ಅಟಲ್ ಪೆನ್ಶನ್ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಂಚಣಿ ಯೋಜನೆ. ಸಣ್ಣ ಮೊತ್ತ ಹೂಡಿಕೆ ಮಾಡಿದ ನಿವೃತ್ತಿ ಸಮಯದಲ್ಲಿ ತಿಂಗಳಿಗೆ 5,000 ರೂಪಾಯಿ ಪಿಂಚಣಿ ಪಡೆಯುವ ಮೂಲಕ ಆರ್ಥಿಕ ಭದ್ರತೆ ನೀಡುವ ಯೋಜನೆ ಇದಾಗಿದೆ. ವಯಸ್ಸು, ಹೂಡಿಕೆ ಮೊತ್ತ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ನ.7) ಬದುಕಿನಲ್ಲಿ ಭದ್ರತೆ ಅತೀ ಮುಖ್ಯ. ಹೀಗಾಗಿ ಕೆಲಸ, ಉದ್ಯೋಗ, ಉದ್ಯಮದಲ್ಲಿ ತೊಡಗಿಸಿಕೊಂಡರೂ ಒಂದಷ್ಟು ಹೂಡಿಕೆ ಮಾಡುತ್ತಾರೆ. ಆದರೆ ಮಧ್ಯಮ ವರ್ಗಕ್ಕೆ ಸಣ್ಣ ಮೊತ್ತ ಹೂಡಿಕೆ ಕೂಡ ಸವಾಲು. ಆದರೆ ಕೆಲ ವರ್ಷಗಳ ಬಳಿಕ ಪಶ್ಚಾತ್ತಾಪ ಪಡುತ್ತಾರೆ. ಭವಿಷ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ನಿವೃತ್ತಿ ವೇಳೆ ಅಥವಾ 60 ವರ್ಷದ ಬಳಿಕ ಪ್ರತಿ ತಿಂಗಳು ಖರ್ಚಿನ ಆದಾಯ ಬರುತ್ತಿರಬೇಕು, ಯಾರನ್ನೂ ಅವಲಂಬಿತವಾಗಿರಬಾರದು ಅನ್ನೋದಾದರೇ ಕೇಂದ್ರ ಸರ್ಕಾರ ಜಾರಿಗೆ ತಂದ ಅಟಲ್ ಪೆನ್ಶನ್ ಯೋಜನೆ ಉತ್ತಮವಾಗಿದೆ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ? ಅಂದರೆ 100 ರೂ, 200 ರೂ ಸೇರಿದಂತೆ ಒಂದು ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಸಾಕು, ನಿಗಧಿತ ಅವಧಿ ಬಳಿಕ ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿ ಪಿಂಚಣಿ ಪಡೆಯಬಹುದು.
ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಪಿಂಚಣಿ ಪಡೆಯಲು ವಯಸ್ಸಿನ ಮಿತಿ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಪ್ರಮುಖವಾಗಿ ಬಡವರು, ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಅತ್ಯುತ್ತಮವಾಗಿದೆ. ಕಾರಣ ತಿಂಗಳಿಗೆ 42 ರೂಪಾಯಿಯಂತೆ ಹೂಡಿಕೆ ಮಾಡಿದರೂ 1,000 ರೂಪಾಯಿ ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಸಾಧ್ಯವಿದೆ.
undefined
ಡಿಸೆಂಬರ್ 1 ರಿಂದ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ, ಸ್ವೈಪ್ ಮುನ್ನ ತಿಳಿದುಕೊಳ್ಳಿ!
ಅಟಲ್ ಪೆನ್ಶನ್ ಯೋಜನೆ ಮೂಲಕ ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂಪಾಯಿ, 2,000 ರೂಪಾಯಿ, 3,000 ರೂಪಾಯಿ, 4,000 ರೂಪಾಯಿ ಹಾಗೂ 5,000 ರೂಪಾಯಿ ಪಿಂಚಣಿ ಪಡೆಯಲು ಸಾಧ್ಯವಿದೆ. 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭಗೊಳ್ಳಲಿದೆ. ಅಟಲ್ ಪೆನ್ಶನ್ ಯೋಜನೆ ಮೂಲಕ ಹಣ ಹೂಡಿಕೆ ಮಾಡಿದ ವ್ಯಕ್ತಿ ಮೃತಪಟ್ಟರೆ, ಸಂಗಾತಿ ಅಂದರೆ ಪತಿ ಅಥವಾ ಪತ್ನಿ ಪಿಂಚಣಿ ಮೊತ್ತ ಪಡೆಯಲಿದ್ದಾರೆ.
ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ವಿಶೇಷ ಅಂದರೆ ಪ್ರತಿ ತಿಂಗಳ ಮೊತ್ತ ಹೆಚ್ಚಿಲ್ಲ. 18ನೇ ವಯಸ್ಸಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಲು ಸಾಧ್ಯವಿದೆ. 1,000 ರೂಪಾಯಿ ಮಾಸಿಕ ಪಿಂಚಣಿಗೆ ಪ್ರತಿ ತಿಂಗಳು 42 ರೂಪಾಯಿ ಹೂಡಿಕೆ ಮಾಡಿಬೇಕು. ತಿಂಗಳು 84 ರೂಪಾಯಿ ಹೂಡಿಕೆ ಮಾಡಿದರೆ 2,000 ರೂಪಾಯಿ ಮಾಸಿಕ ಪಿಂಚಣಿ, 126 ರೂಪಾಯಿಗೆ 3,000 ರೂಪಾಯಿ ಪಿಂಚಣಿ, 168 ರೂಪಾಯಿಗೆ 4,000 ರೂಪಾಯಿ ಪಿಂಚಣಿ, 210 ರೂಪಾಯಿ ಹೂಡಿಕೆ ಮಾಡಿದರೆ 5,000 ರೂಪಾಯಿ ಮಾಸಿಕ ಪಿಂಚಣಿ ಸಿಗಲಿದೆ.18ನೇ ವಯಸ್ಸಿಗೆ ಹೂಡಿಕೆ ಆರಂಭಿಸಿದರೆ ಒಟ್ಟು 42 ವರ್ಷ ಹೂಡಿಕೆ ಮಾಡಿದರೆ ಅಂದರೆ ನಿಮ್ಮ 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭಗೊಳ್ಳಲಿದೆ.
40ನೇ ವಯಸ್ಸಿಗೆ ಅಟಲ್ ಪೆನ್ಶನ್ ಯೋಜನೆ ಆರಂಭಿಸಿದರೆ 20 ವರ್ಷ ಹೂಡಿಕೆ ಮಾಡಬೇಕು. ಇಲ್ಲಿ 1,000 ರೂಪಾಯಿ ಮಾಸಿಕ ಪಿಂಚಣಿಗೆ ತಿಂಗಳು 291 ರೂಪಾಯಿ ಹೂಡಿಕೆ, 2,000 ರೂಪಾಯಿ ಪಿಂಚಣಿಗೆ ತಿಂಗಳು 582 ರೂಪಾಯಿ ಹೂಡಿಕೆ, 3,000 ರೂಪಾಯಿ ಮಾಸಿಕ ಪಿಂಚಣಿಗೆ ತಿಂಗಳು 873 ರೂಪಾಯಿ ಹೂಡಿಕೆ, 4,000 ರೂಪಾಯಿ ಪಿಂಚಣಿಗೆ 1,164 ರೂಪಾಯಿ ಹೂಡಿಕೆ ಹಾಗೂ 5,000 ರೂಪಾಯಿ ಪಿಂಚಣಿಗೆ 1,454 ರೂಪಾಯಿ ಪ್ರತಿ ತಿಂಗಳು ಹೂಡಿಕೆ ಮಾಡಬೇಕು. ಸಣ್ಣ ಮೊತ್ತದಲ್ಲಿ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣ ಯಾವುದೇ ಆತಂಕವಿಲ್ಲದೆ, ಮಾರುಕಟ್ಟೆ ಏರಿಳಿತದ ಭಯವಿಲ್ಲದೆ ಹೂಡಿಕೆ ಮಾಡಬಹುದು.
ಈ ಶಾಪ್‌ಲ್ಲಿ 10 ನಿಮಿಷಕ್ಕೆ 45 ಸಾವಿರ ವಸ್ತು ಮಾರಾಟ, ವಾರ್ಷಿಕ 49 ಸಾವಿರ ಕೋಟಿ ರೂ ಆದಾಯ!