Changes from Dec 1: ನಾಳೆಯಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ

Suvarna News   | Asianet News
Published : Nov 30, 2021, 07:15 PM IST
Changes from Dec 1: ನಾಳೆಯಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ

ಸಾರಾಂಶ

ನಾಳೆ (ಡಿ.1)ರಂದು ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಇದು ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರೋ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಉತ್ತಮ.

ಈ ವರ್ಷದ ಕೊನೆಯ ತಿಂಗಳಿಗೆ ನಾಳೆ (ಡಿ.1) ಕಾಲಿಡುತ್ತಿದ್ದೇವೆ. ಪ್ರತಿ ತಿಂಗಳ ಪ್ರಾರಂಭದಲ್ಲಿಕೆಲವು ಕ್ಷೇತ್ರಗಳಿಗೆ ಸಂಬಂಧಿಸಿ ಒಂದಿಷ್ಟು ಬದಲಾವಣೆಗಳು (Changes)  ಸಹಜ. ಸರ್ಕಾರ (Government) ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿ ಹೊಸ ನಿಯಮಗಳನ್ನು (new rules) ರೂಪಿಸೋದು ಇಲ್ಲವೇ ಹಳೆಯ ನಿಯಮಗಳಿಗೆ ಒಂದಿಷ್ಟು ತಿದ್ದುಪಡಿ(Changes) ತರೋದು ಇದ್ದೇಇದೆ. ಈ ನಿಯಮಗಳು ಜನರ ನಿತ್ಯ ಜೀವನದ ಮೇಲೆ ಪರಿಣಾಮ ಬೀರೋ ಕಾರಣ ಇವುಗಳ ಬಗ್ಗೆ ಮೊದಲೇ ಮಾಹಿತಿ ಹೊಂದಿರೋದು ಉತ್ತಮ. ಹಾಗಾದ್ರೆ ಡಿಸೆಂಬರ್ 1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

ಗೃಹ ಸಾಲ  ಕೊಡುಗೆ ಅಂತ್ಯ
ಹಲವು ಬ್ಯಾಂಕ್ ಗಳು ಹಬ್ಬದ ಸಮಯದಲ್ಲಿ ಗೃಹಸಾಲದ (Home loan) ಮೇಲೆ ವಿವಿಧ ಕೊಡುಗೆಗಳನ್ನು (Offers) ನೀಡಿದ್ದವು. ಗೃಹ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕದಲ್ಲಿ (Processing fee) ಕಡಿತ, ಕಡಿಮೆ ಬಡ್ಡಿದರಗಳು ಸೇರಿದಂತೆ ಗ್ರಾಹಕರನ್ನು (Customers) ಸೆಳೆಯಲು ವಿವಿಧ ಕೊಡುಗೆಗಳನ್ನು ಈ ವರ್ಷ ಘೋಷಿಸಿದ್ದವು. ಬಹುತೇಕ ಬ್ಯಾಂಕ್ ಗಳು ಈ ಕೊಡುಗೆಯನ್ನು ಡಿಸೆಂಬರ್ 31ಕ್ಕೆ ಕೊನೆಗೊಳಿಸಲಿವೆ. ಆದರೆ ಎಲ್ಐಸಿ ಹೌಸಿಂಗ್ ಫೈನಾನ್ಷ್(LIC housing Finance) ಈ ಕೊಡುಗೆಯನ್ನು ನವೆಂಬರ್ 30ಕ್ಕೆ ಕೊನೆಗೊಳಿಸುತ್ತಿದೆ. ನೀವು ಕೂಡ ಮನೆ ಖರೀದಿಸೋ ಯೋಚನೆಯಲ್ಲಿದ್ರೆ ಡಿಸೆಂಬರ್ ಅಂತ್ಯದೊಳಗೆ ಬ್ಯಾಂಕ್ ನಲ್ಲಿ ಸಾಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸೋದು ಒಳ್ಳೆಯದು.

ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ಗ್ಯಾಸ್ ಸಿಲಿಂಡರ್ ಬೆಲೆ ಬದಲಾವಣೆ
ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಒಂದನೇ ತಾರೀಕಿನಂದು ಪರಿಷ್ಕರಿಸಲಾಗುತ್ತದೆ. ವಾಣಿಜ್ಯ  (Commercial) ಹಾಗೂ ಗೃಹ ಬಳಕೆ ಸಿಲಿಂಡರ್ ಎರಡಕ್ಕೂ ಇದು ಅನ್ವಯಿಸುತ್ತದೆ. ಪರಿಷ್ಕರಣೆ ಬಳಿಕ ದರದಲ್ಲಿ ಹೆಚ್ಚಳ ಅಥವಾ ಇಳಿಕೆಯಾಗುತ್ತದೆ. ಕೆಲವೊಮ್ಮೆ ಯಾವುದೇ ಬದಲಾವಣೆಯಾಗೋದಿಲ್ಲ. ಈ ಬಾರಿ ಜಾಗತಿಕ ಮಟ್ಟದಲ್ಲಿ ಕೊರೋನಾ ಹೊಸ ರೂಪಾಂತರಿ ಓಮಿಕ್ರಾನ್ (Omicron) ವೈರಸ್ (Virus) ಭೀತಿ ಹೆಚ್ಚಿರೋ ಹಿನ್ನೆಲೆಯಲ್ಲಿಅನೇಕ ರಾಷ್ಟ್ರಗಳು ನಿರ್ಬಂಧ ಹೆಚ್ಚಿಸುತ್ತಿವೆ. ಹೀಗಾಗಿ ಪೆಟ್ರೋಲ್(Petrol) , ಡೀಸೆಲ್(Diesel) ಸೇರಿದಂತೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೂಡ ಇಳಿಕೆ ದಾಖಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎಸ್ ಬಿಐ (SBI) ಕ್ರೆಡಿಟ್ ಕಾರ್ಡ್ ದುಬಾರಿ
ಕೆಲವರು ಪ್ರತಿ ವ್ಯವಹಾರಕ್ಕೂ ಕ್ರೆಡಿಟ್ ಕಾರ್ಡ್ ಬಳಸೋ ಅಭ್ಯಾಸ ಹೊಂದಿರುತ್ತಾರೆ. ಅಂಥವರು ಕಾಲ ಕಾಲಕ್ಕೆ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ತಿದ್ದುಪಡಿ ಮಾಡೋ ನಿಯಮಗಳನ್ನು ಗಮನಿಸುತ್ತಿರಬೇಕು. ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದಾರೆ, ಈ ವಿಷಯ ತಿಳಿದಿರಲೇಬೇಕು. ಡಿಸೆಂಬರ್ 1ರಿಂದ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐಯಲ್ಲಿ ಶಾಪಿಂಗ್ ಮಾಡಿದ್ರೆ ಹೆಚ್ಚಿನ ಹೊರೆ ಬೀಳಲಿದೆ. ಪ್ರಸ್ತುತ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆಗೆ ಬಡ್ಡಿ ಮಾತ್ರ ಪಾವತಿಸಬೇಕಾಗಿತ್ತು. ಆದ್ರೆ ನಾಳೆಯಿಂದ (ಡಿ.1) ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುತ್ತದೆ.

Q2 GDP preview: ಎರಡನೇ ತ್ರೈಮಾಸಿಕದಲ್ಲಿ ಶೇ.7-9 ಆರ್ಥಿಕ ಪ್ರಗತಿ ನಿರೀಕ್ಷೆ!

ಯುಎಎನ್ (UAN)- ಆಧಾರ್(Aadhar) ಲಿಂಕ್
ನೀವು ಉದ್ಯೋಗಿಗಳಾಗಿದ್ರೆ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬ್ರ (UAN) ಅನ್ನು ಆಧಾರ್ ನೊಂದಿಗೆ ನ.30ರೊಳಗೆ ಲಿಂಕ್ ಮಾಡಿರಬೇಕು. ಡಿಸೆಂಬರ್ 1ರಿಂದ ಯುಎಎನ್ ಹಾಗೂ ಆಧಾರ್ ಲಿಂಕ್ ಮಾಡಿರೋ ಉದ್ಯೋಗಿಗಳಿಗೆ ಮಾತ್ರ ECR (ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್) ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ನೀವು UAN ಆಧಾರ್ ಗೆ ಲಿಂಕ್ ಮಾಡದಿದ್ರೆ ನಿಮಗೆ ECR ಸಲ್ಲಿಸಲು ಸಾಧ್ಯವಾಗೋದಿಲ್ಲ.ಹೀಗಾಗಿ ನಿಮ್ಮ UAN ಆಧಾರ್ ಗೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ತಪ್ಪದೆ ಪರಿಶೀಲಿಸಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ