ಯುದ್ಧ ವಿದೇಶದಲ್ಲಾದ್ರೂ ತಲೆ ಮೇಲೆ ಕೈಹೊತ್ತು ಕುಳಿತ ಭಾರತೀಯರು, ಷೇರು ಮಾರ್ಕೆಟ್ ನಲ್ಲಿ ಭೂಕಂಪ

Published : Mar 02, 2026, 12:01 PM IST
Indian stock market

ಸಾರಾಂಶ

Indian stock market : ಇರಾನ್ ಅಮೆರಿಕಾ ಯುದ್ಧದ ಪರಿಣಾಮ ಭಾರತೀಯ ಷೇರು ಮಾರ್ಕೆಟ್ ಮೇಲಾಗಿದೆ. ಹೂಡಿಕೆದಾರರು ಭಯಗೊಂಡಿದ್ದಾರೆ. ಒಂದೇ ಸಮನೆ ಕುಸಿಯುತ್ತಿರುವ ಷೇರು, ಹೂಡಿಕೆದಾರರನ್ನು ಆತಂಕಗೊಳಿಸಿದೆ. 

ಇರಾನ್, ಅಮೆರಿಕ, ಇಸ್ರೇಲ್ ಯುದ್ಧ ಭಾರತದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಜಾಗತಿಕ ಅನಿಶ್ಚಿತತೆ ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ದೇಶೀಯ ಮಾರುಕಟ್ಟೆಯ ಮೇಲೆ ಇದ್ರ ಪರಿಣಾಮ ನೇರವಾಗಿ ಕಾಣುತ್ತಿದೆ. ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, ಭಾರತೀಯ ಷೇರು ಮಾರುಕಟ್ಟೆ (Indian stock market) ಅತ್ಯಂತ ದುಃಖಕರ ಆರಂಭ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ (BSE Sensex) ಮತ್ತು ಎನ್ಎಸ್ಇ ನಿಫ್ಟಿ 50 (NSE Nifty 50), ಕುಸಿತದ ಆರಂಭ ಕಂಡಿದೆ.

ಷೇರು ಮಾರ್ಕೆಟ್ ನಲ್ಲಿ ತಲ್ಲಣ

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 2,743.46 ಪಾಯಿಂಟ್ಗಳು ಅಂದ್ರೆ ಶೇಕಡಾ 3.38ರಷ್ಟು ಕುಸಿದಿದೆ. ಸೆನ್ಸೆಕ್ಸ್ 78,543.73 ಪಾಯಿಂಟ್ ಮೂಲಕ ದಿನ ಪ್ರಾರಂಭಿಸಿದೆ. ಎನ್ಎಸ್ಇ ನಿಫ್ಟಿ 50 ಸಹ ಕುಸಿತ ಕಂಡಿದೆ. ನಿಫ್ಟಿ 50 519.40 ಪಾಯಿಂಟ್ ಅಂದ್ರೆ ಶೇಕಡಾ 2.06 ರಷ್ಟು ಕುಸಿದು 24,659.25 ಕ್ಕೆ ವಾರದ ಮೊದಲ ದಿನ ಪ್ರಾರಂಭಿಸಿದೆ.

ಇರಾನ್-ಇಸ್ರೇಲ್ ಯುದ್ಧದ ನಡುವೆಯೇ ಚಿನ್ನದ ಬೆಲೆಯಲ್ಲಿ 30 ಸಾವಿರ

ಸೋಮವಾರ ಬೆಳಿಗ್ಗೆ 9.24 ರ ಸುಮಾರಿಗೆ, ಸೆನ್ಸೆಕ್ಸ್ 902 ಪಾಯಿಂಟ್ಗಳ ಕೆಳಗೆ 80,384 ಕ್ಕೆ ವಹಿವಾಟು ನಡೆಸುತ್ತಿದೆ. ನಿಫ್ಟಿ 50 270 ಪಾಯಿಂಟ್ಗಳ ಕುಸಿತದೊಂದಿಗೆ 24,907 ಕ್ಕೆ ವಹಿವಾಟು ನಡೆಸುತ್ತಿದೆ. ಇಂಡಿಗೊ, ಎಟರ್ನಲ್, ಅದಾನಿ ಪೋರ್ಟ್, ಏಷ್ಯನ್ ಪೇಂಟ್ಸ್ ಮತ್ತು ಟ್ರೆಂಟ್ ಬಿಎಸ್ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದೆ.

ಶುಕ್ರವಾರ ಮಾರುಕಟ್ಟೆ ಹೇಗಿತ್ತು?

ಫೆಬ್ರವರಿ 27, ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿತ್ತು. ಪ್ರಮುಖ ಮಾನದಂಡ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ದಿನದ ವಹಿವಾಟನ್ನು ಕೆಂಪು ಬಣ್ಣದಲ್ಲಿ ಕೊನೆಗೊಳಿಸಿತ್ತು. ಸೆನ್ಸೆಕ್ಸ್ 961.42 ಪಾಯಿಂಟ್ ಅಂದ್ರೆ ಶೇಕಡಾ 1.17 ರಷ್ಟು ಕುಸಿದು 81,287.19 ಕ್ಕೆ ತಲುಪಿತ್ತು. ಇನ್ನು ಎನ್ಎಸ್ಇ ನಿಫ್ಟಿ 50 317.90 ಪಾಯಿಂಟ್ಗಳಷ್ಟು ಕುಸಿದು 25,178.65 ಕ್ಕೆ ದಿನ ಮುಗಿಸಿತ್ತು.

ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!

ಶುಕ್ರವಾರ ಎಚ್ಸಿಎಲ್ ಟೆಕ್, ಟ್ರೆಂಟ್, ಎಟರ್ನಲ್ ಮತ್ತು ಎನ್ಟಿಪಿಸಿ ಬಿಎಸ್ಇಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ್ದವರು. ಭಾರ್ತಿ ಏರ್ಟೆಲ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫಿನ್ಸರ್ವ್, ಇಂಡಿಗೊ ಮತ್ತು ಮಾರುತಿ ಅಗ್ರ ನಷ್ಟ ಅನುಭವಿಸಿತ್ತು.ನಿಫ್ಟಿ 100, ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಸ್ಮಾಲ್ಕ್ಯಾಪ್ 100, ಮತ್ತು ನಿಫ್ಟಿ ಮಿಡ್ಕ್ಯಾಪ್ 100 ಷೇರುಗಳು ಕುಸಿದಿದ್ರೂ ನಿಫ್ಟಿ ಐಟಿ ವಲಯವು ಲಾಭ ಗಳಿಸಿತು.

ಇರಾನ್ ಮೇಲೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮಾರುಕಟ್ಟೆ ಮೇಲೆ ತೂಗುಗತ್ತಿಯಾಗಿದೆ. ಸೋಮವಾರ ತೈಲ ಬೆಲೆಗಳು ಏರಿಕೆಯಾಗಿವೆ. ಹೂಡಿಕೆದಾರರು ಡಾಲರ್ ಮತ್ತು ಚಿನ್ನದ ಸಾಪೇಕ್ಷ ಸುರಕ್ಷತೆಯತ್ತ ಮುಖ ಮಾಡ್ತಿದ್ದಾರೆ. ಬ್ರೆಂಟ್ ಬ್ಯಾರೆಲ್ಗೆ ಶೇಕಡಾ 4.5 ರಷ್ಟು ಜಿಗಿದು 76.07 ಡಾಲರ್ ತಲುಪಿದೆ. ಇನ್ನು ಯುಎಸ್ ಕಚ್ಚಾ ತೈಲ ಶೇಕಡಾ 3.9 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 69.59 ಡಾಲರ್ ತಲುಪಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಭಿಮಾನಿಗಳಿಗೆ Naa Ninna Bidalaare ದುರ್ಗಾ ಗುಡ್​ನ್ಯೂಸ್​ : ಅಮ್ಮನ ಸನ್ನಿಧಿಯಲ್ಲಿ ರಿಷಿಕಾ ಹೇಳಿದ್ದೇನು
Postal Scheme: 1 ರೂ, ಕಳೆದುಕೊಳ್ಳದೆ, ಬಡ್ಡಿ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟಲ್‌ ನ್ಯೂವ್‌ ಸ್ಕೀಮ್‌! ಮಧ್ಯಮ ವರ್ಗದವರಿಗೆ ಜಾಕಪಾಟ್!