Business Idea: 3 ರೂ.ಗೆ ಒಂದು ಮೋಮೋಸ್ ಸಿಕ್ಕಿದ್ರೆ ಒಂದು ಪ್ಲೇಟ್ ಗೆ ಎಷ್ಟು ಲಾಭ ಗಳಿಸ್ತಾನೆ ವ್ಯಾಪಾರಸ್ಥರು?

Published : Jul 24, 2025, 02:29 PM ISTUpdated : Jul 24, 2025, 02:33 PM IST
Momos business,

ಸಾರಾಂಶ

ಮಳೆಗಾಲದಲ್ಲಿ ಬಾಯಲ್ಲಿ ನೀರೂರಿಸೋ ಬಿಸಿಬಿಸಿ ಮೋಮೋಸ್ ಮಕ್ಕಳ ಫೆವರೆಟ್. ಬೀದಿಯಲ್ಲಿ ಈ ರುಚಿ ತಿಂಡಿ ಮಾರಾಟ ಮಾಡುವ ವ್ಯಾಪಾರಸ್ಥರ ಗಳಿಕೆ ಎಷ್ಟು ಗೊತ್ತಾ? 

ಹಿಂದೆ ಕರ್ನಾಟಕದ ಬೀದಿಗಳಲ್ಲಿ ಪಾನಿಪುರಿ, ಮಸಾಲಪುರಿ, ಚುರ್ ಮುರಿಯಂತಹ ಸ್ಟ್ರೀಟ್ ಫುಡ್ ಮಾತ್ರ ಕಾಣಸಿಗ್ತಿತ್ತು. ಈಗ ವಡಾ ಪಾವ್, ಸಮೋಸಾ, ಮೋಮೋಸ್ (Momos) ಗಳೂ ಜಾಗ ಪಡೆದಿವೆ. ಇವುಗಳನ್ನು ಬಾಯಿ ಚಪ್ಪರಿಸಿ ತಿನ್ನುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಗಲ್ಲಿಗೊಂದು ಮೋಮೋಸ್ ಶಾಪ್ ಇದೆ. ಕೆಲವರು ಅಂಗಡಿಯಲ್ಲಿ ಮಾರಾಟ ಮಾಡಿದ್ರೆ ಮತ್ತೆ ಕೆಲವರು ತಳ್ಳೋ ಗಾಡಿಯಲ್ಲಿ ಇದನ್ನು ಮಾರಾಟ ಮಾಡ್ತಿದ್ದಾರೆ. ಮಾಲ್ ಅಥವಾ ಫುಡ್ ಸ್ಟ್ರೀಟ್ ಗಳಲ್ಲಿ ಮೋಮೋಸ್ ಇದ್ದೇ ಇರುತ್ತೆ. ಈ ಮೋಮೋಸ್ ಮಾರಾಟಗಾರರು ಎಷ್ಟು ಸಂಪಾದನೆ ಮಾಡ್ತಾರೆ? ಅದ್ರ ಬಗ್ಗೆ ಡಿಟೇಲ್ ಇಲ್ಲಿದೆ.

ಸಾಮಾನ್ಯವಾಗಿ ಯಾವುದೇ ಮೋಮೋಸ್ ಮಾರಾಟಗಾರ ಇಷ್ಟೇ ಹಣ ಸಂಪಾದನೆ (money making) ಮಾಡ್ತಾನೆ ಅಂತ ಹೇಳೋಕೆ ಯಾವುದೇ ಮಾನದಂಡ ಇಲ್ಲ. ಅಂಗಡಿ ಯಾವ ಸ್ಥಳದಲ್ಲಿದೆ, ಯಾವ ಸ್ಥಿತಿಯಲ್ಲಿದೆ, ಅಲ್ಲಿಗೆ ಎಷ್ಟು ಗ್ರಾಹಕರು ಬರ್ತಾರೆ, ಒಂದು ಪ್ಲೇಟ್ ಮೋಮೋಸ್ ಬೆಲೆ ಎಷ್ಟು ಎಲ್ಲವೂ ಇಲ್ಲಿ ಮುಖ್ಯವಾಗುತ್ತೆ. ಅಂಗಡಿ ಮುಂದೆ ಚಿಕ್ಕದೊಂದು ತಳ್ಳುಗಾಡಿ ಇಟ್ಟುಕೊಳ್ಳುವ ವ್ಯಾಪಾರಿ, ಅಂಗಡಿ ಮಾಲೀಕನಿಗೆ ರೆಂಟ್ ನೀಡ್ಬೇಕು. ಮಾಲ್, ಫುಡ್ ಸ್ಟ್ರೀಟ್ ಗಳಲ್ಲೂ ಅಂಗಡಿದಾರ ಬಾಡಿಗೆ ನೀಡ್ಬೇಕು. ಬಾಡಿಗೆ ಆಧಾರದ ಮೇಲೆ ವ್ಯಾಪಾರಿ ಮೋಮೋಸ್ ಬೆಲೆ ನಿಗದಿಪಡಿಸ್ತಾನೆ.

ಕೆಲ ವ್ಯಾಪಾರಿಗಳು ಮನೆಯಲ್ಲೇ ಮೋಮೋಸ್ ತಯಾರಿಸ್ತಾರೆ. ಮತ್ತೆ ಕೆಲವರು ರೆಡಿ ಇರುವ ಮೋಮೋಸ್ ತಂದು, ಅದನ್ನು ಸ್ಟೀಮ್ ಮಾಡಿ ನೀಡ್ತಾರೆ. ರೆಡಿ ಇರುವ ಮೋಮೋಸ್ ಬೆಲೆ ಕೂಡ ಭಿನ್ನವಾಗಿದೆ. ನೀವು ಮಶಿನ್ ಮೋಮೋಸ್ ಹಾಗೂ ಕೈನಲ್ಲಿ ಮಾಡಿದ ಮೋಮೋಸ್ ಇದ್ರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ತೀರಿ ಅನ್ನೋದು ಮುಖ್ಯ. ನೀವು ಮಶಿನ್ ಮೋಮೋಸ್ ಖರೀದಿ ಮಾಡೋದಾದ್ರೆ ಪ್ಯಾಕ್ಟರಿಯವರು ನಿಮಗೆ ಒಂದು ಮೋಮೋಸ್ ಗೆ 75 ಪೈಸೆಯಿಂದ 1 ರೂಪಾಯಿ ಚಾರ್ಜ್ ಮಾಡ್ತಾರೆ. ಕೈನಲ್ಲಿ ಮಾಡಿದ ಮೋಮೋಸ್ ಬೆಲೆ ಹೆಚ್ಚಿರುತ್ತದೆ.

ಇದನ್ನು ಖರೀದಿ ಮಾಡುವ ವ್ಯಾಪಾರಸ್ಥರು, ಮಶಿನ್ ನಲ್ಲಿ ಮಾಡಿದ ಒಂದು ದೇಸಿ ಮೋಮೋಸ್ ಗೆ 3 ರೂಪಾಯಿ ಬೆಲೆ ನಿಗದಿ ಮಾಡ್ತಾರೆ. ಕೈನಲ್ಲಿ ಮಾಡಿದ ದೇಸಿ ಮೋಮೋಸ್ ಬೆಲೆ 4.5 ರೂಪಾಯಿ. ಇನ್ನು ಒಂದು ಮೋಮೋಸ್ ಗೆ ಚಟ್ನಿ ಬೆಲೆ 5.5 ರೂಪಾಯಿ. ಐದು ಮೋಮೋಸ್ ನ ಒಂದು ಪ್ಲೇಟ್ ಗೆ ವ್ಯಾಪಾರಸ್ಥ ಸುಮಾರು 20 -23 ರೂಪಾಯಿ ಖರ್ಚು ಮಾಡ್ಬೇಕು. ಚಟ್ನಿ, ಪ್ಲೇಟ್ ಎಲ್ಲ ಸೇರಿ 27 -28 ರೂಪಾಯಿ ಆಗುತ್ತೆ. ಇನ್ನು ಬಾಡಿಗೆ, ಅಂಗಡಿ ಇರುವ ಸ್ಥಳದ ಆಧಾರದ ಮೇಲೆ ಒಂದು ಪ್ಲೇಟ್ ಮೋಮೋಸ್ ರೇಟ್ ಫಿಕ್ಸ್ ಮಾಡಲಾಗುತ್ತೆ.

ಅನೇಕರು ಚಟ್ನಿ ಉಚಿತವಾಗಿ ಕೊಡ್ತೇವೆ ಅಂತ ಜಾಹೀರಾತು ಮಾಡ್ತಾರೆ. ಆದ್ರೆ ಎಲ್ಲ ವ್ಯಾಪಾರಿಗಳು ಇದನ್ನು ಮಾಡೋದಿಲ್ಲ. ಅವರು ಚಟ್ನಿಯನ್ನು ಕೆಜಿಗೆ 120-130 ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಮೇಯೋನೀಸ್ ಗೂ ಚಾರ್ಜ್ ಮಾಡ್ತಾರೆ. ಸಾಮಾನ್ಯ ಲೆಕ್ಕಾಚಾರದ ಪ್ರಕಾರ, ಗಲ್ಲಿಯಲ್ಲಿ ಮೋಮೋಸ್ ಮಾರಾಟ ಮಾಡುವ ವ್ಯಾಪಾರಿ ಒಂದು ಪ್ಲೇಟ್ ಗೆ ಎಲ್ಲ ಖರ್ಚು ಕಳೆದು 20 -22 ರೂಪಾಯಿ ಉಳಿಸ್ತಾನೆ. ದಿನಕ್ಕೆ ಒಂದು 100 ಪ್ಲೇಟ್ ಮೋಮೋಸ್ ಖಾಲಿ ಆದ್ರೆ 2200 ರೂಪಾಯಿವರೆಗೆ ಗಳಿಕೆಯಾಗುತ್ತೆ. ಎಲ್ಲ ಖರ್ಚು ಕಳೆದ್ರೂ 1500 ರೂಪಾಯಿ ದಿನಕ್ಕೆ ಉಳಿಸ್ತಾನೆ ಮೋಮೋಸ್ ವ್ಯಾಪಾರಿ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!