
ನವದೆಹಲಿ: ಇದುವರೆಗೂ ಶಾಂತವಾಗಿದ್ದ ಭಾರತ ಅಕ್ರಮಣಕಾರಿ ನಡೆಯನ್ನು ಕಂಡ ಪಾಕಿಸ್ತಾನ ಗಢಗಢ ನಡಗುತ್ತಿದೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಒಂದು ವೇಳೆ ಮತ್ತೆ ಕಾಲ್ಕೆರದು ಬಂದು ಹೇಗೆ ಉತ್ತರ ಕೊಡಬೇಕು ಅನ್ನೋದು ಭಾರತಕ್ಕೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಅಮೆರಿಕಾಗೆ ಶಾಕ್ ಕೊಡಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಮೆರಿಕದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಕುರಿತ ಪ್ರಸ್ತಾವನೆಯನ್ನು ಭಾರತ ವಿಶ್ವ ವ್ಯಾಪಾರ ಸಂಸ್ಥೆಗೆ (World trade organisation) ಸಲ್ಲಿಕೆ ಮಾಡಿದೆ. ಮಾರ್ಚ್‌ನಲ್ಲಿ ಅಮೆರಿಕಾ, ಭಾರತದ ಸ್ಟೀಲ್ ಮತ್ತು ಅಲ್ಯೂಮಿಯಂ ಆಮದು ಮೇಲೆ ಶೇ.25ರಷ್ಟು ತೆರಿಗೆ ವಿಧಿಸೋದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪ್ರತಿ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ ಎಂದು ವರದಿಯಾಗಿದೆ.
ಮೇ 12ರಂದು ವಿಶ್ವ ವ್ಯಾಪಾರ ಸಂಸ್ಥೆಗೆ (WTO) ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಪ್ರಸ್ತಾವನೆಯಲ್ಲಿ, ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಆಯ್ದ ಉತ್ಪನ್ನಗಳ ಮೇಲೆ ಸದ್ಯ ನೀಡಲಾಗುತ್ತಿರುವ ರಿಯಾಯ್ತಿಗಳನ್ನು ಕಡಿತಗೊಳಿಸುವುದು ಅಥವಾ ಇತರೆ ನಿರ್ಬಂಧಗಳನ್ನು ವಿಧಿಸುವಿಕೆ ಅಥವಾ ವಿಧಿಸಲಾಗುತ್ತಿರುವ ತೆರಿಗೆಯನ್ನು ಹೆಚ್ಚಳ ಮಾಡುವದರ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದ್ರೆ ಭಾರತ ಯಾವೆಲ್ಲಾ ಸರಕುಗಳ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.
ಶೇ.25ರಷ್ಟು ಟ್ಯಾರಿಫ್
ಅಮೆರಿಕದಲ್ಲಿರುವ ಡೊನಾಲ್ಡ್ ಟ್ರಂಪ್ ಸರ್ಕಾರ, ಭಾರತದ ಸ್ಟೀಲ್ ಮತ್ತು ಅಲ್ಯುಮಿನಿಯಂ ಸರಕು ಸೇರಿದಂತೆ ತನ್ನ ದೇಶ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಟ್ಯಾರಿಫ್ ವಿಧಿಸೋದಾಗಿ ಘೋಷಣೆ ಮಾಡಿತ್ತು. ಇದು ಡೊನಾಲ್ಡ್ ಟ್ರಂಪ್ ಅವರ ಸರ್ಕಾರ 2018ರಲ್ಲಿ ತೆಗೆದುಕೊಂಡ ನಿರ್ಧಾರಗಳ ವಿಸ್ತರಣೆಯಾಗಿತ್ತು. ಅಮೆರಿಕೆ ಹೊಸ ಟ್ಯಾರಿಫ್ ಸ್ಟೀಲ್ ಉತ್ಪಾದನೆ ಮಾಡುವ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಅತಿ ಹೆಚ್ಚು ಸ್ಟೀಲ್ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ.
ಡೊನಾಲ್ಡ್ ಟ್ರಂಪ್ ಕ್ರೆಡಿಟ್!
ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದ್ದು ಎಂದು ಡೊನಾಲ್ಡ್ ಟ್ರಂಪ್ ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಎರಡೂ ದೇಶಗಳಿಗೆ ಕರೆ ಮಾಡಿ, ಯುದ್ಧ ನಿಲ್ಲಿಸಿ. ಇಲ್ಲವಾದ್ರೆ ನಿಮ್ಮೊಂದಿಗಿನ ವ್ಯವಹಾರ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದೆ. ಹಾಗಾಗಿ ಯುದ್ಧ ನಿಲ್ಲಿಸಲು ಎರಡು ರಾಷ್ಟ್ರಗಳು ಒಪ್ಪಿಕೊಂಡವು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು.
ಇದನ್ನೂ ಓದಿ: 22400% Return! 5 ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದ 4 ರೂಪಾಯಿ ಷೇರು
ಭಾರತದ ಮೇಲೆ ಯಾವೆಲ್ಲಾ ಪರಿಣಾಮ?
ಭಾರತ ಮತ್ತು ಅಮೆರಿಕಗಳು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದದ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತೀಕಾರ ಎಂದು ಪರಿಗಣಿಸಲ್ಪಡುವ ಈ ತೆರಿಗೆಯ ಪ್ರಸ್ತಾವನೆ ಭಾರತದ ಮೇಲೆ ಪರಿಣಾಮ ಬೀರಬಹುದು. ಈ ನಡೆದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಅಂತರ ಹೆಚ್ಚಾಗಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.
ಭಾರತದಿಂದ ದೇಶಿ ಉದ್ಯಮದ ರಕ್ಷಣೆ
ಭಾರತವು ಪ್ರತೀಕಾರದ ಸುಂಕಗಳನ್ನು ವಿಧಿಸುವುದಲ್ಲದೆ, ತನ್ನ ದೇಶೀಯ ಉದ್ಯಮವನ್ನು ರಕ್ಷಿಸುತ್ತಿದೆ. ಕಳೆದ ತಿಂಗಳು, ಚೀನಾದಿಂದ ಅಗ್ಗದ ಉಕ್ಕಿನ ಆಮದನ್ನು ತಡೆಯಲು ಭಾರತವು ಶೇಕಡಾ 12 ರಷ್ಟು ತಾತ್ಕಾಲಿಕ ಸುಂಕವನ್ನು ವಿಧಿಸಿತು. ಇದು ದೇಶೀಯ ಪೂರೈಕೆಯನ್ನು ಸಮತೋಲನಗೊಳಿಸುವುದು ಮತ್ತು ಉಕ್ಕಿನ ಉದ್ಯಮವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಬಿಯರ್ ಬ್ರಾಂಡ್‌ಗಳ ದರದ ಮೇಲೆ ಶೇ.75 ಇಳಿಕೆ; ಬೇಸಿಗೆಯಲ್ಲಿ ಮದ್ಯಪ್ರಿಯರಿಗೆ ತಂಪಾದ ಸುದ್ದಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.