Q2 GDP preview: ಎರಡನೇ ತ್ರೈಮಾಸಿಕದಲ್ಲಿ ಶೇ.7-9 ಆರ್ಥಿಕ ಪ್ರಗತಿ ನಿರೀಕ್ಷೆ!

By Suvarna News  |  First Published Nov 30, 2021, 6:27 PM IST

ಕೊರೋನಾ ಕಾರಣಕ್ಕೆ ಸಾಕಷ್ಟು ಹಿಂಜರಿತಗಳನ್ನು ಅನುಭವಿಸಿದ ದೇಶದ ಆರ್ಥಿಕತೆ ಸದ್ಯ ಚೇತರಿಕೆ ಹಾದಿಯಲ್ಲಿದೆ. ಈ ಸಾಲಿನ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಕುರಿತು ಅರ್ಥತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಭಾರತ ಶೇ. ಶೇ.7-9 ಆರ್ಥಿಕ ಪ್ರಗತಿ ದಾಖಲಿಸಿದೆ ಎಂದು ಅಂದಾಜಿಸಿದ್ದಾರೆ.


ಈ ವರ್ಷದ ಪ್ರಾರಂಭದಲ್ಲಿ ಕೊರೋನಾ(Corona)  ಎರಡನೇ ಅಲೆ ಭಾರತದ ಆರ್ಥಿಕತೆ (Economy) ಮೇಲೆ ಗಂಭೀರ ಪರಿಣಾಮ ಬೀರಿದ್ರೂ ಕೆಲವೇ ಸಮಯದಲ್ಲಿ ಗಮನಾರ್ಹ ಚೇತರಿಕೆ ಕಂಡಿರೋದು ವಿಶೇಷ. 2021-22ನೇ ಆರ್ಥಿಕ ವರ್ಷದ (Financial year) ಪ್ರಗತಿಯ ಎರಡನೇ ತ್ರೈಮಾಸಿಕ(Q2) ವರದಿ ಇಂದು (ನ.30) ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಆರ್ಥಿಕ ತಜ್ಞರು ಹಾಗೂ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತದ ಆರ್ಥಿಕತೆ ಶೇ.7-9ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ ಎಂದು ಅಂದಾಜಿಸಿದ್ದಾರೆ. 

ತಜ್ಞರು ಏನು ಭವಿಷ್ಯ ನುಡಿದಿದ್ದಾರೆ? 
ತ್ರೈಮಾಸಿಕ ಜಿಡಿಪಿ(GDP) ರೇಟಿಂಗ್ ಏಜೆನ್ಸಿ (Rating agency) ಐಸಿಆರ್ಎ (ICRA) ಈ ಹಿಂದೆ ಜಿಡಿಪಿ ಪ್ರಗತಿಗೆ ಸಂಬಂಧಿಸಿ ನೀಡಿದ್ದ ಅಂದಾಜು ದರವನ್ನು ಹೆಚ್ಚಿಸಿದೆ. ಸೆಪ್ಟೆಂಬರ್ ನಲ್ಲಿ ಸರ್ಕಾರ ಮಾಡಿದ ವೆಚ್ಚಗಳನ್ನು ಪರಿಗಣಿಸಿ ಈ ಬದಲಾವಣೆ ಮಾಡಿದೆ. ಈ ಹಿಂದೆ ಐಸಿಆರ್ಎ ಶೇ. 7.7 ಪ್ರಗತಿ ದರ ದಾಖಲಿಸಿತ್ತು. ಈಗ ಅದನ್ನು ಶೇ.7.9 ಗೆ ಹೆಚ್ಚಿಸಿದೆ. 'ಈ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಕೈಗಾರಿಕಾ ಸೇವಾ ವಲಯಗಳ ಉತ್ಪಾದನೆಯಲ್ಲಿ ಹೆಚ್ಚಳ ಕಂಡುಬಂದಿದೆ. ಕೊರೋನಾ ಎರಡನೇ ಅಲೆ ತಗ್ಗಿರೋ ಜೊತೆ ವ್ಯಾಕ್ಸಿನ್ ನೀಡಿಕೆ ಪ್ರಕ್ರಿಯೆ ಚುರುಕುಗೊಂಡ ಕಾರಣ ಕೈಗಾರಿಕಾ ಹಾಗೂ ಸೇವಾ ವಲಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ' ಎಂದು ಐಸಿಆರ್ಎ ಮುಖ್ಯ ಅರ್ಥತಜ್ಞ ಆದಿತ್ಯ ನಾಯರ್ ಅಭಿಪ್ರಾಯ ಪಟ್ಟಿದ್ದಾರೆ. ಸ್ವಿಸ್ ಮೂಲದ ಯುಬಿಎಸ್ ಸೆಕ್ಯುರಿಟೀಸ್ (UBS Securities) ಅರ್ಥತಜ್ಞೆ ತನ್ವಿ ಗುಪ್ತ ಜೈನ್ ಯುಬಿಎಸ್ ಅಂದಾಜಿನ ಪ್ರಕಾರ ಭಾರತದ ಜಿಡಿಪಿ ಸೆಪ್ಟೆಂಬರ್ ನಲ್ಲಿ ಶೇ.8-9ರಷ್ಟು ಪ್ರಗತಿ ದಾಖಲಿಸಲಿದೆ. ಆದ್ರೆ ಭಾರತದ ಆರ್ಥಿಕತೆ ಗಣನೀಯ ಚೇತರಿಕೆ ದಾಖಲಿಸಿಲ್ಲ ಎಂದು ಹೇಳಿದ್ದಾರೆ.'ಭಾರತದಲ್ಲಿ ನಾವು ಮಿಶ್ರ ಚೇತರಿಕೆ ಕಾಣುತ್ತಿದ್ದೇವೆ. ಇದು ಖಂಡಿತಾ ವಿಸ್ತಾರವಾದ ಚೇತರಿಕೆಯಲ್ಲ. ಆದ್ರೆ ವಾಹನಗಳು, ಆಸ್ತಿ, ಮನೆ ಹಾಗೂ ಗೃಹ ಬಳಕೆ ವಸ್ತುಗಳ ಬೇಡಿಕೆಯಲ್ಲಿ ಪ್ರಗತಿ ನಿರೀಕ್ಷಿಸುತ್ತಿದ್ದೇವೆ' ಎಂದು ಜೈನ್ ಹೇಳಿದ್ದಾರೆ. ಎಸ್ ಬಿ ಐ (SBI) ರಿಸರ್ಚ್ ಪ್ರಕಾರ ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಸುಮಾರು ಶೇ.8.1ರಷ್ಟಿರಲ್ಲಿದೆ. ಇದು ಉಳಿದೆಲ್ಲ ಆರ್ಥಿಕತೆಗಳಿಗಿಂತ ಹೆಚ್ಚಿನ ಪ್ರಗತಿ ಆಗಿರಲಿದೆ ಎಂದು ಅದು ಅಂದಾಜಿಸಿದೆ. 

Tap to resize

Latest Videos

undefined

Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಆರ್ಥಿಕತೆಗಿರೋ ಸವಾಲುಗಳು
ಹಣದುಬ್ಬರದ(Inflation)  ಸವಾಲು ಸದ್ಯ ಇಡೀ ಜಗತ್ತನ್ನೇ ಕಾಡುತ್ತಿದೆ. ಕಚ್ಚಾ ವಸ್ತುಗಳ ಬೆಲೆಯೇರಿಕೆ ಪೂರೈಕೆ ವ್ಯವಸ್ಥೆ (supply chain) ಮೇಲೆ ಪರಿಣಾಮ ಬೀರಿದೆ. ಬೃಹಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿರೋದು ಕೂಡ ಬೇಡಿಕೆ ಮೇಲೆ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. 2020ರಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ (GDP) 2021ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ.7.3ಕ್ಕೆ ಇಳಿಕೆ ಕಂಡಿತ್ತು. ಆದ್ರೆ ಸದ್ಯ ಚೇತರಿಕೆಯ ಹಾದಿಯಲ್ಲಿದೆ. ಕೋವಿಡ್ -19 ಮೊದಲ ಹಾಗೂ ಎರಡನೇ ಅಲೆಗಳ ಕಾರಣದಿಂದಾಗಿ ಭಾರತ ಸರ್ಕಾರ ಉತ್ಪಾದನಾ ಚಟುವಟಿಕೆಗೆ ವೇಗ ನೀಡಲು ಹೊಸ ಬೆಳವಣಿಗೆ ಮಾರ್ಗಗಳನ್ನು ಹುಡುಕೋ ಬದಲು ವ್ಯಾಕ್ಸಿನ್ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಿತು ಎಂಬ ಅಭಿಪ್ರಾಯವನ್ನು ಕೂಡ ಆರ್ಥಿಕತಜ್ಞರು ವ್ಯಕ್ತಪಡಿಸಿದ್ದಾರೆ. 

10ಲಕ್ಷಕ್ಕಿಂತ ಕಡಿಮೆ ವೇತನ ಹೊಂದಿದ್ದೀರಾ? ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗೋದು ಹೇಗೆ ಗೊತ್ತಾ?

ಹಣದುಬ್ಬರ ಕಾಡಲಿದೆಯೇ?
ಆರ್ಥಿಕ ತಜ್ಞರ ಪ್ರಕಾರ ಇನ್ನೂ ಕೆಲವು ತ್ರೈಮಾಸಿಕಗಳಲ್ಲಿ ಕೂಡ ಹಣದುಬ್ಬರ ಮುಂದುವರಿಯಲಿದೆ. ಹಣದುಬ್ಬರದಲ್ಲಿ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಕೂಡ ಇಲ್ಲ. ಕೊರೋನಾ ಕಾರಣಕ್ಕೆ ಗ್ರಾಹಕರು ವೆಚ್ಚ ಮಾಡಲು ಯೋಚಿಸುತ್ತಿರೋದ್ರಿಂದ ಇದು ಬೇಡಿಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

click me!