳಸಿದೆ. ಹೀಗಾಗಿ ಮೆಕ್‌ಪಟೇಲ್‌ಗೆ ಕಾನೂನು ಸೂಚನೆ ನೀಡುವಂತೆ ಮೆಕ್‌ಡೋನಾಲ್ಡ್ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದೆ.
ಮೆಕ್ ಹೆಸರು ಬಳಸಲೇ ಬಾರದು ಎಂದ ಮೆಕ್ ಡೋನಾಲ್ಡ್
ದೆಹಲಿ ಹೈಕೋರ್ಟ್‌ನಲ್ಲಿ ಈ ಪ್ರಕರಣ ಸಂಬಂಧ ಮಧ್ಯಸ್ಥಿತಿಕೆ ಪ್ರಕ್ರಿಯೆ ನಡೆದಿತ್ತು. ಮೆಕ್‌ಡೋನಾಲ್ಡ್ ಹಾಗೂ ಮೆಕ್‌ಪಟೇಲ್ ಎರಡೂ ಬ್ರ್ಯಾಂಡ್ ಪಾಲ್ಗೊಂಡು ಚರ್ಚಿಸಿತ್ತು. ಆದರೆ ಮಾತುಗಳು ವಿಫಲಗೊಂಡಿತ್ತು. ಕಾರಣ ಮೆಕ್‌ಡೋನಾಲ್ಡ್ ಮೆಕ್ ಹೆಸರು ತೆಗೆಯಲೇಬೇಕು ಎಂದು ಪಟ್ಟು ಹಿಡಿದಿತ್ತು. ಮೆಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದು ಕಾನೂನು ಉಲ್ಲಂಘನೆ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ನಾವು ಕಾನೂನು ಕ್ರಮಕ್ಕೆ ನಿರ್ಧರಿಸಿದ್ದೇವೆ ಎದು ತೋಲಿಯಾ ಹೇಳಿದ್ದಾರೆ.
ಮಾತುಕತೆ ವಿಫಲ, ಕೋರ್ಟ್ ಮೆಟ್ಟಿಲೇರಿದ ಮೆಕ್ ಪಟೇಲ್ ಕಂಪನಿ
ಮೆಕ್‌ಪಟೇಲ್ ಟ್ರೇಡ್‌ಮಾರ್ಕ್ಸ್ ಕಾಯಿದೆಯ ಸೆಕ್ಷನ್ 142 ರ ಅಡಿಯಲ್ಲಿ ಅಹಮದಾಬಾದ್ ಗ್ರಾಮೀಣ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ.ನಮ್ಮ ಪ್ರಕರಣ ಸರಳವಾಗಿದೆ. ಮೆಕ್‌ಕಾಯ್‌ನಿಂದ ಮೆಕ್‌ಡ್ರೀಮಿವರೆಗೆ - ಪ್ರಪಂಚದಾದ್ಯಂತ ಬಳಸಲಾಗುವ ಸಾಮಾನ್ಯ ಪೂರ್ವಪ್ರತ್ಯಯವಾಗಿದೆ ಮತ್ತು ಯಾವುದೇ ಒಂದು ಕಂಪನಿಯು ಅದರ ಮೇಲೆ ಏಕಸ್ವಾಮ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ತೋಲಿಯಾ ಹೇಳಿದರು. ನ್ಯಾಯಾಲಯವು ಈಗ ಮೆಕ್‌ಡೊನಾಲ್ಡ್ಸ್‌ಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಜುಲೈ 28 ಕ್ಕೆ ನಿಗದಿಪಡಿಸಿದೆ. ಇದೀಗ ಕಾನೂನು ಹೋರಾಟ ತೀವ್ರಗೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.