UAN ನಂಬರ್ ಇಲ್ಲದೆ PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಮಿಸ್‌ಕಾಲ್, ಮೆಸೇಜ್ ಸಾಕು!

By Chethan Kumar  |  First Published Nov 7, 2024, 4:02 PM IST

ಉದ್ಯೋಗ ಭವಿಷ್ಯ ನಿಧಿ(PF) ಬ್ಯಾಲೆನ್ಸ್ ಎಷ್ಟಾಗಿದೆ? ಇದನ್ನು ಪರಿಶೀಲಿಸುವುದು ಹೇಗೆ? ಮಿಸ್ ಕಾಲ್, ಮೆಸೇಜ್ ಸೇರಿದಂತೆ ಸುಲಭ ವಿಧಾನದ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯವಿದೆ.


ವೇತನ ಪಡೆಯುವ ಉದ್ಯೋಗಿಗಳಿಂದ ಪ್ರತಿ ತಿಂಗಳು ಇಂತಿಷ್ಟು ಮೊತ್ತ ಉದ್ಯೋಗ ಭವಿಷ್ಯ ನಿಧಿಗೆ ಪಾವತಿಯಾಗುತ್ತದೆ. ಇದು ವ್ಯಕ್ತಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಉದ್ಯೋಗ ಭವಿಷ್ಯ ನಿಧಿ ಗರಿಷ್ಠ ಬಡ್ಡಿ ನೀಡುವ ಕಾರಣ ನಿವೃತ್ತಿ ವೇಳೆ ಉತ್ತಮ ಮೊತ್ತ ಕೈಸೇರಲಿದೆ. ಸದ್ಯ ನಿಮ್ಮ ವೇತನದಿಂದ ಕಟ್ ಆಗಿ ಪಿಎಫ್‌ಗೆ ಪಾವತಿಯಾದ ಒಟ್ಟು ಮೊತ್ತವೆಷ್ಟು? ಬ್ಯಾಲೆನ್ಸ್ ಎಷ್ಟಿದೆ? ಅನ್ನೋದು ಪರಿಶೀಲಿಸುವುದು ಸುಲಭ. ಇದಕ್ಕಾಗಿ ಕಸರತ್ತು ಮಾಡಬೇಕಿಲ್ಲ. ಮಿಸ್ ಕಾಲ್, ಮೆಸೇಜ್ ಅಥವಾ ಹಲವು ಮಾರ್ಗದ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯವಿದೆ.

ಪಿಎಫ್ ಖಾತೆ UAN ನಂಬರ್ ನೀಡಲಾಗುತ್ತದೆ. ಈ UAN ನಂಬರ್ ಇದ್ದರೆ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ಖಾತೆ ಪರಿಶೀಲಿಸಬಹುದು. ಪಾವತಿಯಾದ ಮೊತ್ತ, ಪಿಎಫ್ ಬಡ್ಡಿ ಸೇರಿದಂತೆ ಎಲ್ಲಾ ಮಾಹಿತಿ ಪರಿಶೀಲಿಸಲು ಸಾಧ್ಯವಿದೆ. ಆದರೆ UAN ನಂಬರ್ ತಿಳಿದಿಲ್ಲದಿದ್ದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸುಲಭವಾಗಿ UAN ನಂಬರ್ ಇಲ್ಲದೆಯೂ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಅನ್ನೋದು ಇಲ್ಲಿದೆ.

Tap to resize

Latest Videos

EPFO ಸದಸ್ಯರಿಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್, 7 ಲಕ್ಷ ರೂ ವಿಮೆ ಸೌಲಭ್ಯ!

9966044425 ನಂಬರ್‌ಗೆ ನಿಮ್ಮ ಪಿಎಫ್ ಖಾತೆಯಲ್ಲಿ ರಿಜಿಸ್ಟರ್ಡ್ ಆಗಿರುವ ಮೊಬೈಲ್ ನಂಬರ್ ಮೂಲಕ ಮಿಸ್ ಕಾಲ್ ನೀಡಬೇಕು.  ಮಿಸ್‌ಕಾಲ್ ಬೆನ್ನಲ್ಲೇ EPFOನಿಂದ ಮೆಸೇಜ್ ಬರಲಿದೆ. ಈ ಮಸೇಜ್‌ನಲ್ಲಿ ಕೊನೆಯದಾಗಿ ಪಿಎಪ್ ಪಾವತಿಯಾಗಿರುವ ಖಾತೆ ವಿವರ, ಬ್ಯಾಲೆನ್ಸ್ ತಿಳಿಯಲಿದೆ. ಇದು ಅತೀ ಸುಲಭ ವಿಧಾನದ ಮೂಲಕ ಪಿಎಪ್ ಬ್ಯಾಲೆನ್ಸ್ ಪರಿಶೀಲನೆಗೆ ಇರುವ ದಾರಿ.

ಪಿಎಫ್ ಪೋರ್ಟಲ್ ಮೂಲಕ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ಈ ವೇಳೆUAN ನಂಬರ್ ಜೊತೆ ಮೊಬೈಲ್ ನಂಬರ್ ಲಿಂಕ್ ಆಗಲಿದೆ. ಇನ್ನು ಕೆವೈಸಿ ಮಾಡಿಸಿಕೊಳ್ಳಬೇಕು. ಕನಿಷ್ಠ ಒಂದು ಕೆವೈಸಿ ಪೂರ್ಣಗೊಂಡಿರಬೇಕು. ಆಧಾರ್, ಪಾನ್ ನಂಬರ್ ಸೇರಿದಂತೆ ಕೆವೈಸಿ ಪೂರ್ಣಗೊಳಿಸಿದರೆ ಇನ್ನುಳಿದ ಪ್ರಕ್ರಿಯೆ ಸುಲಭ.ಈ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಪಿಎಪ್ ಮಿಸ್ ಕಾಲ್ ನಂಬರ್‌ಗೆ ಕರೆ ಮಾಡಿದರೆ 2 ರಿಂಗ್ ಆದ ತಕ್ಷಣ ಆಟೋಮ್ಯಾಟಿಕ್ ಆಗಿ ಕಟ್ ಆಗಲಿದೆ. ಬಳಿಕ ಪಿಎಫ್ ಖಾತೆ ಮಾಹಿತಿ ಲಭ್ಯವಾಗಲಿದೆ.

ಮೆಸೇಜ್ ಮಾಡುವ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಬಹುದು.7738299899 ನಂಬರ್‌ಗೆ ಮೆಸೇಜ್ ಮಾಡಿದರೂ ಪಿಎಫ್ ಖಾತೆ ಮಾಹಿತಿ ಲಭ್ಯವಾಗಲಿದೆ. EPFOHO UAN ENG ಎಂದು ಟೈಪ್ ಮಾಡಿ ಕಳುಹಿಸಬೇಕು. ಇಲ್ಲಿ ENG ಭಾಷೆ ಆಯ್ಕೆಯಾಗಿದೆ. ಇನ್ನು EPFO ಪೋರ್ಟಲ್ ಮೂಲಕವೂ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು. ಎಂಪ್ಲಾಯ್ಸ್ ಸೆಕ್ಷನ್ ಅಡಿಯಲ್ಲಿ ಮೆಂಬರ್ ಪಾಸ್‌ಬುಕ್ ಕ್ಲಿಕ್ ಮಾಡಿದಾಗ  UAN ನಮೂದಿಸಲು ಕೇಳುತ್ತದೆ. ವಿವಿರ ನಮೂದಿಸಿದ ಬಳಿಕ ನೇರವಾಗಿ ನಿಮ್ಮ ಪಿಎಫ್ ಖಾತೆ ತೆರೆದುಕೊಳ್ಳಲಿದೆ.

ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಸ್ಮಾರ್ಟ್‌ಫೋನ್ ಮೂಲಕ UMANG ಆ್ಯಪ್ ಡೌನ್ಲೋಡ್ ಮಾಡಿಯೂ ಪಿಎಪ್ ಖಾತೆ ಹಾಗೂ ಇತರ ಮಾಹಿತಿ ಪರಿಶೀಲಿಸಬಹುದು. ಬಳಿಕ ಮೊಬೈಲ ನಂಬರ್, UAN ನಂಬರ್ ಸೇರಿದಂತೆ ಇತರ ಮಾಹಿತಿ ದಾಖಲಿಸಿ ವೈರಿಫೈ ಮಾಡಿಕೊಳ್ಳಬೇಕು. ಬಳಿಕ ಸುಲಭವಾಗಿ ಖಾತೆ ವಿವರ ಚೆಕ್ ಮಾಡಲು ಸಾಧ್ಯವಿದೆ. 
 

click me!