ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ

Published : Feb 28, 2026, 06:26 PM IST
Gold and Silver price after war

ಸಾರಾಂಶ

ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ,ಯುದ್ಧ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿ ಬೆಲೆ ಜನವರಿ ತಿಂಗಳ ಗರಿಷ್ಠತೆಗೆ ಏರಿಕೆಯಾಗಲಿದೆ. 

ನವದೆಹಲಿ (ಫೆ.28) ಇರಾನ್ ರಹಸ್ಯವಾಗಿ ನ್ಯೂಕ್ಲಿಯರ್ ಉತ್ಪಾದಿಸುತ್ತಿದೆ. ನ್ಯೂಕ್ಲಿಯರ್ ಘಟಕಗಳಲ್ಲಿ ಶೇಖರಣೆ ಮಾಡುತ್ತಿದೆ. ಇದು ವಿಶ್ವಕ್ಕೆ ಅಪಾಯದ ಸಂಕೇತ ಎಂದು ಅಮೆರಿಕ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಇದೀಗ ಯುದ್ಧವನ್ನೇ ಸಾರಿದೆ. ಇರಾನ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಆರಂಭಿಸಿದೆ.ಇತ್ತ ಅಮರಿಕ ಜೊತೆ ಇಸ್ರೇಲ್ ಕೂಡ ಸೇರಿಕೊಂಡಿದೆ. ಇತ್ತ ಇಸ್ರೇಲ್ ಪ್ರತಿಯಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿ ಧ್ವಂಸಗೊಳಿಸಿದೆ. ಯುದ್ಧ ಭೀತಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ಭಾರತದ ಮೇಲೂ ತೀವ್ರವಾಗಿ ತಟ್ಟಲಿದೆ. ತೈಲ ಆಮದು ಮಾರ್ಗ ಬಂದ್ ಆಗುವುದು ಮಾತ್ರವಲ್ಲ, ಚಿನ್ನ ಬೆಳ್ಳಿ ಬೆಲೆ ಗಗನಕ್ಕೇರಲಿದೆ.

ಮಾರ್ಚ್ 1 ರಿಂದಲೇ ಭಾರತೀಯರಿಗೆ ಶಾಕ್

ಫೆಬ್ರವರಿ ಕೊನೆಯ ವಾರದಲ್ಲಿ ಅಮೆರಿಕ ದಾಳಿ ಮಾಡುವುದಾಗಿ ಹೇಳಿತ್ತು. ಇದರಂತೆ ಫೆಬ್ರವರಿ ಅಂತ್ಯದಲ್ಲಿ ಮಿಸೈಲ್ ಸೇರಿದಂತೆ ಹಲವು ಮಾರ್ಗದ ಮೂಲಕ ದಾಳಿ ನಡೆಸಿದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಬಾರಿ ತಲ್ಲಣ ಸೃಷ್ಟಿಸಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರಿ ಏರಿಕೆಯ ಸೂಚನೆ ನೀಡಿದೆ. ಯುದ್ಧ ಕಾರಣದಿಂದ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆ ಮೇಲೆ ತೀವ್ರ ಪರಿಮಾಮ ಬೀರಲಿದೆ. ಇದರಿಂದ ಶೀಘ್ರದಲ್ಲೇ 10 ಗ್ರಾಂ ಚಿನ್ನದ ಬೆಲೆ 1.70 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಇತ್ತ ಬೆಳ್ಳಿ ಪ್ರತಿ ಕೆಜಿ ಬೆಲೆ 3 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ ಎಂದು ಎಸ್ಎಂಸಿ ಗ್ಲೋಬಲ್ ಸೆಕ್ಯೂರಿಟಿ ಎಕ್ಸ್‌ಪರ್ಟ್ ವಂದನಾ ಭಾರತಿ ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು (ಫೆ.28) ಏರಿಕೆ ದಾಖಲಿಸಿದೆ. ಬೆಳ್ಳಿ ಬೆಲೆಯಲ್ಲಿ ಶೇಕಡಾ 7.85ರಷ್ಟು ಏರಿಕೆ ದಾಖಲಿಸಿತ್ತು. ಇತ್ತ ಚಿನ್ನ ಪ್ರತಿ ಔನ್ಸ್ ಬೆಲೆ 5,296 ಅಮೆರಿಕನ್ ಡಾಲರ್ ತಲುಪಿತ್ತು. ಆರಂಭದಲ್ಲೇ ಬಂಗಾರ ಬಲು ದುಬಾರಿ ಸೂಚನೆ ನೀಡಿದೆ.

ಯುದ್ಧದಿಂದ ಚಿನ್ನ ಬೆಳ್ಳಿ ಬೆಲೆ ಏರಿಕೆ ಯಾಕೆ?

ಯುದ್ಧ ಸೇರಿದಂತೆ ಯಾವುದೇ ಜಾಗತಿಕ ಅಸ್ಥಿರತೆ ಅಥವಾ ಆತಂಕದ ಪರಿಸ್ಥಿತಿಯಲ್ಲಿ ಮೊದಲು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಅಸ್ಥಿರತೆ ಸಂದರ್ಭಗಳಲ್ಲಿ ಎಲ್ಲರೂ ಚಿನ್ನ ಹಾಗೂ ಬೆಳ್ಳಿ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಾರೆ. ವಿಶೇಷವಾಗಿ ದೇಶಗಳ ಹೂಡಿಕೆ ಹಾಗೂ ವ್ಯವಹಾರಗಳಿಂದ ಚಿನ್ನದ ಮೇಲೆ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ. ಇದೇ ವೇಳೆ ಬೇಡಿಕೆ ಹೆಚ್ಚುವ ಕಾರಣ ಬೆಲೆ ದುಬಾರಿಯಾಗಲಿದೆ.

ಇರಾನ್ ಮೇಲಿನ ಯುದ್ಧದಲ್ಲಿ ಅಮರಿಕ ನೇರವಾಗಿ ಹೋರಾಟಕ್ಕಿಳಿದಿದೆ. ಇದು ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ತೀವ್ರ ಪರಿಮಾಮ ಬೀರಲಿದೆ. ಎಂಸಿಎಕ್ಸ್ ಗೋಲ್ಡ್ ಮಾರ್ಕೆಟ್‌ನಲ್ಲಿ ಅಮೆರಿಕ ಹಾಗೂ ಚೀನಾದ ನಿರ್ಧಾರಗಳು, ಪರಿಸ್ಥಿತಿಗಳೂ ಪರಿಣಾಮ ಬೀರಲಿದೆ. ಜನವರಿಯಲ್ಲಿ ಡೋನಾಲ್ಡ್ ಟ್ರಂಪ್ ಸುಂಕ ಆದೇಶಗಳಿಂದ ಚಿನ್ನದ ಬೆಲೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಚಿನ್ನದ ಬೆಲೆ ಔನ್ಸ್‌ಗೆ 5,500 ಅಮೆರಿಕನ್ ಡಾಲರ್‌ಗೆ ಏರಿಕೆಯಾದರೆ, ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ ಸಮೀಪಕ್ಕೆ ತಲುಪಿತ್ತು.

ಅಮೆರಿಕ, ಇಸ್ರೇಲ್ ಸೇರಿ ಇರಾನ್ ಮೇಲಿನ ಯುದ್ಧ ಮುಂದುವರಿಯುತ್ತಿದ್ದಂತೆ ಪರಿಸ್ಥಿತಿಗಳು ಮತ್ತಷ್ಟು ಬಿಗಡಾಯಿಸಲಿದೆ. ಭಾರತಕ್ಕೆ ಹರ್ಮುಜ್ ಮಾರ್ಗವಾಗಿ ಬರುವ ತೈಲ ಆಮದಿಗೂ ಬ್ರೇಕ್ ಬೀಳಲಿದೆ. ಇದರಿಂದ ಭಾರತದಲ್ಲಿ ತೈಲ ಕೊರತೆ ಎದುರಾಗಲಿದ್ದು, ಬೆಲೆ ಏರಿಕೆಯಾಗಲಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮಾರ್ಚ್ 2026: ನಾಳೆಯಿಂದ ಹೊಸ ಆಪ್‌ ಜೊತೆ ಬದಲಾಗಲಿವೆ ನಾಲ್ಕು ಪ್ರಮುಖ ನಿಯಮಗಳು
ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್