
ಕರಾಚಿ(ಸೆ.11): ಆರ್ಥಿಕವಾಗಿ ದಿವಾಳಿಯಂಚಿಗೆ ಬಂದು ನಿಂತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಹಾಲಿನ ದರ ಒಂದು ಲೀಟರ್‌ಗೆ 140 ರೂ. ಆಗಿದ್ದು, ಪೆಟ್ರೋಲ್‌ಗಿಂತ ಹಾಲು ದುಬಾರಿಯಾಗಿದೆ.
ಕರಾಚಿಯಲ್ಲಿ ನಡೆದ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಹಾಲಿಗೆ ತೀವ್ರ ಬೇಡಿಕೆ ಮತ್ತು ಕೊರತೆ ಸೃಷ್ಟಿಯಾಗಿತ್ತು. ಹೀಗಾಗಿ ಪಾಕಿಸ್ತಾನದ ಕರಾಚಿ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಹಾಲಿನ ಬೆಲೆ 140 ರೂ.ಗೆ ತಲುಪಿದೆ. ಅಚ್ಚರಿ ಎಂದರೆ ಈ ಪ್ರದೇಶಗಳಲ್ಲಿ ಒಂದು ಲೀಟರ್ ಪೆಟ್ರೋಲ್ 113 ರೂ. ಮತ್ತು ಒಂದು ಲೀಟರ್ ಡೀಸೆಲ್ 91 ರೂ.ಗೆ ಮಾರಾಟವಾಗುತ್ತಿದೆ.
ಭಾರತದಲ್ಲಿ ಒಂದು ಲೀಟರ್ ಹಾಲಿಗೆ ಗರಿಷ್ಠ 35 ರಿಂದ 40 ರೂ ಇದ್ದು, ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿ ಹಾಲಿನ ದರವನ್ನು ಲ್ಲಿಯ ಸ್ಥಳೀಯ ಜಿಲ್ಲಾಡಳಿತ 94 ರೂ.ಗೆ ನಿಗದಿ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.