ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!

Published : Feb 27, 2026, 09:58 PM IST
glenjourneys

ಸಾರಾಂಶ

ಬಾಲಿವುಡ್ ನಟ ಅಜಯ್ ದೇವಗನ್ ಲಾಂಚ್ ಮಾಡಿರುವ ಪ್ರೀಮಿಯಂ ವಿಸ್ಕಿ ಬ್ರ್ಯಾಂಡ್ 'ದಿ ಗ್ಲೆನ್ ಜರ್ನೀಸ್' ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ ನಾಲ್ಕೇ ತಿಂಗಳಲ್ಲಿ 4.14 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವಿದೇಶಗಳಿಗೂ ರಫ್ತು ಮಾಡುವ ಯೋಜನೆ ಹಾಕಿಕೊಂಡಿದೆ.

ಮುಂಬೈ (ಫೆ.27): ಬಾಲಿವುಡ್‌ನ ಖ್ಯಾತ ನಟ ಅಜಯ್ ದೇವಗನ್ ಅವರ ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೆ ಈಗ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿಯೂ ಹೊರಹೊಮ್ಮುತ್ತಿದ್ದಾರೆ. ಅಜಯ್ ದೇವಗನ್ ಅವರು 'ಕಾರ್ಟೆಲ್ ಬ್ರದರ್ಸ್' (Cartel Brothers) ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿರುವ 'ದಿ ಗ್ಲೆನ್‌ವಾಕ್' (The Glenwalk) ಎಂಬ ಪ್ರೀಮಿಯಂ ವಿಸ್ಕಿ ಬ್ರ್ಯಾಂಡ್, ಮಾರುಕಟ್ಟೆಗೆ ಲಗ್ಗೆ ಇಟ್ಟ ಕೇವಲ ನಾಲ್ಕು ತಿಂಗಳಲ್ಲೇ ದಾಖಲೆ ಮಟ್ಟದ ಆದಾಯ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಕೇವಲ 4 ತಿಂಗಳಲ್ಲಿ 4.14 ಕೋಟಿ ರೂಪಾಯಿ ಆದಾಯ!

ವರದಿಗಳ ಪ್ರಕಾರ, 2023ರ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಈ ವಿಸ್ಕಿ ಬ್ರ್ಯಾಂಡ್, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಬರೋಬ್ಬರಿ 4.14 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 8,622 ಬಾಟಲಿಗಳು ಮಾರಾಟವಾಗಿವೆ ಎಂದು ಕಂಪನಿ ಮಾಹಿತಿ ನೀಡಿದೆ. ಈ ಮೂಲಕ ಪ್ರೀಮಿಯಂ ಮದ್ಯದ ಮಾರುಕಟ್ಟೆಯಲ್ಲಿ ಅಜಯ್ ದೇವಗನ್ ಅವರ ಬ್ರ್ಯಾಂಡ್ ಹೊಸ ಸಂಚಲನ ಮೂಡಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಿಕ್ಕ ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಕಂಪನಿಯು ಈಗ ವಿದೇಶಗಳಿಗೂ ತನ್ನ ಉತ್ಪನ್ನವನ್ನು ರಫ್ತು ಮಾಡಲು ಸಿದ್ಧತೆ ನಡೆಸುತ್ತಿದೆ.

ದೇಶದ 6 ರಾಜ್ಯಗಳಲ್ಲಿ ಭರ್ಜರಿ ಮಾರಾಟ

ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಮಾತ್ರ ಲಭ್ಯವಿದ್ದ 'ದಿ ಗ್ಲೆನ್‌ವಾಕ್' ವಿಸ್ಕಿ, ಇದೀಗ ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಭದ್ರವಾಗಿ ನೆಲೆಯೂರಿದೆ. ಸದ್ಯಕ್ಕೆ ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಸೇರಿದಂತೆ ಆರು ರಾಜ್ಯಗಳ ಸುಮಾರು 437 ಪ್ರಮುಖ ಮದ್ಯದ ಮಳಿಗೆಗಳಲ್ಲಿ (Outlets) ಈ ಬ್ರ್ಯಾಂಡ್ ಲಭ್ಯವಿದೆ. ಈ ತಿಂಗಳಿನಿಂದ ಹರಿಯಾಣ ಮಾರುಕಟ್ಟೆಗೂ ಇದು ಪ್ರವೇಶ ಮಾಡಿದೆ.

ಮಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲೂ ಲಭ್ಯ

ವಿಮಾನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ದೇಶದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ 'ಡ್ಯೂಟಿ ಫ್ರೀ' (Duty-Free) ಶಾಪ್‌ಗಳಲ್ಲಿ ಈ ವಿಸ್ಕಿಯನ್ನು ಮಾರಾಟಕ್ಕಿಡಲಾಗಿದೆ. ಕರ್ನಾಟಕದ ಮಂಗಳೂರು ಏರ್‌ಪೋರ್ಟ್ ಸೇರಿದಂತೆ ಮುಂಬೈ, ಅಹಮದಾಬಾದ್, ಜೈಪುರ, ಲಕ್ನೋ, ಅಮೃತಸರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರು ಈ ಪ್ರೀಮಿಯಂ ವಿಸ್ಕಿಯನ್ನು ಖರೀದಿಸಬಹುದಾಗಿದೆ.

23 ರಾಜ್ಯಗಳಿಗೆ ವಿಸ್ತರಿಸುವ ಬೃಹತ್ ಯೋಜನೆ

ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ನೋಡಿರುವ ಅಜಯ್ ದೇವಗನ್ ಮತ್ತು ಕಾರ್ಟೆಲ್ ಬ್ರದರ್ಸ್ ತಂಡವು, ಮುಂದಿನ ದಿನಗಳಲ್ಲಿ ರಾಜಸ್ಥಾನ, ಪಂಜಾಬ್, ಚಂಡೀಗಢ ಮತ್ತು ಪಾಂಡಿಚೇರಿ ಸೇರಿದಂತೆ ಒಟ್ಟು 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆ ಆರಂಭಿಸಲು ಪ್ಲ್ಯಾನ್ ಮಾಡಿದೆ.

ಯಶಸ್ಸಿನ ರಹಸ್ಯವೇನು?

ಈ ಸಾಧನೆಯ ಬಗ್ಗೆ ಮಾತನಾಡಿರುವ ಅಜಯ್ ದೇವಗನ್, 'ಸಾಂಪ್ರದಾಯಿಕ ಸ್ಕಾಚ್ ವಿಸ್ಕಿಯ ಉತ್ಕೃಷ್ಟ ಗುಣಮಟ್ಟವನ್ನು ಭಾರತೀಯ ಗ್ರಾಹಕರ ರುಚಿಗೆ ತಕ್ಕಂತೆ ನೀಡಿದ್ದೇ ನಮ್ಮ ಯಶಸ್ಸಿನ ಮೂಲ ಮಂತ್ರ. ಕೇವಲ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲದೆ, ಎರಡನೇ ಹಂತದ ನಗರಗಳಲ್ಲೂ ಜನರು ನಮ್ಮ ಬ್ರ್ಯಾಂಡ್ ಅನ್ನು ಇಷ್ಟಪಡುತ್ತಿರುವುದು ಸಂತಸ ತಂದಿದೆ' ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ಸಿನಿಮಾ ರಂಗದ ಯಶಸ್ಸಿನ ಬೆನ್ನಲ್ಲೇ ಉದ್ಯಮ ರಂಗದಲ್ಲೂ ಅಜಯ್ ದೇವಗನ್ ಅವರ ಗೆಲುವಿನ ಓಟ ಮುಂದುವರಿದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು
GPay,PhonePe, PayTM ಠಕ್ಕರ್‌ ಕೊಡಲು ಭಾರತಕ್ಕೆ ಬರ್ತಿದೆ Apple Pay!