ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8

Kannadaprabha News   | Kannada Prabha
Published : Aug 30, 2025, 07:25 AM IST
GDP

ಸಾರಾಂಶ

ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಅಂದರೆ ಅಮೆರಿಕದ ತೆರಿಗೆ ಹೇರಿಕೆಗೂ ಮುನ್ನ ಭಾರತದ ಆರ್ಥಿಕತೆಯು ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಕಳೆದ 5 ತ್ರೈಮಾಸಿಕದ ದಾಖಲೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.6.5ರಷ್ಟಿತ್ತು.

 ನವದೆಹಲಿ :  ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಅಂದರೆ ಅಮೆರಿಕದ ತೆರಿಗೆ ಹೇರಿಕೆಗೂ ಮುನ್ನ ಭಾರತದ ಆರ್ಥಿಕತೆಯು ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಕಳೆದ 5 ತ್ರೈಮಾಸಿಕದ ದಾಖಲೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.6.5ರಷ್ಟಿತ್ತು.

‘ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೇ ಈ ವಿತ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ ರಾಷ್ಟ್ರವಾಗಿದೆ. ಇದೇ ಅವಧಿಯಲ್ಲಿ ಚೀನಾ ಜಿಡಿಪಿ ಶೇ.5.2ರಷ್ಟು ಬೆಳವಣಿಗೆ ಸಾಧಿಸಿದೆ. ಭಾರತವು ಈ ರೀತಿಯ ಬೆಳವಣಿಗೆ ಸಾಧಿಸುವಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಸಾಕಷ್ಟಿದೆ’ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳಿವೆ.

ಭಾರತವು ಈ ಹಿಂದೆ 2024ರ ಜನವರಿ-ಮಾರ್ಚ್‌ ನಡುವೆ ಶೇ.8.4ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿತ್ತು. ನಂತರ ಕೊಂಚ ಇಳಿಕೆ ಕಂಡಿತ್ತು.

ಕೃಷಿ ಕ್ಷೇತ್ರದ ಸಾಧನೆ:

ಮೊದಲ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರವು ಶೇ.3.7ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.1.5ರಷ್ಟು ಹೆಚ್ಚಾಗಿದೆ. ಆದರೆ ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಮಾತ್ರ ಕೊಂಚ ಮಟ್ಟಿಗಷ್ಟೇ ಏರಿಕೆಯಾಗಿದೆ. ಈ ಬಾರಿ ಅದು ಶೇ.7.7ರಷ್ಟಿದ್ದರೆ, ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಶೇ.7.6ರಷ್ಟಿತ್ತು.

ಈ ವಿತ್ತೀಯ ವರ್ಷದ ನೈಜ ಜಿಡಿಪಿ ಬೆಳವಣಿಗೆ ದರ ಶೇ.6.5ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಮೊದಲ ತ್ರೈಮಾಸಿಕದಲ್ಲಿ ಅದು ಶೇ.6.5ರಷ್ಟಿರಲಿದೆ ಎಂದೂ ಹೇಳಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

3 ಲಕ್ಷ ರು. ಸನಿಹಕ್ಕೆ ಬೆಳ್ಳಿ ಬೆಲೆ
ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ