
ಬೆಂಗಳೂರು (ಆ.29): ವಿಶ್ವದ ಪ್ರಮುಖ ಆಭರಣ ರೀಟೇಲರ್ ಮಾರಾಟಗಾರರಲ್ಲಿ ಒಬ್ಬರಾದ ಹಾಗೂ ಜವಾಬ್ದಾರಿಯುತ ಆಭರಣ ವ್ಯಾಪಾರಿ ಎಂದು ಪ್ರಸಿದ್ಧಿ ಪಡೆದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ಮಹಿಳೆಯರ ವಿಶಿಷ್ಟ ತತ್ವವನ್ನು ಆಚರಿಸುವ ಉಜ್ವಲ ರತ್ನಾಭರಣ ಸಂಗ್ರಹ 'ವಿಯಾನ'ವನ್ನು ಹೆಮ್ಮೆಯಿಂದ ಅನಾವರಣಗೊಳಿಸಿದೆ. ಯಾವುದೇ ಎರಡು ರತ್ನಗಳು ಹಾಗೂ ಯಾವುದೇ ಇಬ್ಬರು ಮಹಿಳೆಯರು ಒಂದೇ ರೀತಿಯಾಗಿರುವುದಿಲ್ಲ ಎಂಬ ನಂಬಿಕೆಯಿಂದ ಪ್ರೇರಿತವಾದ ವಿಯಾನಾ, ವೈಯಕ್ತಿಕತೆ, ಅಂತರಂಗ ಶಕ್ತಿ ಹಾಗೂ ಸ್ವ-ಅಭಿವ್ಯಕ್ತಿಗೆ ಸಮರ್ಪಿತವಾದ ಒಂದು ಗೌರವ ಸಂಕೇತ.
18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದಲ್ಲಿ ನಿಖರವಾಗಿ ತಯಾರಿಸಲಾದ ವಿಯಾನಾ, ವಜ್ರಗಳ ಕಿರಣೋತ್ಸರ್ಗವನ್ನು ಜೀವಂತ ಬಣ್ಣಗಳ ರತ್ನಪಟಲದೊಂದಿಗೆ ಮಿಶ್ರಣಗೊಳಿಸುತ್ತದೆ. ಈ ಸಂಗ್ರಹವು ಹಗುರವಾದ, ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದ್ದು, ಟ್ರೆಂಡಿ, ಲೈಟ್ ವೇಟ್ ಮತ್ತು ಸುಲಭವಾಗಿ ಧರಿಸಬಹುದಾದಂತಿದೆ. ತನ್ನ ಜೀವನದಲ್ಲಿ ಪಾತ್ರಗಳು, ಪರಂಪರೆ ಹಾಗೂ ಟ್ರೆಂಡ್ ನಡುವೆ ಸುಲಭವಾಗಿ ಹೆಜ್ಜೆ ಹಾಕುವ ಆಧುನಿಕ ಭಾರತೀಯ ಮಹಿಳೆಗೆ ಇದು ಅತಿ ಸೂಕ್ತ. ಪ್ರತಿ ಆಭರಣವು ಆಕೆಯ ಬಹುಮುಖ ಆತ್ಮವನ್ನು ಪ್ರತಿಬಿಂಬಿಸುತ್ತದೆ - ಸೌಂದರ್ಯಮಯ, ಶಕ್ತಿಯುತ ಹಾಗೂ ತನ್ನ ಅಸಲಿ ವ್ಯಕ್ತಿತ್ವವನ್ನು ಅಡಗಿಸಿಕೊಳ್ಳದ, ಆಂತರಿಕ ಶಕ್ತಿಗೆ ಅರ್ಪಿತವಾದ ವಿಯಾನಾ, ಪರಂಪರೆಯನ್ನು ಗೌರವಿಸುವ ಜೊತೆಗೆ ತನ್ನದೇ ವಿಶಿಷ್ಟ ಶೈಲಿಯಲ್ಲಿ ಮಹಿಳೆಯನ್ನು ಸಂಭ್ರಮಿಸುವಂತೆ ಮಾಡಬಲ್ಲದು.
ಇದರೊಂದಿಗೆ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಜೆಮ್‌ಸ್ಟೋನ್ ಜುವೆಲ್ಲರಿ ಫೆಸ್ಟಿವಲ್‌ನಲ್ಲಿ ವಿಯಾನ ಸಂಗ್ರಹದೊಂದಿಗೆ ಅಮೂಲ್ಯ ರತ್ನಗಳು ಹಾಗೂ ಅನ್‌ಕಟ್ ಡೈಮಂಡ್ಸ್ ಇರುವ ಸಾಂಪ್ರದಾಯಿಕ ಆಭರಣ ಸಂಗ್ರಹವೂ ಇರಲಿದೆ. ಉತ್ಸವದ ಭಾಗವಾಗಿ, ಗ್ರಾಹಕರು ಎಲ್ಲಾ ರತ್ನಾಭರಣ ಮತ್ತು ಅನ್‌ಕಟ್ ಡೈಮಂಡ್ ಆಭರಣಗಳ ತಯಾರಿಕಾ ಶುಲ್ಕದಲ್ಲಿ ಗರಿಷ್ಠ ಶೇ.25ರವರೆಗೆ ರಿಯಾಯಿತಿ ಪಡೆಯಬಹುದು. ಈ ವಿಶೇಷ ಆಫರ್ ಸೆಪ್ಟೆಂಬರ್ 7, 2025ರವರೆಗೆ ಮಾನ್ಯ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ಈ ಬಗ್ಗೆ ಮಲಬಾರ್ ಗ್ರೂಪ್ ಅಧ್ಯಕ್ಷರಾದ ಎಂ.ಪಿ. ಅಹಮ್ಮದ್ ಅವರು ಪ್ರತಿಕ್ರಿಯೆ ನೀಡಿ, 'ವಿಯಾನ' ಕೇವಲ ಒಂದು ಆಭರಣ ಸಂಗ್ರಹವಲ್ಲ. ಅದು ಮಹಿಳೆಯರ ಆತ್ಮಾಭಿಮಾನದ ಗೌರವಕ್ಕೆ ಸಮರ್ಪಿತ. ವಿಯಾನದ ಪ್ರತಿಯೊಂದೂ ರತ್ನ ಶಕ್ತಿ, ಸೌಂದರ್ಯ ಹಾಗೂ ವೈಯಕ್ತಿಕ ಕಥೆ ಹೇಳಬಲ್ಲದು. ಅದನ್ನು ಧರಿಸುವ ಮಹಿಳೆಯರಂತೆ ಪ್ರತಿಯೊಂದೂ ಆಭರಣವೂ ಅಪ್ರತಿಮ ಸೌಂದರ್ಯ ಹೊಂದಿದೆ' ಎನ್ನುತ್ತಾರೆ.
ಇದರೊಟ್ಟಿಗೆ 'ಜಸ್ಟ್ ಲೈಕ್ ಮೀ' ಎಂಬ ಆಕರ್ಷಕ ಅಭಿಯಾನವನ್ನೂ ಆರಂಭಿಸಲಿದೆ. ಇದರ ಬ್ರಾಂಡ್ ಅಂಬಾಸಿಡರ್ ಶ್ರೀನಿಧಿ ಶೆಟ್ಟಿ ಭಾಗಿಯಾಗಿದ್ದಾರೆ. ತನ್ನ ಸಮತೋಲನ, ಬಹುಮುಖತೆ ಮತ್ತು ಆತ್ಮವಿಶ್ವಾಸದಿಂದ ಹೆಸರುವಾಸಿಯಾಗಿರುವ ಶ್ರೀನಿಧಿ, ವಿಯಾನಾದ ಶಕ್ತಿಯನ್ನು ಜೀವಂತಗೊಳಿಸುತ್ತಾರೆ. ಆಕೆ ಆಧುನಿಕ ಭಾರತೀಯ ಮಹಿಳೆಯ ಪ್ರತಿರೂಪ - ಆಕ್ವಾಮೆರಿನ್‌ನಂತೆಯೇ ಶಾಂತ, ಪಿಂಕ್ ಟೋಪಾಸ್‌ನಂತೆಯೇ ಸೌಂದರ್ಯಮಯ, ಪಚ್ಚೆಯಂತೆ ಶಕ್ತಿಯುತ; ಪ್ರತಿಯೊಂದು ರತ್ನದ ವೈಶಿಷ್ಟಗಳನ್ನು ತನ್ನಲ್ಲಿ ಹೊಮ್ಮಿಸಿದ್ದಾರೆ.
ವಿಯಾನದ ಮೂಲಕ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ಜಾಗತಿಕ ಶೈಲಿಯನ್ನು ಭಾರತೀಯ ಆತ್ಮದೊಂದಿಗೆ ಬೆರೆಸಿದ ಆಭರಣಗಳನ್ನು ಸೃಷ್ಟಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಮಹಿಳೆಯರು ತಮ್ಮ ನಿಜವಾದ ಸ್ವಭಾವವನ್ನು ಗೌರವಪೂರ್ವಕವಾಗಿ ಹಾಗೂ ಆತ್ಮವಿಶ್ವಾಸದಿಂದ ಅಲಂಕರಿಸಿಕೊಳ್ಳಲು ಇದು ಪ್ರೇರಣೆಯಾಗುತ್ತದೆ.
ಜಗತ್ತಿನಾದ್ಯಂತ 13 ರಾಷ್ಟ್ರಗಳಲ್ಲಿ 400ಕ್ಕೂ ಹೆಚ್ಚು ಶೋರೂಮ್‌ಗಳಿರುವ ಮಲಬಾರ್ ಗೋಲ್ಡ್ ಮತ್ತು& ಡೈಮಂಡ್ಸ್, ವಿಶ್ವದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದು. ವಿಭಿನ್ನ ಸಂಗ್ರಹಗಳು, ಅಪ್ರತಿಮ ಗುಣಮಟ್ಟ ಹಾಗೂ ಗ್ರಾಹಕ-ಕೇಂದ್ರಿತ ತತ್ವದ ಮೂಲಕ, ಈ ಬ್ರ್ಯಾಂಡ್ 1.5 ಕೋಟಿ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. 26 ರಾಷ್ಟ್ರಗಳಲ್ಲಿರುವ 25 ಸಾವಿರಕ್ಕೂ ಹೆಚ್ಚು ಬಹುಭಾಷಿಕ ನಿಪುಣರ ತಂಡದ ಬೆಂಬಲದಿಂದ, ಮಲಬಾರ್ ಜಾಗತಿಕ ಆಭರಣ ಚಿಲ್ಲರೆ ವ್ಯಾಪಾರದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತಿದೆ.
ಗ್ರಾಹಕರ ತೃಪ್ತಿಗೆ ಬದ್ಧವಾಗಿರುವ ಮಲಬಾರ್ ತನ್ನ 'ಮಲಬಾರ್ ಪ್ರಾಮಿಸಸ್' ಮೂಲಕ ಪಾರದರ್ಶಕ ಬೆಲೆ ನಿಗದಿ, ಉಚಿತ ಜೀವಿತಾವಧಿ ನಿರ್ವಹಣೆ, ಹಳೆಯ ಚಿನ್ನ ಹಾಗೂ ವಜ್ರಗಳಿಗೆ ಶೇ.100 ವಿನಿಮಯ ಮೌಲ್ಯ, 28-ಅಂಶಗಳ ಗುಣಮಟ್ಟ ಪರಿಶೀಲನೆಯ ವಜ್ರಗಳು ಹಾಗೂ ಉಚಿತ ಒಂದು ವರ್ಷದ ವಿಮೆ ಯೋಜನೆಗಳನ್ನು ಒದಗಿಸುತ್ತದೆ.
ಜವಾಬ್ದಾರಿಯುತ ಆಭರಣ ವ್ಯವಹಾರಿಯಾಗಿರುವ ಮಲಬಾರ್, ಪರಿಶೀಲಿತ ಹಾಗೂ ಅನುಮೋದಿತ ಮಾರ್ಗಗಳ ಮೂಲಕ ಮಾತ್ರ ಚಿನ್ನ ಹಾಗೂ ವಜ್ರಗಳನ್ನು ಖರೀದಿಸುತ್ತದೆ. ಅಂತರರಾಷ್ಟ್ರೀಯ ಪ್ರಮಾಣಪತ್ರಗಳು ಹಾಗೂ ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣದಿಂದ, ಮಲಬಾರ್‌ನ ಪ್ರತಿಯೊಂದು ಆಭರಣವು ಅಚ್ಚುಕಟ್ಟಾದ ಕೈಗಾರಿಕೆ ಹಾಗೂ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ.
ಆಭರಣ ವ್ಯವಹಾರದ ಹೊರತಾಗಿ, ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಲಾಭದ 5% ರಷ್ಟು ಮೊತ್ತವನ್ನು ಸಮಾಜಮುಖಿ ಕಾರ್ಯಗಳಿಗೆ ಮೀಸಲಿರಿಸುತ್ತದೆ. ಶಿಕ್ಷಣ, ಆರೋಗ್ಯ, ವಸತಿ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಅನ್ನದಾನ ಕಾರ್ಯಕ್ರಮಗಳು ಇದರ ಕೇಂದ್ರ ಬಿಂದುಗಳಾಗಿವೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬಗ್ಗೆ:
1993ರಲ್ಲಿ ಸ್ಥಾಪಿತವಾದ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಲಬಾರ್ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ. ವಾರ್ಷಿಕ 6.2 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ಹೊಂದಿರುವ ಈ ಕಂಪನಿ, ಪ್ರಪಂಚದಲ್ಲೇ 5ನೇ ಅತಿ ದೊಡ್ಡ ಆಭರಣ ಚಿಲ್ಲರೆ ವ್ಯಾಪಾರಿಯಾಗಿದ್ದು, ಡೆಲೊಯಿಟ್ ಲಕ್ಸುರಿ ಗೂಡ್ಸ್ ವರ್ಲ್ಡ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದೆ. ಭಾರತ, ಮಧ್ಯಪ್ರಾಚ್ಯ, ಫಾರ್ ಈಸ್ಟ್, ಅಮೆರಿಕಾ, ಬ್ರಿಟನ್, ಕೆನಡಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 13 ರಾಷ್ಟ್ರಗಳಲ್ಲಿ 400 ಕ್ಕೂ ಹೆಚ್ಚು ಶೋರೂಮ್‌ಗಳ ಬಲವಾದ ಜಾಲವನ್ನು ಹೊಂದಿದೆ. ಜೊತೆಗೆ ಹಲವಾರು ಕಚೇರಿಗಳು, ವಿನ್ಯಾಸ ಕೇಂದ್ರಗಳು, ಮಳಿಗೆ ಘಟಕಗಳು ಹಾಗೂ ಕಾರ್ಖಾನೆಗಳನ್ನು ನಡೆಸುತ್ತಿದೆ. ಗ್ರಾಹಕರು ತಮ್ಮ ಮನೆಯಲ್ಲಿ ಕುಳಿತುಕೊಂಡೇ www.malabargoldanddiamonds.com ಮೂಲಕ ಆಭರಣಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಸಹ ಸೌಲಭ್ಯವಿದೆ.
ಸ್ಥಾಪನೆಯಾಗಿದಂದಿನಿಂದಲೇ, ಪರಿಸರ, ಸಾಮಾಜಿಕ ಹಾಗೂ ಆಡಳಿತಾತ್ಮಕ ತತ್ವಗಳು ಹಾಗೂ CSR (ಸಾಮಾಜಿಕ ಹೊಣೆಗಾರಿಕೆ)ಗಳು ಮಲಬಾರ್ ಗ್ರೂಪ್‌ನ ಮೂಲ ಬದ್ಧತೆಗಳಾಗಿವೆ. ಆರೋಗ್ಯ, ವಸತಿ, ಅನ್ನದಾನ, ಶಿಕ್ಷಣ, ಪರಿಸರ ಹಾಗೂ ಮಹಿಳಾ ಸಬಲೀಕರಣವು ಇದರ ಪ್ರಮುಖ ಕೇಂದ್ರೀಯ ಕ್ಷೇತ್ರಗಳಾಗಿದ್ದು, ಜವಾಬ್ದಾರಿತನ ಮತ್ತು ಸ್ಥಿರತೆಯನ್ನು ವ್ಯವಹಾರದ ಕೇಂದ್ರ ಭಾಗವನ್ನಾಗಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.